*ಹೂವು*
- Advertisement -
ಹಸಿರೆಲೆಯೇ
ಗಣ್ಣಿಗೊಂದು ಮೊಗ್ಗಲ್ಲೇ
ಮೊಗ್ಗೆಲ್ಲೇ ಹಿಗ್ಗೇ…
ಹೂವಾಗಿ ಅರಳಲೇ
ಆನಂದದ ಬುಗ್ಗೆಯೇ.
*ಪ್ರೀತಿ*
ಎದೆಯಾಳದಿ
ಇಣುಕಿ ನೋಡಲು ನಾ
ನಿನ್ನದೇ ರೂಪ
ತುಟಿಯಂಚಿನಾ ನಗು
ನೀ ಮುಡಿಸಿದಾ ದೀಪ
*ಅವ್ವ*
ಸೆರಗಿನಲಿ
ಮಿನುಗಿವೆ ನಕ್ಷತ್ರ
ಸವಕಳಿಯ
ಸೀರೆ ನೆರೆ ಕೂದಲ
ಚಂದ್ರ, ಕಾಮನಬಿಲ್ಲು
*ರೈತ*
- Advertisement -
ತಟ್ಟೆಯಲಿಹ
ಮಲ್ಲಿಗೆಯರಳೆಲ್ಲ
ಬೆವರ ಹನಿ
ಘಮ ಬೀರಿವೆಯಲ್ಲ
ಭತ್ತದಾ ಮೊಗ್ಗರಳಿ.
*ಶ್ರೀಮತಿ ಇಂದಿರಾ ಮೋಟೆಬೆನ್ನೂರ.*
———————————
1.ಒಗ್ಗಟ್ಟು
ಕಷ್ಟ ಸಮಯ
ಬಂದಿತು ಜನರೆಲ್ಲ
ಒಗ್ಗೂಡಿದರು
ಗುದ್ದಿ ಕೆಡವಿದರು
ಒದ್ದು ಓಡಾಡಿದರೂ.
2.ಸುಗಂಧ
- Advertisement -
ಹೃದಯಸುಮ
ಅರಳಿ ಸಂತಸದ
ಸುಗಂಧ ಸೂಸಿ
ಧನ್ಯತೆಯ ಭಾವಮೂಡಿ
ಬದುಕಿದೆ ಸಾರ್ಥಕ.
3.ಸಹಾಯ
ಜಪದಲ್ಲಿಲ್ಲ
ಬರಿ ಪೂಜೆಯಲ್ಲಿಲ್ಲ
ದೇವರಿರುವ
ಸಹಾಯ ಮಾಡುವುದ
ಮನಸುಳ್ಳವರಲ್ಲಿ.
4.ಬೇನೆ
ಟಂಕಾ ರುಬಾಯಿ
ಬರೆದೆ ನಾ ಪ್ರವೀಣೆ
ಹಾಯ್ಕ ತರಿಸ್ತು
ತುಸು ತಲೆ ಬೇನೆಯ
ಹುಡ್ಕಿ ಅಕ್ಷರಮಾಲೆ
ಮೇಘಾ ಪಾಟೀಲ