ಯಶಸ್ವಿ ಅಪ್ಪ ಕವಿಗೋಷ್ಠಿ – ಸಂತೋಷ್ ಬಿದರಗಡ್ಡೆ ಅಭಿಮತ

Must Read

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...

ಆದರ್ಶ ವಿದ್ಯಾಲಯದ ಪ್ರಕಟಣೆ

ಸಿಂದಗಿ: ಆದರ್ಶ ವಿದ್ಯಾಲಯಕ್ಕೆ 2021-22ನೇ ಸಾಲಿನ 6ನೇ ತರಗತಿಗೆ ದಾಖಲಾತಿ ಪಡೆಯಲು ನಡೆಸುವ ಪ್ರವೇಶ ಪರೀಕ್ಷೆಯು ಜುಲೈ 27 ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ...

ಜಾನುವಾರು ವೈದ್ಯ ಸಿಬ್ಬಂದಿ ಒದಗಿಸಲು ಆಗ್ರಹ

ಸಿಂದಗಿ: ತಾಲೂಕಿನ ಗೋಲಗೇರಿ ಗ್ರಾಮದ ಪಶು ಆಸ್ಪತ್ರೆಗೆ ವೈದ್ಯಾಧಿಕಾರಿ ಸೇರಿದಂತೆ ಸಿಬ್ಬಂದಿ ನೇಮಕ ಮಾಡುವಂತೆ ಆಗ್ರಹಿಸಿ ಕರ್ನಾಟಕ ಟಿಪ್ಪು ಸುಲ್ತಾನ ಮಹಾವೇದಿಕೆ ಕಾರ್ಯಕರ್ತರು ಮತ್ತು ರೈತರು...

ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆ ಜಿಲ್ಲಾ ಘಟಕ ಹಾವೇರಿ ವತಿಯಿಂದ ಗೂಗಲ್ ಮೀಟ್ ಮೂಲಕ ರಾಜ್ಯಮಟ್ಟದ ಅಪ್ಪ ಕವಿಗೋಷ್ಠಿ ಸತತ ಎರಡು ದಿನಗಳ ಕಾಲ ಅತ್ಯಂತ ಯಶಸ್ವಿಯಾಗಿ ಮೂಡಿಬಂದಿತು‌.

ರಾಜ್ಯಾದ್ಯಂತ ೮೦ಕ್ಕೂ ಹೆಚ್ಚು ಸಾಹಿತಿಗಳು ಭಾಗವಹಿಸಿದ್ದು ಕಾರ್ಯಕ್ರಮ ತುಂಬಾ ವರ್ಣರಂಜಿತವಾಗಿ ಮೂಡಿ ಬಂದಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂಸ್ಥಾಪಕಾಧ್ಯಕ್ಷರಾದ ಶ್ರೀಮತಿ ಗಿರಿಜಾ ಮಾಲಿ ಪಾಟೀಲ, ಅಪ್ಪ ಎನ್ನುವ ಸಂಸಾರದ ನೊಗಹೊತ್ತ ಜೀವದ ಬೆವರು ನಮಗೆ ಕಾಣದು. ಕಣ್ಣೀರು ಸುರಿಸುವ ಅಮ್ಮನಷ್ಟೆ ಶ್ರಮವಹಿಸಿರುತ್ತಾನೆ. ಅತ್ತಾಗ ಬಿಗಿದಪ್ಪಿ ಬಿದ್ದಾಗ ಮೇಲೆತ್ತುವ ಅಪ್ಪನ ಕೋಪವೂ ಸಹ ಬದುಕಿನಲ್ಲಿ ತುಂಬಾ ಸಕಾರಾತ್ಮಕವಾದದ್ದು. ಅಪ್ಪಂದಿರ ದಿನ ಆಚರಣೆಗೆ ಬರಲು ಕಾರಣ ಯುನೈಟೆಡ್ ಸ್ಟೇಟ್ಸನಲ್ಲಿ ಒಂದು ಬಾರಿ ಭೀಕರ ಅಪಘಾತ ಸಂಭವಿಸಿದಾಗ ಆ ಅಪಘಾತದಲ್ಲಿ ಬಹಳಷ್ಟು ಜನ ಪುರುಷರು ಮರಣವನ್ನು ಅಪ್ಪುತ್ತಾರೆ ಇದರಲ್ಲಿ ಒಬ್ಬರ ಮಗಳು ಗ್ರೇಸ್ ಗೋಲ್ಡನ್ ಕ್ಲೆಟೆನ್ ಎಂಬುವವಳು ತನ್ನ ತಂದೆಯ ಮರಣಕ್ಕೆ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ ೨೦ ರಂದು ಈ ದಿನವನ್ನು ಅಪ್ಪಂದಿರ ದಿನವಾಗಿ ಆಚರಿಸಲು ಆರಂಭಿಸಿದಳು ಈ ಸಂಪ್ರದಾಯ ಹಾಗೆ ಮುಂದುವರೆದು ಅಲ್ಲಿನ ಅಧ್ಯಕ್ಷರಾದ ರಿಚರ್ಡ್ ನಿಕ್ಸನ್ ಅವರು ಈ ದಿನವನ್ನು ವಿಶ್ವ ತಂದೆಯರ ದಿನವನ್ನಾಗಿ ಆಚರಿಸಲು ಘೋಷಿಸಿದರು ಎಂದು ನುಡಿದರು.

- Advertisement -

ಪ್ರತಿಯೊಬ್ಬರೂ ಬಾಲ್ಯದಲ್ಲಿ ತಮ್ಮನ್ನು ಪ್ರೀತಿಯಿಂದ ಸಾಕಿದ ತಂದೆಯನ್ನು ಮುಪ್ಪಿನಾವಸ್ಥೆಯಲ್ಲಿ ಮರೆಯದಿರಲಿ ಎಂದು ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನು ನುಡಿದ ಡಾ.ಮಾರುತಿ ಶಿಡ್ಲಾಪುರ್ ಸರ್ ಅವರು ಉಣಬಡಿಸಿದರು.

ಕಾರ್ಯಕ್ರಮದ ಸಂಘಟನಾ ಆಶಯ ನುಡಿಗಳನ್ನಾಡಿದ ಸುರೇಶ್ ಮಲ್ಲಾಡದ್ ಅವರು ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯನ್ನು ನಿರಂತರವಾದ ಕಾರ್ಯ ಚಟುವಟಿಕೆಗಳ ಮೂಲಕ ಹಾವೇರಿ ಜಿಲ್ಲೆಯಲ್ಲಿ ಮುನ್ನೆಡೆಸುವ ಮೂಲಕ ಕ್ರಿಯಾಶೀಲವಾಗಿ ಕೊಂಡೊಯ್ಯುವ ಭರವಸೆಯನ್ನು ವ್ಯಕ್ತ ಪಡಿಸಿದರು.

ಶಿಕ್ಷಕ ಸಾಹಿತಿ, ರಾಜ್ಯ ಸಂಚಾಲಕರೂ ಉತ್ತಮ ಸಂಘಟಕರೂ ಆದ ಸಂತೋಷ್ ಬಿದರಗಡ್ಡೆ ಅವರು ರಾಜ್ಯಾಧ್ಯಕ್ಷರ , ಗೌರವಾಧ್ಯಕ್ಷರಾದ ಮಾರುತಿ ಶಿಡ್ಲಾಪೂರ ಸಮಕ್ಷಮದಲ್ಲಿ ಹಾವೇರಿ ಜಿಲ್ಲಾ ಘಟಕ ಹಾಗೂ ಎಲ್ಲಾ ತಾಲೂಕುಗಳ ಅಧ್ಯಕ್ಷರ ನೇಮಕ ಯಶಸ್ವಿಯಾಗಿದೆ ಎಂದರು.

ಕಾರ್ಯಕ್ರಮದ ಸರ್ವಾಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತೋಷ್ ಬಿದರಗಡ್ಡೆ ಅವರು ತಮ್ಮ ಬಾಲ್ಯದ ಅಪ್ಪನ ಪ್ರೀತಿಯನ್ನು ಭಾವನಾತ್ಮಕವಾಗಿ ನೆನೆಯುತ್ತಾ, ಪ್ರತಿಯೊಬ್ಬರ ಬದುಕಿಗೆ ಅಪ್ಪ ಅನಿವಾರ್ಯ ಪಾತ್ರವಾಗಿದ್ದು ಚಿಕ್ಕ ವಯಸ್ಸಿಗೆ ತಮ್ಮ ತಂದೆಯನ್ನು ಕಳೆದುಕೊಂಡು ಕೊರತೆ ಅನುಭವಿಸಿದ ಬಗೆಯನ್ನು ತುಂಬಾ ಮಾರ್ಮಿಕವಾಗಿ ವಿವರಿಸಿದರು ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಯು ಸಕ್ರಿಯವಾಗಿ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಬಗೆ ಹಾಗೂ ಸಹೋದರಿ,ಸ್ನೇಹಿತೆ ಗಿರಿಜಾ ಮಾಲಿ ಪಾಟೀಲ ಒಬ್ಬ ಮಹಿಳೆಯಾಗಿ ದಕ್ಷತೆಯಿಂದ ಕೊಂಡೊಯ್ಯುತ್ತಿರುವ ಬಗೆಗೆ ಪ್ರಶಂಸೆ ವ್ಯಕ್ತಪಡಿಸಿದರು ಹಾಗೂ ಈ ದಿನದ ಅಪ್ಪನನ್ನು ಕುರಿತಾದ ಕವಿಗೋಷ್ಠಿ ನಮ್ಮೆಲ್ಲರನ್ನೂ ಭಾವನಾ ಲೋಕದಲ್ಲಿ ತೇಲಿಸಿತು ಎಂದರು.

ನಿಜಕ್ಕೂ ಅಪ್ಪ ಕವಿಗೋಷ್ಠಿಯಲ್ಲಿ ಭಾಗವಹಿಸಿದ ಹಲವು ಕವಿಗಳು ಕವಿತೆ ಓದುತ್ತಲೆ ಕಳೆದುಕೊಂಡ ತಂದೆಯ ಪ್ರೀತಿಯನ್ನು ನೆನಪಿಸಿಕೊಂಡು ಕಣ್ಣೀರಾಗಿದ್ದಂತು ಸತ್ಯ. ಎಲ್ಲರನ್ನೂ ಭಾವನಾ ಲೋಕದಲ್ಲಿ ತೇಲಿಸಿದ ಈ ಕವಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಮತಿ ಪಾರ್ವಾತಿ ಕಾಶಿಕರ್ ಅವರು, ಸಾಹಿತ್ಯ ವೇದಿಕೆಗಳ ಸಕಾರಾತ್ಮಕ ಚಟುವಟಿಕೆಗಳನ್ನು ನೆನೆಯುತ್ತಾ, ಇತ್ತೀಚೆಗೆ ಎಲ್ಲಾ ಸಾಹಿತ್ಯ ವೇದಿಕೆಗಳೂ ಯುವ ಬರಹಗಾರರನ್ನು ಹುರಿದುಂಬಿಸಿ ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಬರೆಯಲು ಪ್ರೇರಣದಾಯಕವಾಗಿ ಕೆಲಸ ನಿರ್ವಹಿಸುತ್ತಿರುವುದು ಶ್ಲಾಘನೀಯ. ವೇದಿಕೆ ಯಾವುದಾದರೇನು ಗುರಿ ಒಂದೆ ಸಾಹಿತ್ಯ ಸೇವೆಗೆ ನಿಂತ ಎಲ್ಲಾ ವೇದಿಕೆಗಳಿಗೂ ಶ್ರೀ ಸಿದ್ದೇಶ್ವರರ ಆಶಿರ್ವಾದ ಇದೆ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಂಗಳಗಿ ದಾವಲಮಲೀಕ ನಿರ್ವಹಿಸಿ, ದೀಪಾ ಕೊಟ್ಟದ ನಿರೂಪಿಸಿದರು. ಅತಿಥಿಗಳಾಗಿ ಶ್ರೀಮತಿ ಪುಷ್ಪಾ , ಹಾನಗಲ್ ತಾಲೂಕಾಧ್ಯಕ್ಷರಾದ ಬಸವಣ್ಣಯ್ಯ ಶಾಸ್ತ್ರಿ ವೆಂಕಟಾಪುರಮಠ, ಹಾವೇರಿ ತಾಲೂಕು ಅಧ್ಯಕ್ಷರಾದ ಮಮತಾ ಪೂಜಾರಿ, ಶಿಗ್ಗಾಂವಿ ತಾಲೂಕಿನ ಅಧ್ಯಕ್ಷರಾದ ನಾಗಪ್ಪ ಬೆಂತೂರ್, ರಾಣೆಬೆನ್ನೂರು ತಾಲ್ಲೂಕಿನ ಅಧ್ಯಕ್ಷರಾದ ಶ್ರೀಮತಿ ಲಕ್ಷ್ಮೀಯವರು, ಸವಣೂರು ತಾಲೂಕು ಅಧ್ಯಕ್ಷರು ಶ್ರೀ ಸಿ.ಎಸ್.ಪಾಟೀಲ್ ಅವರು ಹಿರೆಕೆರೂರು ಅಧ್ಯಕ್ಷರಾದ ಶ್ರೀಮತಿ ಜಯಮ್ಮ ಕೆರೂರು ಅವರು ಉಪಸ್ಥಿತರಿದ್ದರು.

ಡಾ.ಸುರೇಶ್ ನೆಗಳಗುಳಿಯವರಿಂದ ಪ್ರಾರಂಭವಾದ ಕವಿಗೋಷ್ಠಿಯಲ್ಲಿ ಮೈಸೂರಿನ ಶೋಭಾ ನಾಗಭೂಷಣ, ಭಾಗ್ಯಗಿರೀಶ್ ಹೊಸದುರ್ಗ, ಗೀತಾ ಪೂಜಾರ, ಪ್ರಶಾಂತ್ ದೈವಜ್ಞ, ರಶ್ಮಿ ಸುನೀಲ್ ಮುಂತಾದ ೮೦ ಕ್ಕೂ ಹೆಚ್ಚು ಕವಿ ಮನಸುಗಳು ಕಾವ್ಯ ವಾಚನ ಮಾಡಿದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶಿಕ್ಷಕನ ವೃತ್ತಿಯಲ್ಲಿ ಅಧ್ಯಯನ, ಹೊಸ ಆಲೋಚನಾ ಕ್ರಮ, ಕ್ರಿಯಾಶೀಲ ಬೋಧನೆ ಅಗತ್ಯ – ಡಾ. ಅಣ್ಣಾಸಾಹೇಬ ಎಂ. ಗುರವ

ಸವದತ್ತಿ: ಆವಿಷ್ಕಾರ, ಸೃಜನಶೀಲತೆ ಮತ್ತು ಶಿಕ್ಷಣ ಈ ಇವುಗಳಲ್ಲಿ ಒಂದಕ್ಕೊಂದು ಸಂಬಂಧವಿದೆ. ವಿದ್ಯಾರ್ಥಿಗಳನ್ನು ಕಲಿಕೆಯಲ್ಲಿ ಆಸಕ್ತಿ ಮೂಡುವಂತೆ ಮಾಡಲು ಶಿಕ್ಷಕರು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಪಠ್ಯವನ್ನು...
- Advertisement -

More Articles Like This

- Advertisement -
close
error: Content is protected !!