spot_img
spot_img

ಕಲಿವೀರನಿಗೆ ರಿಯಲ್ ಸ್ಟಾರ್ ಸಾಥ್

Must Read

spot_img
- Advertisement -

ಒಂದು ಕಾಲದಲ್ಲಿ ಗಾಂಧಿನಗರದ ಲೆಕ್ಕಾಚಾರಗಳನೆಲ್ಲ ಉಲ್ಟ ಮಾಡಿದ ಪ್ರತಿಭಾವಂತ ನಿರ್ದೇಶಕ ಕಮ್ ನಟ ಉಪೇಂದ್ರ. ಇಂದು ಅವರು ಕನ್ನಡ ಹೆಸರಾಂತ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರು ಹಾಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸ್ಟಾರ್ ನಾಯಕನಟ. ಉಪ್ಪಿ ತಮ್ಮದೇ ಶೈಲಿಯಲ್ಲಿ ಛಾಪನ್ನು ಮೂಡಿಸಿದ ವ್ಯಕ್ತಿ. ಉತ್ತರ ಕರ್ನಾಟಕದ ಪ್ರತಿಭೆ “ಏಕಲವ್ಯ” ಚೊಚ್ಚಲ ಬಾರಿಗೆ ನಾಯಕನಾಗಿ ನಟಿಸಿರುವ ಕಲಿವೀರ ಚಿತ್ರದ ಸಾಹಸ ದೃಶ್ಯಗಳನ್ನು ನೋಡಿದ ರಿಯಲ್ ಸ್ಟಾರ್ ಕಲಿವೀರನಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

- Advertisement -

ಕಲರಿ ಪಯಟ್ಟು, ಯೋಗ , ಮಾರ್ಷಲ್ ಆರ್ಟ್ಸ್ ನಂತ ಕಠಿಣ ಕಲೆಗಳಲ್ಲಿ ಪರಿಣಿತಿ ಹೊಂದಿರುವ ಏಕಲವ್ಯರಿಗೆ ಶಭಾಷ್ ಎಂದಿದಲ್ಲದೆ, ಚಿತ್ರದ ಸಾಹಸ ನಿರ್ದೇಶಕ “ಡಾ.ಡಿಫರೆಂಟ್ ಡ್ಯಾನಿ” ರವರ ಸಾಹಸ ಸಂಯೋಜನೆಗೆ ಮನ ಸೋತಿದ್ದಾರೆ. ರಾಣೆಬೆನ್ನೂರಿನ “ಜ್ಯೋತಿ ಆರ್ಟ್ಸ್” ಸಂಸ್ಥೆ ನಿರ್ಮಿಸಿರುವ ಈ ಅದ್ದೂರಿ ಚಿತ್ರವು ಪ್ರೇಕ್ಷಕರ ಮನಸ್ಸು ಗೆಲ್ಲುವ ಮುಖಾಂತರ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸುವ ಎಲ್ಲಾ ಲಕ್ಷಣಗಳಿವೆ ಎಂದು ಉಪ್ಪಿ ಅಭಿಪ್ರಾಯ ವ್ಯಕ್ತಪಡಿಸಿದರು. ಕಥೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ “ಅವಿ” ಎಂಬ ಯುವ ನಿರ್ದೇಶಕನ ಈ ಕಲಿವೀರ ಚಿತ್ರದ ರಿಯಲ್ ದೃಶ್ಯಗಳನ್ನು ರಿಯಲ್ ಸ್ಟಾರ್ ಮೆಚ್ಚಿಕೊಂಡು ಕಲಿವೀರನಿಗೆ ಸಾಥ್ ಕೊಟ್ಟಿರುವುದು ಚಿತ್ರ ತಂಡಕ್ಕೆ ಆತ್ಮವಿಶ್ವಾಸ ಹೆಚ್ಚಿಸಿದೆ.

- Advertisement -

2 COMMENTS

  1. All the very best 💕💕💕 love your work. Kannada industry loking forword on” Ekalavya”!!!💕 Thaks to all the team.💕💕💕💕💕

Comments are closed.

- Advertisement -

Latest News

ಶ್ರೀ ಬಸವೇಶ್ವರ ಸೊಸಾಯಿಟಿಗೆ ರಜತ ಮಹೋತ್ಸವ ಸಂಭ್ರಮ

ಮೂಡಲಗಿ -ಪಟ್ಟಣದ ಶ್ರೀ ಬಸವೇಶ್ವರ ಅರ್ಬನ್ ಕೋ-ಆಪ್ ಕ್ರೆಡಿಟ್ ಸೊಸಾಯಿಟಿಗೆ ೨೫ ವರ್ಷಗಳು ಪೂರೈಸಿದ ಹಿನ್ನೆಲೆಯಲ್ಲಿ ಇದೇ ದಿ. ೨೫ ರಂದು ಸಂಭ್ರಮದ ಬೆಳ್ಳಿ ಮಹೋತ್ಸವ...
- Advertisement -

More Articles Like This

- Advertisement -
close
error: Content is protected !!
Join WhatsApp Group