ಲೇಖನ ಆಹ್ವಾನ

Must Read

ಕರ್ನಾಟಕ ಸುವರ್ಣ ಸಂಭ್ರಮದ ಸವಿನೆನಪಿಗಾಗಿ ಒಂದು ಸಂಸ್ಮರಣ ಕೃತಿಯನ್ನು ಪ್ರಕಾಶಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ.

ಈ ಕೃತಿಯೊಳಗೆ ಕನ್ನಡ ನೆಲ-ಜಲ, ಪರಿಸರ ಸಂರಕ್ಷಣೆ ಮಾಡಿದವರು, ನಾಡಿನ ಭವ್ಯ ಪರಂಪರೆ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಗಾಗಿ ದುಡಿದವರು, ನಾಡಿನ ಅಭಿವೃದ್ಧಿಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಆಡಳಿತಗಾರರು, ಉದ್ಯಮಿಗಳು, ಉದ್ಯೋಗಿಗಳು, ಶಿಕ್ಷಣ, ಆರೋಗ್ಯ, ಕಾನೂನು ಕ್ಷೇತ್ರದೊಳಗೆ ಗಣನೀಯ ಕಾರ್ಯ ಮಾಡಿದವರು, ವಿವಿಧ ಕ್ಷೇತ್ರದೊಳಗೆ ಸಂಶೋಧನಾ ಕಾರ್ಯ ಕೈಗೊಂಡವರು, ಕೃಷಿಕರು, ತಂತ್ರಜ್ಞಾನಿಗಳು, ಧಾರವಾಹಿ, ಸಿನೇಮಾ ನಿರ್ಮಿಸಿದವರು, ಶಿಕ್ಷಣ ಪಸರಿಸುವಲ್ಲಿ ಸಕ್ರಿಯವಾಗಿ ಪಾಲ್ಗೊಂಡವರು, ಮಠ, ಮಾನ್ಯಗಳು, ಸಂಘ, ಸಂಸ್ಥೆಗಳ ಪರಿಚಯಾತ್ಮಕ ಲೇಖನಗಳನ್ನು ಅಡಕಗೊಳಿಸಲು ತೀರ್ಮಾನಿಸಿದೆ.

ಕಾರಣ ಆಸಕ್ತ ಬರಹಗಾರರು ತಮ್ಮ ಪ್ರದೇಶದಲ್ಲಿರುವ ಮಹನೀಯರ ಸಂಘ-ಸಂಸ್ಥೆಗಳ ಕುರಿತು 5 ರಿಂದ 6 ಪುಟಕ್ಕೆ ಮೀರದಂತೆ ಲೇಖನ ತಯಾರಿಸಿ ದಿನಾಂಕ 21 ಜುಲೈ 2024 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕಾಗಿ ಕೋರಲಾಗಿದೆ. ಲೇಖನವನ್ನು ಅಂಚೆಯ ಮೂಲಕ ಅಥವಾ ತಮಗೆ ನೀಡಿರುವ ವಾಟ್ಸಪ್ ನಂಬರಿಗೆ ಮೊಬೈಲ್ ನಲ್ಲಿಯೇ ಯಾವುದೇ ತಪ್ಪುಗಳಲ್ಲದೆ ನೇರವಾಗಿ ಟೈಪ್ ಮಾಡಿ ಕಳುಹಿಸಬಹುದು, ಇಮೇಲ್ ಗೆ ನುಡಿ ಫಾಂಟ್ ನಲ್ಲಿ ಟೈಪ್ ಮಾಡಿ ಕಳುಹಿಸಲು ಆಶಿಸಿದೆ. ಈ ಗ್ರಂಥದಲ್ಲಿ ಆಯ್ದ ಐವತ್ತು ಲೇಖನಗಳಿಗೆ ಮಾತ್ರ ಅವಕಾಶವಿರುವುದನ್ನು ಲೇಖಕರು ಗಮನಿಸಬೇಕಾಗಿ ವಿನಂತಿ.

ಅಂಚೆ ವಿಳಾಸ –
ಸ. ರಾ. ಸುಳಕೂಡೆ
ನಂ. 1319, ಶ್ರೀ ಶಿವಪ್ರಸಾದ,
ರಾಮತೀರ್ಥನಗರ
ಬೆಳಗಾವಿ 590015

ವಾಟ್ಸಾಪ್ ನಂ.-
9480006858
9844453343

ಇ-ಮೇಲ್ –
dr.sunilparitkan@gmail.com

Latest News

ಮಧ್ಯಾಹ್ನದ ಬಿಸಿಯೂಟ ಸೇವಿಸಿ ೫೦ ಕ್ಕೂ ಅಧಿಕ ಮಕ್ಕಳು ಅಸ್ವಸ್ಥ

ಬೀದರ - ಮಧ್ಯಾಹ್ನದ ಬಿಸಿಯೂಟ ಸೇವಿಸುತ್ತಿದ್ದಂತೆ ಮಕ್ಕಳಿಗೆ ವಾಂತಿ, ಭೇದಿ ಶುರುವಾಗಿ ೫೦ ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥಗೊಂಡ ಘಟನೆ ಔರಾದ್ ತಾಲೂಕಿನ ಜಮಲಪೂರ್ ಗ್ರಾಮದ...

More Articles Like This

error: Content is protected !!
Join WhatsApp Group