ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇನ್ನೂ ಜೀವಂತ

0
126

ಮೂಡಲಗಿ : ಗ್ರಾಮೀಣ ಭಾಗದಲ್ಲಿ ಜಾನಪದ ಕಲೆ ಇನ್ನು ಜೀವಂತವಾಗಿದೆ ಟಿವಿ ಹಾವಳಿಯಲ್ಲಿ ನಶಿಸಿ ಹೋಗುತ್ತಿರುವ ಜಾನಪದ ಕಲೆ ಸಾoಸ್ಕೃತಿಕ ಕಾರ್ಯಕ್ರಮಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಸರಕಾರ ಕ್ರಮ ಕೈಗೊಳ್ಳಬೇಕಾಗಿರುವುದು ಬಹಳ ಮುಖ್ಯವಾಗಿದೆ ಎಂದು ಕೌವಲಗುಡ್ಡ ಹಣಮಾಪುರದ ಪೂಜ್ಯಶ್ರೀ ಸಿದ್ದಯೋಗಿ ಅಮರೇಶ್ವರ ಮಹಾರಾಜರು ಹೇಳಿದರು.

ಶ್ರೀ ಅಮೋಘಸಿದ್ದೇಶ್ವರ ಡೊಳ್ಳಿನ ಗಾಯನ ಸಂಘ ಯಲ್ಪಾರಟ್ಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ ಬೆಂಗಳೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಹಣಮಾಪುರ ಗ್ರಾಮದಲ್ಲಿ ನಡೆದ ಜಾನಪದ ಕಲಾಮೇಳವನ್ನು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಪೂಜ್ಯರು ಕಲಾವಿದರು ಕಲೆಯನ್ನು ಪ್ರೀತಿಯಿಂದ ಆರಾಧಿಸಬೇಕು ಜಾನಪದ ನೃತ್ಯ, ದೀಪ ನೃತ್ಯ, ಭಜನಾ ಪದಗಳು, ಡೊಳ್ಳಿನ ಪದಗಳು, ಜನಪದ ಗೀತೆಗಳು, ಹಂತಿ ಪದಗಳು, ಸುಗ್ಗಿ ಕುಣಿತ, ಶೋಭಾನೆ ಪದ ಸಾoಸ್ಕೃತಿಕ ಕಾರ್ಯಕ್ರಮಗಳು ವೇದಿಕೆಯಲ್ಲಿ ನೆರವೇರಿದವು. ಇಂತಹ ಹಲವಾರು ಕಲೆ ಪರಂಪರೆಯನ್ನು ನಮ್ಮ ಪೂರ್ವಜ್ಜರು ಕಾಲದಿಂದಲು ಜೀವವಂತವಾಗಿವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಪೂಜ್ಯಶ್ರೀ ಬನಸಿದ್ಧ ಮಹಾರಾಜರು, ಜ್ಯೋತಿ ಲಕ್ಕಪ್ಪ ಮಹಾರಾಜರು, ಹಿರಿಯರಾದ ಮಾದೇವ ವಡಗಾವಿ, ಜಿಲ್ಲಾ ಕಲಾವಿದರ ಪರಿಷತ್ ಅಧ್ಯಕ್ಷರಾದ ರಾಮಚಂದ್ರ ಕಾಂಬಳೆ, ಸ್ವಾಮಿ ವಿವೇಕಾನಂದ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಸಿದ್ದಣ್ಣ ದುರದುಂಡಿ, ಪ್ರಕಾಶ ಚಂದನ್ನವರ, ಜಿಲ್ಲಾ ಯುವ ಪ್ರಶಸ್ತಿ ವಿಜೇತ ಅಣ್ಣಪ್ಪ ಪಾಟೀಲ, ವಸಂತ ಲಠ್ಠೆ, ಮಾದೇವ ಒಡೆಯರ, ಸುರೇಶ ಪೂಜೇರಿ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಪ್ರಧಾನ ಗುರುಗಳಾದ ಶಿವಸಿದ್ಧ ಲಾಳಿ ನಿರೂಪಿಸಿದರು. ಶಿಕ್ಷಕ ಅಶ್ವಥ ಪೂಜಾರಿ ಸ್ವಾಗತಿಸಿದರು. ಸಾಬು ಗಸ್ತಿ ವಂದಿಸಿದರು.