spot_img
spot_img

ಪುಸ್ತಕ ಪರಿಚಯ: ಮನದಾಳದ ಮಾತುಗಳು

Must Read

- Advertisement -

“ಡಾ ಭೇರ್ಯ ರಾಮಕುಮಾರ್” ಹೆಸರಿನಲ್ಲಿಯೇ ಒಂದು ರೀತಿಯ ಅದಮ್ಯ ವಿಶ್ವಾಸ, ಅಗಾಧ ಸಾಹಿತ್ಯ ಜ್ಞಾನವನ್ನು ಹೊಂದಿರುವ ಅಪರೂಪದ ವ್ಯಕ್ತಿತ್ವ ಇವರದು ಎಂದರೆ ಅತಿಶಯೋಕ್ತಿ ಆಗಲಾರದು ಎನ್ನುವುದು ಓದುಗರ ಅಭಿಪ್ರಾಯ.

ಕರ್ನಾಟಕದಲ್ಲಿ ಸಾಹಿತಿಗಳಿಗೆ ಏನೂ ಕೊರತೆ ಇಲ್ಲ ಬಿಡಿ, ಆದರೆ ವರ್ಣರಂಜಿತ ಬದುಕಿನ ಹೋರಾಟಗಳನ್ನು ಅನುಭವಿಸುತ್ತಾ ಸಾಹಿತ್ಯ ಸೇವೆ ಮಾಡುವವರ ಸಂಖ್ಯೆ ಬಹಳ ಕಡಿಮೆ. ಸಾಹಿತ್ಯ ಮಾತ್ರವಲ್ಲ ಕನ್ನಡ ಪರ ಹೋರಾಟಗಾರರಾಗಿ, ಕಾರ್ಮಿಕರ ಪರವಾಗಿ ಹೋರಾಟಗಳಲ್ಲಿ ಭಾಗವಹಿಸುತ್ತಾ, ಸಾಮಾಜಿಕ ಅವ್ಯವಸ್ಥೆಯನ್ನು ಹೋಗಲಾಡಿಸಲು ನಿರಂತರವಾಗಿ ಪತ್ರಿಕಾ ಲೇಖನಗಳ ಮೂಲಕ ಸಾರ್ವಜನಿಕರೆಲ್ಲರ ಗಮನ ಸೆಳೆಯುತ್ತಾ ಹಿರಿಯ ಕವಿಗಳ ಹೆಸರಿನಲ್ಲಿ ಪ್ರತಿವರ್ಷ ಸಾಹಿತ್ಯೋತ್ಸವ ನಡೆಸುತ್ತಾರೆ ಭೇರ್ಯ ರಾಮಕುಮಾರ್.

ಇದು ಕನ್ನಡಮ್ಮನ ಸೌಭಾಗ್ಯವೆಂದರೆ ತಪ್ಪಾಗಲಾರದು. ರಾಜ್ಯ ಅಂತಾರಾಜ್ಯ, ದೇಶ-ವಿದೇಶಗಳಲ್ಲಿರುವ ಹಿರಿಯ ಸಾಹಿತಿಗಳ ಪ್ರಶಂಸಗೆ ಪಾತ್ರರಾಗಿ ಅನೇಕ ಪ್ರಶಸ್ತಿ ಮತ್ತು ಸನ್ಮಾನಗಳನ್ನು ಪಡೆದುಕೊಂಡಿರುವ ಇವರು ಕೇಂದ್ರ ಸರಕಾರದ ಅಧೀನ ಸಂಸ್ಥೆಯಿಂದ ಗೌರವ ಡಾಕ್ಟರೇಟ್ ಪಡೆದುಕೊಂಡಿದ್ದಾರೆ ಎಂದರೆ ಆ ಪದವಿಗೆ ಒಂದು ಘನತೆಯನ್ನು ಕೊಟ್ಟಿದ್ದಾರೆ ಎನ್ನಬಹುದು. “ಗ್ರಾಮಾಂತರ ಬುದ್ದಿಜೀವಿಗಳ ಬಳಗ” ವನ್ನು ಕಟ್ಟಿಕೊಂಡು ಇಂದಿಗೂ ಕೂಡ ಸಾಹಿತ್ಯ ಸೇವೆಯನ್ನು ಸದ್ದಿಲ್ಲದೆ ಯಶಸ್ವಿಯಾಗಿ ನಡೆಸುತ್ತಿದಾರೆ. ಇಂತಹ ಮೇರು ವ್ಯಕ್ತಿತ್ವದ ಡಾ. ಭೇರ್ಯ ರಾಮಕುಮಾರ ಅವರ ಪರಿಚಯ ನನಗೆ ಬೆಳಗಾವಿಯ ‘ಕುಂದಾನಗರಿ’ ಮತ್ತು ಹಸಿರು ಕ್ರಾಂತಿ’ ಪತ್ರಿಕೆಗಳ ಮೂಲಕ ಆಯಿತು. ಅಂತರ್ಜಾಲದಲ್ಲಿ ಬರುವ ಅವರ ಕವನಗಳನ್ನು ತಪ್ಪದೇ ಓದುವುದೇ ಒಂದು ಖುಷಿಯ ವಿಚಾರ, ಓದುವುದಷ್ಟೇ ಅಲ್ಲದೆ ಇದೀಗ ಅವರಿಂದ ಪ್ರಕಟಿತಗೊಳ್ಳುತ್ತಿರುವ ‘ಬಾಳೊಂದು ಪಗಡೆಯಾಟ’ ಎಂಬ ರಾಜ್ಯ ಮಟ್ಟದ ಕವನ ಸಂಕಲನದ ಅನಿಸಿಕೆಯನ್ನು ಬರೆಯುತ್ತಿರುವುದು ನನ್ನ ಅದೃಷ್ಟವೇ ಸರಿ.

- Advertisement -

ಪ್ರಪ್ರಥಮವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ಮಹಿಮೆಯನ್ನು ಸಾರುವ ಸುಂದರ ಕವಿತೆಯೊಂದಿಗೆ ಎಲ್ಲರನ್ನು ಸ್ವಾಗತಿಸುತ್ತಾರೆ. ನಾಡದೇವಿಯ ನುಡಿಜಾತ್ರೆಯಲ್ಲಿ ಭಾಗವಹಿಸುವ ಎಲ್ಲ ಕನ್ನಡ ಮನಸ್ಸುಗಳು ಮೇಳೈಸಿ ದೇಶಭಕ್ತರೆಲ್ಲರನ್ನು ಸ್ಮರಿಸುತ್ತಾ, ಬಲಿಷ್ಠ ಭಾರತವನ್ನು ಕಟ್ಟುವ ನಾಗರಿಕರು ನಾವಾಗಬೇಕು, ಮಲೆನಾಡಿನ ಸೌಂದರ್ಯದ ಮಹತ್ವವನ್ನು ಆಸ್ವಾದಿಸುವ ಸಮಯದಲ್ಲಿ ಗಜರಾಜನ ಆಕ್ರಂದನ ನಮಗೆ ಕೇಳಿಸುತ್ತದೆ. ಸುಂದರ ನಾಳೆಗಾಗಿ ಬದುಕಬೇಕಾದರೆ ಇಂದಿನಿಂದಲೇ ಪರಿಸರ ರಕ್ಷಣೆಯ ಜವಾಬ್ದಾರಿಯುತ ಸತ್ಕಾರ್ಯ ನಮ್ಮೆಲ್ಲರ ಮೊದಲ ಆದ್ಯತೆಯಾಗಬೇಕು, ಇಲ್ಲದಿದ್ದರೆ ಆ ದೇವನು ನಮ್ಮನ್ನು ನೋಡಿ ನಗುವನು ಎನ್ನುವ ಮಾರ್ಮಿಕವಾದ ಮಾತು ಎಲ್ಲರ ಹೃದಯವನ್ನು ತಟ್ಟುತ್ತದೆ. ಮನುಷ್ಯನಿಗೆ ಗರ್ವ ಒಳ್ಳೆಯದಲ್ಲ ವಿಧೇಯತೆ ನಮ್ಮ ಜೀವಿತಾವಧಿಯ ಪ್ರಮುಖ ನಡತೆ ಗಳಲ್ಲಿ ಒಂದಾಗಬೇಕು, ಆಗ ಬಾಳು ಬಂಗಾರವಾಗಬಲ್ಲದು ಎನ್ನುತ್ತಾರೆ.

ಕ್ಷಮಯಾಧರಿತ್ರಿ, ಹೆಣ್ಣು, ಈ ಜಗದ ಕಣ್ಣು ಕಣ್ಣಿನಷ್ಟೆ ಸೂಕ್ಷ್ಮವಾದ ಬದುಕು ಅವಳದು, ಹೆಣ್ಣಿನ ಗೋಳು, ಕ್ಷಮಯಾಧರಿತ್ರಿ, ಮಗಳಿಗೊಂದು ಪತ್ರ ಮುಂತಾದ ಕವನಗಳನ್ನು ಓದುತ್ತಿದ್ದರೆ ಕನ್ನಡಿಗರೆಲ್ಲರಿಗೂ ನೆನಪಾಗುವುದು ಖ್ಯಾತ ಕವಯಿತ್ರಿ “ಸಂಚಿ ಹೊನ್ನಮ್ಮ”. ಇವಳು 18ನೇಯ ಶತಮಾನದ ಅಕ್ಕಮಹಾದೇವಿ ಎನ್ನಲು ಬಹಳ ಹೆಮ್ಮೆಯಿಂದೆನಿಸುವುದು. ಆಗಿನ ಮೈಸೂರಿನ ಮಹಾರಾಜ ಚಿಕ್ಕದೇವರಾಜ ಒಡೆಯರ (1673-1704) ಅವರ ಊಳಿಗದಲ್ಲಿದ್ದ ಮೈಸೂರಿನ ಯಳಂದೂರಿನಲ್ಲಿ ಜನಿಸಿದ್ದಳು. ತನ್ನ ‘ಹದಿಬದೆಯ ಧರ್ಮ’ ಎಂಬ ಸಂಕಲನದಲ್ಲಿ ಬರೆದಿರುವ
ಹೆಣ್ಣಲ್ಲವೇ ತಮ್ಮನೆಲ್ಲ ಪಡೆದ ತಾಯಿ ಹೆಣ್ಣಲ್ಲವೆ ಪೊರೆದವಳು ಹೆಣ್ಣು ಹೆಣ್ಣೆಂದೇಕೆ ಬೀಳುಗಳೆವರು ಕಣ್ಣು ಕಾಣದ ಗಾವಿಲರು ಎಂಬ ಗಂಧದ ನಾಡಿನ ಕಾವ್ಯದ ಹಿರಿಮೆಯನ್ನು ಮತ್ತೊಮ್ಮೆ ತಾವು ನೆನಪಿಸಿದ್ದಕ್ಕೆ ಕನ್ನಡಿಗರೆಲ್ಲರ ಪರವಾಗಿ ತಮಗೆ ಧನ್ಯವಾದಗಳು, ಹುಟ್ಟೂರಿನ ಮಹತ್ವವನ್ನು ಹೇಳುತ್ತಾ ಬಾಲ್ಯದ ದಿನಗಳನ್ನು ಮತ್ತೆ ಸ್ಮರಿಸಿಕೊಂಡರೆ ಮನಸ್ಸು ನವಿಲಿನ ಅದೃಷ್ಟದಂತೆ ಮುದಗೊಳ್ಳುತ್ತದೆ. ಇದೆಲ್ಲವರ ನಡುವೆ ಈ ವರ್ಷದ ಭಯಂಕರ ಹೆಮ್ಮಾರಿ “ಕರೋನಾ” ತಂದಿಟ್ಟ ಕೆಟ್ಟ ಘಳಿಗೆಯಲ್ಲಿ ಎಲ್ಲ ದಿನಗೂಲಿ ಕಾರ್ಮಿಕರ ಒಡಲಾಳದ ನೋವು ಮರೆಯಲಾರದ ಘಟನೆಯಾಗಿ ನಮ್ಮ ಜೀವನ ಮೂರ್ತಿ ಕಾಡುತ್ತಿರುತ್ತದೆ, ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಬೆಂಗಳೂರಿನ ಅವ್ಯವಸ್ಥೆಯಂತೂ ಹೇಳತಿರದು. ಜೀವನದಲ್ಲಿ ಬರುವ ಕಷ್ಟ ಕಾರ್ಪಣ್ಯಗಳಿಗೆ ಒಂದು ಪರಿಹಾರ ಇದ್ದೇ ಇರುತ್ತದೆ, ಎನ್ನುವ ಅಚಲವಾದ ನಂಬಿಕೆ ಶ್ರದ್ದೆ ಎಲ್ಲರಲ್ಲಿಯೂ ಇರಬೇಕು. ಎಲ್ಲರ ಜೀವನವೂ ಒಂದು ಪಗಡೆಯಾಟ ಇದ್ದಂತೆ, ದಾಳ ಉರುಳಿಸುವ ಅಗಮ್ಯ, ಅಗೋಚರ ಶಕ್ತಿಯೊಂದು ನಮ್ಮೊಂದಿಗೆ ಇದೆ ಎಂದೆನಿಸಿದರೂ ಬದುಕು ನಮ್ಮದು ಎಂಬ ಮನೋಧೈರ್ಯದಿಂದ ಬದುಕಿನ ಬಂಡಿಯಲ್ಲಿ ಪಯಣಿಸಿದರೆ ಪ್ರಪಂಚದ ಎಲ್ಲ ಮುಗ್ದ ರನ್ನು ರಕ್ಷಿಸಲು ಭಗವಂತ ಬಂದೇ ಬರುವನು ಎನ್ನುವ ಮಾತು ನಿಜವಾಗುತ್ತದೆ. ವಿನಯಶೀಲ, ಸರಳ ಜೀವಿ, ಸಾಹಿತ್ಯ ನಿಧಿಯಾಗಿರುವ ಡಾ. ಭೇರ್ಯ ರಾಮಕುಮಾರ ಹಾಗೂ ಅವರ ಕುಟುಂಬದ ಎಲ್ಲ ಸದಸ್ಯರಿಗೂ ತಾಯಿ ಚಾಮುಂಡೇಶ್ವರಿ ಒಳ್ಳೆಯದನ್ನು ಮಾಡಲಿ ಎನ್ನುವುದೇ ನಮ್ಮ ಪ್ರಾರ್ಥನೆಯಾಗಿದೆ. ಇಂದಿನ ಯುವಸಮುದಾಯಕ್ಕೆ ಚೈತನ್ಯವನ್ನು ತುಂಬುವ ಇನ್ನೂ ಅನೇಕಾನೇಕ ಕೃತಿಗಳು ತಮ್ಮಿಂದ ಹೊರಬರಲಿ ಎಂದು ಆಶಿಸುತ್ತಾ ನನ್ನ ಶುಭ ನುಡಿಗಳಿಗೆ ತಮ್ಮ ಆಶಿರ್ವಾದವಿರಲಿ ಎಂದು ಹೇಳುವ ಇಂತಿ ತಮ್ಮ ಓದುಗ ಅಭಿಮಾನಿ.

ವೀರಭದ್ರ ಮ. ಅಂಗಡಿ
ಸಂ. ಕಾರ್ಯದರ್ಶಿ, ಕ.ಸಾ.ಪ ಬೆಳಗಾವಿ
ಮೋ: 9481738616

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group