spot_img
spot_img

ಪರೀಕ್ಷಾ ಸಮಯ

Must Read

- Advertisement -

ಇದು ಮಾನವನಿಗೆ ಪರೀಕ್ಷಾ ಸಮಯ.ದೇಶದ ಭವಿಷ್ಯ ತಿಳಿಯದೆ ಮುನ್ನಡೆದ ಪ್ರಜಾಪ್ರಭುತ್ವದ ಪ್ರಜೆಗಳಿಗೆ ಒಂದು ರೀತಿಯ ಪರೀಕ್ಷೆಯಾದರೆ ಮಕ್ಕಳಿಗೆ ಶಾಲಾ ಕಾಲೇಜುಗಳಲ್ಲಿ ನಡೆಸುವ ಪರೀಕ್ಷೆ ಮತ್ತೊಂದು ರೀತಿ. ಇದರಲ್ಲಿ ಹೆಚ್ಚಿನ ಪೋಷಕರು ಹೆದರುವುದು ಮಕ್ಕಳ  ಪರೀಕ್ಷೆ ಕಾರಣ ಅದರ ಫಲಿತಾಂಶದ ಪರಿಣಾಮ ತನ್ನ ಮನೆಯೊಳಗೇ ಆವರಿಸಿ ಶಾಂತಿ ಅಶಾಂತಿಗೆ ಕಾರಣವಾಗಬಹುದು.

ಪ್ರತಿಯೊಬ್ಬರೂ ತಮ್ಮ ಮಕ್ಕಳ ಭವಿಷ್ಯ ಕ್ಕಾಗಿ ಸಮಾಜವನ್ನೇ ವಿರೋಧಿಸಿ ನಿಲ್ಲಬಹುದು. ಆದರೆ, ಇದರಿಂದ ಸಮಾಜಕ್ಕೇನೂ‌ ತೊಂದರೆಯಿಲ್ಲ. ಮುಂದೆ ಸಂಸಾರಕ್ಕೆ ಕಷ್ಟ. ಒಳ್ಳೆಯ ಮಾರ್ಗದಲ್ಲಿ ನಡೆದ ಮಕ್ಕಳ ಭವಿಷ್ಯ ಒಳ್ಳೆಯದಿರುತ್ತದೆ. ಈ ಪರೀಕ್ಷೆಗಳು ಹೊರಪ್ರಪಂಚಕ್ಕೆ ದೊಡ್ಡದಾದರೂ ಮುಂಬರುವ ಜೀವನದ ಪರೀಕ್ಷೆಗಳ ಮುಂದೆ ಇದು ಸಣ್ಣದೆ.ಆದ್ದರಿಂದ ಪೋಷಕರು ಮಕ್ಕಳಿಗೆ ಜೀವನ ಪರೀಕ್ಷೆಗೆ ಸರಿಯಾದ ತಯಾರಿ ನಡೆಸಿ ಕಲಿಸಿದರೆ ನಮ್ಮ ದೇಶದ ಮುಂದಿರೋ ದೊಡ್ಡ ಪರೀಕ್ಷೆಯಲ್ಲಿ ಪ್ರಜೆಗಳು ಚೆನ್ನಾಗಿ ಉತ್ತರ ನೀಡಿ ಪಾಸಾಗಬಹುದು.

ಸದ್ಯದ ಪರಿಸ್ಥಿತಿಯಲ್ಲಿ ಮಕ್ಕಳ ಭವಿಷ್ಯ ತೂಗುಕತ್ತಿ ಮೇಲೆ ನಿಂತ ಹಾಗಾಗಿದೆ. ಶಿಕ್ಷಣ ನೀಡುವ ವಿದ್ಯಾಸಂಸ್ಥೆಗಳು ಪೋಷಕರನ್ನು ಸುಲಿಗೆ ಮಾಡೋ ಮಟ್ಟಿಗೆ ಅಧಿಕಾರ ಚಲಾಯಿಸುತ್ತಿರುವುದು ಖಾಸಗಿ ಶಿಕ್ಷಣದ ಪೋಷಕರ ಕಥೆಯಾಗುತ್ತಿದೆ. ಈಗಲಾದರೂ ಮಕ್ಕಳ ಮುಂದಿನ ಭವಿಷ್ಯ ಅವರ ಆಂತರಿಕ ಜ್ಞಾನದಲ್ಲಿದೆ ಎಂದು ತಿಳಿದು ಮನೆಯೊಳಗೆ ಪೋಷಕರು ಅವರಿಗೆ ಜೀವನದ ಪಾಠ ಕಲಿಸಿಕೊಡಲು ಸಮಯವಿದೆ.

- Advertisement -

ಹೊರಗಿನಿಂದ ಇಷ್ಟು ವರ್ಷಗಳಿಂದ ಕಲಿಸಿದ ಪಾಠಗಳಿಂದ ಆರೋಗ್ಯ ರಕ್ಷಣೆ ಆಗಿದೆಯೆ? ಆರೋಗ್ಯವೆಂದರೆ ಆರು l

ಯೋಗ್ಯವಾದವುಗಳೆಂದರ್ಥ ಮಾನವನಲ್ಲಿ ಇರುವ‌ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವುಗಳನ್ನು ಯಾವ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಜೀವನ ನಡೆಸಬಹುದೆನ್ನುವ ಸಾಮಾನ್ಯಜ್ಞಾನ ಇಲ್ಲದೆ ಅತಿಯಾಗಿ ದುರ್ಬಳಕೆ ಮಾಡಿಕೊಂಡು ವಿದೇಶಿಗಳ ಹಿಂದೆ ನಡೆದವರಿಗೆ ವಿದೇಶಿ ರೋಗವೇ ಬಳುವಳಿಯಾಗಿ ದೇಶವನ್ನು ಆವರಿಸಿದೆ. ಈಗಿದನ್ನು ತಣ್ಣಗಾಗಿಸಲು ಸ್ವದೇಶದ ಜ್ಞಾನವನ್ನು ಸ್ವಂತ ಜ್ಞಾನವನ್ನ, ಸ್ವತಂತ್ರ ಜ್ಞಾನವನ್ನು ಮನೆಯೊಳಗಿದ್ದೇ ತಿಳಿದು ಒಗ್ಗಟ್ಟಿನಿಂದ ಬಳಸಿಕೊಂಡರೆ ಹೊರಗಿನ ರೋಗದಿಂದ ರಕ್ಷಣೆ ಪಡೆಯಬಹುದು.

ಪ್ರಕೃತಿ ವಿಕೋಪ ಕೇವಲ ಭೂಕಂಪ,ಪ್ರಳಯಗಳ ಜೊತೆಗೆ ಸಾಂಕ್ರಾಮಿಕ ರೋಗವೂ ಹಿಂದಿನ ಕಾಲದಿಂದಲೂ ಇದೆ. ಇದನ್ನು ಆಧ್ಯಾತ್ಮಿಕವಾಗಿ ಅರ್ಥ ಮಾಡಿಕೊಳ್ಳದೆ ವೈಜ್ಞಾನಿಕವಾಗಿ ತಿಳಿದು ಪರಿಹಾರ ಕಂಡುಹಿಡಿದರೂ ತಾತ್ಕಾಲಿಕವಷ್ಟೆ.ಹೀಗಾಗಿ ಮಾನವನಿಗೆ ಈಗ ಮಹಾಮಾರಿ ಪರೀಕ್ಷೆ ನಡೆಸಿದ್ದಾಳೆಂದರೆ , ಅದನ್ನು ಧರ್ಮದಿಂದ ಮಾತ್ರ ಉತ್ತರ ನೀಡಲು ಸಾಧ್ಯ.

- Advertisement -

ಮಕ್ಕಳಿಗೆ ನೀಡುತ್ತಿರುವ ಶಿಕ್ಷಣದಲ್ಲಿ ಉತ್ತಮ ಬದಲಾವಣೆ ಮಾಡುವುದರಿಂದ ಮಾನಸಿಕ ಹಾಗು ದೈಹಿಕ ರೋಗಗಳು ಹೋ ಇದರಿಂದಾಗಿ ಮುಂದಿನ ಪೀಳಿಗೆಯೂ ಉತ್ತಮ ಮಾರ್ಗದಲ್ಲಿ ನಡೆಯಲು ಸಾಧ್ಯ. ದೇಶದ ಭವಿಷ್ಯ ಮಕ್ಕಳ ಜ್ಞಾನದಲ್ಲಿದೆ. ವಿಜ್ಞಾನ ಜಗತ್ತು ಹೊರಗಿನ‌ ಸತ್ಯವಷ್ಟೇ ತಿಳಿಸಿದ್ದರೆ, ಈಗ ಮಕ್ಕಳಿಗೆ ಮನೆಯೊಳಗಿದ್ದೇ ಸದ್ವಿಚಾರ‌ತಿಳಿಸಲು ಕೊರೋನಾ ಅವಕಾಶ ನೀಡಿದೆ ಎನ್ನುವ ಸಕಾರಾತ್ಮಕ ಚಿಂತನೆಯಿಂದ ಪ್ರಜೆಗಳು ಅದರಲ್ಲಿಯೂ ಮಹಿಳೆಯರು ತಮ್ಮ ತ ಧರ್ಮಸತ್ಯದಿಂದ ಅರ್ಥ ಮಾಡಿಕೊಂಡರೆ ಬಂದಿರುವ‌ ವಿಪತ್ತಿನಿಂದ ಪಾರಾಗಬಹುದೆ?

ಮೊದಲು ಪ್ರಶ್ನೆಗಳನ್ನು ಸರಿಯಾಗಿ ತಿಳಿದು ನಾನು ಯಾವ ರೀತಿ ಉತ್ತರಿಸಿದರೆ ದೇಶದ ಭವಿಷ್ಯ ಚೆನ್ನಾಗಿರಬಹುದು, ತನ್ನ ಮಕ್ಕಳ ಕಾಲಕ್ಕೆ ಇದು ಎಷ್ಟು ಶಾಂತಿ ನೀಡಬಹುದು?. ನಮ್ಮ ಜ್ಞಾನದಿಂದ ಹೇಗೆ ದೇಶ ಉಳಿಸಬಹುದು.ಅಜ್ಞಾನದಿಂದ ವಿದೇಶ ಬೆಳೆಸಿದ್ದೇವೆ.ಮಕ್ಕಳ‌ ಶಿ ಭಾರತವನ್ನ ಮುನ್ನಡೆಸುವುದೇ ಇಲ್ಲಾ ನಮ್ಮನ್ನೇ ಮುಂದಿನ ದೇಶಕ್ಕೆ ಶತಳ್ಳುವುದೇ ಅಂದರೆ ಪರದೇಶಿಯಾಗಿಸುವುದೇ?
ಪರೀಕ್ಷೆಯಲ್ಲಿ ಜ್ಞಾನಕ್ಕೆ ಹೆಚ್ಚಿನಾಂಕ ಬಂದರೆ ಲಾಭ ಅಜ್ಞಾನಕ್ಕೆ ಹೆಚ್ಚು ಅಂಕ ಬಂದರೆ ನಷ್ಟ. ಚುನಾವಣೆಯಲ್ಲಿ ದೇಶದ ಧರ್ಮ,ಸತ್ಯ ಉಳಿದರೆ ಲಾಭ. ಇಲ್ಲವಾದರೆ ನಷ್ಟ. ಪರೀಕ್ಷೆಗಳು ಮಾನವನನ್ನ ಜ್ಞಾನಕ್ಕೆ ಎಳೆದರೆ ಲಾಭ.ವಿಜ್ಞಾನಕ್ಕೆಳೆದರೆ ನಷ್ಟ. ಹಾಗೆ ಮಕ್ಕಳಿಗೂ ನಡೆಸುವ ಅಜ್ಞಾನವನ್ನೆ ಬೆಳೆಸಿ ಅವರ ಮೂಲ ಜ್ಞಾನವೇ ಹಿಂದುಳಿದು ಹೊರ ಪ್ರಪಂಚವನ್ನಷ್ಟೇ ಬೆಳೆಸಿದೆ. ಇದರಿಂದ ಹಣವೇನೋ ಸಿಗಬಹುದು ಪೋಷಕರಿಗೆ ಮಕ್ಕಳ ಪ್ರೀತಿ, ವಾತ್ಸಲ್ಯ ಸಹಕಾರ ಕೊನೆವರೆಗೆ ಸಿಗುವುದು ಕಡಿಮೆಯಾಗಿದೆ. ಹಾಗಾದರೆ ಪೋಷಕರಿಗೆ ಫಲಿತಾಂಶದಿಂದ ಸಿಕ್ಕಿದ್ದು ಲಾಭವೆ ನಷ್ಟವೆ.

ಇದು ದೇಶಕ್ಕೂ ಅನ್ವಯಿಸುತ್ತದೆ ಅಲ್ಲವೆ?ದೇಶ ಬೇರೆಯಲ್ಲ ದೇಹ ಬೇರೆಯಲ್ಲ.ಮಕ್ಕಳ ಭವಿಷ್ಯ ದೇಶದೊಳಗಿದೆ ಅದನ್ನ ಬೆಳೆಸಬೇಕಾದವರೇ ಪೋಷಕರು.ಇದೇ ಪ್ರಜಾಧರ್ಮದ ರಕ್ಷಣೆ.ಪ್ರಜಾಪ್ರಭುತ್ವದ ಧರ್ಮ ಪ್ರಜೆಗಳು ಸರಿಯಾದ ಉತ್ತರ ತಿಳಿದು ಮಾನವೀಯತೆಗೆ ಹೆಚ್ಚು ಅಂಕಗಳಿಸುವಂತೆ ನಡೆಯುವುದಾಗಿದೆ.ದೇಶದ ಸಾಲ ನಮ್ಮ ಸಾಲವೆಂಬ ಸತ್ಯ ತಿಳಿದು ಅದರಿಂದ ಮುಕ್ತಿ ಪಡೆಯಲು ದೇಶೀಯ ಧರ್ಮ ಶಿಕ್ಷಣ ಮಕ್ಕಳಿಗೆ ನೀಡಿ ಪರೀಕ್ಷೆ ನಡೆಸಿ ಉತ್ತೀರ್ಣರಾಗಬೇಕಲ್ಲವೆ?ಇಂದಿನ ಭಾರತೀಯ ವಿದ್ಯಾರ್ಥಿ ಗಳಲ್ಲಿ ಹೆಚ್ಚಿನ ಅಂಕ ಪಡೆದವರು ದೇಶ ಬಿಟ್ಟು ವಿದೇಶಿಗಳಾಗಿರೋರೇ ಹೆಚ್ಚು.ಕಡಿಮೆ ಅಂಕ ಪಡೆದವರು ದೇಶದಲ್ಲಿದ್ದೇ ದುಡಿದು ಬದುಕುತ್ತಾರೆ.ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡಿ ತಮ್ಮೊಡನೆ ಬದುಕುವಂತೆ ಮಾಡೋದಕ್ಕೆ ನೈತಿಕತೆ ಅಗತ್ಯ.ಇದು ಭಗವಂತ ನೀಡುವ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಸಹಕಾರಿಯಾಗಿರುತ್ತದೆ.ಇದೇ ಜೀವನ.

ಒಳ್ಳೆಯ ಅಗತ್ಯವಿರೋ ವಿಚಾರ ಹೆಚ್ಚಾಗಿ ತಿಳಿಯಲು ಯೋಗ, ಧ್ಯಾನದಂತಹ ಆಧ್ಯಾತ್ಮಿಕ ಚಟುವಟಿಕೆಗಳನ್ನು ಮಕ್ಕಳ ಬದುಕಲ್ಲಿ ತರಬೇಕು. ಆನ್ಲೈನ್ ಮೂಲಕ ಶಾಲಾ ಕಾಲೇಜುಗಳು ಮಕ್ಕಳಿಗೆ ಉತ್ತಮ ವಿಚಾರಗಳನ್ನು ತಿಳಿಸಿ ಬೆಳೆಸದಿದ್ದರೆ ಪೋಷಕರೆ ಮಾಡಬಹುದು. ಒಂದು ವರ್ಷ ಅನಗತ್ಯ ವಿಚಾರವನ್ನು ಮಕ್ಕಳ ತಲೆಗೆ ತುಂಬುವ ಬದಲಾಗಿ ನಮ್ಮ

ಸದ್ವಿಚಾರ ವನ್ನು ನಾವೇ ತುಂಬುವ ಕಾರ್ಯ ನಡೆಸಿದರೆ ಉತ್ತಮ. ಹೊರಗಿನ ಜ್ಞಾನಕ್ಕೆ ಮೊದಲು ಒಳಗಿನ ಜ್ಞಾನ ಬೆಳೆಸುವುದೆ ಮುಖ್ಯ. ಆಗೋದೆಲ್ಲಾ ಒಳ್ಳೆಯದಕ್ಕೆ ಎಂದರೆ ಹೀಗೆಯೇ? ಭೌತಿಕಾಸಕ್ತಿ ಬೆಳೆಸಿಕೊಂಡು ಜೀವನದ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಎಷ್ಟು? ಅನುತ್ತೀರ್ಣನಾದವರೆಷ್ಟು?

ಕೊರೊನ ಪರೀಕ್ಷೆಯಲ್ಲಿ ?ವೈಚಾರಿಕತೆಯಿಂದ ಪಾಸಾದರೆ ಉತ್ತಮ ಪರಿಣಾಮ .ವೈಜ್ಞಾನಿಕತೆ ಕೇವಲ ತಾತ್ಕಾಲಿಕ ಪರಿಹಾರವಷ್ಟೆ. ಇದನ್ನು ವರ್ಷದಿಂದಲೂ ಕಾಣುತ್ತಿರುವ ಸತ್ಯ. ಜೀವ ಶಾಶ್ವತವಲ್ಲ.ಆತ್ಮ ಶಾಶ್ವತ.

ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group