ಹಳ್ಳೂರ – ಯುವಕರು ಫ್ಯಾಶನ್ ಗೆ ಅಂಟಿಕೊಂಡು ಕೆಟ್ಟ ವ್ಯಸನಾದಿಗಳನ್ನು ಮಾಡಿ ಚಿಕ್ಕ ವಯಸ್ಸಿನಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸ್ತ್ರೀ,ಪುರುಷರು ಭಾರತೀಯ ಸಂಸ್ಕೃತಿ ಪದ್ಧತಿಯನ್ನು ಅನುಸರಿಸಿ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಜೀವನ ರೂಪಿಸಿಕೊಳ್ಳಿ ಎಂದು ಸದ್ಗುರು ಅಭಿನವ ಗುರುಲಿಂಗ ಜಂಗಮ ಸ್ವಾಮೀಜಿಗಳು ಹೇಳಿದರು.
ಅವರು ಹಳ್ಳೂರ ಗ್ರಾಮದ ಬಿ ಕೆ ಎಂ ಪ್ರೌಢ ಶಾಲೆಯ ಆವರಣದಲ್ಲಿ ನಡೆದ 2001-02 ನೇ ಸಾಲಿನ ವಿದ್ಯಾರ್ಥಿಗಳಿಂದ ಗುರು ವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಶಿಕ್ಷಕ ತಂದೆ ತಾಯಿ ಗುರು ಹಿರಿಯರನ್ನು ಗೌರವಿಸುವ ಮನೋಭಾವ ಹೊಂದಬೇಕು. ಆಸ್ತಿ ಅಂತಸ್ತು ಅಧಿಕಾರ ಯಾವುದೂ ಸ್ಥಿರವಲ್ಲ. ಅನ್ಯಾಯ ಮಾರ್ಗದಿಂದ ಗಳಿಸಿದ ಹಣ ಕರ್ಮಕ್ಕೆ ಸಲ್ಲುತ್ತದೆ ಅನ್ಯಾಯ ಅಧರ್ಮದ ಮಾರ್ಗ ಬಿಟ್ಟು ಸತ್ಯದ ಕಾಯಕ ಮಾಡುತ್ತಾ ಇನ್ನೊಬ್ಬರಿಗೆ ಸಹಾಯ ಸಹಕಾರ ಮಾಡುವ ಮನೋಭಾವನೆ ಬೆಳೆಸಿಕೊಳ್ಳಬೇಕು ನಮ್ಮಿಂದ ಇನ್ನೊಬ್ಬರು ನೋಡಿ ಜೀವನ ರೂಪಿಸಿಕೊಳ್ಳಬೇಕು. ಸಮಾಜದಲ್ಲಿ ಒಳ್ಳೇದು ಹೇಳೋರನ್ನ ಒಳ್ಳೇದು ಮಾಡೋರಣ್ಣ ವಿರೋಧಿಸುವ ಮೂರ್ಖ ಜನ ಎಂದಿಗೂ ಉದ್ಧಾರವಾಗುವದಿಲ್ಲ. ಸಮಾಜದಲ್ಲಿ ನಿಮ್ಮಿಂದ ಜನ ಸುಧಾರಣೆಯಾಗಬೇಕು ಮುಂದಿನ ದಿನಗಳಲ್ಲಿ ಗ್ರಾಮಸ್ಥರೆಲ್ಲರು ಒಗ್ಗಟ್ಟಿನಿಂದ ಬ ಕು ಮ ಪ್ರೌಢ ಶಾಲೆಯ ತಡೆಗೋಡೆ ನಿರ್ಮಾಣ ಮಾಡಿರೆಂದು ಹೇಳಿದರು.
ಮುಖ್ಯ ಅತಿಥಿಗಳಾದ ಸಾಹಿತಿ ಡಾ ವಿ ಎಸ್ ಮಾಳಿ ಮಾತನಾಡಿ, ತಂದೆ ತಾಯಿ ಮಕ್ಕಳಿಗೇ ಆಸ್ತಿ ಮಾಡದೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿರಿ ಊರು ಉದ್ದಾರವಾಗಬೇಕಾದರೆ ಶಾಲೆ ತೆರೆಯಬೇಕು ಊರು ಹಾಳಾಗಬೇಕಾದರೆ ಬಾರ ಅಂಗಡಿ ತೆರೆಯಬೇಕು. ಹಿಂದಿನ ವಿದ್ಯಾರ್ಥಿಗಳ ಸಮಾಗಮ ಗುರು ಶಿಷ್ಯರ ಬಾಂಧವ್ಯ ಬೆಸೆಯುವ ಅದ್ಭುತ ಅಸ್ತ್ರ ಇದಾಗಿದೆ.ನೀವೂ 40 ವರ್ಷ ಜೀವನ ಕಳೆದಿದ್ದು ಮುಂದಿನ ಜೀವನದಲ್ಲಿ ಒಳ್ಳೆಯ ಜೀವನವನ್ನು ರೂಪಿಸಿಕೊಳ್ಳಿರಿ ಶಾಲೆಗೆ ತಂದೆ, ತಾಯಿಗೆ ಗ್ರಾಮಕ್ಕೆ ಕಿರ್ತಿ ತರುವಂತವರಾಗಬೇಕೆಂದು ಹೇಳಿದರು.
ನಿವೃತ್ತ ಮುಖ್ಯೋಪಾಧ್ಯಾಯರಾದ ಎಸ್ ಬಿ ಗುರ್ಲಾಪೂರ ಹಾಗೂ ನಿವೃತ್ತ ಶಿಕ್ಷಕರಾದ ಪಿ ಎಸ್ ಈರಡ್ಡಿ ಮಾತನಾಡಿ ನಮ್ಮ ಶಿಕ್ಷಕ ವೃತ್ತಿಯನ್ನು ಎಡಬಿಡದೆ ಪ್ರಾಮಾಣಿಕವಾಗಿ ನಿಮ್ಮನ್ನು ಬೈದು ಬಡಿದು ಒಳ್ಳೆಯ ಶಿಕ್ಷಣ ಸೇವೆ ಸಲ್ಲಿಸಿದ್ದಕ್ಕಾಗಿ ಇವತ್ತು ನಮ್ಮನ್ನು ಸಾರೋಟಿನಲ್ಲಿ ಭವ್ಯ ಮೆರಣಿಗೆಯಲ್ಲಿ ತಂದು ನಮಗೆ ಗೌರವ ನೀಡಿದನ್ನು ನೋಡಿದರೆ ಪುನರ್ಜನ್ಮ ಪಡೆದಂತಾಯಿತು ಎಂದು ಹೇಳಿದರು.
ಪ್ರಾರಂಭದಲ್ಲಿ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಿಂದ ಬ ಕು ಮ ಪ್ರೌಡ ಶಾಲೆಯ ಆವರಣದವರೆಗೆ ಕಕಮರಿ ಪೂಜ್ಯರು ಹಾಗೂ ಶಿಕ್ಷಕರನ್ನು ,ಸಿಬ್ಬಂದಿಗಳನ್ನು ಸಾರೋಟಿನಲ್ಲಿ ಪುಷ್ಪ ವೃಷ್ಟಿ ಭವ್ಯ ಮೆರವಣಿಗೆಯೊಂದಿಗೆ ಕರೆ ತರಲಾಯಿತು.ಭೂದಾನಿಗಳಾದ ಸುನಂದಾ ಕುಲಕರ್ಣಿ, ಸುಲುಭಾ ಕುಲಕರ್ಣಿ, ಮುಖ್ಯೋಪಾದ್ಯಾಯ ಎಂ ಎನ್ ಕುಲಕರ್ಣಿ, ಸತ್ತೆಪ್ಪ ಅಂಗಡಿ ಮತ್ತು ಶಾಲೆಯ ವಿದ್ಯಾರ್ಥಿಗಳು ,ಸಿಬ್ಬಂದಿಗಳು ಸೇರಿದಂತೆ ಅನೇಕರಿದ್ದರು. ಗ್ರಾಮಸ್ಥರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.
ವರದಿ: ಮುರಿಗೆಪ್ಪ ಮಾಲಗಾರ.

