spot_img
spot_img

ಸೂರ್ಯಾಸ್ತದ ಸೊಬಗಿನ ಮರವಂತೆ ಬೀಚ್

Must Read

spot_img
- Advertisement -

ಜೀವನದಲ್ಲಿ ಪ್ರವಾಸ ತನ್ನದೆ ಅದ ಅನುಭೂತಿಯನ್ನು ನೀಡುತ್ತದೆ. ನಾನು ನನ್ನ ಹಳೆಯ ಅಲ್ಬಂ ನೋಡುವ ಸಂದರ್ಭದಲ್ಲಿ ಇತ್ತೀಚಿಗೆ ಕುಂದಾಪುರ ಪೋಟೋಗಳನ್ನು ನೋಡಿದೆ. ತಟ್ಟನೇ ನೆನಪಾಗಿದ್ದು ಅಲ್ಲಿನ ಮರವಂತೆ ಬೀಚ್.

ಪೆಬ್ರುವರಿ ೨೮ ಮತ್ತು ಮಾರ್ಚ ೧ ರಂದು ೨೦೧೫ ರಲ್ಲಿ ನಾನು ಕುಂದಾಪುರದ ದೃಶ್ಯ ಮತ್ತು ಶ್ರವ್ಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ವಾಚನಾಭಿರುಚಿ ಕಮ್ಮಟದ ಶಿಬಿರಾರ್ಥಿಯಾಗಿ ಪಾಲ್ಗೊಂಡಿದ್ದೆ. ನನಗೆ ಭಂಡಾರ್ಕಸ್ ಕಾಲೇಜಿಗೆ ಸಮೀಪವಿರುವ ಲಾಜಿಂಗ್ ನಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದು ಸರಕಾರದ ಅನ್ಯ ಕಾರ್ಯ ನಿಮಿತ್ತ ರಜೆ ಅನುಕೂಲ ಕಲ್ಪಿಸಿದ ಕಾರ್ಯಕ್ರಮವಾದ ಕಾರಣ ನನಗೆ ಪ್ರವಾಸಕ್ಕೆ ಅವಕಾಶ ಒದಗಿಸಿತ್ತು ಎಂದರೆ ಅತಿಶಯೋಕ್ತಿಯಲ್ಲ.

- Advertisement -

ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೩ ರ ತನಕ ಶಿಬಿರ. ನಂತರ ರೂಮಿಗೆ ಬಂದು ಸ್ವಲ್ಪ ಕಾಲ ವಿಶ್ರಾಂತಿ ಸಂಜೆ ಎಲ್ಲಿಯಾದರೂ ಸುತ್ತಾಡಿದರಾಯಿತು ಎಂದುಕೊಂಡು ನಾನು ಸಾಯಂಕಾಲ ಹೋಗಿದ್ದು ಮರವಂತೆ ಬೀಚ್ ಗೆ

ಮರವಂತೆ ಬೀಚ್:

ಮರವಂತೆ ಬೀಚ್ ಕುಂದಾಪುರದಿಂದ 12 ಕಿ.ಮೀ ದೂರದಲ್ಲಿದೆ, ಇದು ಉಡುಪಿಗೆ ಉತ್ತರಕ್ಕೆ 50 ಕಿ.ಮೀ ಮತ್ತು ಮಂಗಳೂರಿನಿಂದ 105 ಕಿ.ಮೀ ದೂರದಲ್ಲಿದೆ. ಕರ್ನಾಟಕದ ಪ್ರತಿಯೊಂದು ಪ್ರವಾಸಿಗರು ನೋಡಲೇಬೇಕಾದ ಒಂದು ಸುಂದರ ಬೀಚ್ ಇದು.

ಸುಂದರ ಸಂಜೆ ನೋಟ:

ರಾಷ್ಟ್ರೀಯ ಹೆದ್ದಾರಿ (NH17) ತೀರದಿಂದ 100 ಮೀಟರ್ ದೂರದಲ್ಲಿ ಹಾದುಹೋಗುತ್ತದೆ. ಒಂದು ಕಿಲೋಮೀಟರ್ ವಿಸ್ತಾರಕ್ಕೆ ಕಡಲತೀರದ ಉದ್ದಕ್ಕೂ ಹೆದ್ದಾರಿಯಲ್ಲಿ ಪ್ರಯಾಣಿಸುವಾಗ, ನೀವು ಒಂದು ಬದಿಯಲ್ಲಿ ಅರೇಬಿಯನ್ ಸಮುದ್ರವನ್ನು ನೋಡಬಹುದು ಮತ್ತು ಕೊಡಚಾದ್ರಿ ಬೆಟ್ಟಗಳು ಮತ್ತೊಂದರಲ್ಲಿ ಸೌಪರ್ಣಿಕಾ ನದಿಯ ಹಿನ್ನೆಲೆಯನ್ನು ರೂಪಿಸುತ್ತವೆ. 

- Advertisement -

ಕಡಲತೀರವು ಬಿಳಿ ಉಸುರಿನಿಂದ ಪ್ರಕೃತಿ ಸೌಂದರ್ಯ ಹೊಂದಿದೆ. ಮತ್ತು ತೀರದಲ್ಲಿ ಸಾಕಷ್ಟು ಖಾಸಗಿ ಕುಟೀರಗಳು ಮತ್ತು ಶುಭ್ರವಾದ ನೀಲಿ ಆಕಾಶ, ಪಾಮ್ ಮರಗಳು ಮತ್ತು ಅಂತ್ಯವಿಲ್ಲದ ತೀರ  ಆಕರ್ಷಕ ಪ್ರವಾಸಿ ತಾಣವಾಗಿ ಪ್ರಸಿದ್ಧಿ ಹೊಂದಿದೆ. 

ನಾನು ಸಂಜೆ ಬಂದ ಕಾರಣ ಪ್ರಶಾಂತ ಮತ್ತು ಕಡಲ ತೀರವು ತನ್ನದೇ ಆದ ಸೌಂದರ್ಯ ದಿಂದ ಕಂಗೊಳಿಸುತ್ತಿರುವ ಸಂದರ್ಭದಲ್ಲಿ ಅಲ್ಲೊಂದು ಪುಟ್ಟ ಪಕ್ಷಿ ಮೀನು ತಿನ್ನುತ್ತಿತ್ತು. ನನ್ನ ಕ್ಯಾಮೆರಾ ಕಣ್ಣುಗಳಲ್ಲಿ ಅದನ್ನು ಸೆರೆಹಿಡಿಯುತ್ತಾ ಸಾಗಿದೆ. 

ಸುತ್ತಲೂ ಅಪ್ಪಳಿಸುವ ಅಲೆ, ಆಳೆತ್ತರದ ಕಲ್ಲುಗಳ ಮೇಲೆ ಸೃಷ್ಟಿಯಾಗುವ ಹಾಲ್ನೊರೆ, ಕಣ್ಣು ಹಾಯಿಸಿದಷ್ಟೂ ಕಾಣುವ ಕಡಲ ರಾಶಿ, ಮಕ್ಕಳೊಂದಿಗೆ ಬಂದ ಕುಟುಂಬ ಮಕ್ಕಳ ಓಡಾಟ ಹೀಗೆ ಒಂದು ಸೊಬಗು ಅಲ್ಲಿ ಕಂಡು ಬರುತ್ತಿತ್ತು.

ಅಲ್ಲಿ ನಿಂತಿದ್ದ ಕೆಲವು ಯುವಕರ ಕೈಯಲ್ಲಿ ನನ್ನ ಕ್ಯಾಮೆರಾ ಕೊಟ್ಟು ಪೋಟೋ ತೆಗೆಯಲು ಹೇಳಿ ಪೋಟೋ ತೆಗೆಸಿಕೊಂಡೆನು.

ಈಗ ಸಮುದ್ರದ ಮಧ್ಯದಲ್ಲಿ ನಿಂತು, ಅದರ ಸೌಂದರ್ಯವನ್ನು ಸಮೀಪದಿಂದಲೇ ಸವಿಯತೊಡಗಿದೆ. ಇಲ್ಲಿ  ಹೆದ್ದಾರಿ ಸುರಕ್ಷತೆಗೆ ನಿರ್ಮಿಸಿದ ಕರೆಗೋಡೆ ಅಥವಾ ಗ್ರಾಯಿನ್ ಗಮನ ಸೆಳೆದಿದೆಯಲ್ಲದೆ ಅದನ್ನು ನಿರ್ಮಿಸುವ ಮೂಲಕ ರಕ್ಷಣೆ ಮಾಡಲಾಗಿದೆ ಎಂದು ಹೇಳಬಹುದು..

ಮರವಂತೆ, ರಾಜ್ಯದ ಕರಾವಳಿಯ ಒಂದು ವಿಶಿಷ್ಟ ಕಡಲತೀರ. ಒಂದೆಡೆ ವಿಶಾಲ ಅರಬ್ಬಿ ಸಮುದ್ರ, ಮತ್ತೊಂದೆಡೆ ರಮಣೀಯ ಸೌಪರ್ಣಿಕಾ ನದಿ.  ಒಂದೇ ದಂಡೆಯ ಅಕ್ಕ–ಪಕ್ಕ ನದಿ, ಸಮುದ್ರ ಇರುವ ಇಂತಹ ವಿಶೇಷ ಸ್ಥಳ ಭಾರತದಲ್ಲೇ ಅಪರೂಪ.

ಸೌಪರ್ಣಿಕಾ ನದಿ:

ಸೌಪರ್ಣಿಕಾ ನದಿ ಕುರಿತು ಗೂಗಲ್ ಮೂಲಕ ಮಾಹಿತಿಯನ್ನು ಕಲೆ ಹಾಕಿದೆ. ಇದು ಕುಂದಾಪುರ ತಾಲೂಕಿನ ಮೂಲಕ ಹರಿಯುವ ನದಿಯಾಗಿದೆ. 

ಇದು ವಾರಾಹಿ ನದಿ , ಕೆದಕ ನದಿ , ಚಕ್ರ ನದಿ , ಮತ್ತು ಪಂಚಗಂಗಾವಲಿ ನದಿ ಎಂದು ಕರೆಯಲ್ಪಡುವ ಕುಬ್ಜಾ ನದಿಯೊಂದಿಗೆ ಸೇರಿ ಅರಬ್ಬಿ ಸಮುದ್ರದಲ್ಲಿ ಸೇರುತ್ತದೆ. 

ಕೊಲ್ಲೂರಿನ ಮೂಲಕ ಹರಿದು ಬರುವ ಸೌಪರ್ಣಿಕಾ ನದಿಯು ಮರವಂತೆ ಊರಿನಲ್ಲಿ ಸುಂದರವಾದ ತಿರುವಿನ ಮೂಲಕ ಹರಿದು ಹೋಗುತ್ತದೆ.      

ನದಿ ತೀರದಲ್ಲಿ ಬೆಳೆದಿರುವ ತೆಂಗಿನ ಮರಗಳು, ಪುಟ್ಟ ಪುಟ್ಟ ದ್ವೀಪಗಳು, ನೀಲ ನೀರು ಚಂದದ ದೃಶ್ಯ. ಕೊಡಚಾದ್ರಿ ಪರ್ವತವು ಈ ನೀರಿನಲ್ಲಿ ಪ್ರತಿಫಲಿತವಾಗುವ ಅಪರೂಪದ ದೃಶ್ಯವು ಮಾರಸ್ವಾಮಿ ದೇವಾಲಯದ ಬಳಿ ಕಾಣಸಿಗುತ್ತದೆ.

ಸುಪರ್ಣ ಎಂದು ಕರೆಯಲ್ಪಡುವ ಗರುಡ (ಹದ್ದು) ನದಿಯ ದಡದಲ್ಲಿ ತಪಸ್ಸು ಮಾಡಿ ಮೋಕ್ಷವನ್ನು ಪಡೆದುಕೊಂಡಿತು ಎಂದು ನಂಬಲಾಗಿದೆ, ಆದ್ದರಿಂದ ಹೆಸರು ಸೌಪರ್ಣಿಕಾ ಎಂದು.

ಅಂದ ಹಾಗೆ ನದಿಯು ಹರಿಯುವಾಗ ೬೪ ವಿವಿಧ ಔಷಧೀಯ ಸಸ್ಯಗಳು ಮತ್ತು ಬೇರುಗಳ ಅಂಶಗಳನ್ನು ಹೀರಿಕೊಳ್ಳುತ್ತದೆ ಎಂದು ನಂಬಲಾಗಿದೆ, 

ಇಲ್ಲಿ ಸ್ನಾನ ಮಾಡುವವರಿಗೆ ಇದು ರೋಗಗಳನ್ನು ಗುಣಪಡಿಸುತ್ತದೆ.ಎಂದು ಹೇಳುವರು. 

ಮಾರಸ್ವಾಮಿ ದೇವಾಲಯ:

ಮರವಂತೆ ಸಮುದ್ರ ತೀರ,ಒಂದೆಡೆ ಅತ್ತ ಸೌಪರ್ಣಿಕಾ ನದಿ – ಈ ಮಧ್ಯೆ ಇರುವ ಪುಟ್ಟ ಪ್ರದೇಶದಲ್ಲಿ ಆಕರ್ಷಕವಾದ ಮಾರಸ್ವಾಮಿ ದೇವಾಲಯ. ಮರವಂತೆಯಿಂದ ಅರ್ಧ ಕಿ.ಮೀ. ದೂರದಲ್ಲಿರುವ ಈ ದೇವಾಲಯದ ಹಿನ್ನೆಲೆ ಕುತೂಹಲಕಾರಿಯಾಗಿದೆ. ಬಹು ಹಿಂದೆ, ವ್ಯಾಪಾರಿ ಹಡಗೊಂದು ಅಲ್ಲಿನ ಸಮುದ್ರತೀರಕ್ಕೆ ಬಂದು ಸೇರಿತು – ನೋಡಿದಾಗ ಮಹಾರಾಜರ ಶವವು ಅದರಲ್ಲಿ ಮೂರು ಚೂರುಗಳಾಗಿ ಬಿದ್ದಿತ್ತು – ಅವುಗಳನ್ನು ಪೂಜಿಸುವ ಹಿನ್ನೆಲೆಯಲ್ಲಿ ಮೂರು ಗರ್ಭಗುಡಿಗಳುಳ್ಳ ದೇವಾಲಯ ಸ್ಥಾಪನೆಗೊಂಡಿತು.ಈ ದೇವಾಲಯವು ಹಿಂದೂ ಮಹಾಕಾವ್ಯಗಳಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ದೇವೇಂದ್ರನಿಂದ ಸ್ಥಾಪಿಸಲ್ಪಟ್ಟ ಲಿಂಗವು ಈಗಿನ ಗಂಗಾಧರೇಶ್ವರ ದೇವಾಲಯವಾಗಿದೆ ಎಂದು ನಂಬಲಾಗಿದೆ. 

ಧನ್ವಂತರ, ಗಂಗಾಧರೇಶ್ವರ ದೇವಸ್ಥಾನದಲ್ಲಿ ವರಾಹ, ವಿಷ್ಣು ಮತ್ತು ನರಸಿಂಹನ ಮೂರು ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಶ್ರೀ ಮಹಾರಾಜ ಸ್ವಾಮಿ ಶ್ರೀ ವರಾಹ ದೇವಸ್ಥಾನ ಎಂದು ಮರುನಾಮಕರಣ ಮಾಡಲಾಗಿದೆ.

ಮೊದಲು ಸಮುದ್ರ ವ್ಯಾಪಾರದ ನೆನಪುಗಳು ಈ ದೇವಾಲಯದ ಸ್ಥಾಪನೆಯಲ್ಲಿದೆ ಎನ್ನುವರು ಈಗ ಅಲ್ಲಿ ವರಾಹ, ವಿಷ್ಣು ಮತ್ತು ನರಸಿಂಹನ ಪೂಜೆ ನಡೆಯುತ್ತಿದ್ದು, ಮುೂರು ಗರ್ಭಗುಡಿಗಳುಳ್ಳ ದೇವಾಲಯವಿಲ್ಲಿದೆ. ಆ ಗರ್ಭಗುಡಿಗಳ ಮುಂಭಾಗದಲ್ಲಿ ಆಮೆ, ಮೀನು ಮತ್ತು ಮೊಸಳೆಗಳ ಶಿಲ್ಪಗಳಿರುವುದು ನಿಜಕ್ಕೂ ಕುತೂಹಲಕಾರಿ – ಇದು ಸಮುದ್ರದ ಜಲಚರಗಳ ಪೂಜೆಗೆ ಮೀಸಲಾಗಿದ್ದ ದೇವಾಲಯವಾಗಿರಬೇಕು – ಕಾಲ ಕ್ರಮೇಣ ಇತರ ದೇವರುಗಳ ಪ್ರತಿಷ್ಟಾಪನೆ ಆಗಿರಬಹುದು.

ಪ್ರಸ್ತುತ ವರಾಹ, ವಿಷ್ಣು ಮತ್ತು ನರಸಿಂಹನ ಪೂಜೆಗಳು ನಡೆಯುತ್ತಿದ್ದು, ಮೂರು ಗರ್ಭಗುಡಿಗಳ್ಳುಳ್ಳ ದೇವಾಲಯವಿದೆ. ಗರ್ಭ ಗುಡಿಗಳ ಮುಂಭಾಗದಲ್ಲಿ ಆಮೆ, ಮೀನು ಮತ್ತು ಮೊಸಳೆಗಳ ಶಿಲ್ಪವಿರುವುದನ್ನು ಕಾಣಬಹುದು. ಒಂದು ಕಾಲದಲ್ಲಿ ಈ ದೇವಾಲಯವು ಸಮುದ್ರ ಚಲಚರಗಳ ಪೂಜೆಗೆ ಮೀಸಲಾಗಿದ್ದು, ಕಾಲ ಕ್ರಮೇಣ ವಿಷ್ಣುವಿನ ಅವತಾರಗಳ ಶಿಲ್ಪಗಳನ್ನು ಪ್ರತಿಷ್ಟಾನೆ ಮಾಡಿರಬಹುದೆಂದು ಊಹಿಸಲಾಗಿದೆ. ಆಶ್ಚರ್ಯ ಎಂಬಂತೆ, ದೇವಾಲಯದ ಪಕ್ಕದಲ್ಲಿನ ನದಿಯಲ್ಲಿರುವ ಮೊಸಳೆಗೆ ವರ್ಷಕ್ಕೊಮ್ಮೆ ಪೂಜೆ ನಡೆಸಲಾಗುತ್ತದೆ.

‘ಅಭಾರಿ’ ಈ ದೇವಾಲಯದ ಮುಖ್ಯ ಮತ್ತು ವಿಶೇಷ ಆಚರಣೆಯಾಗಿದೆ. ಈ ಆಚರಣೆಯಲ್ಲಿ, ಮೀನುಗಾರರು ಸರಿಯಾದ ಸಮಯದಲ್ಲಿ ಮಳೆ ಮತ್ತು ಸುಗ್ಗಿಯನ್ನು ನೀಡಿದ ಶ್ರೀ ವರಾಹ ದೇವರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾರೆ ಮತ್ತು ಮೀನುಗಾರಿಕೆಗೆ ಹೋಗುವಾಗ ಸಮುದ್ರದ ಅಪಾಯಗಳಿಂದ ರಕ್ಷಿಸುತ್ತಾರೆ. 

ಪ್ರತಿ ವರ್ಷ ಆಷಾಢ ಬಹುಳ ಅಮಾವಾಸ್ಯೆಯಂದು ಜಾತ್ರೆ ನಡೆಯುತ್ತದೆ. ಈ ಹಬ್ಬವು ಮಳೆಗಾಲದ ಮಾಸದಲ್ಲಿ ಬಂದರೂ, ಭಕ್ತರು ಮಳೆಯಲ್ಲಿ ಮುಳುಗುವ ಭಯವಿಲ್ಲದೆ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಈ ಹಬ್ಬದ ಮತ್ತೊಂದು ವಿಶೇಷತೆ ಏನೆಂದರೆ ನವ ದಂಪತಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಬೇಕು. ವಿವಿಧೆಡೆಯಿಂದ ನವ ದಂಪತಿಗಳು ಇಲ್ಲಿಗೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಆಷಾಢ ಅಮಾವಾಸ್ಯೆಯ ಆಚರಣೆಯ ಹೊರತಾಗಿ, ಪ್ರತಿ ಅಮಾವಾಸ್ಯೆಯ ದಿನ, ಅಗಲಿದ ಆತ್ಮಗಳ ಮೋಕ್ಷಕ್ಕಾಗಿ ‘ಕೂಷ್ಮಾಂಡ’ ಮತ್ತು ‘ತಿಲ ಹೋಮ’ ಆಚರಣೆಗಳನ್ನು ನಡೆಸಲಾಗುತ್ತದೆ.

ಬೀಚ್ ಸೊಬಗು:

ಮರವಂತೆ ಕಡಲ ತೀರವು  ಸಂಜೆ ವಾಯುವಿಹಾರಕ್ಕೆ ಹೇಳಿ ಮಾಡಿಸಿದ ನಿಸರ್ಗ ದತ್ತ ಸೂಕ್ತವಾದ ಸ್ಥಳವಾಗಿದೆ ಸಮುದ್ರತೀರದಲ್ಲಿ ಲಭ್ಯವಿರುವ ಜಲಸಂಧಿಗಳನ್ನು ಸಂಪೂರ್ಣವಾಗಿ ಆನಂದಿಸುವ ಮಕ್ಕಳಿಗಾಗಿ ಈ ಕಡಲ ತೀರವು ಒಂದು ಉತ್ತಮ ಆಕರ್ಷಣೆಯಾಗಿದೆ.

ಮರವಂತೆ ಬೀಚ್ ನಲ್ಲಿ ವಾಟರ್ ಕ್ರೀಡಾಕೂಟವು ಪ್ರಸಿದ್ಧವಾಗಿದೆ ಮತ್ತು ಸಂದರ್ಶಕರಲ್ಲಿ ನೆಚ್ಚಿನ ಚಟುವಟಿಕೆಗಳಲ್ಲಿ ಒಂದಾಗಿದೆ. ನೀವು ಸೂರ್ಯೋದಯದ ಹಾಗೂ ಸೂರ್ಯಾಸ್ತದ ಸಮಯದಲ್ಲಿ ಇಲ್ಲಿ ಬಂದರೆ ನೈಸರ್ಗಿಕ ಚೆಲುವನ್ನು ಸವಿಯಬಹುದು. ಇಲ್ಲಿ ಕಂಡು ಬರುವ ಸ್ನಾರ್ಕ್ಲಿಂ ಹವಳದ ದಿಬ್ಬಗಳು ಮತ್ತು ಕಡಲ ಜೀವನವನ್ನು ಆಳವಾದ ಸಮುದ್ರ ಜೀವಿಗಳಿಂದ ತುಂಬಿವೆ. ಅಲೆಗಳು ಸೌಮ್ಯವಾಗಿರುವುದರಿಂದ ನೀರಿನಲ್ಲಿ ಈಜುವುದು ಸುರಕ್ಷಿತವಾಗಿದೆ

ತಲುಪುವ ಬಗೆ:

ಮರವಂತೆ ಬೀಚ್ ಕುಂದಾಪುರದಿಂದ ಸುಮಾರು 15 ಕಿಮೀ, ಮಂಗಳೂರಿನಿಂದ 105 ಕಿಮೀ, ಬೆಂಗಳೂರಿನಿಂದ 422 ಕಿಮೀ, ಮೈಸೂರಿನಿಂದ 356 ಕಿಮೀ, ಗೋಕರ್ಣದಿಂದ 126 ಕಿಮೀ, ಗೋವಾದಿಂದ 237 ಕಿಮೀ, ಕೊಚ್ಚಿಯಿಂದ 519 ಕಿಮೀ, ಬೆಳಗಾವಿಯಿಂದ 313 ಕಿಮೀ ದೂರದಲ್ಲಿದೆ. ಸಾಕಷ್ಟು ಖಾಸಗಿ ವಾಹನಗಳ ಸೌಕರ್ಯ ಇಲ್ಲಿ ಲಭ್ಯವಿದೆ.


ವೈ.ಬಿ.ಕಡಕೋಳ

- Advertisement -
- Advertisement -

Latest News

ವಿಶ್ವ ಶಾಂತಿಗೆ ಕುವೆಂಪು ಚಿಂತನೆಗಳೇ ದಾರಿದೀಪ : ಡಾ. ಭೇರ್ಯ ರಾಮಕುಮಾರ್

ಇಂದು ವಿಶ್ವವನ್ನು ಕಾಡುತ್ತಿರುವ ಹಿಂಸೆ, ಭಯೋತ್ಪಾದನೆ, ಯುದ್ಧಗಳ ನಿವಾರಣೆಗೆ ರಾಷ್ಟ್ರಕವಿ ಕುವೆಂಪು ಅವರ ವಿಶ್ವಮಾನವ ತತ್ವವೊಂದೇ ಪರಿಹಾರ ಎಂದು ಕನ್ನಡ ಸಾಹಿತ್ಯ ಪರಿಷತ್ ದತ್ತಿ ಪ್ರಶಸ್ತಿ...
- Advertisement -

More Articles Like This

- Advertisement -
close
error: Content is protected !!
Join WhatsApp Group