ಬೆಂಗಳೂರು – ಬಹು ನಿರೀಕ್ಷಿತ ಕೆಜಿಎಫ್ ೨ ಚಲನಚಿತ್ರದ ಟೀಸರ್ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ.
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದ ಅಂಗವಾಗಿ ದಿ. ೮ ರಂದು ಬೆಳಿಗ್ಗೆ ೧೦ ಕ್ಕೆ ಬಿಡುಗಡೆಯಾಗಬೇಕಿದ್ದ ಟೀಸರ್ ಯಾರೋ ಕಿಡಿಗೇಡಿಗಳಿಂದಾಗಿ ಒಂದು ದಿನ ಮುಂಚೆಯೇ ಬಿಡುಗಡೆಯಾಗಿದೆ ಎನ್ನಲಾಗಿದೆ.
ತಮ್ಮ ಚಿತ್ರದ ಟೀಸರ್ ಈ ರೀತಿಯಾಗಿ ರಿಲೀಸ್ ಆಗಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ ಯಶ್, ಯಾರೋ ಪುಣ್ಯಾತ್ಮರು ಟೀಸರ್ ಬಿಡುಗಡೆ ಮಾಡಿದ್ದಾರೆ ಅವರಿಗೆ ದೇವರು ಒಳ್ಳೇದು ಮಾಡಲಿ ಎಂದು ವ್ಯಂಗ್ಯವಾಡಿದರು.
ಈ ಮೊದಲು ಕೆಜಿಎಫ್ ಸಿನಿಮಾದಲ್ಲಿ ನಟಿಸಿ ಭರ್ಜರಿ ಯಶ ಸಾಧಿಸಿದ್ದ ಕನ್ನಡದ ನಟ ಯಶ್ ಭಾರೀ ಯಶಸ್ಸು ಗಳಿಸಿದ್ದರು. ಚಿತ್ರವೂ ಕೂಡಾ ನೂರು ಕೋಟಿಯ ಕ್ಲಬ್ ಸೇರಿ ಭಾರತದಾದ್ಯಂತ ಸದ್ದು ಮಾಡಿತ್ತು. ತುಂಬಾ ದಿನಗಳನಂತರ ಕೆಜಿಎಫ್ ೨ ಬಿಡುಗಡೆಯಾಗಬೇಕಿತ್ತು ಆದರೆ ಯಾರದೋ ಕೈವಾಡದಿಂದ ಒಂದು ದಿನ ಮುಂಚೆಯೇ ಟೀಸರ್ ಬಿಡುಗಡೆಯಾಗಿದೆ.
ಕೆಜಿಎಫ್ ೨ ವಿತರಕ ಕಾರ್ತಿಕಗೌಡಾ ಅವರು ಈ ಬಗ್ಗೆ ಮಾತನಾಡಿ, ಟೀಸರ್ ರಿಲೀಸ್ ಆಗಿ ಹೋಗಿದೆ. ಜನರು ಈ ಚಿತ್ರವನ್ನೂ ನೋಡಿ ಹರಸಬೇಕು ಎಂದರು.