spot_img
spot_img

ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿರವರಿಗೆ ‘ವಿವೇಕಶ್ರೀ’ ಪ್ರಶಸ್ತಿ ಪ್ರದಾನ

Must Read

- Advertisement -

ಬೆಂಗಳೂರಿನ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವೇಕ ಚೇತನ ಮಾಸಪತ್ರಿಕೆ ಸಹಯೋಗದಲ್ಲಿ ಗೋವಿಂದರಾಜನಗರದ ಯೋಗಾನಂದ ಪ್ರಾರ್ಥನಾ ಮಂದಿರದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ , ಮಹಾತ್ಮ ಗಾಂಧಿ ಪುಣ್ಯಸ್ಮರಣೆ ಅಂಗವಾಗಿ ಪ್ರತಿಭೋತ್ಸವ ಸಮಾರಂಭ ಆಯೋಜಿಸಿತ್ತು.

ಸ್ಥಳೀಯ ಮುಖಂಡ , ಯುವಜನ ಸೇವಾ ಇಲಾಖೆಯ ನಿವೃತ್ತ ಉಪನಿರ್ದೇಶಕ ಆರ್.ಎನ್.ಸ್ವಾಮಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತ್ರಿವಿಧ ದಾಸೋಹಿ ಸಿದ್ಧಗಂಗೆಯ ಶಕಪುರುಷ ಡಾ.ಶಿವಕುಮಾರಸ್ವಾಮಿಗಳ ಪುಣ್ಯ ಸ್ಮರಣೆ ನಿಮಿತ್ತ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.

- Advertisement -

ಹಿರಿಯ ಪತ್ರಕರ್ತ , ಸಾಹಿತಿ ಜಾಣಗೆರೆ ವೆಂಕಟರಾಮಯ್ಯ ವಿವೇಕ ಚೇತನ ಮಾಸಿಕದ ವಿಶೇಷ ಸಂಚಿಕೆ ಬಿಡುಗೊಡೆಗೊಳಿಸಿ ಮಾತನಾಡುತ್ತ ಯುವಜನತೆಗೆ ಆದರ್ಶಪ್ರಾಯರೂ , ಭವ್ಯಭಾರತದ ಕೀರ್ತಿಯನ್ನು ವಿಶ್ವದೆಲ್ಲೆಡೆ ಪಸರಿಸಿದ ಸ್ವಾಮಿ ವಿವೇಕಾನಂದ ಮತ್ತು ದೇಶದ ಜನತೆಗೆ ಪರಾಕ್ರಮದ ಶೌರ್ಯ ಸಾರಿದ ನೇತಾಜಿ ಸುಭಾಷ್‍ಚಂದ್ರ ಬೋಸ್ ಜಯಂತಿಯನ್ನು ಬಹಳ ಅರ್ಥಪೂರ್ಣವಾಗಿ ಕಳೆದ 21 ವರ್ಷಗಳಿಂದ ಪ್ರತಿಭೋತ್ಸವದ ಮೂಲಕ ಆಚರಿಸುತ್ತಿರುವ ವಿವೇಕ ಚೇತನ ಚಾರಿಟೇಬಲ್ ಟ್ರಸ್ಟ್‍ನವರ ಕಾರ್ಯ ಶ್ಲಾಘನೀಯ ಎಂದರು.

ಸಂಗಮೇಶ್ವರ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಸೋ. ಪಾಲನೇತ್ರ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸ್ಕೃತಿ ಚಿಂತಕ ಮತ್ತು ಅಂಕಣಕಾರ ಡಾ. ಗುರುರಾಜ ಪೋಶೆಟ್ಟಿಹಳ್ಳಿ ರವರಿಗೆ ಸಾಹಿತ್ಯ ಕ್ಷೇತ್ರದ ವಿಶೇಷ ಸಾಧನೆಯನ್ನು ಗುರುತಿಸಿ ಈ ಸಾಲಿನ ‘ವಿವೇಕಶ್ರೀ’ ಪುರಸ್ಕಾರ ನೀಡಿ ಗೌರವಿಸಲಾಯಿತು.

ಇದೇ ಸಂದರ್ಭದಲ್ಲಿ ಬಸವರಾಜು ಹುರಕಡ್ಲಿ , ನಂ.ವಿಜಯಕುಮಾರ್ , ಡಾ.ನರಸಿಂಹಮೂರ್ತಿ ಮತ್ತು ಯುವ ಲೇಖಕಿ ಸುಮ ಚಂದ್ರಶೇಖರ್‍ ರವರನ್ನು ಸನ್ಮಾನಿಸಲಾಯಿತು. 8 ಮಂದಿ ಶಿಕ್ಷಕರಿಗೆ ‘ ಗುರುಶ್ರೀ’ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು.

- Advertisement -

ಬ್ರೈನ್ ಸ್ಟಾಮಿಂಗ್ ಸೆಷನ್ಸ್ ವತಿಯಿಂದ ವಿವೇಕಾನಂದ ವಿಚಾರಗೋಷ್ಠಿಯನ್ನು ಆನ್‍ಲೈನ್ ನಲ್ಲಿ ನಡೆಸಿದ ಜಗದೀಶ್ ಎಂ. ,ಸೌಜನ್ಯ ಪೂಜಾರಿ ಮತ್ತು ಶ್ರೇಯಾಂಕ್ ಮನೋಜ್ ರವನ್ನು ಗೌರವಿಸಿಲಾಯಿತು . ವೇದಿಕೆಯಲ್ಲಿ ಪತ್ರಕರ್ತ ಎಂ.ರಾಮು, ನಿರ್ವಾಹಕ ಟ್ರಸ್ಟೀ ಸಿ.ಮಲ್ಲಿಕಾರ್ಜುನ , ಸಂಪಾದಕ ರವಿದಾಸ ಬಿಂಡಗನವಿಲೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಮಹದೇವಮ್ಮ ಎಸ್. , ಎಚ್.ಎಸ್. ರಮೇಶ್ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ !

ಮೂಡಲಗಿ - ಎಮ್ಮೆ ಮಾರಿ ಬಂದ ಹಣ ಕೇಳಿದ್ದಕ್ಕೆ ಕುಪಿತಗೊಂಡ ವ್ಯಕ್ತಿಯೊಬ್ಬ ಕುಡಿತದ ನಶೆಯಲ್ಲಿ ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಜರುಗಿದೆ. ತಾಲೂಕಿನ ಫುಲಗಡ್ಡಿ...
- Advertisement -

More Articles Like This

- Advertisement -
close
error: Content is protected !!
Join WhatsApp Group