ವಲ್ಲಭಭಾಯಿ ಪಟೇಲರು 31/10/1875 ರಲ್ಲಿಗುಜರಾತ್ ರಾಜ್ಯದ ಖೇಡಾ ಜಿಲ್ಲೆಯ ನಡಿಯಾದ್ ಎಂಬ ಗ್ರಾಮದಲ್ಲಿ ಜನಿಸಿದ ವೀರಯೋಧ. ಬುದ್ಧಿವಂತ ಯಶಸ್ವಿ ವಕೀಲ ನಿಶ್ಚಲ ವೃತ್ತಿ ಹಾಗೂ ಅದ್ಭುತಕಾಂತಿ ಶಕ್ತಿಗಳ ಪ್ರತೀಕ.
ತಂದೆ ಝವೇರಾಭಾಯ್ ರೈತರು,ಇವರಿಗೆ ಐದು ಮಕ್ಕಳು ವಲ್ಲಭಭಾಯಿ ನಾಲ್ಕನೆಯವರು. ರೈತರ ಕಷ್ಟ ನೋವು ನಲಿವುಗಳ ಅನುಭವ ಎಳೆಯ ವಯಸ್ಸಿನಲ್ಲಿಯೇ ವಲ್ಲಭಭಾಯಿ ಪಟೇಲರಿಗೆ ಆಯಿತು.
ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣ ಬಡೋದೆಯಲ್ಲಿ ಆಯಿತು. ಮುಂದೆ ಇಂಗ್ಲೆಂಡಿನಲ್ಲಿ ಬ್ಯಾರಿಸ್ಟರ್ ಪದವಿ ಪಡೆದು ಭಾರತಕ್ಕೆ ಮರಳಿದರು.ಭಾರತಕ್ಕೆ ಬಂದು ವಕೀಲ ವೃತ್ತಿಯನ್ನುಕೈಗೊಂಡು ಬಹು ಬೇಗನೆ ಜನರ ಪ್ರೀತಿ ವಿಶ್ವಾಸ ಗಳಿಸಿದರು.ನಿಶ್ಚಲ ವೃತ್ತಿ ಹಾಗೂ ಅದ್ಭುತ ಕಾರ್ಯಶಕ್ತಿಗಳ ಪ್ರತೀಕ.ನಾಯಕನಿಗೆ ಬೇಕಾದ ದಿಟ್ಟತನ,ವ್ಯವಸ್ಥಾಶಕ್ತಿ ಆಳುವ ದಕ್ಷತೆ, ಧೈರ್ಯ, ಸಾಹಸ,ತಮ್ಮಗುರಿ ಸಾಧನೆಯಲ್ಲಿ ಗೆಳೆತನ ದೊಡ್ಡಸ್ತಿಕೆಗಳನ್ನು ಗಣನೆಗೆತಂದು ಕೊಳ್ಳುತ್ತಿರಲಿಲ್ಲ,ಅನ್ಯಾಯದ ವಿರುದ್ಧ ಹೋರಾಡುವ ನ್ಯಾಯ ಪ್ರಿಯ ಸರದಾರ ಸರಳ ಜೀವಿ, ನಿಗರ್ವಿ ಪ್ರಾಮಾಣಿಕ ವ್ಯಕ್ತಿ.
ಭಾರತದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹಾವೀರ ದೇಶ ಪ್ರೇಮಿ, ಅಪ್ರತಿಮರಾಜಕೀಯ ಒಳನೋಟ ಉಳ್ಳವರಾಗಿದ್ದು ಎಂದೂ ಆಮಿಷಕ್ಕೆ ಮಣಿದವರಲ್ಲ, ನಾಲಿಗೆ ಮುಳ್ಳಿನಂತಿದ್ದರೂ ಒರಟುತನವಿದ್ದರೂ ಅವರ ಹೃದಯ ಬಹುಮೃದು ಮತ್ತು ವಿಶಾಲ ಆಗಿದ್ದಿತು. ಬಡವರ ಸೇವೆಯನ್ನು ಭೇದ ಭಾವವಿಲ್ಲದೆ ಮಾಡಿದ್ದಾರೆ ಸ್ವದೇಶ ಸ್ವರಾಜ್ಯಗಳಿಗಾಗಿ ತಮ್ಮ ವಕೀಲ ವೃತ್ತಿ, ಹಣ,ಜ್ಞಾನ ಎಲ್ಲವನ್ನೂ ಧಾರೆ ಎರೆದ ಸ್ವಾರ್ಥತ್ಯಾಗಿ.
ಗಾಂಧೀಜಿ ನೇತೃತ್ವದಲ್ಲಿ ನಡೆದ ಅಹಮದಾಬಾದಿನ ಗಿರಣಿ ಕಾರ್ಮಿಕರ ಚಳವಳಿ ಮತ್ತುಖೇಡಾದರೈತರ ಚಳುವಳಿ ಹಾಗೂ ಅಸಹಕಾರಆಂದೋಲನದಲ್ಲಿ ಸಕ್ರೀಯವಾಗಿ ಪಾಲ್ಗೊಂಡರು. 1935ರಲ್ಲಿ ಬಿಹಾರದಲ್ಲಿ ಸಂಭವಿಸಿದ ಸಂಕರ್ಷಣ ಸಮಯದಲ್ಲಿ ವಲ್ಲಭಬಾಯಿ ಪಟೇಲರು ಗಾಂಧೀಜಿ ಜೊತೆ ಸೇರಿ ಜನಸೇವೆಗೆ ಕಂಕಣಬದ್ಧರಾಗಿ ನಿಂತರು ಮುಖ್ಯ ಸೇನಾನಿಯಾಗಿ ನೊಂದವರ ಜೊತೆ ಸ್ಪಂದಿಸಿದರು.
1932 ರಲ್ಲಿಅವರುಗಾಂಧೀಜಿಜೊತೆ 16 ತಿಂಗಳು ಯರವಾಡ ಸೆರೆಮನೆಯಲ್ಲಿಖೈದಿಯಾಗಿದ್ದರೂ ಈ ಸಮಯದಲ್ಲಿ ಇವರು ಚಹಾ ಮತ್ತುಧೂಮಪಾನವನ್ನು ತ್ಯಜಿಸಿದರು.
1928 ರ ಬಾರ್ಡೋಲಿ ಸತ್ಯಾಗ್ರಹದಿಂದಅವರಿಗೆ ಅಖಿಲ ಭಾರತ ಪ್ರಸಿದ್ಧಿ ಅಭಿಸಿತು 80.000 ರೈತ ಹೋರಾಟಗಾರರ ಮುಖಂಡತ್ವವನ್ನು ವಹಿಸಿದರು.ಆಗ ಇವರಿಗೆ “ಸರದಾರ” ಎಂಬ ಬಿರುದು ಬಂದಿತು.ಗುಜರಾತ್ ಪ್ರಾಂತ್ಯದ ವಲ್ಲಭಭಾಯಿ ಭಾರತದ ಸರದಾರರಾದರು.
ಬಾರ್ಡೋಲಿ ಕರ ನಿರಾಕರಣ ಸತ್ಯಾಗ್ರಹದಲ್ಲಿ ಯಶಸ್ವಿಯಾದರು.1937 ರಲ್ಲಿಕಾಂಗ್ರೆಸ್ ಮಂತ್ರಿ ಮಂಡಲದಲ್ಲಿ ಮುಖ್ಯ ಪಾತ್ರ ವಹಿಸಿದರು.ದೇಶದ ಭವಿಷ್ಯವನ್ನುಏಕೀಕೃತ ಸಮಗ್ರರಾಜಕೀಯರಚನೆಯ ಭದ್ರ ಬುನಾದಿಯ ಮೇಲೆ ಕಟ್ಟಿದ ಮಹಾಶಿಲ್ಪಿ.
ಭಾರತದ ಪ್ರಥಮ ಗೃಹ ಮಂತ್ರಿಯಾಗಿದ್ದ ಸರದಾರರು ಸಂಸ್ಥಾನಗಳ ಭವಿಷ್ಯವನ್ನು ಅಲ್ಪ ಅವಧಿಯಲ್ಲಿಯೇ ನಿರ್ಧರಿಸಿದರು. ಹೈದರಾಬಾದನ್ನು ಬಲಪ್ರಯೋಗದಿಂದ ಹತೋಟಿಗೆ ಒಳಪಡಿಸಿದರು ಇತರ ಸಂಸ್ಥಾನಗಳನ್ನು ಸೌಹಾರ್ದ ಚರ್ಚೆಯ ಮೂಲಕ ವಿಲೀನಗೊಳಿಸಿದರು. ಈ ಕೆಲಸದಲ್ಲಿಅವರುತೋರಿದಧೈರ್ಯಕುಶಲತೆಯನ್ನುಕಂಡು ದೇಶವೇ ಬೆರಗಾಯಿತು.ಇವರನ್ನು ಭಾರತದ ‘ಬಿಸ್ಮಾರ್ಕ’ ಎಂದು ಬಣ್ಣಿಸಲಾಯಿತು.‘ಉಕ್ಕಿನ ಮನುಷ್ಯ’ ಎಂದು ಭಾರತೀಯರು ಕೊಂಡಾಡಿದರು.
ಇವರ ಸಾಹಸ ಅವನದಕ್ಕಿಂತ ಕ್ಷಿಪ್ರ ಅಗಾಧ ಆದುದು.ಘಜನಿ ಮಹಮ್ಮದನು ಧ್ವಂಸಗೊಳಿಸಿದ ಗುಜರಾತಿನಸೋಮನಾಥದೇವಾಲಯದ ಪುನರ್ ನಿರ್ಮಾಣಕ್ಕೆ ಚಾಲಕ ಶಕ್ತಿಯಾಗಿದ್ದರು.
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಇಲ್ಲಿ ಸುಮಾರು 600 ಸಂಸ್ಥಾನಗಳಿದ್ದವು ಅವುಗಳಲ್ಲಿ ರಾಜ ಮಹಾರಾಜರು ಆಳುತ್ತಿದ್ದರು ಅವುಗಳಲ್ಲಿ ಹೈದರಾಬಾದ, ಕಾಶ್ಮೀರ, ಮೈಸೂರುಗಳಂತಹ ದೊಡ್ಡ ಸಂಸ್ಥಾನಗಳು ಇದ್ದವು ಸಂಡೂರು, ಲಾನ ಮುಂತಾದಇನ್ನೂ ಕೆಲವು ಸಂಸ್ಥಾನಗಳು ಬಹು ಸಣ್ಣವು (ಚಿಕ್ಕವು) ಇದ್ದವು ಇವುಗಳ ರಾಜರಲ್ಲಿಅನೇಕರು ದುರಾಚಾರಿಗಳಾಗಿದ್ದರು. ಭೋಗ ವಿಲಾಸ ಜೀವನವನ್ನು ನಡೆಸುತ್ತಿದ್ದರು.ರಾಜ್ಯದ ಜನರ ಸುಖ ಸಂತೋಷಗಳಿಗೆ ಸ್ವಲ್ಪವು ಗಮನ ಕೊಡುತ್ತಿರಲಿಲ್ಲ. ಮನಸ್ಸಿಗೆ ಬಂದಂತೆ ಆಡಳಿತ ನಡೆಸುತ್ತಿದ್ದರು. ಜನರನ್ನುಗುಲಾಮಗಿರಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತ ಬಂದಿದ್ದರು. ಕೆಲವು ಸಂಸ್ಥಾನಗಳು ಮುಂದುವರೆದ್ದರೂ ಕೆಲವು ಬಹು ಹಿಂದುಳಿದಿದ್ದುವು ಇಂತಹ ಸಂಸ್ಥಾನಗಳನ್ನು ಒಳಗೊಂಡ ಭಾರತದ ಆಡಳಿತವನ್ನು ನಡೆಸುವುದು ಕಷ್ಟವಾಗಿದ್ದಿತು ದೇಶವನ್ನು ಅಭಿವೃದ್ದಿ ಪಡಿಸುವುದು ಸುಲಭವಾಗಿರಲ್ಲಿಲ್ಲ.ಜೊತೆಗೆ ಭಾರತಕ್ಕೆ ಸ್ವಾತಂತ್ರ್ಯ ಬಂದಿದ್ದರೂ ಸಂಸ್ಥಾನಗಳಲ್ಲಿ ಜನರಿಗೆಅದು ಸಿಕ್ಕಿರಲ್ಲಿಲ್ಲ. ಅಲ್ಲಿ ಜನರು ರಾಜರೊಡನೆ ಹೋರಾಡುತ್ತಲೇ ಇದ್ದರು.ಅಲ್ಲಿ ಶಾಂತಿ ಇರಲಿಲ್ಲ.
ಇಂತಹ ಸಂಸ್ಥಾನಗಳು ಮತ್ತು ಪ್ರಾಂತಗಳನ್ನು ಉಪಾಯ ತಾಳ್ಮೆಗಳಿಂದ ಐಕ್ಯಗೊಳಿಸಿದವರು ಸರ್ದಾರ್ ವಲ್ಲಭಾಭಾಯಿ ಪಟೇಲರು.
ರಾಜರ ಸಂಸ್ಥಾನಗಳ ವಿಲೀನ ಕಾರ್ಯ ಮಾಡಿದುದು ಇತಿಹಾಸದ ನಡೆದ ಅಪೂರ್ವ ಘಟನೆ ಒಟ್ಟಿನಲ್ಲಿ ಇವರ ಕಾರ್ಯಚರಣೆ ವಿಶ್ವವನ್ನು ಬೆರಗುಗೊಳಿಸಿದ್ದಿತು.
ಸರದಾರರು ನಿಷ್ಠುರ ವ್ಯಕ್ತಿ ಆದರೆ ಅವರ ಮಾನವೀಯ ಅಂತಃಕರಣ ದೂರದೃಷ್ಟಿ ಹಾಸ್ಯ ಪ್ರವೃತ್ತಿಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು.ದೇಶ ಸೇವೆಗಾಗಿ ಅರ್ಧ ಶತಮಾನದಕಾಲ ತಮ್ಮಜೀವನವನ್ನು ಮುಡುಪಾಗಿಟ್ಟು ಸರದಾರರು ಸ್ವತಂತ್ರ ಭಾರತದ ಉಪ ಪ್ರಧಾನಿಯಾಗಿಉತ್ತಮಕಾರ್ಯಮಾಡಿದವರು.
15-12-1950 ರಲ್ಲಿತಮ್ಮ 75ನೇ ವಯಸ್ಸಿನಲ್ಲಿ ಇನ್ನಿಲ್ಲವಾದರು.ಈಗಿನ ಕೇಂದ್ರ ಸರಕಾರವುಅಕ್ಟೋಬರ 31 ರಂದು ಜನ್ಮ ದಿನಾಚರಣೆ ರಾಷ್ಟ್ರೀಯಏಕತಾ ದಿವಸ ಎಂದುಆಚರಿಸುತ್ತಿರುವುದು ಭಾರತೀಯರಾದ ನಮಗೆಲ್ಲ ಹೆಮ್ಮೆಯ ವಿಷಯ.
ಗುಜರಾತಿನ ರಾಜ್ಜಿಪ್ಲಾ ಬಳಿಯ ನರ್ಮದಾ ನದಿ ದಂಡೆಯ ಮೇಲಿನ ಕೇವದಿಯ ಕಾಲೋನಿಯಲ್ಲಿ ಸರ್ದಾರ್ ವಲ್ಲಭಾಯಿ ಪಟೇಲರ 597 ಅಡಿ ಎತ್ತಿರದ ‘ಏಕತೆಯ ಮೂರ್ತಿ’ ಅಕ್ಟೋಬರ್ 31, 2018 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಂಡಿತು.
ರಾಷ್ಟ್ರದ ಏಕತೆ, ಭದ್ರತೆ, ಸೌಹಾರ್ದತೆಯನ್ನು ಎತ್ತಿಹಿಡಿಯುವ ಈ ರಾಷ್ಟ್ರೀಯ ಏಕತಾ ದಿವಸದ ಆಚರಣೆಯಲ್ಲಿ ನಾವೆಲ್ಲರೂ ಭಾಗಿಯಾಗಿ, ದೇಶದ ರಕ್ಷಣೆಯಲ್ಲಿ ತೊಡುಗುವುದಾಗಿ ಪತ್ರಿಜ್ಞಾ ವಿಧಿ ಸ್ವೀಕರಿಸುವ ಮೂಲಕ ದೇಶದ ರಕ್ಷಣೆಯ ಕಾರ್ಯದಲ್ಲಿ ತೊಡಗೋಣ. ಅವರ ಹುಟ್ಟುಹಬ್ಬವನ್ನು ಏಕತಾ ದಿವಸವಾಗಿ ಆಚರಿಸಲಾಗುತ್ತದೆ.
ಶ್ರೀ ಎಂ.ವೈ ಮೆಣಸಿನಕಾಯಿ.
ಇಂದಿರಾ ಕಾಲೂನಿ, ಬೆಳಗಾವಿ.
ಮೊ: 9449209570