spot_img
spot_img

ಮೇವು ಬ್ಯಾಂಕ್ ಸ್ಥಾಪಿಸಲು ಜಿಲ್ಲಾ ರೈತ ಹಿತರಕ್ಷಣಾ ವೇದಿಕೆಯಿಂದ ಮನವಿ

Must Read

spot_img
- Advertisement -

ಮೂಡಲಗಿ ತಾಲೂಕಿನಲ್ಲಿ ಮಳೆ ಅಭಾವದಿಂದ ಜಾನುವಾರುಗಳಿಗೆ ಮೇವಿನ ಕೊರತೆ

ಮೂಡಲಗಿ – ಮಳೆಯ ಕೊರತೆಯಿಂದ ಮೂಡಲಗಿ ತಾಲೂಕಿನಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಉಂಟಾಗಿದ್ದು ಶೀಘ್ರದಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಬೇಕೆಂದು
ಪಟ್ಟಣದ ತಹಶೀಲ್ದಾರರ ಕಛೇರಿಗೆ ಕರ್ನಾಟಕ  ರೈತರ ಹಿತರಕ್ಷಣಾ ವೇದಿಕೆಯ ವತಿಯಿಂದ ಜಿಲ್ಲಾಧಿಕಾರಿಗಳಿಗೆ  ಶಿರಸ್ತೆದಾರ ತಾಲೂಕಾಧಿಕಾರಿ ಪರಶುರಾಮ ನಾಯಿಕ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಮಳೆಯ ಅಭಾವದಿಂದ ಸರಿಯಾದ ಸಮಯದಲ್ಲಿ ಬೆಳೆ ಬಾರದೆ, ಸಾಕು ಪ್ರಾಣಿಗಳಿಗೆ ಮೇವು ಸಿಗುತ್ತಿಲ್ಲ ಮತ್ತು ರೈತರು ಕಂಗಾಲಾಗಿದ್ದಾರೆ. ಒಂದು ಕಡೆ ನೀರಿನ ಕೊರತೆ ಮತ್ತೊಂದೆಡೆ ಆಹಾರ ಸಮಸ್ಯೆಯಿಂದ ಜಾನುವಾರು ಸಾಕುವದು ಕಷ್ಟವಾಗಿದೆ. ಈ ಕೂಡಲೆ ಮೂಡಲಗಿ ತಾಲೂಕಿನಲ್ಲಿ ಮೇವು ಬ್ಯಾಂಕ್ ಸ್ಥಾಪಿಸಬೇಕು ಮತ್ತು ಬೆಳಗಾವಿ ಜಿಲ್ಲಾದ್ಯಂತ ಮೇವಿನ ಕೊರತೆಯೂ ಇದೆ. ಜಿಲ್ಲೆಯ ಎಲ್ಲ ತಾಲೂಕಿನಲ್ಲಿ ಪ್ರಾಣಿಗಳಿಗೆ ಮೇವಿನ  ವ್ಯವಸ್ಥೆ ಆಗಬೇಕು.ಇದರಿಂದ ಸ್ವಲ್ಪವಾದ್ರೂ ಜಾನುವಾರುಗಳಿಗೆ  ಸಹಾಯ ಆಗುತ್ತದೆ ಎಂದು ಹಿತರಕ್ಷಣಾ ವೇದಿಕೆಯ ಜಿಲ್ಲಾ ಅಧ್ಯಕ್ಷ ಸುರೇಶ ನಾಯಕ ಅವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ನಮ್ಮ ಈ ಮನವಿಗೆ ಸ್ಪಂದಿಸಿ ಮೂರು-ನಾಲ್ಕು ದಿನಗಳಲ್ಲಿ ಮೇವು ಬ್ಯಾಂಕ್ ಸ್ಥಾಪಿಸಬೇಕು ಇಲ್ಲದಿದ್ದರೆ ನಮ್ಮ ಮೂಡಲಗಿ ತಾಲೂಕಿನ ಎಲ್ಲ ರೈತರು ಕೂಡಿಕೊಂಡು ದನಗಳನ್ನು/ಜಾನುವಾರುಗಳನ್ನು ತೆಗೆದುಕೊಂಡು ತಹಶಿಲ್ದಾರರ ಕಾರ್ಯಾಲಯ ಎದುರಿಗಿನ ಆವರಣದಲ್ಲಿ ತಂದು ಉಗ್ರವಾದ ಹೋರಾಟ ಮಾಡಲಾಗುತ್ತದೆ ಎಚ್ಚರಿಕೆ ನೀಡಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ರೈತರ ಹಿತರಕ್ಷಣಾ ವೇದಿಕೆಯ ಬೆಳಗಾವಿ ಜಿಲ್ಲಾ ಸಂಚಾಲಕರು ಪಾರೀಶ್ ಉಪ್ಪಿನ, ಜಿಲ್ಲಾ ಕಾರ್ಯದರ್ಶಿ ಅಜಪ್ಪ ದಾಗನಾಯ್ಕರ, ಜಿಲ್ಲಾ ಸಂಯೋಜಕರು ಸಂಗಪ್ಪ ಹಡಪದ, ಮೂಡಲಗಿ ತಾಲೂಕಾಧ್ಯಕ್ಷ ಭೀಮಶಿ ರೊಡ್ಡನ್ನವರ, ಸವದತ್ತಿ ತಾಲೂಕಾಧ್ಯಕ್ಷ ಪ್ರಕಾಶ ಸತ್ಯನಾಯ್ಕರ, ತಾಲೂಕಾ ಗೌರವಾಧ್ಯಕ್ಷ ಮಹಾದೇವ ಬಂಗೆನ್ನವರ,ಬಸು ಮಿರ್ಜಿ, ಲಕ್ಕಪ್ಪ ಕಾಸ್ತಾರ, ಮಲ್ಲಪ್ಪ ಕುಂಬಳ್ಳಿ, ಶಿವಪ್ಪ ಪಾರಬಕವಿ, ಹಾಲಪ್ಪ ಕುಕಡಿ, ಶಂಕರ ಸರವಿ, ಬಸಪ್ಪ ಕಾಸರ, ಉಮೇಶ ದಂಡಪ್ಪನ್ನವರ, ಪ್ರಕಾಶ ಕಾಲತ್ತಿಪ್ಪಿ, ಅರ್ಜುನ ಮಾದಗೌಡರ, ಮಲ್ಲಪ್ಪ ಜುಂಜುರವಾಡ, ಈರಪ್ಪ ವಾಳದ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಸ್ ಎಂ ಕೃಷ್ಣ ನಿಧನಕ್ಕೆ ಕಡಾಡಿ ಸಂತಾಪ

ಮೂಡಲಗಿ:ಮಾಜಿ ಮುಖ್ಯಮಂತ್ರಿಗಳು, ಮಾಜಿ ಕೇಂದ್ರ ಸಚಿವರು, ರಾಜ್ಯಪಾಲರೂ ಸೇರಿದಂತೆ ಅನೇಕ ಉನ್ನತ ಹುದ್ದೆಗಳಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಿ ರಾಜ್ಯಕ್ಕೆ ಹಾಗೂ ದೇಶಕ್ಕೆ ತಮ್ಮದೇ ಆದ ಅಪಾರ...
- Advertisement -

More Articles Like This

- Advertisement -
close
error: Content is protected !!
Join WhatsApp Group