ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಸುನಾಮಿ ಸಂಭವಿಸಿದ್ದು ಉಂಟಾದ ಪ್ರವಾಹದಲ್ಲಿ ಎಂಟು ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಉತ್ತರಾಖಂಡದ ಧೌಲಿ ನದಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ಸಮೀಪದ ವಿದ್ಯುತ್ ಘಟಕ ಕೊಚ್ಚಿಕೊಂಡು ಹೋಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ೧೫೦ ಕ್ಕೂ ಹೆಚ್ಚು ಜನರು ಸುರಂಗವೊಂದರಲ್ಲಿ ಸಿಲುಕಿಕೊಂಡು ಕಾಣೆಯಾಗಿದ್ದಾರೆ ಎನ್ನಲಾಗಿದೆ.
ಸುಮಾರು ೧೨೦ ವರ್ಷಗಳಲ್ಲಿಯೇ ಭೀಕರ ಎನ್ನಲಾದ ಈ ಹಿಮ ಸುನಾಮಿ ಭೀಕರ ಪರಿಣಾಮ ಸೃಷ್ಟಿಸಿದ್ದು ಎರಡು ಚೆಕ್ ಡ್ಯಾಂ ಗಳು ಕೊಚ್ಚಿಕೊಂಡು ಹೋಗಿವೆ. ಈ ಬಗ್ಗೆ ಸುದ್ದಿ ಸಂಸ್ಥೆ ಎಎನ್ಐ ಟ್ವೀಟ್ ಮಾಡಿದ್ದು ಚಮೋಲಿ ಜಿಲ್ಲೆಯ ತಪೋವನ್ ಪ್ರದೇಶದಲ್ಲಿ ಹಿಮಪಾತದಿಂದಾಗಿ ಧೌಲಿಗಂಗಾ ನದಿ ಉಕ್ಕೇರಿ ಹರಿದಿದೆ. ಚೆಕ್ ಡ್ಯಾಂ ಗಳು ಛಿದ್ರಗೊಂಡಿವೆ.
ಚಮೋಲಿ ಪೊಲೀಸರು ಕೂಡ ಜನರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದು ಜನರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು, ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇತ್ತ ಹೃಷಿಕೇಶ ಹಾಗೂ ಅಲಕನಂದಾ ಡ್ಯಾಂಗಳ ನೀರನ್ನು ತ್ವರಿತವಾಗಿ ಖಾಲಿ ಮಾಡಲು ಯೋಚಿಸಲಾಗಿದೆ. ಒಂದವೇಳೆ ಧೌಲಿಗಂಗಾ ನದಿಯ ನೀರು ಈ ಎರಡೂ ಡ್ಯಾಂ ಗಳಿಗೆ ಸೇರಿದರೆ ಇನ್ನೂ ಹೆಚ್ಚಿನ ಅಪಾಯ ಉಂಟಾಗುವ ಸಂಭವ ಇದೆಯೆನ್ನಲಾಗಿದೆ.
ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಷಾ ಸಂತಾಪ ಪ್ರಸಕ್ತ ಹುಮ ಸುನಾಮಿಯಿಂದಾಗಿ ಉಂಟಾದ ಭಾರಿ ಪ್ರಾಣ ಹಾನಿ ಹಾಗೂ ಅನಾಹುತದ ಬಗ್ಗೆ ಪ್ರಧಾನಿ ಮೋದಿಯವರು ದಿಗ್ಭ್ರಮೆ ಹಾಗೂ ಸಂತಾಪ ವ್ಯಕ್ತಪಡಿಸಿದ್ದು, ತಪೋವನದ ಜನತೆಯ ಜೊತೆಗೆ ಇಡೀ ದೇಶದ ಜನತೆಯೇ ಇದೆ ಅವರ ದುಃಖದಲ್ಲಿ ಇಡೀ ದೇಶ ಪಾಲ್ಗೊಳ್ಳಲಿದೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಷಾ ಪ್ರತಿಕ್ರಿಯೆ ನೀಡಿ, ಜನರು ಗಾಬರಿಯಾಗಬಾರದು. ಸುರಕ್ಷಿತ ಪ್ರದೇಶಕ್ಕೆ ತೆರಳಬೇಕು ಸ್ಥಳೀಯ ಆಡಳಿತ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತದೆ. ಯಾರು ಗೊಂದಲಕ್ಕೆ ಒಳಗಾಗಬಾರದು ಎಂದಿದ್ದಾರೆ.