spot_img
spot_img

ಕೂಡ್ಲಿ ಮಠದಲ್ಲಿ ಶ್ರೀ 1008 ಅಕ್ಷೋಭ್ಯ ತೀರ್ಥರ ಆರಾಧನಾ ಮಹೋತ್ಸವ

Must Read

- Advertisement -

ಧರ್ಮ, ಕಲೆ , ವೇದಾಂತ ಮತ್ತು ಸಾಹಿತ್ಯದ ಕ್ಷೇತ್ರಗಳಲ್ಲಿ ತನ್ನದೇ ಆದ ವಿಶಿಷ್ಟವಾದ ಗಮನಾರ್ಹ ಸೇವೆ ಮಾಡಿದ ಮಹನೀಯರನ್ನು ನೀಡಿದ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ತುಂಗಾ – ಭದ್ರಾ – ನದಿಗಳ ಸಂಗಮ ಕ್ಷೇತ್ರವೇ ಶ್ರೀ ಶ್ರೀ 1008 ಅಕ್ಷೋಭ್ಯ ತೀರ್ಥರ ಮೃತ್ತಿಕಾ ವೃಂದಾವನ ಇರುವ ಪುಣ್ಯ ಕ್ಷೇತ್ರ .

ಜನವರಿ 2 ರಿಂದ 4 ರವರೆಗೆ ಶ್ರೀ ಶ್ರೀ 1008 ಅಕ್ಷೋಭ್ಯ ತೀರ್ಥರ ಪುಣ್ಯರಾಧನೆ ಶಿವಮೊಗ್ಗ ಜಿಲ್ಲೆಯ ಕೂಡಲಿಯಲ್ಲಿ ಮೂರು ದಿನಗಳ ಕಾಲ ವಿಜೃಂಭಣೆಯಿಂದ ನೆರವೇರಿತು .

ಕೂಡಲಿ ಆರ್ಯ ಶ್ರೀ ಅಕ್ಷೋಭ್ಯ ತೀರ್ಥರ ಮಠದಲ್ಲಿ 3 ದಿನಗಳ ಕಾಲ ನಡೆದ ಆರಾಧನೆ ಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗಿತ್ತು.

- Advertisement -

ಕೂಡಲಿ ಆರ್ಯ ಶ್ರೀ ಅಕ್ಷೋಭ್ಯ ತೀರ್ಥರ ಮಠದಲ್ಲಿ ಶ್ರೀ ಲಕ್ಷ್ಮಿ ನಾರಾಯಣ ದೇವರ ಶಿಲಾ ಮೂರ್ತಿಯು ಶ್ರೀ ಅಕ್ಷೋಭ್ಯ ತೀರ್ಥರ ಮೃತ್ತಿಕಾ ವೃಂದಾವನ ದ ಮೇಲ್ಭಾಗದಲ್ಲಿ ಇದ್ದು ಪಕ್ಕದಲ್ಲಿ ಶ್ರೀ ಜಯತೀರ್ಥರ ಮೃತ್ತಿಕಾ ಬೃಂದಾವನ ಇದೆ .

” ಅನುಗ್ರಹ ಸಂದೇಶ “

ಕೂಡಲಿ ಕ್ಷೇತ್ರದ ಪೀಠಾಧಿಪತಿಗಳಾದ ಶ್ರೀ ಶ್ರೀ ಶ್ರೀ 1008 ಶ್ರೀ ರಘುವಿಜಯ ತೀರ್ಥರು – ಶ್ರೀ ಅಕ್ಷೋಭ್ಯ ತೀರ್ಥರ ಆರಾಧನೆ ಸಮಯದಲ್ಲಿ ನಾಡಿಗೆ ಸಂದೇಶ ನೀಡಿದ್ದು ಶ್ರೀ ಅಕ್ಷೋಭ್ಯ ತೀರ್ಥರು ಲೌಕಿಕ ವೈದಿಕ ಉಭಯ ವಿದ್ಯೆಗಳಲ್ಲೂ ಪರಿಣತರಾಗಿ ಆಚಾರ್ಯರ ಸಿದ್ದಾಂತಕ್ಕೂ , ಪರಂಪರೆಗೂ ಬಹಳ ವಿಶಿಷ್ಟವಾದ ಸೇವೆಯನ್ನು ಮಾಡಿದ್ದಾರೆ , ಇಂತಹ ಮಹಾನುಭಾವರ ಆರಾಧನೆಯ ಪರ್ವದಿನದಂದು , ಭಕ್ತಿಯ ನಮನಗಳನ್ನು ಸಮರ್ಪಿಸಿ ಅವರ ಅನುಗ್ರಹ ಪಡೆಯೋಣ ಎಂದು ಅನುಗ್ರಹ ಸಂದೇಶ ನೀಡಿದ್ದಾರೆ.

- Advertisement -

“ವೇದಾಂತ ಗ್ರಂಥ ಪಾಠ “

ಶ್ರೀ ಅಕ್ಷೋಭ್ಯ ತೀರ್ಥರು ತಮ್ಮ ಶಿಷ್ಯರಾದ ಜಯ ತೀರ್ಥರಿಗೆ ಸಕಲ ವೇದಾಂತ ಗ್ರಂಥ ಗಳನ್ನು ಪಾಠ ಹೇಳಿದರು .
ಇದನ್ನೇ ಜಯ ತೀರ್ಥರು ಗುರುಗಳು ತಮಗೆ ಗಿಳಿಗೆ ಪಾಠ ಹೇಳಿದಂತೆ ಹೇಳಿಕೊಟ್ಟಿದ್ದಾರೆಂತ ಸ್ತೋತ್ರ ಮಾಡಿದ್ದಾರೆ .

” ಅಕ್ಷೋಭ್ಯ ತೀರ್ಥರ ಬಗ್ಗೆ “

ಭರತ ಖಂಡವು ಆಧ್ಯಾತ್ಮಿಕ, ಸಾಂಸ್ಕೃತಿಕ ಹಾಗೂ ವೈಜ್ಞಾನಿಕವಾಗಿ ವಿಶ್ವಕ್ಕೆ ಮಾದರಿಯ ಪುಣ್ಯಭೂಮಿ, ಭಾರತೀಯ ಸಂಸ್ಕೃತಿಯ ಹಿರಿಮೆ ಜಗತ್ತಿನೆಲ್ಲೆಡೆ ಪಸರಿಸಿದ್ದು ಎಲ್ಲರ ಪ್ರೀತಿ-ಗೌರವಗಳಿಗೆ ಪಾತ್ರವಾಗಿದೆ.

ನಮ್ಮ ಭವ್ಯ ಸಂಸ್ಕೃತಿ ಹಾಗೂ ಪರಂಪರೆಯ ವಿಧಿವಿಧಾನಗಳು, ವೈಜ್ಞಾನಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಔಚಿತ್ಯಗಳನ್ನೇ ಹೊಂದಿದ್ದು ಅವೆಲ್ಲವೂ ದಿನಗಳೆದಂತೆ ಮನದಟ್ಟಾಗುತ್ತಿವೆ.

ಭವ್ಯ ಸಂಸ್ಕೃತಿಯನ್ನು ಕಟ್ಟಿ ಬೆಳಸಿ, ಲೋಕ ವಿಖ್ಯಾತಗೊಳಿಸುವಲ್ಲಿ ಶ್ರೀ ಅಕ್ಷೋಭ್ಯ ತೀರ್ಥರ ಪಾತ್ರವು ಮಹತ್ವ ಪೂರ್ಣವಾದುದಾಗಿದೆ.

ಜನ್ಮನಾಮ – ಶ್ರೀ ಗೋವಿಂದ ಭಟ್ಟರು ಜನನ – 1282, ಭಾರಧ್ವಾಜ ಗೋತ್ರದಲ್ಲಿ.

ವೇದಾಂತ ಸಾಮ್ರಾಜ್ಯ ಕಾಲ – 1350-1365 – 15 ವರ್ಷಗಳ ಕಾಲ

(ಕಾಲ 1350 ರಿಂದ 1365 )( ವೃಂದಾವನ ಸ್ಥಳ – ಮಳಖೇಡ )

ಮಧ್ವಾಚಾರ್ಯರಿಂದ ನೇರವಾಗಿ ಆಶ್ರಮ ಪಡೆದ ಯತಿವರ್ಯರಲ್ಲಿ ಅಕ್ಷೋಭ್ಯ ತೀರ್ಥರು ಬಹಳ ಪ್ರಸಿದ್ದರಾದವರು.

ಗೋವಿಂದ ಭಟ್ಟರು ಎಂಬುದು ಅವರ ಪೂರ್ವಾಶ್ರಮ ಹೆಸರು, ಉತ್ತರ ಕರ್ನಾಟಕದ ಪ್ರಾಂತ್ಯಕ್ಕೆ ಸೇರಿದವರು.

ಮಧ್ವಾಚಾರ್ಯರು ಭಾರತ ದೇಶದ ಎಲ್ಲ ಮೂಲೆ- ಮೂಲೆಗಳಲ್ಲೂ ಸಂಚರಿಸಿ ದ್ವೈತ ಸಿದ್ಧಾಂತದ ಪ್ರಚಾರ ಮಾಡುತ್ತಿದ್ದರು.

ಆಚಾರ್ಯರ ಗಂಥಗಳಿಂದ ಹಾಗೂ ಅವರ ಶಿಷ್ಯರಿಂದ, ಆಚಾರ್ಯರ ಮಹತ್ಸಾಧನೆಗಳನ್ನು ಅರಿತು ಗೋವಿಂದ ಭಟ್ಟರು – ಆಚಾರ್ಯರ ದರ್ಶನ ಪಡೆಯಲು ಉಡುಪಿಗೆ ತೆರಳುತ್ತಾರೆ.

ಗೋವಿಂದ ಭಟ್ಟರು ಮಧ್ವಾಚಾರ್ಯರ ಶಿಷ್ಯರಾಗಿ ದ್ವೈತ ವೇದಾಂತಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಾರೆ.

ಮಧ್ವಾಚಾರ್ಯರಿಂದ ನೇರವಾಗಿ ಸನ್ಯಾಸ ಸ್ವೀಕಾರ ಪಡೆದ ಕಟ್ಟ ಕಡೆಯ ಯತಿವರ್ಯರು ಅಕ್ಷೋಭ್ಯ ತೀರ್ಥರು.

ಮಧ್ವಾಚಾರ್ಯರು ಇವರಿಗೆ ಸನ್ಯಾಸ ದೀಕ್ಷೆ ಇತ್ತು ಅವರಿಗೆ ಸಾಕ್ಷಾತ್ ಶ್ರೀ ರಾಮಚಂದ್ರ ದೇವರು ಪರಂಧಾಮಕ್ಕೆ ತೆರಳುತ್ತಿದ್ದ ವೇಳೆ ಯಲ್ಲಿ ಶ್ರೀ ರಾಮಚಂದ್ರ ದೇವರು ಸೀತಾ ಸಹಿತ ವೈಕುಂಠ ಶ್ರೀ ರಾಮಚಂದ್ರರ ಮೂರ್ತಿಯನ್ನು ತಮ್ಮ ಮಕ್ಕಳಾದ ಲವ-ಕುಶರಿಗೆ ನೀಡಿದರು , ನಂತರ ಸೀತಾ ಸಹಿತ ವೈಕುಂಠ ಶ್ರೀ ರಾಮಚಂದ್ರರ ಮೂರ್ತಿ ಶ್ರೀ ಮಧ್ವಾಚಾರ್ಯರ ಕೈ ಸೇರಿದವು, ತದನಂತರ ಆಚಾರ್ಯರು ಅದನ್ನು ಶ್ರೀ 1008

ಅಕ್ಷೋಭ್ಯ ತೀರ್ಥರಿಗೆ ಕೊಡುತ್ತಾ ಶ್ರೀ ಲಕ್ಶ್ಮಣ ದೇವರ ಮೂರ್ತಿಯನ್ನು ಸ್ಪರ್ಶಿಸಿ ಕೊಟ್ಟರು.

ಅಕ್ಷೋಭ್ಯ ತೀರ್ಥರು ತಮ್ಮ ಸಮಕಾಲೀನರಾದ ಶ್ರೀ ವಿದ್ಯಾರಣ್ಯರೊಡನೆ “ ತತ್ತ್ವಮಸಿ” ವಿಷಯದ ಬಗ್ಗೆ ಬಹಳ ಸುದೀರ್ಘವಾದ ವಾದ ನಡೆಸುತ್ತಾರೆ.

ಅಕ್ಷೋಭ್ಯ ತೀರ್ಥರ ವಿವರಣೆ ದ್ವೈತ ವೇದಾಂತವನ್ನು ಆಧರಿಸಿದ್ದರೆ, ವಿದ್ಯಾರಣ್ಯರ ವಿವರಣೆ ಅದ್ವೈತ ವೇದಾಂತವನ್ನು ಆಧರಿಸಿರುತ್ತದೆ.

ಈ ಚರ್ಚೆಯ ತೀರ್ಪುಗಾರರಾಗಿ ಈ ಇಬ್ಬರೂ ಯತಿಗಳಿಂದ ಪರಸ್ಪರ ಸಮ್ಮತಿಯಿಂದ ಅಂದಿನ ಪ್ರಖ್ಯಾತ ವಿಶಿಷ್ಟಾದ್ವೈತ ಹಿರಿಯ ವಿದ್ವಾಂಸರಾದ ಶ್ರೀ ವೇದಾಂತ ದೇಶಿಕರು ನಿಯೋಜಿತರಾಗಿರುತ್ತಾರೆ.

ಬಹಳ ದಿನಗಳು ನಡೆದ ಈ ಸಭೆಯಲ್ಲಿ ಬಹಳ ವ್ಯಾಪಕವಾದ, ಸುದೀರ್ಘ ವಾದ-ವಿವಾದ ನಡೆಯುತ್ತದೆ. ಈ ವಾದ-ವಿವಾದಗಳಲ್ಲಿ ಹೊರಹೊಮ್ಮಿದ ಎಲ್ಲಾ ವಿಷಯಗಳನ್ನು ಬರೆದಿಡಲಾಗುತ್ತದೆ.

ಅಂತಿಮವಾಗಿ ಅಕ್ಷೋಭ್ಯ ತೀರ್ಥರ ವಿವರಣೆ ಸಮರ್ಪಕವಾಗಿದೆ ಎಂದು ಶ್ರೀ ವೇದಾಂತ ದೇಶಿಕರು ಘೋಷಿಸುತ್ತಾರೆ.

ಇದು ದ್ವೈತ ವೇದಾಂತದ ವಿಜಯ ಎಂದೇ ಪರಿಗಣಿಸಲಾಗಿದೆ.
ಇದೊಂದು ಐತಿಹಾಸಿಕ ಘಟನೆ ಎಂದು ಪರಿಗಣಿಸಿ ಒಂದು ವಿಜಯ ಸ್ಥಂಭವನ್ನು ನಿರ್ಮಿಸಿ ಒಂದು ಶಾಸನವನ್ನು ರಚಿಸಲಾಗಿದೆ.

ಇದನ್ನು ಮುಳಬಾಗಿಲಿನ ಒಂದು ಗ್ರಾಮದ ಬಳಿ ಕಾಣಬಹುದು.

ಶ್ರೀ ಜಯತೀರ್ಥರನ್ನು ತಮ್ಮ ಉತ್ತರಾಧಿಕಾರಿಯಾಗಿ ನೇಮಿಸುತ್ತಾರೆ.

ಅಕ್ಷೋಭ್ಯ ತೀರ್ಥರ ಮೂಲ ಮಠ ಕೂಡಲಿ – ಈಗ ಕೂಡಲಿ ಮಠ ಎಂದೇ ಪ್ರಖ್ಯಾತವಾಗಿದೆ.

ಅಂಗಾರ ನರಸಿಂಹ: ಒಮ್ಮೆ ಮುಳಬಾಗಿಲಲ್ಲಿ ಇದ್ದಾಗ, ಒಂದು ದೊಡ್ಡ ಬಂಡೆಯ ಮೇಲೆ ತಮ್ಮ ಸ್ವಹಸ್ತದಿಂದ ಅಂಗಾರದಿಂದ ನರಸಿಂಹ ದೇವರ ಚಿತ್ರವನ್ನು ಬರೆದರು. ತಮ್ಮ ತಪ:ಶಕ್ತಿ ಮತ್ತು ಮಂತ್ರಶಕ್ತಿಯಿಂದ ಆ ಬಂಡೆಗೆ ವಿಶೇಷ ಸನ್ನಿಧಾನವನ್ನು ತಂದರು. ಆ ಬಂಡೆಯಲ್ಲಿ ಅಂಗಾರದಿಂದ ಬರೆದ ಆ ವಿಗ್ರಹವೇ ನರಸಿಂಹ ದೇವರ ವಿಗ್ರಹವಾಗಿ ಪರಿವರ್ತನೆಯಾಯಿತು.

ಲೇಖನ : ತೀರ್ಥಹಳ್ಳಿ ಅನಂತ ಕಲ್ಲಾಪುರ

ಛಾಯಚಿತ್ರ ಕೃಪೆ – ನಾಗರಾಜ್ ,ಕೂಡಲಿ ಮಠ

( ಶ್ರೀ 1008 ಅಕ್ಷೋಭ್ಯ ತೀರ್ಥರ ಬಗ್ಗೆ ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಲೇಖನ ಬರೆಯಲಾಗಿದೆ ) “

( ಸಂಸ್ಕೃತಿ ಚಿಂತಕ ಡಾ|| ಗುರುರಾಜ ಪೋಶೆಟ್ಟಿಹಳ್ಳಿ ಅವರ ಅನುಮತಿ ಪಡೆದು ಅವರ – ವಂದೇ ಗುರು ಪರಂಪರಾಮ್ ಪುಸ್ತಕದಿಂದ ಗುರುವಿನ ಬಗ್ಗೆ ನಾಲ್ಕು ಸಾಲುಗಳನ್ನು ಬಳಸಿಕೊಳ್ಳಲಾಗಿದೆ .)

- Advertisement -
- Advertisement -

Latest News

“ಅಪ್ನಾದೇಶ” ಬೆಳೆದು ಬಂದ ಹಿನ್ನೆಲೆ

೨೦೧೧ ರಲ್ಲಿ ಧಾರವಾಡದಲ್ಲಿ “ಅಪ್ನಾದೇಶ” ಎಂಬ ಸಂಘಟನೆ ಜನ್ಮ ತಾಳಿತು.ಇದಕ್ಕೆ ಸ್ಪೂರ್ತಿ ಅಂದಿನ ಐ.ಎ.ಎಸ್. ಅಧಿಕಾರಿ ಭರತಲಾಲ್ ಮೀನಾ. ಶಿಕ್ಷಕರು, ಸಮಾಜ ಚಿಂತಕರು, ನ್ಯಾಯವಾದಿಗಳು, ವಿವಿಧ...
- Advertisement -

More Articles Like This

- Advertisement -
close
error: Content is protected !!
Join WhatsApp Group