spot_img
spot_img

ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ತಕ್ಕಂತೆ ಸಾಹಿತ್ಯ ಮೂಡಿಬರಬೇಕು – ಮಂಗಳಾ ಮೆಟಗುಡ್ಡ

Must Read

- Advertisement -

ಡಾ. ಸುನೀಲ ಪರೀಟರ ಎರಡು ಕೃತಿಗಳ ಲೋಕಾರ್ಪಣೆ

ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಜೂನ್ 16, 2024 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಬೆಳಗಾವಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಲಾ ಮೆಟಗುಡ್ಡ ಅವರು ಡಾ. ಸುನೀಲ ಪರೀಟ ಅವರ ಸ್ವರಚಿತ ಮಕ್ಕಳ ಕವನ ಸಂಕಲನ “ಓ ನನ್ನ ಕಂದ” ಹಾಗೂ ಸಂಪಾದಿತ ಕೃತಿ “ನಮ್ಮ ಅನ್ನದಾತ” ಎಂಬ ಎರಡು ಕೃತಿಗಳನ್ನು ಲೋಕಾರ್ಪಣೆ ಮಾಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ಮಕ್ಕಳ ಸಾಹಿತ್ಯ ಎಂದರೆ ಒಂದು ನಿರ್ಲಕ್ಷಿತ ಕ್ಷೇತ್ರವಾಗಿದೆ, ಮಕ್ಕಳ ಮಾನಸಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಕಥೆ, ಕಾದಂಬರಿ, ಕವನಗಳು, ನಾಟಕಗಳು ಹಾಗೂ ಚುಟುಕುಗಳು ಮೂಡಿ ಬರಬೇಕು. ಮಕ್ಕಳ ಸಾಹಿತ್ಯಕ್ಕೆ ಎಲ್ಲರೂ ಪ್ರೋತ್ಸಾಹ ನೀಡಿ ಬೆಳೆಸಬೇಕಂಥ ಸ್ಥಿತಿ ಇವತ್ತು ಬಂದು ಒದಗಿದೆ ಎಂದು ಅವರು ತಮ್ಮ ಭಾಷಣದಲ್ಲಿ ಹೇಳಿದರು.

- Advertisement -

ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿನಿ ಅನುರಾಧಾ ಕೋಲಕಾರ ಗಣೇಶ ಸ್ತುತಿ ಹಾಗೂ ಶಾರದಾ ಮಾತೆಯ ಪ್ರಾರ್ಥನೆಯನ್ನು ಮಾಡಿದಳು. ಶ್ರೀಮತಿ ಎಂ.ಎ. ದೇಸಾಯಿ ಅವರು ನಾಡಗೀತೆಯನ್ನು ಹಾಡಿದರು. ಕುಮಾರಿ ಅನುರಾಧಾ ಹಾಗೂ ಅಶ್ವಿನಿ ಬಾಗನವರ ವಿದ್ಯಾರ್ಥಿನಿಯರು ರೈತ ಗೀತೆಯನ್ನು ಹಾಡಿದರು.

ಬೆಳಗಾವಿಯ ಮ.ನ.ರ. ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ನಿರ್ಮಲಾ ಬಟ್ಟಲ ಅವರು ಓ ನನ್ನ ಕಂದ ಪುಸ್ತಕವನ್ನು ಪರಿಚಯಿಸುತ್ತಾ ಮಾತನಾಡಿದರು

ಇಂತಹ ಮಕ್ಕಳ ಕವನ ಸಂಕಲನಗಳು ಮಕ್ಕಳ ಮನಸ್ಸನ್ನು ಹದಗೊಳಿಸುತ್ತವೆ, ಮಕ್ಕಳಿಗೆ ಮೊಬೈಲ ಬದಲಿಗೆ ಇಂತಹ ಕೃತಿಗಳನ್ನು ನೀಡುವುದು ಒಳ್ಳೆಯದು. ಮಕ್ಕಳಿಗೆ ಪ್ರಾಸ ಬದ್ಧವಾದ ಲಯ ಹಾಗೂ ರಾಗವುಳ್ಳ ಕವಿತೆಗಳು ಹಾಡುಗಳು ಇಷ್ಟವಾಗುತ್ತವೆ. ಡಾ. ಸುನೀಲ ಪರೀಟ ಅವರ ಈ ಕೃತಿ ನಿಜಕ್ಕೂ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಒಂದು ಹೊಸ ಅಧ್ಯಾಯವನ್ನು ಆರಂಭಿಸುವುದು ಇದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು

- Advertisement -

ಖಾನಾಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕರಾದ ಡಾ. ಅ.ಬ. ಇಟಗಿ ಅವರು ನಮ್ಮ ಅನ್ನದಾತ ಕೃತಿಯನ್ನು ಪರಿಚಯಿಸುತ್ತಾ, ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಹೇಳಿದರೆ ಸಾಲದು ಅಂಥ ನಮ್ಮ ರೈತರಿಗೋಸ್ಕರ ನಮ್ಮ ಅನ್ನದಾತರಿಗೋಸ್ಕರ ನಮ್ಮ ಕೈಲಾದ ಸಹಾಯವನ್ನು ಅಥವಾ ಉಪಕಾರವನ್ನು ಮಾಡಬೇಕು. ಆತ್ಮಹತ್ಯೆ ಮಾಡಿಕೊಂಡಾಗ ಮಾತ್ರ ರೈತರು ನೆನಪಾಗುವವರು ಆ ರೈತರು ಆತ್ಮಹತ್ಯೆ ಮಾಡಿಕೊಳ್ಳದ ಹಾಗೆ ನಮ್ಮ ವ್ಯವಸ್ಥೆ ಬದಲಾಗಬೇಕಾಗಿದೆ. ಈ ಕೃತಿಯಲ್ಲಿ ಕರ್ನಾಟಕದ ಮೂಲೆ ಮೂಲೆಯಿಂದಲೂ ಕವಿ ಮನಸುಗಳು ತಮ್ಮ ರಚನೆಯಲ್ಲಿ ರೈತರ ಕಷ್ಟ ಸುಖಗಳ ಭವಣೆಗಳ ಕುರಿತು ಅವರ ಜೀವನ ಚರಿತ್ರೆಯನ್ನೇ ಚಿತ್ರಿಸಲಾಗಿದೆ. ರೈತರು ನಮ್ಮೆಲ್ಲರ ಹೊಟ್ಟೆಯನ್ನು ತುಂಬಲು ಹಗಲಿರುವುದು ದುಡಿಯುತ್ತಾರೆ ಆದರೆ ನಿಜ ಜೀವನದಲ್ಲಿ ಅವರು ಅನೇಕ ಕಷ್ಟಗಳನ್ನು ಅನುಭವಿಸುತ್ತಾರೆ. ರೈತರ ಜೀವನದ ಮೇಲೆ ಬೆಳಕನ್ನು ಚೆಲ್ಲುವ ಎಂತ ಕೃತಿಗಳು ಸಾಹಿತ್ಯ ಕ್ಷೇತ್ರದಲ್ಲಿ ಮೈಲುಗಲ್ಲು ಸಿದ್ಧವಾಗುತ್ತವೆ ಎಂದರು

ಬೆಳಗಾವಿಯ ಹಿರಿಯ ಸಾಹಿತಿಗಳಾದ  ಸ.ರಾ. ಸುಳಕೂಡೆ ಅವರು ಮುಖ್ಯ ಅತಿಥಿಗಳಾಗಿ ಮಾತನಾಡಿ ಸಾಹಿತ್ಯ ಕ್ಷೇತ್ರದಲ್ಲಿ ಇಂಥ ಕೃತಿಗಳು ಹೊಸ ಬೆಳಕನ್ನು ಮೂಡಿಸುತ್ತದೆ, ಸಾಹಿತ್ಯವು ನಿಂತ ನೀರಲ್ಲ ಅದು ಯಾವತ್ತೂ ಅರಿಯುತ್ತಿರುತ್ತದೆ ಪರಿವರ್ತನೆ ಯಾಗುತ್ತಿರುತ್ತದೆ. ಡಾ ಸುನೀಲ ಪರೀಟ ಅವರ ಇಂಥ ಎರಡು ಕೃತಿಗಳು ಸಾಹಿತ್ಯ ಜಗತ್ತಿಗೆ ಹೊಸ ಬೆರಗನ್ನು ಮೂಡಿಸುತ್ತದೆ ಎಂದರು

ಡಾ. ಸುನೀಲ ಪರೀಟ ಅವರು ತಮ್ಮ ಕೃತಿಗಳ ಕುರಿತು ಮಾತನಾಡುತ್ತಾ,  ಸಾಹಿತ್ಯವು ಸಮಾಜಕ್ಕೆ ದಾರಿ ತೋರುವ ಒಂದು ಮಾಧ್ಯಮವಾಗಿದೆ. ಸಾಹಿತ್ಯ ಯಾವತ್ತೂ ಈ ಸಮಾಜಕ್ಕೆ ಈ ದೇಶಕ್ಕೆ ಒಳಿತನ್ನು ಬಯಸುತ್ತದೆ. ನಾವು ಮಾಡಿದ ತಪ್ಪನ್ನು ಮಕ್ಕಳು ಮಾಡುತ್ತಾರೆ, ಆದ್ದರಿಂದ ಮಕ್ಕಳ ಕೈಯಲ್ಲಿ ಮೊಬೈಲ್ ಅನ್ನು ನೀಡುವ ಬದಲು ಇಂತಹ ಕೃತಿಗಳನ್ನು ನೀಡಿ ಮಕ್ಕಳಿಗೆ ಒಳ್ಳೇ ಮಾರ್ಗದರ್ಶನವನ್ನು ಮಾಡುವಂತ ಇವತ್ತು ಸಂದರ್ಭ ಬಂದು ಒದಗಿದೆ. ಇವತ್ತು ಸಾಹಿತ್ಯ ಹಾಗೂ ಸಾಹಿತ್ಯಕಾರರು ಕಷ್ಟದಲ್ಲಿದೆ ಆದರೆ ಸಹಕಾರ ಮನೋಭಾವನೆ ಎಲ್ಲರಲ್ಲಿ ಇದ್ದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದರು

ಕಾರ್ಯಕ್ರಮದ ಅಧ್ಯಕ್ಷರು ಹಿರಿಯ ಸಾಹಿತಿಗಳು ಹಾಗೂ ವಿಶ್ರಾಂತ ಕನ್ನಡ ಉಪನ್ಯಾಸಕರಾದ ಡಾ. ಯು. ಎನ್. ಸಂಗನಾಳಮಠ ಅವರು ತಮ್ಮ ಅಧ್ಯಕ್ಷೀಯ ನುಡಿಯಲ್ಲಿ, ಉದಯಮುಖ ಸಾಹಿತಿಗಳಿಗೆ ನಮ್ಮ ಹಿರಿಯ ಸಾಹಿತಿಗಳು ಮಾರ್ಗದರ್ಶನ ಮಾಡಬೇಕು ಸಾಹಿತ್ಯವು ಯಾವತ್ತೂ ಬೆಳೆಯುತ್ತಿರಬೇಕು ಸಾಹಿತ್ಯದಲ್ಲಿ ಹೊಸ ಹೊಸ ಪ್ರಯೋಗಗಳು ಮೇಲಿಂದ ಮೇಲೆ ಆಗುತ್ತಿರಬೇಕು. ನಾವು ಇದ್ದರೂ ಇರದಿದ್ದರೂ ಸಾಹಿತ್ಯವು ಯಾವತ್ತೂ ಈ ಸಮಾಜದಲ್ಲಿ ಉಳಿಯುತ್ತದೆ. ಇವತ್ತಿನ ಎರಡು ಕೃತಿಗಳು ನಮ್ಮ ಸಾಹಿತ್ಯ ಜಗತ್ತಿನಲ್ಲಿ ಶಾಶ್ವತವಾಗಿ ಹೊಳೆಯುತ್ತಿರುತ್ತವೆ ಏಕೆಂದರೆ ಈ ಎರಡು ಕೃತಿಗಳು ವಿಷಯ ವಸ್ತು ಇವತ್ತಿನ ಸಮಾಜಕ್ಕೆ ಅತ್ಯವಶ್ಯಕವಾಗಿವೆ. ಇವತ್ತಿನ ಮಕ್ಕಳಿಗೆ ಮಕ್ಕಳ ಸಾಹಿತ್ಯವನ್ನು ಪರಿಚಯಿಸುವ ಹಾಗೂ ಕಷ್ಟದಲ್ಲಿರುವ ರೈತರ ಕುರಿತು ಬೆಳಕನ್ನು ಚೆಲ್ಲುವ ಕೃತಿಗಳು ಅತ್ಯವಶ್ಯಕವಾಗಿವೆ. ಸಮಯವು ಯಾವತ್ತು ನಿಲ್ಲುವುದಿಲ್ಲ ಹಾಗೆಯೇ ಸಾಹಿತ್ಯವು ಬಹಳ ಅವಧಿ ವರೆಗೆ ತನ್ನ ಒಂದೇ ರೂಪದಲ್ಲಿ ಉಳಿಯುವುದಿಲ್ಲ. ಉದ್ಯೋನ್ಮುಖ ಸಾಹಿತಿಗಳಿಂದ ಸಾಹಿತಿಗಳಿಂದ ಈ ಸಮಾಜಕ್ಕೆ ಒಳ್ಳೆ ಮಾರ್ಗದರ್ಶನ ಬಯಸುವ ನಾವೆಲ್ಲರೂ ಇಂತಹ ಕೃತಿಗಳಿಗೆ ಹೆಚ್ಚು ಮಹತ್ವವನ್ನು ನೀಡಿ ಪ್ರೇರೇಪಿಸಬೇಕಾಗಿದೆ ಎಂದು ನುಡಿದರು.

ಕಾರ್ಯಕ್ರಮದಲ್ಲಿ ನಮ್ಮ ಅನ್ನದಾತ ಕವನ ಸಂಕಲನದ ಕವಿ ಮನಸುಗಳಿಗೆ ಪ್ರಶಸ್ತಿ ಪತ್ರ ಹಾಗೂ ಕೃತಿಗಳನ್ನು ಸಮರ್ಪಿಸಿ ಗೌರವಿಸಲಾಯಿತು. ಡಾ. ಸುನೀಲ ಪರೀಟ ಅವರು ಎಲ್ಲರನ್ನು ಸ್ವಾಗತಿಸಿದರು.  ಎಂ. ವೈ. ಮೆಣಸಿನಕಾಯಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.

ಬಾಳಗೌಡ ದೊಡಬಂಗಿ, ಶಿವಾನಂದ ತಲ್ಲೂರ, ದೀಪಾ ರಾಗಿ, ಬಿ ಬಿ ಮಠಪತಿ, ರುದ್ರಮ್ಮಾ ಪಾಟೀಲ, ಶೋಭಾ ಕತ್ತಿ, ಜ್ಯೋತಿ ಸಿ. ಎಂ., ಸುಮಿತ್ರಾ ಕರವಿನಕೊಪ್ಪ, ಮಂಜುಳಾ ಶೆಟ್ಟರ, ರಾಜು ಹಕ್ಕಿ, ಶಿವನಗೌಡ ಪಾಟೀಲ, ಮಡಿವಾಳಮ್ಮ ಪೂಜಾರಿ, ಸುಭಾಷ್ ತಾಳೂಕರ, ಸುನೀತಾ ಶಿವಯೋಗಿ, ಡಾ. ವಸುಧಾ ಕಾಮತ ಮುಂತಾದವರು ರಾಜ್ಯದ ಮೂಲೆ ಮೂಲೆಯಿಂದಲು ಸಾಹಿತಿಗಳು ಉಪಸ್ಥಿತರಿದ್ದರು. ಕೊನೆಗೆ ಶ್ರೀಮತಿ ಸುಮನ ಪರೀಟ ಅವರು ವಂದಿಸಿದರು.

- Advertisement -
- Advertisement -

Latest News

ಮಾಜಿ ಪ್ರಧಾನಿ ಡಾ. ಮನಮೋಹನಸಿಂಗ್ ನಿಧನ

ಹೊಸದೆಹಲಿ - ಭಾರತದ ೧೩ ನೇ ಪ್ರಧಾನ ಮಂತ್ರಿಯಾಗಿದ್ದ ಆರ್ಥಿಕ ತಜ್ಞ ಡಾ. ಮನಮೋಹನ ಸಿಂಗ್ ನಿಧನರಾಗಿದ್ದಾರೆ ೧೯೭೨ ರಲ್ಲಿ ಆರ್ಥಿಕ ಸಲಹೆಗಾರ,  ೧೯೭೬ ರಿಂದ ೧೯೮೦...
- Advertisement -

More Articles Like This

- Advertisement -
close
error: Content is protected !!
Join WhatsApp Group