spot_img
spot_img

ಝಾನ್ಸಿ ರಾಣಿ ಲಕ್ಷ್ಮೀಬಾಯಿಯ ಸವಿನೆನಪು

Must Read

- Advertisement -

ಕಾರ್ಯೇಷು ದಾಸಿ :ಕರಣೇಶು ಮಂತ್ರಿ ಭೋಜ್ಯೇಶು ಮಾತಾ, ರೂಪೇಶು ಲಕ್ಷ್ಮಿ, ಶಯನೇಶು ರಂಭಾ: ಕ್ಷಮಯಾ ಧರಿತ್ರಿ, ಸತ್ಕರ್ಮ ಯುಕ್ತ ಕುಲ ಧರ್ಮಪತ್ನಿಯಾಗಿ ಭರತ ಕುಲ ಸ್ತ್ರೀ ನಿನಗಿಂದು ನಮನ.

ಭಾರತದ ಸ್ವತಂತ್ರ ಹೋರಾಟದಲ್ಲಿ ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಶೂರತನ ಮೆರೆದ ಮಹಿಳೆಯರಲ್ಲಿ ಒಬ್ಬಳಾದ ಝಾನ್ಸಿರಾಣಿ ಮಹಿಳಾ ಕುಲದ ಧೀರತ್ವದ ಕಳಶವಾಗಿ ಅಚ್ಚಳಿಯದೆ ಭಾರತೀಯರ ಮನದಲ್ಲಿ ನೆಲೆಸಿದ್ದಾಳೆ.

ಕಾಶಿಯ ವಾರಣಾಸಿಯ ಬ್ರಾಹ್ಮಣ ಕುಟುಂಬವೊಂದರಲ್ಲಿ ೧೯ ನವೆಂಬರ್ ೧೮೨೮ ಜನಿಸಿದ ಲಕ್ಷ್ಮೀಬಾಯಿ ೪ ವರ್ಷದವಳಿದ್ದಾಗಲೇ ತಾಯಿಯನ್ನು ಕಳೆದುಕೊಂಡು ಅನಾಥೆಯಾಗಿ, ಸ್ವಪ್ರಯತ್ನದಿಂದ ಮನೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಮುಗಿಸುತ್ತಾಳೆ. ಇವಳ ಮೊದಲು ಹೆಸರು ಮಣಿಕರ್ಣಿಕಾ. ತನ್ನ ೧೩ನೇ ವಯಸ್ಸಿನಲ್ಲಿ ಬಾಲಗಂಗಾಧರ ರಾವ್ ರಾಜನ ಆಸ್ಥಾನದಲ್ಲಿದ್ದಳು. ಇವಳ ಶೂರತನ ,ಧೀರತನ, ದಿಟ್ಟತನ ನೋಡಿದ ಬಾಲಗಂಗಾಧರ ಇವಳನ್ನು ವರಿಸಿ ಮದುವೆಯಾದ. ಹದಿನಾಲ್ಕನೆಯ ವರ್ಷದಲ್ಲಿ ಮದುವೆಯಾದ ಮಣಿಕರ್ಣಿಕ ನಂತರ ಲಕ್ಷ್ಮೀಬಾಯಿ ಎಂಬ ಹೆಸರಿನಿಂದ ಕಂಗೊಳಿಸಿದಳು.

- Advertisement -

ಕುದುರೆ ಸವಾರಿ ,ಕತ್ತಿವರಸೆ, ಬಿಲ್ವಿದ್ಯೆ ಎಲ್ಲವನ್ನು ಸ್ವಪ್ರಯತ್ನದಿಂದ ಕಲಿತು ಹೆಣ್ಣು ಏನೆಲ್ಲ ಮಾಡಬಲ್ಲಳು ಎಂದು ಜಗತ್ತಿಗೆ ಸಾರಿದ ವೀರಾಗ್ರಣಿ.

ವೀರ ನಾರಿಯಾದ ಝಾನ್ಸಿರಾಣಿ ಆಸ್ಥಾನದಲ್ಲಿದ್ದ ಸ್ತ್ರೀ ಮಿತ್ರರನ್ನು ಸೇರಿಸಿ ಚಿಕ್ಕ ಸೈನ್ಯ ಕಟ್ಟಿ ಎಲ್ಲರಿಗೂ ತರಬೇತಿ ಗೊಳಿಸಿ ಮಹಿಳೆಯರು ಅಬಲೆಯರಲ್ಲ ಸಬಲೆಯರು ಎಂದು ನಿರೂಪಿಸಿದಳು. ಪತಿಯೊಂದಿಗೆ ಎಲ್ಲ ರಾಜ್ಯ ಕಾರ್ಯಭಾರಗಳನ್ನು ನಿಭಾಯಿಸುವ ಶಕ್ತಿಯನ್ನು ಗಳಿಸಿಕೊಂಡಳು.

ಜೀವನದಲ್ಲಿ ಅತ್ಯಂತ ಸಂತಸದ ಗಳಿಗೆ, ಗಂಡು ಮಗುವಿಗೆ ಜನನ. ಆದರೆ ಆ ಸಂತಸ ಬಹಳ ಕಾಲ ಉಳಿಯದೆ ಮಗು ನಾಲ್ಕೇ ತಿಂಗಳಲ್ಲಿ ದೇವರಲ್ಲಿ ಸೇರಿಕೊಂಡಿತು.ಲಕ್ಷ್ಮಿಬಾಯಿಯ ಸಂಕಟ ಹೇಳತೀರದು. ಅಷ್ಟರಲ್ಲಿ ಪತಿ ಕೂಡ ನೋವಿನ ಮೇಲೆ ಬರೆ ಎಳೆದಂತೆ ಹೃದಯಾಘಾತದಿಂದ ತೀರಿಹೋದರು.

- Advertisement -

ಲಕ್ಷ್ಮೀಬಾಯಿ ಆಕಾಶವೇ ತಲೆಮೇಲೆ ಬಿದ್ದಂತೆ ಸಂದರ್ಭ ಎದುರಿಸುವ ಶಕ್ತಿಯನ್ನು ದೇವರು ಹೇಗೆ ಕೊಟ್ಟನೋ ಗೊತ್ತಿಲ್ಲ ,ಎಲ್ಲವನ್ನೂ ಎದುರಿಸಿ ಝಾನ್ಸಿಯ ರಾಣಿಯಾಗಿ ಅಂದಿನಿಂದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಆಗಿ ಝಾನ್ಸಿಯ ಎಲ್ಲಾ ರಾಜ್ಯಭಾರವನ್ನು ಗಟ್ಟಿತನದಿಂದ ನಿಭಾಯಿಸಿದ ಧೀರ ಮಹಿಳೆಯಾಗಿ ಕಂಗೊಳಿಸಿದಳು.

ರಾಜ್ಯಕ್ಕೆ ಉತ್ತರಾಧಿಕಾರಿ ಬೇಕೆಂಬ ಕಾರಣದಿಂದ ಒಂದು ಗಂಡು ಮಗುವನ್ನು ದತ್ತು ತೆಗೆದುಕೊಂಡು ಸಾಕುತ್ತಾಳೆ. ಈ ವಿಷಯ ತಿಳಿದ ಈಸ್ಟ್ ಇಂಡಿಯಾ ಕಂಪನಿಯ ಲಾರ್ಡ್ ಡಾಲ್ ಹೌಸಿ ದಾಮೋದರ್ ರವರಿಗೆ ಪಟ್ಟಾಭಿಷೇಕ ಮಾಡಲು ಬಿಡಲಿಲ್ಲ .
ಮಗನ , ಗಂಡನ ಸಾವಿನಿಂದ ಕಂಗಾಲಾದ ಝಾನ್ಸಿರಾಣಿ ಬೆಚ್ಚದೆ ಬಳಲದೇ ದುಃಖವನ್ನು ಒಡಲಲ್ಲಿ ಬಚ್ಚಿಟ್ಟುಕೊಂಡು ರಾಜ್ಯಭಾರ ಮಾಡುವ ಸಮಯ ಝಾನ್ಸಿಯನ್ನು ಕಂಪನಿಯ ಸರ್ಕಾರಕ್ಕೆ ಬಿಟ್ಟುಕೊಡುವಂತೆ ಬ್ರಿಟಿಷರು ಆಜ್ಞೆ ಮಾಡಿದರು.

ಆದರೆ ಝಾನ್ಸಿರಾಣಿ ಬ್ರಿಟಿಷರ ಯಾವುದೇ ಕಟ್ಟುಪಾಡುಗಳನ್ನು ಪಾಲಿಸದೆ ಅವರ ಬೆದರಿಕೆಗೆ ಹೆದರದೆ ಎದೆ ತಟ್ಟಿ ಯುದ್ಧಕ್ಕೆ ನಿಂತಳು. ಯಾವ ವೀರ ರಾಜನಿಗೂ ಕಡಿಮೆಯಿಲ್ಲದಂತೆ ಯುದ್ದ ಕೌಶಲ್ಯ ಮೆರೆದಳು. ದತ್ತುಪುತ್ರನನ್ನು ಬೆನ್ನಿಗೆ ಕಟ್ಟಿಕೊಂಡು ವೀರತನದಿಂದ ಹೋರಾಡಿದಳಾದರೂ ಬ್ರಿಟೀಷರ ಮೋಸಕ್ಕೆ ಕೊನೆಗೂ ಝಾನ್ಸಿರಾಣಿ ಬಲಿಯಾದಳು.

ಝಾನ್ಸಿ ರಾಣಿ ಸಮಾಜದ ಹೀನ ಕಟ್ಟಳೆಗಳನ್ನು ಎಂದಿಗೂ ಒಪ್ಪಲಿಲ್ಲ ಸುಮಂಗಲೆ ಯಾಗಿಯೇ ಉಳಿದಳು. ತನ್ನ ರಾಜ್ಯದಲ್ಲಿ ವಿಧವೆಯರಿಗೆ ಸ್ವಾತಂತ್ರ್ಯ ನೀಡಿ ಅವರು ಹುಟ್ಟಿದಾಗಿನಿಂದ ಇರುವ ರೀತಿಯಲ್ಲಿಯೇ ಇರಬೇಕೆಂದು ಆಜ್ಞೆ ಮಾಡಿದಳು. ನ್ಯಾಯಮಾರ್ಗದಲ್ಲಿ ಅವರಿಗೆ ಅವರಂದುಕೊಂಡಂತೆ ಬದುಕುವ ಹಕ್ಕು ಎಲ್ಲರಿಗೂ ಇದೆ ಎಂದು ತೋರಿಸಿಕೊಟ್ಟ ಸ್ತ್ರೀ ಕಳಶ.

ಹೆಣ್ಣೆಂದರೆ ಅಬಲೆಯಲ್ಲ ಎಂದು ತೋರಿಸಿಕೊಟ್ಟ ಮೇರುಪರ್ವತ ಝಾನ್ಸಿರಾಣಿ. ಧೀರ ಮಹಿಳೆಯಾದ ಝಾನ್ಸಿರಾಣಿ ಮಹಿಳೆಯರ ಕುಲ ತಿಲಕ. ಕೊನೆಗೆ ಝಾನ್ಸಿರಾಣಿ ಲಕ್ಷ್ಮೀಬಾಯಿ ಜೂನ್ ೧೮೫೮ರ ಜೂನ್ ೧೮ರಂದು ಸ್ವರ್ಗಸ್ಥಳಾದಳು.

ಅವಳ ನೆನಪಿಗಾಗಿ ಭಾರತೀಯ ಸೇನೆ ಮಹಿಳಾ ಪಡೆಗೆ ಝಾನ್ಸಿರಾಣಿಯ ಹೆಸರನ್ನಿಟ್ಟು ಗೌರವ ಸಲ್ಲಿಸಿದೆ. ಅವಳ ಕುದುರೆ ಸವಾರಿ ಮಾಡುತ್ತಿರುವ ಕಂಚಿನ ಮೂರ್ತಿಯನ್ನು ಮಾಡಿ ಇಂದಿಗೂ ಕೂಡ ಚಿರಸ್ಮರಣೀಯವಾಗಿ ಎಲ್ಲರ ಭಾರತೀಯರ ಹೃದಯದಲ್ಲಿ ಅಚ್ಚಳಿಯದ ವೀರಾಗ್ರಣಿ ಯಾಗಿ ನೆಲೆನಿಂತಿದ್ದಾರೆ. ಇಂತಹ ಸಹನಾಮೂರ್ತಿ, ಸ್ತ್ರೀ ಕುಲ ತಿಲಕ ,ಧೈರ್ಯವಂತೆ ,ಧೀಮಂತ ನಾಯಕಿ, ರಾಣಿಯಾಗಿ ಸ್ತ್ರೀಕುಲದ ಪ್ರತಿಷ್ಠೆ ಮೆರೆದಿದ್ದಾಳೆ. ಇಂತಹ ನೂರಾರು ಶೂರ ಮಹಿಳೆಯರು ಭಾರತಾಂಬೆಯ ಮಡಿಲ ಮಕ್ಕಳಾಗಲಿ ಏನೇ ಬಂದರೂ ಎದುರಿಸುವ ಶಕ್ತಿಯನ್ನು ಹೊಂದಿದ ಗಂಡೆದೆಯ ಹೆಣ್ಣುಮಕ್ಕಳು ನಮ್ಮವರಾಗಲಿ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ,ಕಿತ್ತೂರು ಚೆನ್ನಮ್ಮ, ಬೆಳವಡಿ ಮಲ್ಲಮ್ಮ ಇಂತಹ ಹೆಣ್ಣುಮಕ್ಕಳು ಭಾರತದಲ್ಲಿ ಹುಟ್ಟುತಲಿರಲಿ, ದಿಟ್ಟತನದಿಂದ ಬಾಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.

*ಜೈ ಭಾರತಾಂಬೆ*

ಅನ್ನಪೂರ್ಣ ಹಿರೇಮಠ( ಶಿಕ್ಷಕಿ)

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group