- Advertisement -
೧
ಬೆಕ್ಕಿನ ಮರಿ ಬೆಕ್ಕಿನ ಮರಿ
ಮಿಯಾವ್ ಮಿಯಾವ್ ಮಿಯಾವ್
ಕುರಿ ಹಾಲು ಕುಡ್ದು ಬಿಟ್ರೆ
ಗುರ್ರ್ ಗುರ್ರ್ ಗುರ್ರ್… !!
೨
ಮಳಿ ಬಂತು ಮಳಿ
ರಪ್ ರಪ್ ಮಳಿ
ಹೊಲ್ದಾಗೆಲ್ಲಾ ಬೆಳಿ
ತಿನ್ನೊಕಾಯ್ತು ಬ್ಯಾಳಿ..!!
೩
ಗೋಡೆ ಮೇಲೆ ಗಡಿಯಾರ
ಟಿಕ್ ಟಿಕ್ ಗಡಿಯಾರ
ರಜೆ ಇಲ್ಲ ರವಿವಾರ
ಆಗಂಗಿಲ್ಲ ಬ್ಯಾಸರ..!!
- Advertisement -
೪
ನಮ್ಮೂರ ರಸ್ತೆ
ಏನು ನಿನ್ನ ಅವಸ್ಥೆ
ಮಳೆ ಬಂದರೆ ಗಟಾರು
ಕುಣಿಯುತ್ತೆ ಮೋಟಾರು..!!
೫
ರೆಲಾ ರೆಲಾ ರೈಲು
ಚುಕುಬುಕು ರೈಲು
ಮನೆ ಬಂತು ಕೇಳು
ಸಾಕು ಇಲ್ಲೇ ನಿಲ್ಲು..!!
೬
ರಾಯರ ನೆಂಟ
ಊರಿನ ಬಂಟ
ಕದ್ದು ಬಿಟ್ಟ ಅಂಟ
ಮುರುಕೊಂಡ ಸೊಂಟ…!
- Advertisement -
೭
ಗುಂಡಕ್ಕ ಪೆದ್ದಿ
ಇಲ್ಲ ಸ್ವಲ್ಪ ಬುದ್ಧಿ
ಕುಂತಲ್ಲೇ ನಿದ್ದಿ
ಹೊರಗೆಲ್ಲ ಸುದ್ದಿ..!!
೮
ಮಂಡಕ್ಕಿ ಮಾವ
ನೋಡಿಬಿಟ್ಟ ಹಾವ
ನಡುಗಿದ ಗಡಗಡ
ಓಡಿದ ಬಡಬಡ..!!
ವೆಂಕಟೇಶ ಚಾಗಿ
ಲಿಂಗಸುಗೂರ