spot_img
spot_img

ಇಂದು ಖ್ಯಾತ ಸಾಹಿತಿ ಪ್ರೊ ಜೆ ಆರ್ ಲಕ್ಷ್ಣಣರಾವ್ ಜನಿಸಿದ ದಿನ

Must Read

spot_img
- Advertisement -

ಪ್ರೊ. ಜೆ. ಆರ್. ಲಕ್ಷ್ಮಣ್ ರಾವ್, ಎಂದು ಸಾಹಿತ್ಯಲೋಕದಲ್ಲಿ ಸುಪ್ರಸಿದ್ದರಾದ ಅವರ ಪೂರ್ಣ ಹೆಸರು, ಜಗಳೂರು ರಾಘವೇಂದ್ರರಾವ್ ಲಕ್ಷ್ಮಣ ರಾವ್ ಎಂದು. ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ. ಪದವಿಯನ್ನು ಪಡೆದಿರುವ ಇವರು ಹಲವು ವರ್ಷಗಳ ಕಾಲ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು.

ಮೈಸೂರು ನಗರದ ಸರಸ್ವತಿಪುರಂನ ೧೨ನೇ ಮೇನ್ ರಸ್ತೆಯಲ್ಲಿನ ಸ್ವಗ್ರಹದಲ್ಲಿ ವಾಸಮಾಡುತ್ತಿದ್ದರು. ರಾಷ್ಟ್ರಕವಿ ಕುವೆಂಪು ರವರ ಪ್ರಭಾವ, ಪ್ರೊ.ಜಿ.ಪಿ.ರಾಜರತ್ನಂ ಪ್ರೇರಣೆಯಿಂದ ತಮ್ಮ ಸಾಹಿತ್ಯ ಜೀವನದಲ್ಲಿ ಬಹಳ ಸಾಧನೆಯನ್ನು ಮಾಡಿದ ವ್ಯಕ್ತಿ. ತತ್ವಶಾಸ್ತ್ರ,ಇಂಗ್ಲಿಷ್,ಕನ್ನಡ, ವೈಜ್ಞಾನಿಕ ಆತ್ಮಕಥೆಗಳಲ್ಲಿ ಬಹಳ ಆಸಕ್ತರು. ಅತ್ಯುತ್ತಮ ವಾಗ್ಮಿಯೆಂದು ಹೆಸರು ಮಾಡಿದ್ದರು.

ಜಗಳೂರು ರಾಘವೇಂದ್ರರಾವ್ ಲಕ್ಷ್ಮಣರಾವ್

ಜನನ: ೨೧, ಜನೇವರಿ,೧೯೨೧

- Advertisement -

ವೃತ್ತಿ: ಜನಪ್ರಿಯ ವಿಜ್ಞಾನ ಲೇಖಕರು

ಬಾಳ ಸಂಗಾತಿ: ಶ್ರೀಮತಿ.ಜೀವು ಬಾಯಿ.

ಮಕ್ಕಳು: ೧. ಬೃಂದ ೨. ವಿದ್ಯಾ ೩. ಅನಿಲ್ ಕುಮಾರ್ ೪. ಅನುರಾಧ

- Advertisement -

ಜನನ,ಹಾಗೂ ವಿದ್ಯಾಭ್ಯಾಸ

ಲಕ್ಷ್ಮಣರಾಯರು, ೧೯೨೧ ಜನವರಿ ೨೧ರಂದು ರಾಘವೇಂದ್ರ ರಾವ್ ಮತ್ತು ನಾಗಮ್ಮನವರ ಮಗನಾಗಿ, ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಜನಿಸಿದರು. ಪ್ರಾಥಮಿಕ ವಿದ್ಯಾಭ್ಯಾಸ ಜಗಳೂರಿನಲ್ಲಿ ನಡೆಯಿತು. ದಾವಣಗೆರೆಯಲ್ಲಿ ಪ್ರೌಢಶಾಲಾಭ್ಯಾಸ, ಮೈಸೂರಿನಲ್ಲಿ ಇಂಟರ್ ಮೀಡಿಯೆಟ್ ಕಾಲೇಜ್ (ಇಂದಿನ ಯುವರಾಜ ಕಾಲೇಜ್) ಮೈಸೂರು ವಿಶ್ವವಿದ್ಯಾಲಯದಲ್ಲಿ ಬಿ. ಎಸ್ಸಿ, ಎಮ್ಮೆಸ್ಸಿ. ತುಮಕೂರು ಇಂಟರ್ ಮೀಡಿಯೆಟ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಬೆಂಗಳೂರಿನ ಸೇಂಟ್ರೆಲ್ ಕಾಲೇಜ್, ಶಿವಮೊಗ್ಗೆಯ ಸಹ್ಯಾದ್ರಿ ಕಾಲೇಜ್, ಮೈಸೂರು ಮಹಾರಾಣಿ ಕಾಲೇಜ್, ಹಾಗೂ ಯುವರಾಜ ಕಾಲೇಜುಗಳಲ್ಲಿ ಉಪನ್ಯಾಸಕ, ಪ್ರಾಧ್ಯಪರಾಗಿ ಸೇವೆಸಲ್ಲಿಸಿದರು.

ಪರಿವಾರ

ಪ್ರೊ.ಲಕ್ಷ್ಮಣರಾವ್ ಜೀವು ಬಾಯಿ ದಂಪತಿಗಳಿಗೆ ಬೃಂದಾ ನಾಗರಾಜ್, ವಿದ್ಯಾಶಂಕರ್, ಅನುರಾಧ ರಾವ್, ಎಂಬ ಹೆಣ್ಣುಮಕ್ಕಳೂ ಹಾಗೂ ಅನಿಲ್ ಕುಮಾರ್ ಎಂಬ ಮಗನೂ ಇದ್ದಾರೆ.

ವಿಶೇಷ ಕಾರ್ಯ

ಮೈಸೂರು ವಿಶ್ವವಿದ್ಯಾಲಯದ ಪ್ರಸಾರಾಂಗ ಶಾಖೆಯಿಂದ ಹೊರತಂದ ಇಂಗ್ಲಿಷ್ – ಕನ್ನಡ ನಿಘಂಟಿನ ಪ್ರಧಾನ ಸಂಪಾದಕರಾಗಿ ಕೆಲಸಮಾಡಿದರು.

ಪ್ರಶಸ್ತಿ ಸನ್ಮಾನಗಳು

  • ೧೯೭೭ ರಲ್ಲಿ ‘ಮೂಡಬಿದರೆಯ ಡಾ. ಶಿವರಾಮ ಕಾರಂತ ಪ್ರತಿಷ್ಠಾನ್ ಪ್ರಶಸ್ತಿ’
  • ೧೯೯೨ ರಲ್ಲಿ ಕೇಂದ್ರ ಸರ್ಕಾರದ ನ್ಯಾಷನ ಕೌನ್ಸಿಲ್ ಆಫ್ ಫಾರ್ ಸೈನ್ಸ್ ಕಮ್ಯುನಿಕೇಷನ್ ನ ನ್ಯಾಷನಲ್ ಅವಾರ್ಡ್
  • ಫ಼ಾರ್ ಕಮ್ಯುನಿಕೇಶನ್ ಇನ್ ಸೈನ್ಸ್, ೨೦೧೬ ರಲ್ಲಿ ರಾಜ್ಯೋತ್ಸವ ಪ್ರಶಸ್ತಿ
  • ‘ಏನ್. ಸಿ. ಇ. ಆರ್. ಟಿ. ಪ್ರಶಸ್ತಿ’
  • ‘ವಿಜ್ಞಾನ ವಿಚಾರ’, ‘ಆರ್ಕಿಮಿಡಿಸ್, ಮೇಘನಾದ್ ಸಹ ಅಂಡ್ ಅದರ್ ‘ಕಲೆಕ್ಷನ್ ಆಫ್ ಎಸ್ಸೇಸ್’,
    ಕರ್ನಾಟಕ ವಿಜ್ಞಾನ ತಂತ್ರಜ್ಞಾನ ಅಕ್ಯಾಡೆಮಿಯಿಂದ ಇತ್ತೀಚಿಗೆ,’ಜೀವಮಾನ ಸಾಧನೆಗಾಗಿ ಪ್ರಶಸ್ತಿ’ಗಳಿಸಿದರು.
  • ಕವಿ ಪುತಿನರವರು ಲಕ್ಷ್ಮಣರಾಯರ ಭಾಷಾ ಪ್ರತಿಭೆಯನ್ನು ಮೆಚ್ಚಿ ‘ಶಬ್ದಬ್ರಹ್ಮ’ಎಂಬ ಬಿರುದು ಕೊಟ್ಟಿದ್ದಾರೆ.

ವಿಶೇಷ ಸಾಧನೆಗಳು

ಕೇರಳ ಶಾಸ್ತ್ರ ಸಾಹಿತ್ಯ ಪರಿಷತ್ತಿನಿಂದ ಪ್ರಭಾವಿತರಾಗಿ ‘ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್’ ಆರಂಭಿಸಿದರು.
ಹೈಸ್ಕೂಲ್ ವಿದ್ಯಾರ್ಥಿಗಳನ್ನು ಮನಸ್ಸಿನಲ್ಲಿಟ್ಟುಕೊಂಡು,’ಬಾಲ ವಿಜ್ಞಾನ ಮಾಸಿಕ ಪತ್ರಿಕೆ’ ಆರಂಭಿಸಿದರು.

ಮೌಢ್ಯ ನಿರ್ಮೂಲನ ಚಳುವಳಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ.

ಪರಿಸರ ಹೋರಾಟ ಬರವಣಿಗೆಯಲ್ಲಿ ಸದಾ ಸಕ್ರಿಯರಾಗಿದ್ದರು.
ಬೆಂಗಳೂರಿನ ಸೆಂಟ್ರೆಲ್ ಕಾಲೇಜ್ ನಲ್ಲಿ ಕೆಲಸಮಾಡುತ್ತಿದ್ದಾಗ, ಸಂಗೀತದಲ್ಲಿ ಆಸಕ್ತರಾಗಿದ್ದ ತಮ್ಮಗೆಳೆಯರ ಜೊತೆ ಸೇರಿ,’ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಕಾರದಲ್ಲಿ ಆಸಕ್ತಿ ಬೆಳೆಸಿಕೊಂಡರು.

ಆಸಕ್ತಿಗಳು

ಸಾಮಾನ್ಯ ವಿಜ್ಞಾನ, ವಿಜ್ಞಾನದ ಇತಿಹಾಸ, ತತ್ಚಶಾಸ್ತ್ರ ಅವರ ಅಭಿರುಚಿಯ ಕ್ಷೇತ್ರಗಳು. ಸಂಗೀತ ಶಾಸ್ತ್ರ, ಭೂಗೋಳ ಶಾಸ್ತ್ರವನ್ನು ಅಧ್ಯಯನ ಮಾಡಿದ ಜಿ. ಆರ್.ಎಲ್, ಮೈಸೂರು ವಿಶ್ವವಿದ್ಯಾನಿಲಯದ ಇಂಗ್ಲಿಷ್ – ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ನಿವೃತ್ತರಾದರು. ಇವರ ವಿಜ್ಞಾನ ವಿಚಾರ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಬಹುಮಾನ ಬಂದಿದೆ. ಇವರು ೧೪ ಕೃತಿಗಳನ್ನು ರಚಿಸಿದ್ದಾರೆ. ಆಹಾರ, ವಿಜ್ಞಾನಿಗಳೊಡನೆ ರಸ ನಿಮಿಷಗಳು, ಪರಮಾಣುಗಳು, ಲೂಯಿ ಪಾಶ್ಚರ್, ಗೆಲಿಲಿಯೋ ಇವರ ಪ್ರಮುಖ ಕೃತಿಗಳು.

ಗಾನ ಭಾರತಿಯ ಸ್ಥಾಪಕರಲ್ಲೊಬ್ಬರು

ತಮ್ಮ ಸಂಗೀತಾಸಕ್ತ ಗೆಳೆಯರ ಜೊತೆ ಸೇರಿ, ಮೈಸೂರಿನಲ್ಲಿ ‘ಗಾನ ಭಾರತಿ’ ಎಂಬ ಸಂಗೀತ ಸಂಸ್ಥೆಯನ್ನು ಸ್ಥಾಪಿಸಿದರು.

ಪತ್ನಿ ಜೀವೂಬಾಯಿ

ಪ್ರೊ. ಲಕ್ಷ್ಮಣರಾಯರ ಹೆಂಡತಿ ಜೀವು ಬಾಯಿಯವರು, (೯೦ ವರ್ಷ), ಮೈಸೂರು ವಿಶ್ವವಿದ್ಯಾಲಯದ ಬಿ.ಎ. ಪದವೀಧರೆ. ಅವರು, ಮಹಾನ್ ವಿಜ್ಞಾನಿ ಚಾರ್ಲ್ ಡಾರ್ವಿನ್ ಜೀವನ ಚರಿತ್ರೆಯನ್ನು ಇಂಗ್ಲೀಷಿನಿಂದ ಕನ್ನಡಕ್ಕೆ ತರ್ಜುಮೆ ಮಾಡಿದ್ದಾರೆ. ‘ಲಿಯೋಪಾಲ್ಡ್ ಇನ್_ಫ಼ೆಲ್ಡ್’ ರವರ ಆತ್ಮ ಕಥನ, “ಕ್ವೆಸ್ಟ್” ಎಂಬ ಇಂಗ್ಲೀಷ್ ಕೃತಿಯನ್ನು ಕನ್ನಡದಲ್ಲಿ ‘ಶೋಧ’ ಎನ್ನುವ ಹೆಸರಿನಲ್ಲಿ ರಚಿಸಿದ್ದಾರೆ.

ಪ್ರಕಟಿತ ಕೃತಿಗಳು

  • ಆಹಾರ -(೧೯೪೪ ರಲ್ಲಿ ಪ್ರಕಟಿತ ಮೊದಲ ಪುಸ್ತಕ),
  • ಪರಮಾಣು ಚರಿತ್ರೆ,
  • ಗೆಲಿಲಿಯೋ ಪುಸ್ತಕಕ್ಕೆ ‘ಸಾಹಿತ್ಯ ಅಕಾಡೆಮಿ ಅವಾರ್ಡ್’,
  • ವಿಜ್ಞಾನ ವಿಚಾರ
  • ಲೂಯಿ ಪಾಸ್ಟರ್
  • ‘ಚಕ್ರ’ ಎಂಬ ಪುಸ್ತಕಕ್ಕೆ ಪ್ರಶಸ್ತಿ,
  • ವಿಜ್ಞಾನಿಗಳೊಡನೆ ರಸನಿಮಿಷಗಳು ಮೊದಲಾದ ಕೃತಿಗಳು,
    ವೈಜ್ಞಾನಿಕ ಲೇಖನಗಳು, (ನಿಯತ ಕಾಲಿಕೆಗಳಲ್ಲಿ)

ಮರಣ

ಜೆ.ಆರ್.ಎಲ್. ರವರು ಸ್ವಲ್ಪ ಸಮಯದಿಂದ ಅಸ್ವಸ್ಥರಾಗಿದ್ದರು. ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅವರು ಚೇತರಿಸಿಕೊಳ್ಳದೆ ೨೯, ಡಿಸೆಂಬರ್ ೨೦೧೭ ರ ಬೆಳಗಿನ ಜಾವ ನಿಧನರಾದರು. ಚಾಮುಂಡಿ ಬೆಟ್ಟದ ಅಡಿಯಲ್ಲಿರುವ ರುದ್ರ ಭೂಮಿಯಲ್ಲಿ ಅಂತ್ಯ ಸಂಸ್ಕಾರಗಳು ಜರುಗಿದವು

ಮಾಹಿತಿ ಕೃಪೆ ವಿಕಿಪೀಡಿಯ
ಸಂಗ್ರಹ: ಶ್ರೀ ಇಂಗಳಗಿ ದಾವಲಮಲೀಕ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group