ವಿಶ್ವಗುರು ಬಸವಣ್ಣವರ ಜನ್ಮ ಜಯಂತಿ

Must Read

ಮೂಡಲಗಿ: ೧೨ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಮಹಾನ್ ವ್ಯಕ್ತಿಗಳಲ್ಲಿ ಜಗಜ್ಯೊತಿ ಬಸವಣ್ಣನವರು ಒಬ್ಬರು. ಬಸವಣ್ಣರು ಪ್ರತಿಪಾದಿಸಿದ ಸಮಾನತೆ, ಸಾಮಾಜಿಕ ನ್ಯಾಯ, ಕಾಯಕ ಯೋಗ, ಮಹಿಳಾ ಸಬಲೀಕರಣ, ದಲಿತೋದ್ದಾರ ಮತ್ತು ಸಾಮಾಜಿಕ ಕ್ರಾಂತಿಯ ಸಂದೇಶವನ್ನು ಜನತೆಗೆ ನೀಡುವುದು ಶ್ರೀ ಬಸವೇಶ್ವರರ ಜನ್ಮ ಜಯಂತಿ ಆಚರಣೆಯ ಮೂಲ ಉದ್ದೇಶವಾಗಿದೆ ಎಂದು ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಬಸಗೌಡ ಪಾಟೀಲ ಹೇಳಿದರು.

ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀ ಬಸವೇಶ್ವರರ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರಾಚಾರ್ಯ ಡಾ. ಸುರೇಶ ಸುರೇಶ ಹನಗಂಡಿ ಮಾತನಾಡಿ, ೧೨ನೇ ಶತಮಾನದಲ್ಲಿ ನಡೆದ ಕಲ್ಯಾಣ ಕ್ರಾಂತಿಯು ಇಂದು ನಾವು ಎದುರಿಸುತ್ತಿರುವ ಅನೇಕ ಸಾಮಾಜಿಕ ಸಮಸ್ಯೆಗಳಿಗೆ ಉತ್ತರ ನೀಡುತ್ತದೆ. ಅರ್ಥಹೀನ ಆಚರಣೆಗಳು ಮತ್ತು ವಿಗ್ರಹಾರಾಧನೆಯನ್ನು ತಿರಸ್ಕರಿಸಿದರು, ಭಕ್ತ ಮತ್ತು ದೇವರ ನಡುವಿನ ನೇರ ಸಂಪರ್ಕವನ್ನು ಉತ್ತೇಜಿಸಿದರು. ಬಸವಣ್ಣನವರು ಅನುಭವ ಮಂಟಪವನ್ನು ಸ್ಥಾಪಿಸುವ ಮೂಲಕ ಸರ್ವ ಸಮಾನತೆ, ಪ್ರಜಾಪ್ರಭುತ್ವದ ಕಲ್ಪನೆಯ ಸಂದೇಶವನ್ನು ನೀಡಿದ್ದಾರೆ ಎಂದರು.

ಎನ್ನೆಸ್ಸೆಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ, ಡಾ. ಕೆ.ಎಸ್. ಪರವ್ವಗೋಳ, ಡಾ. ಎಂ.ಬಿ. ಕುಲಮೂರ, ಬಿ.ಬಿ. ವಾಲಿ, ಡಿ.ಎಸ್. ಹುಗ್ಗಿ, ಆರ್.ಎಸ್. ಪಂಡಿತ, ವಿ.ಪಿ. ಕೆಳಗಡೆ, ಸಂತೋಷ ಬಂಡಿ, ಸಾಗರ ಐದಮನಿ, ಎಂ.ಬಿ. ಜಾಲಗಾರ ಇನ್ನಿತರರು ಉಪಸ್ಥಿತರಿದ್ದರು.

Latest News

ಶಿರೀಷಗೆ ಗಡಿತಿಲಕ, ಶಶಿಗೆ ಜನ್ನಾ ಪ್ರಶಸ್ತಿ

ಬೆಳಗಾವಿ - ಇಲ್ಲಿಯ ಬಿ ಎ ಸನದಿ ಸಾಂಸ್ಕೃತಿಕ ಪ್ರತಿಷ್ಠಾನ ಕರ್ನಾಟಕ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಪ್ರತಿವರ್ಷ ಕೊಡಮಾಡುವ ಕನ್ನಡ ಗಡಿತಿಲಕ ಪ್ರಶಸ್ತಿಗೆ ಶಿರೀಷ ಅವರು ಆಯ್ಕೆಯಾಗಿದ್ದಾರೆ...

More Articles Like This

error: Content is protected !!
Join WhatsApp Group