ಹಾಸ್ಯ ಕವನಗಳು

Must Read

ಇಂಥ ಗಂಡನೊಲ್ಲೆ

ನಾನು‌ ಒಲ್ಲೆ ಒಲ್ಲೆನವ್ವ
ಇಂಥ ಗಂಡನೊಲ್ಲೆನವ್ವ

ಕಾಗಿಯಂಥ ಬಣ್ಣದವನ
ಗೂಗಿಯಂಥ ಮಾರಿಯವನ
ಕಡ್ಡಿಯಂಥ ಕಾಲಿನವನ
ಅಡ್ಡಬಡ್ಡ ನಡೆಯುವವನ

ಜೋತುಬಿದ್ದ ಮೀಸೆಯವನ
ಓತಿನಂಥ ಗಡ್ಡದವನ
ಕುಂಬ್ಳಕಾಯಿ ಹೊಟ್ಟೆಯವನ
ಸಿಂಬ್ಳ ಸುರಿವ ಸೊಳ್ಳೆಯವನ

ಮೊರದಗಲ ಕರ್ಣದವನ
ಊರಗಲ ಬಾಯಿಯವನ
ಉಳ್ಳಗಡ್ಡಿ ಕಣ್ಣಿನವನ
ಬಳ್ಳೊಳ್ಳಿ ಹಲ್ಲಿನವನ

ಬದ್ನಿಕಾಯಿ ಮೂಗಿನವನ
ತೊದ್ಲು ಮಾತನಾಡುವವನ
ಕಳ್ಳನೋಟ ಬೀರುವವನ
ಸುಳ್ಳುಚಾಡಿ ಹೇಳುವವನ

ಎನ್.ಶರಣಪ್ಪ ಮೆಟ್ರಿ


ಇಂಥ ಹೆಣ್ತಿನೊಲ್ಲೆ

ನಾನು‌ ಒಲ್ಲೆ ಒಲ್ಲೆನಪ್ಪ
ಇಂಥ ಹೆಣ್ತಿನೊಲ್ಲೆನಪ್ಪ

ಇದ್ಲಿಯಂಥ ಬಣ್ಣದವಳ
ಗುದ್ಲಿಯಂಥ ಮೂಗಿನವಳ
ಕಂಭದಂಥ ಕಾಲಿನವಳ
ಕುಂಭದಂಥ ಕುಚಗಳವಳ

ಬೊಡ್ಡೆಗಾತ್ರ ನಡುವಿನವಳ
ದೊಡ್ಡ ಆನೆಗಾತ್ರದವಳ
ಮುಂದಬಂದ ಹಲ್ಲಿನವಳ
ಅಂದಚಂದ ಇಲ್ಲದವಳ

ಹಂಡೆದಂಥ ಹೊಟ್ಟೆಯವಳ
ಗುಂಡುಕಲ್ಲು‌ಮಂಡೆಯವಳ
ಸ್ವಾರಿಯಂಥ ಮಾರಿಯವಳ
ಚೌರಿಕೂದ್ಲ ಹೆರಳಿನವಳ

ಗೂಗಿಯಂಥ ಕಣ್ಣಿನವಳ
ಕಾಗಿಯಂತೆ ಕೂಗುವವಳ
ಕೊಬ್ರಿಬಟ್ಲ ಕರ್ಣದವಳ
ಡಬ್ರಿಯಂಥ ಬಾಯಿಯವಳ

ಎನ್.ಶರಣಪ್ಪ ಮೆಟ್ರಿ


ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ

ಈಗಿನ ಕನ್ಯಾ ಹೇಗಿರಬೇಕು
ಪ್ಯ‍ಾಶನದಾಗ ಮುಂದಿರಬೇಕು
ಕಡ್ಡಿಲೆ ಬರದಂಗ ಕನ್ಯಾ ಇರಬೇಕು
ಜೋಡಿಲೆ ಹೊರಟರೆ ಜನ ನೋಡ್ತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೧

ಬಟ್ಟನ ಮಾರಿ ಹೊಂದಿರಬೇಕು
ಚಂದ್ರನ ಹಾಗೆ ಬೆಳ್ಳಗಿರಬೇಕು
ಮೂಗಿಗೆ ನತ್ತು ಇಟ್ಟಿರಬೇಕು
ಪಳ ಪಳ ನತ್ತು ಒಳಿತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೨

ಮಾರುದ್ದ ಕೂದಲು ಹೊಂದಿರಬೇಕು
ಚನ್ನಾಗಿ ತಲೆಯನ್ನು ಬಾಚ್ತಿರಬೇಕು
ತುರುಬಿಗೆ ಮಲ್ಲಿಗೆ ಮುಡಿತ್ತಿರಬೇಕು
ಘಮ ಘಮ ವಾಸನೆ ಬರುತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೩

ತೆಳ್ಳನ ಬೆಳ್ಳನ ಹುಡುಗಿ ಇರಬೇಕು
ಮೈಸೂರ ಗೊಂಬೆ ಹಾಗೆ ಕಾಣ್ತಿರಬೇಕು
ಆಕಿ ಇಲಕಲ್ಲ ಸಿರಿ ಹುಡುತ್ತಿರಬೇಕು
ಕರ್ನಾಟಕ ಸಂಸ್ಕೃತಿ ಪಡೆದಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೪

ತುಟಿಗೆ ಬಣ್ಣ ಬಡಿದಿರಬೇಕು
ಕಣ್ಣಿಗೆ ಕಾಡಿಗೆ ಹಚ್ಚಿರಬೇಕು
ಹಣಿಗೆ ಕುಂಕುಮ ಇಟ್ಟಿರಬೇಕು
ನೋಡಿದ್ರೆ ಕಣ್ಣು ಕುಕ್ತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೫

ಮಾರಿಗೆ ಪೌಡರ್ ಹಚ್ಚಿರಬೇಕು
ಘಮ ಘಮ ಅಂತಾ ನಾರ್ತಿರಬೇಕು
ದಾಳಂಬ್ರಿ ಬೀಜದಂತೆ ಹಲ್ಲಿರಬೇಕು
ಸಕ್ಕತ್ ನನ್ನ ಮುಂದ ನಗುತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೬

ಕೋಗಿಲೆ ಯಂತ ಧ್ವನಿ ಇರಬೇಕು
ಬೆಲ್ಲದಂತ ನುಡಿ ನುಡಿತಿರಬೇಕು
ರುಚಿ ರುಚಿ ಅಡಿಗೆ ಮಾಡ್ತಿರಬೇಕು
ಅತ್ತೆ ಮಾವರನ್ನು ಚನ್ನಾಗಿ ನೋಡ್ತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೭

ಉನ್ನತ ಶಿಕ್ಷಣ ಪಡೆದಿರಬೇಕು
ಸರಕಾರಿ ಉದ್ಯೋಗ ಮಾಡ್ತಿರಬೇಕು
ಮಕ್ಕಳಿಗೆ ತಿದ್ದಿ-ಬುದ್ದಿ ಹೇಳ್ತಿರಬೇಕು
ತಿಂಗಳ ತಿಂಗಳ ವೇತನ ಬರುತ್ತಿರಬೇಕು
ಯಪ್ಪಾ ನನಗಾ ಇಂತಾ ಹುಡುಗಿನ ಬೇಕೊ..!!೦೮

ಮದ್ದಾನೆಪ್ಪ ಹೆಚ್ ಮನ್ನಾಪೂರ
ಸಾ॥ ಕಾಮನೂರು.ತಾ॥ಜಿ॥ ಕೊಪ್ಪಳ
೯೭೪೦೨೧೬೯೭೩,೬೩೬೨೨೯೪೬೮೮.

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group