ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ತಳ್ಳಾಟ; ನೂಕಾಟ ಮಾಡಿದವರಿಂದ ಕ್ಷಮೆಯಾಚನೆ

Must Read

ಕೊಪ್ಪಳ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರು ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕರಾದ ಬೀರಪ್ಪ ಅಂಡಗಿ ಅವರ ಮೇಲೆ ತಳ್ಳಾಟ ಹಾಗೂ ನೂಕಾಟ ಮಾಡಿವರು ನಡೆದ ಘಟನೆಯ ಕುರಿತಾಗಿ ಕ್ಷಮೆಯಾಚನೆ ಮಾಡಿದ್ದಾರೆ.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಸಭೆಗೆ ತೆರಳಿದ ಬೀರಪ್ಪ ಅಂಡಗಿ ಅವರ ಮೇಲೆ ಸಂಘದ ಪದಾಧಿಕಾರಿಗಳಲ್ಲದವರು ಅವರನ್ನು ತಳ್ಳಾಟ ಹಾಗೂ ನೂಕಾಟ ಮಾಡುವುದರ ಮೂಲಕ ಹಲ್ಲೆಗೆ ಮುಂದಾಗಿದ್ದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಭೆಗೆ ಆಹ್ವಾನ ನೀಡದೆ ಜೊತೆಗೆ ನಿಯಮದಲ್ಲಿ ಇಲ್ಲದೇ ಸಿ.ಆರ್.ಪಿ.ಹಾಗೂ ಬಿ.ಆರ್.ಪಿ.ಅವರ ಮೇಲೆ ಯಾವ ರೀತಿಯಲ್ಲಿ ದೂರು ನೀಡಿದ್ದೀರಿ ಎಂಬ ವಿಷಯವನ್ನು ಪ್ರಸ್ತಾಪಿಸಿದ್ದು ಘಟನೆಗೆ ಮೂಲ ಕಾರಣವಾಗಿತ್ತು.

ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ಹಲ್ಲೆಗೆ ಯತ್ನ ನಡೆದಿರುವ ಘಟನೆಯ ಬಗ್ಗೆ ರಾಜ್ಯಾದ್ಯಂತ ವಿಕಲಚೇತನ ನೌಕರರು ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ತಳ್ಳಾಟ ಹಾಗೂ ನೂಕಾಟ ಮಾಡಿದವರು ಕೂಡಲೇ ಕ್ಷಮೆ ಕೇಳಬೇಕು ಇಲ್ಲದಿದ್ದರೆ ವಿಕಲಚೇತನ ನೌಕರರ ಸಂಘದ ವತಿಯಿಂದ ಜ.೨೯ ರಂದು ಪ್ರತಿಭಟನೆ ನಡೆಸುವ ಬಗ್ಗೆ ಭಾನುವಾರ ಹಮ್ಮಿಕೊಂಡಿದ್ದ ತಾಲೂಕ ಮಟ್ಟದ ವಿಕಲಚೇತನ ನೌಕರರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಇದನ್ನು ಅರಿತು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರ ಮೇಲೆ ನೂಕಾಟ ಹಾಗೂ ತಳ್ಳಾಟ ನಡೆಸಿದವರು ವಿಕಲಚೇತನ ನೌಕರರ ಕ್ಷಮೆಯಾಚನೆ ಮಾಡಿದ್ದಾರೆ.

ಈ ಸಮಯಲ್ಲಿ ಮಾತನಾಡಿದ ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ, ಯಾವುದೇ ಸಭೆ ಇರಬಹುದು ಸಭೆಯಲ್ಲಿ ಪರಸ್ಪರ ವಿಷಯಗಳ ಕುರಿತು ಚರ್ಚೆಯಾಗಬೇಕು ಹೊರತು ತಳ್ಳಾಟ ಹಾಗೂ ನೂಕಾಟ ಮಾಡುವುದು ಸರಿಯಾದ ಕ್ರಮವಲ್ಲ ಜೊತೆಗೆ ಯಾವುದೇ ಸಭೆಗೆ ಇರಬಹುದು ಆ ಸಭೆಗೆ ಸಂಧಿಸಿದವರು ಮಾತ್ರ ಭಾಗವಹಿಸಬೇಕು. ಸಭೆಯ ಕುರಿತಾಗಿ ಪ್ರಶ್ನೆ ಮಾಡುವ ಅಧಿಕಾರವನ್ನು ಆ ಸಂಘದ ನಿರ್ದೇಶಕರು ಹೊಂದಿರುತ್ತಾರೆ ಅಧ್ಯಕ್ಷರಾದವರು ಅವರ ಪ್ರಶ್ನೆಗೆ ಸರಿಯಾದ ಉತ್ತರ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಮತ್ತೊಮ್ಮೆ ಈ ರೀತಿಯ ಕೃತವನ್ನು ಯಾರ ಮೇಲೂ ಮಾಡಬಾರದು ಎಂದು ಹೇಳಿದರು.

ತಳ್ಳಾಟ ಹಾಗೂ ನೂಕಾಟ ನಡೆಸಿದವರು ಕ್ಷಮೆಯಾಚನೆ ಮಾಡಿದ್ದರಿಂದ ಈ ಘಟನೆಯು ಸುಖಾಂತ್ಯ ಕಂಡಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group