spot_img
spot_img

ಹೆಣ್ಣು ಮನೆಯ ಸಂಸ್ಕಾರ, ತಾಳ್ಮೆಯ, ಸಹನೆಯ ಪ್ರತೀಕ – ರತ್ನಾ ಆನಂದ ಮಾಮನಿ

Must Read

- Advertisement -

ಸವದತ್ತಿಃ ಹೆಣ್ಣು ಇದ್ದ ಮನೆಯು ತನುವು(ತಂಪಿನ ಸಂಕೇತ).ಹೆಣ್ಣು ಮನೆಯ ಸಂಸ್ಕಾರ.ತಾಳ್ಮೆ ಸಹನೆಯ ಪ್ರತೀಕ,ಅವಳನ್ನು ಭೂತಾಯಿಗೆ ಹೋಲಿಸುವರು.ಮಕ್ಕಳಿಗೂ ಒಳ್ಳೆಯ ಸಂಸ್ಕಾರ ನೀಡುತ್ತ ಸಂಸಾರದ ಜವಾಬ್ದಾರಿಯ ಜೊತೆಗೆ ಬದುಕನ್ನು ರೂಪಿಸುವ ನಿಟ್ಟಿನಲ್ಲಿ ಸ್ತ್ರೀಯ ಪಾತ್ರ ಮಹತ್ವದ್ದು.ಈ ನಿಟ್ಟಿನಲ್ಲಿ ಪುರುಷ ಮತ್ತು ಸ್ತ್ರೀ ಒಬ್ಬರಿಗೊಬ್ಬರೂ ಪರಸ್ಪರ ಹೊಂದಾಣಿಕೆಯಿಂದ ಬೆರೆತು ಅರಿತು ನಡೆದರೆ ಜೀವನ ಸಾರ್ಥಕ ಎಂದು ರತ್ನಾ ಮಾಮನಿ ನುಡಿದರು.

ಅವರು ಸವದತ್ತಿಯಲ್ಲಿ ಜರುಗಿದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಶಾಖೆ ಬೆಳಗಾವಿ ಮತ್ತು ತಾಲೂಕಾ ಶಾಖೆ ಸವದತ್ತಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಘಟಕ ಬೆಳಗಾವಿ ಮತ್ತು ತಾಲೂಕಾ ಘಟಕ ಸವದತ್ತಿ ಇವರ ಸಂಯುಕ್ತಾಶ್ರಯದಲ್ಲಿ ಮಾಮನಿ ಕಲ್ಯಾಣ ಮಂಟಪದಲ್ಲಿ ಜರುಗಿದ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

- Advertisement -

ಹಿಂದಿನ ಕಾಲದಲ್ಲಿ ಒಂದು ಮದುವೆ ಆಗಬೇಕಾದರೆ ವಾರಗಟ್ಟಲೇ ಕಾರ್ಯಕ್ರಮಗಳು ಜರುಗುತ್ತಿದ್ದವು.ಅಲ್ಲಿ ಬದುಕಿನ ಸಂಸ್ಕಾರದ ಪಾಠಗಳಿರುತ್ತಿದ್ದವು.ಇಂದು ಮದುವೆ ಒಂದು ದಿನಕ್ಕೆ ಸೀಮಿತವಾಗಿ ಒಂದೇ ದಿನದಲ್ಲಿ ಅನೇಕ ಕಾರ್ಯಗಳು ಜರುಗುತ್ತಿವೆ. ನಮ್ಮ ಭಾರತೀಯ ಸಂಸ್ಕಾರದ ಪರಂಪರೆ ಎಂದಿಗೂ ಮರೆಯಲಾಗದು.ಅದನ್ನು ಜೀವನದ ಪ್ರತಿ ಹಂತದಲ್ಲೂ ಅಳವಡಿಸಿಕೊಂಡು ಬದುಕನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ವಿಧಾನಸಭಾ ಉಪಾಧ್ಯಕ್ಷ ಹಾಗೂ ಶಾಸಕ ಆನಂದ ಮಾಮನಿಯವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉದ್ಘಾಟನಾ ಪರ ಮಾತುಗಳನ್ನಾಡಿದ ಆನಂದ ಮಾಮನಿಯವರು, ಈ ವರ್ಷದ ನಮ್ಮ ಸರ್ಕಾರದ ಬಜೆಟ್ ಮಂಡನೆಯಾಗಿದ್ದು ಮಹಿಳಾ ದಿನಾಚರಣೆಯಂದು.ಜೊತೆಗೆ ಮಹಿಳೆಯರಿಗೆ ವಿಶೇಷ ಸವಲತ್ತುಗಳನ್ನು ಹೆರಿಗೆ ರಜೆಯಿಂದ ಹಿಡಿದು ಭಾಗ್ಯಲಕ್ಷ್ಮೀ ಬಾಂಡ್ ವರೆಗಿನ ಅನೇಕ ಸೌಲಭ್ಯಗಳನ್ನು ಮುಖ್ಯಮಂತ್ರಿಗಳು ನೀಡುವ ಮೂಲಕ ಸರ್ವರಿಗೂ ಸಮಪಾಲು ಎಂಬ ತತ್ವದಡಿ ವಿಶೇಷ ಸವಲತ್ತುಗಳನ್ನು ಕಲ್ಪಿಸಿದ್ದು, ಬದುಕಿನ ಎಲ್ಲ ಘಟ್ಟಗಳಲ್ಲಿಯೂ ಮಹಿಳೆ ಪುರುಷರಿಗೆ ಸಮಾನವಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಬರುವ ಮೂಲಕ ಅನೇಕ ಉನ್ನತ ಹುದ್ದೆಗಳಲ್ಲಿ ಇಂದು ನಾವು ಪ್ರತಿಭಾನ್ವಿತ ಮಹಿಳೆಯರು ಮುಂಚೂಣಿಯಲ್ಲಿ ಇರುವುದನ್ನು ಕಾಣುತ್ತೇವೆ.

- Advertisement -

ನಮ್ಮ ತಾಲೂಕಿನಲ್ಲಿ ಪಕ್ಷಾತೀತವಾಗಿ ಜನಪರ ಕಾರ್ಯಗಳನ್ನು ನಾನು ಮಾಡುತ್ತಿದ್ದು ತಮ್ಮೆಲ್ಲರ ಸಹಕಾರ ನನಗೆ ಮೂರು ಬಾರಿ ವಿಧಾನಸಭೆಗೆ ಆಯ್ಕೆಯಾಗುವಂತೆ ಮಾಡಿದ್ದು ತಮ್ಮೆಲ್ಲರಿಗೂ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನುಡಿದರು.

ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಷಡಕ್ಷರಿಯವರು ಮಾತನಾಡುತ್ತ ಸರಕಾರ ನಮ್ಮ ಬಹುತೇಕ ಬೇಡಿಕೆಗಳನ್ನು ಈಡೇರಿಸುತ್ತಿದ್ದು.ಎನ್.ಪಿ.ಎಸ್ ಯೋಜನೆಯನ್ನು ಕೂಡ ರದ್ದುಪಡಿಸಿ ಓ.ಪಿ.ಎಸ್ ಜಾರಿಗೆ ತರುವಲ್ಲಿ ಮುಂದಿನ ದಿನಗಳಲ್ಲಿ ಆಗಬೇಕಾಗಿದ್ದು ಈ ದಿಸೆಯಲ್ಲಿ ನಮ್ಮ ಬೇಡಿಕೆ ಮುಂದುವರೆದಿದ್ದು ಕೋರೋನಾ ಸಂದರ್ಭದಲ್ಲಿ ಎಲ್ಲ ನೌಕರರ ವೇತನ ಹಾಗೂ ಸೌಲಭ್ಯ ಕುರಿತಂತೆ ಮುಖ್ಯಮಂತ್ರಿಗಳು ಸಕಾರಾತ್ಮಕ ಸ್ಪಂದಿಸುವ ಮೂಲಕ ಅನುಕೂಲ ಕಲ್ಪಿಸಿದ್ದು ಮೌಂಟ್ ಎವರೆಸ್ಟ ಏರಿದ ವಿಕಲಚೇತನ ಮಹಿಳೆಯ ಉದಾಹರಣೆ ನೀಡುತ್ತ ಮಹಿಳೆ ಮನಸ್ಸು ಮಾಡಿದರೆ ಏನೆಲ್ಲ ಸಾಧಿಸಬಲ್ಲಳು ಎಂಬುದನ್ನು ತಿಳಿಸಿದರು.

ಕರ್ನಾಟಕ ಲೋಕಾಯುಕ್ತ ಇಲಾಖೆಯ ಬೆಳಗಾವಿ ವಿಭಾಗದ ಯಶೋಧಾ ವಂಟಗೂಡಿ ಮಾತನಾಡುತ್ತ, ಮಹಿಳಾ ದಿನಾಚರಣೆ ಮಹತ್ವ ತಿಳಿಸುತ್ತ ಸವದತ್ತಿಯಲ್ಲಿ ಮಹತ್ವಪೂರ್ಣ ಆಚರಣೆಯಲ್ಲಿ ಪುರುಷ ಮಹಿಳೆಯರು ಸಮಾನಾಂತರವಾಗಿ ಕಾರ್ಯಕ್ರಮ ಹಮ್ಮಿಕೊಂಡಿದ್ದು ಶ್ಲಾಘನೀಯ ಎಂದು ನುಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಕರ ಸೇವಾ ಬ್ಲಾಗ್‍ನ್ನು ಉದ್ಘಾಟಿಸಲಾಯಿತು. ಕರ್ನಾಟಕ ರಾಜ್ಯ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿಗಳಾದ ಪ್ರಮೀಳಾ ಕಾಮನಹಳ್ಳಿ ಮಾತನಾಡುತ್ತ, ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತವಾದ ಸ್ಥಾನವಿದೆ ಮತ್ತು ಗೌರವವಿದೆ.ನಮ್ಮ ದೇಶದಲ್ಲಿ ಪ್ರತಿಭಾ ಪಲಾಯನವನ್ನು ನಾವು ತಡೆಯಬೇಕಾಗಿದೆ.ನಮ್ಮಲ್ಲಿನ ಪ್ರತಿಭೆಗಳು ನಮ್ಮ ದೇಶಕ್ಕೇ ಉಪಯೋಗವಾಗಲಿ.ನಮ್ಮ ಮಕ್ಕಳಿಗೆ ಅಂಕ ಗಳಿಸುವತ್ತ ಒತ್ತಾಯ ಬೇಡ.ಅವರಿಗೆ ಪ್ರೀತಿ ವಾತ್ಸಲ್ಯ ನೀಡಿಎಂದು ಹೇಳಿದರು.

ಸುನೀತಾ ನಿಂಬರಗಿಯವರು ಮಾತನಾಡಿ, ಮಾಮನಿಯವರು ಸರ್ಕಾರಿ ನೌಕರರಿಗೆ ನೀಡುವ ಸಹಕಾರ ಮರೆಯಲಾಗದ್ದು.ನಾವು ಗ್ರಾಮೀಣ ಪ್ರದೇಶದಿಂದ ಸರ್ಕಾರೀ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಮುಂದೆ ಬಂದವರು.ಇಂದು ಅರಣ್ಯ ದಿನ.ನಾವೆಲ್ಲ ಗಿಡ ಹಚ್ಚಿ ಬೆಳೆಸುವ ಮೂಲಕ ಕಾಡನ್ನು ಉಳಿಸೋಣಎಂದು ಕರೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಗೌಡಪ್ಪ ಪಾಟೀಲ, ಕರ್ನಾಟಕ ಲೋಕಾಯುಕ್ತ ಬೆಳಗಾವಿ ಪೋಲಿಸ್ ಅಧೀಕ್ಷಕರಾದ ಯಶೋಧಾ ವಂಟಗೂಡಿ, ಸ್ಥಳೀಯ ರೇಣುಕಾ ಯಲ್ಲಮ್ಮಾ ಶಿಕ್ಷಣ ಸಂಸ್ಥೆ ಕಾರ್ಯದರ್ಶಿಗಳಾದ ರತ್ನಾ ಆನಂದ ಮಾಮನಿ, ಉಪನ್ಯಾಸಕರಾದ ಆಶಾ ಯಮಕನಮರಡಿ,ಆರ್ ಎಪ್ ಓ ಸವದತ್ತಿಯ ಸುನಿತಾ ನಿಂಬರಗಿ, ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಾಂಚನಾ ಅಮಠೆ, ಕ.ರಾ.ಪ್ರಾ.ಶಾ.ಶಿ ಸಂಘ ರಾಜ್ಯ ಸಂಘಟನಾ ಕಾರ್ಯದರ್ಶಿ ಗಳಾದ ಪ್ರಮಿಳಾ ಟಿ ಕಾಮನಹಳ್ಳಿ,ಬೆಳಗಾವಿ ಕ.ರಾ.ಪ್ರಾ.ಶಾ.ಶಿ ಸಂಘದ ಜಿಲ್ಲಾ ಅಧ್ಯಕ್ಷರಾದ ಜಯಕುಮಾರ ಹೆಬಳಿ, ಸವದತ್ತಿ ತಾಲೂಕ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ ಬೆಳವಡಿ ಮೊದಲಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ರಾಜ್ಯ ಮತ್ತು ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಉತ್ತಮ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಾದ ಸುಮನ ದೇಶಪಾಂಡೆ ಮತ್ತು ಗೀತಾ ಕಡಕೋಳ.ವಾಣಿಶ್ರೀ ಮಹೇಂದ್ರಕರ(ಸವದತ್ತಿ ತಾಲೂಕ) ಸುನಂದ ಹಲಗತ್ತಿ,ಶಕುಂತಲಾ ಬೆಳವಟಗಿ (ರಾಮದುರ್ಗ), ಹಮೀದಾಬಾನು ದೊಡಮನಿ,ಸಾವಿತ್ರಿ ಗದಗ (ಬೈಲಹೊಂಗಲ), ಮಹಾದೇವಿ ಪಾಟೀಲ, ಜ್ಯೋತಿ ಹೇರೆಕರ((ಖಾನಾಪುರ),ಶಾಮತವ್ವ ಶೆಲ್ಲಿಕೇರಿ,ಸಾವಿತ್ರಿ ಸೌದಿ (ಕಿತ್ತೂರ),ಸುಲಭಾ ನಾವಗೇಕರ,ಸುವರ್ಣಾ ಕೋಲಕಾರ(ಬೆಳಗಾವಿ ಗ್ರಾಮೀಣ),ಜಯಶ್ರೀ ಮರಕುಂಬಿ,ಮರಿಯವ್ವ ಜಾಲಿಹಾಳ,((ಬೆಳಗಾವಿ ನಗರ) ಇವರಿಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಸೇವಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ಪ್ರಾರಂಭದಲ್ಲಿ ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕ ಘಟಕದ ಅಧ್ಯಕ್ಷ ಆನಂದಕುಮಾರ ಮುಗಬಸವ ಸ್ವಾಗತಿಸಿದರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ ಗೌಡಪ್ಪ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.ಅಂಜನಾ ಮುರಗೋಡ ನಿರೂಪಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group