ಮೂಡಲಗಿ: ಮಕ್ಕಳ ಸರ್ವತೋಮುಖ ಏಳಿಗೆಯಲ್ಲಿ ಗುರುಗಳ ಜೊತೆಗೆ ಪಾಲಕರದ್ದು ಮಹತ್ತರ ಪಾತ್ರವಿದ್ದು, ಪಾಲಕರು ಮಕ್ಕಳ ಹೊಟ್ಟೆ ಹಸಿವು ನೀಗಿಸಿದರೆ, ಗುರುಗಳು ಜ್ಞಾನದ ಹಸಿವು ನೀಗಿಸುತ್ತಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಅಜಿತ್ ಮಣ್ಣಿಕೇರಿ ಹೇಳಿದರು.
ಶನಿವಾರದಂದು ಪಟ್ಟಣದ ಭಾಗೋಜಿ ಶಿಕ್ಷಣ ಸಂಸ್ಥೆಯ ಸ್ಫೂರ್ತಿ ಆಂಗ್ಲ ಮಾಧ್ಯಮ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ ಭಾಗೋಜಿಯವರು ಶಿಕ್ಷಣ ಪ್ರೇಮಿಗಳಾಗಿದ್ದು, ಮೂಡಲಗಿ ಹಾಗೂ ಸುತ್ತ ಮುತ್ತಲಿನ ಗ್ರಾಮದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಒದಗಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ ಭಾಗೋಜಿ ಹಾಗೂ ಸಂಸ್ಥೆಯ ಟ್ರಸ್ಟಿಗಳಾದ ಸ್ಫೂರ್ತಿ ಭಾಗೋಜಿ ಮಾತನಾಡಿ, ಬಡ ಹಾಗೂ ಪ್ರತಿಭಾವಂತ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಮಹದಾಶಯದಿಂದ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯಲ್ಲಿ, ಇಂದು ನೂರಾರು ಮಕ್ಕಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ. ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ಮಕ್ಕಳ ದೈಹಿಕ ಆರೋಗ್ಯಕ್ಕಾಗಿ ಈಜು ಕೊಳ ನಿರ್ಮಾಣವಾಗುತ್ತಿದೆ ಎಂದರು.
ಕಾರ್ಯಕ್ರಮದ ಅತಿಥಿಯಾಗಿ ಭಾಗವಹಿದ್ದ ಪತ್ರಕರ್ತರಾದ ಚಂದ್ರಶೇಖರ್ ಪತ್ತಾರ್ ಪ್ರಾಸ್ತಾವಿಕವಾಗಿ ಮಾತನಾಡುತ್ತ, ಗ್ರಾಮೀಣ ವಿದ್ಯಾರ್ಥಿಗಳ ನಾಡಿ ಮಿಡಿತ ಚೆನ್ನಾಗಿ ಅರಿತಿರುವ ಸಂಸ್ಥೆಯ ಸಂಸ್ಥಾಪಕರಾದ ಶಶಿಕಾಂತ ಭಾಗೋಜಿಯವರು, ನುರಿತ ಶಿಕ್ಷಕ ವೃಂದದೊಂದಿಗೆ, ಆಂಗ್ಲ ಮಾದ್ಯಮದಲ್ಲಿ ಗುಣ ಮಟ್ಟದ ಶಿಕ್ಷಣ ಒದಗಿಸುತ್ತಿದ್ದು, ಮೂಡಲಗಿ ಹಾಗೂ ಸುತ್ತ ಮುತ್ತಲಿನ ಪಾಲಕರು ಇದರ ಪ್ರಯೋಜನ ಪಡೆದು ತಮ್ಮ ಮಕ್ಕಳ ಉಜ್ವಲ ಭವಿಷ್ಯ ರೂಪಿಸುವಲ್ಲಿ ಕಾರಣೀಕರ್ತರಾಗಬೇಕೆಂದು ಹೇಳಿದರು. ಕಾರ್ಯಕ್ರಮದಲ್ಲಿ
ಮುಖ್ಯೋಪಾಧ್ಯಾಯರಾದ ಬಾಳೇಶ ನಾಯಕ್ ಮಾತನಾಡಿ ಶಾಲೆಯ ವಾರ್ಷಿಕ ವರದಿ ವಾಚನ ಮಂಡಿಸಿದರು.ನಂತರ ಮಕ್ಕಳಿಗೆ ಪ್ರಶಸ್ತಿಗಳನ್ನು ವಿತರಿಸಿ, ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
ಈ ಸಂಧರ್ಭದಲ್ಲಿ ಸಂಸ್ಥೆಯ ಟ್ರಸ್ಟಿಗಳಾದ ಸಂಗೀತಾ ಶ ಬಾಗೋಜಿ, ಸೂರಜ ಶ ಭಾಗೋಜಿ ಸೇರಿದಂತೆ ಅನೇಕ ವಿದ್ಯಾರ್ಥಿಗಳು ಹಾಗೂ ಪಾಲಕರು ಉಪಸ್ಥಿತರಿದ್ದರು. ಸಹ ಶಿಕ್ಷಕರಾದ ವಿದ್ಯಾ ಢವಳೇಶ್ವರ, ಐಶ್ವರ್ಯ ಕುಲಕರ್ಣಿ, ಮಹಾದೇವಿ ಸುಳ್ಳನವರ, ಅಮಿತ ಕಾಂಬಳೆ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.