ಯುಥ್ ರೆಡ್ ಕ್ರಾಸ್ ದಿನಾಚರಣೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಲು ಕರೆ

Must Read

ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ವಾಣಿಜ್ಯ ಹಾಗೂ ಬಿ.ಸಿ.ಎ. ಮಹಾವಿದ್ಯಾಲಯದಲ್ಲಿ ದಿನಾಂಕ ೮ ಮೇ ೨೦೨೫ರಂದು ನಡೆದ ಯುಥ್ ರೆಡ್ ಕ್ರಾಸ್ ದಿನಾಚರನೆಯ ಸಂಧರ್ಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಾಚಾರ್ಯರಾದ ಪ್ರೊ. ಜಿ.ವ್ಹಿ ನಾಗರಾಜ್ ಅವರು, ರಕ್ತವನ್ನು ಉತ್ಪಾದನೆ ಮಾಡುವ ಯಾವುದೆ ಕಾರ್ಖಾನೆಗಳಿಲ್ಲ ತುರ್ತು ಸಂಧರ್ಭದಲ್ಲಿ ಅಂದರೆ ಯುದ್ಧ ನಡೆದು ಗಾಯಾಳುಗಳಾದ ಸಂಧರ್ಭದಲ್ಲಿ, ಅಪಘಾತವಾಗಿ ರಕ್ತದ ಸೋರಿಕೆಯಿಂದಾಗಿ ರಕ್ತದ ಕೊರತೆ ಬಿದ್ದು ಸಾವು-ಬದುಕಿನ ಹೋರಾಟದಲ್ಲಿರುವ ಮನುಷ್ಯರಿಗೆ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಿದ ರಕ್ತದಾನ ಭಂಡಾರದಲ್ಲಿ ಸಂಗ್ರಹಿಸಿಡುವ ವ್ಯವಸ್ಥೆ ಮಾನವೀಯತೆ ಮೇರೆಯುವ ಸೇವೆಗಳಾಗಿವೆ ಎಂದು ಹೇಳುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ವಯಂ ರಕ್ತದಾನ ಮಾಡುಲು ಸಲಹೆ ಮಾಡಿದರು.

ಇದೇ ಸಂಧರ್ಭದಲ್ಲಿ ಅವರು ಮಹಾವಿದ್ಯಾಲಯ, ಜಿಲ್ಲಾ ಆಸ್ಪತ್ರೆ ಬೆಳಗಾವಿ, ಕೆ.ಹೆಚ್. ಸೋನವಾಲಕರ ಪ್ರತಿಸ್ಠಾನ, ರೋಟರಿಕ್ಲಬ್ ಗೋಕಾಕ,ಮೇಲ್ದರ್ಜೆಗೆ ಏರಿಸಿದ ಸಮುದಾಯ ಆರೋಗ್ಯ ಕೇಂದ್ರ ಮೂಡಲಗಿ ಮುಂತಾದ ಸಂಘಟನೆಗಳಿಂದ ಮೂಡಲಗಿಯಲ್ಲಿ ಪ್ರತಿ ವರ್ಷ ಫೆಬ್ರವರಿ ೧೦ ರಂದು ರಕ್ತದಾನ ಮಾಡಿದ ಮಹಾವಿದ್ಯಾಲಯದ ವಿದ್ಯಾರ್ಥಿಗಳನ್ನು ರಾಷ್ಟ್ರೀಯ ಸೇವಾ ಯೋಜನೆಯ ಘಟಕಾಧಿಕಾರಿಗಳನ್ನು, ರೋವರ್ಸ-ರೇಂಜರ್ಸ್, ಸ್ಕೌಟ ಲೀಡರಗಳನ್ನು, ಮಹನೀಯರನ್ನು ಸಮಸ್ತ ಹಿರಿಯರನ್ನು ರಕ್ತದಾನ ಶಿಬಿರವನ್ನು ಏರ್ಪಡಿಸಲು ಕಾರಣಿಕರ್ತರಾದ ಪತ್ರಕರ್ತರನ್ನು ಮತ್ತು ನಾಗರಿಕರನ್ನು ಮತ್ತು ಅರಭಾಂವಿ ಭಾಗದ ಶಾಸಕರನ್ನು ಶ್ಲಾಘಿಸುವುದರೊಂದಿಗೆ ಸ್ಮರಿಸಿದರು.

ಹೆನ್ರಿ ಡನೌಟ ಅವರ ಜಯಂತಿಯ ನಿಮಿತ್ತವಾಗಿ ರಕ್ತದಾನ ದಿನಾಚರಣೆಯನ್ನು ಪ್ರಪಂಚದಾದ್ಯಂತ ಆಚರಿಸಲಾಗುವುದು ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಐ.ಕ್ಯು.ಎ.ಸಿ.ಸಂಯೋಜಕರು ಹಾಗೂ ರಾಷ್ಟಿಯ ಸೇವಾಯೋಜನೆಯ ಕಾರ್ಯಕ್ರಮಾಧಿಕಾರಿಗಳಾದ ಡಾ. ಎಸ್.ಎಲ್ ಚಿತ್ರಗಾರ ನಿರ್ವಹಿಸಿ ವಂದಿಸಿದರು. ಸಮಾರಂಭದಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾದ ಪ್ರೊ.ಎಸ್.ಸಿ. ಮಂಟೂರ, ಪ್ರೊ. ವಿ.ಆರ್.ಭಾಗಡೆ, ಪ್ರೊ. ಎಲ್.ಪಿ.ಹಿಡಕಲ್, ಪ್ರೊ.ಎ.ಎಸ್.ಮೀಸಿ ನಾಯಕ, ಪ್ರೊ.ವಿನೋದ ಬೈರನಟ್ಟಿ, ಪ್ರೊ.ಪಿ.ಬಿ. ಚೌಡಕಿ. ಪ್ರೊ. ಮಹಾಂತೇಶ.ಕುಂದರಗಿ, ಪ್ರೊ. ಸಿದ್ರಾಮ ಸವಸುದ್ಧಿ, ಪ್ರೊ. ಎಸ್.ಕೆ. ಕೊತ್ತಲ. ಪ್ರೊ. ಪಿ.ಬಿ. ಬೆಳಗಲಿ, ಭೋಧಕೇತರ ಸಿಬ್ಬಂದಿಯವರಾದ ಎ.ಎಸ್. ಗಸ್ತಿ, ಕಲ್ಮೇಶ ಇಂಗಳೆ ಮುಂತಾದವರು ಉಪಸ್ಥಿತರಿದ್ದರು.

Latest News

ಎಲ್ಲಾ ಜಿಲ್ಲೆಗಳ ಯುವ ಸಾಧಕರಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಾಜ್ಯ ಯುವ ಪ್ರಶಸ್ತಿ ಪ್ರದಾನ  

ಮೂಡಲಗಿ:-ತಾಲೂಕಿನ ಹಳ್ಳೂರ ಗ್ರಾಮದಲ್ಲಿ ರಾಜ್ಯದ ೩೧ ಜಿಲ್ಲೆಯ "ಯುವ ಸಾಧಕರಿಗೆ ಪ್ರಶಸ್ತಿ" ಪ್ರದಾನ ಸಮಾರಂಭ ಕಾರ್ಯಕ್ರಮ ದಿ. 26 ಹಾಗೂ 27 ರಂದು ಜರುಗುವುದು.ಕರ್ನಾಟಕ ರಾಜ್ಯ...

More Articles Like This

error: Content is protected !!
Join WhatsApp Group