ಲಯನ್ಸ್ ಕ್ಲಬ್‍ದಿಂದ ವಿಶ್ವ ಮಹಿಳಾ ದಿನಾಚರಣೆ, ಉಚಿತ ಮಧುಮೇಹ ತಪಾಸಣೆ

Must Read

ಮೂಡಲಗಿ: ಮೂಡಲಗಿ ಲಯನ್ಸ್ ಕ್ಲಬ್ ಪರಿವಾರದವರು ಮಾ. 8ರಂದು ಸಂಜೆ 4 ಗಂಟೆಗೆ ಸ್ಥಳೀಯ ಶಿವಬೋಧರಂಗ ಕೋ.ಆಪ್. ಕ್ರೆಡಿಟ್ ಸೊಸೈಟಿ ಸಭಾಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರ ಮಧುಮೇಹ ತಪಾಸಣೆ ಹಾಗೂ ಸಾಧಕ ಮಹಿಳೆಯರ ಸನ್ಮಾನವನ್ನು ಏರ್ಪಡಿಸಿರುವರು.

ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ರೇಖಾ ಅಕ್ಕನವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಶೇಖರ ಬಂದಿ ಅಧ್ಯಕ್ಷತೆ ವಹಿಸುವರು. ಡಾ. ಬನಶಂಕರಿ ತಿಮ್ಮಣ್ಣ ಗಿರಡ್ಡಿ ಅವರು ಮಧುಮೇಹ ತಪಾಸಣೆಯನ್ನು ಮಾಡುವರು.

ಸನ್ಮಾನ: ಸಂಪ್ರದಾಯ ಹಾಡುಗಳ ಸಿರಿಯಜ್ಜಿ ಕಾಳವ್ವ ಬಸಯ್ಯ ಮಠಪತಿ ಹಾಗೂ ಜಾನಪದ ಯುವ ಗಾಯಕಿ ಅಕ್ಕಮಹಾದೇವಿ ಮಾದರ ಅವರಿಗೆ ಸನ್ಮಾನ ಇರುವುದು ಎಂದು ಕಾರ್ಯದರ್ಶಿ ಡಾ. ಸಂಜಯ ಶಿಂಧಿಹಟ್ಟಿ ಹಾಗೂ ಖಜಾಂಚಿ ಸುಪ್ರೀತ ಸೋನವಾಲಕರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group