ಒಂದು ವಾರದ ಒಳಗೆ ನಿಮ್ಮ ಮುಖವನ್ನು ಬೆಳ್ಳಗಾಗಿಸುವಂತಹ ಮನೆಮದ್ದು

Must Read

ಸಾಮಾನ್ಯವಾಗಿ ಎಲ್ಲರೂ ಕೂಡ ತಮ್ಮ ಮುಖದ ಸೌಂದರ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುತ್ತಾರೆ ಅದರಲ್ಲಿ ಕೂಡ ಮಹಿಳೆಯರು ಮತ್ತು ಹೆಣ್ಣು ಮಕ್ಕಳು ತಮ್ಮ ಮುಖದ ಸೌಂದರ್ಯವು ಸದಾ ಕಾಲ ಬೆಳಗ್ಗೆ ಕಾಂತಿಯುತವಾಗಿ ಇರಬೇಕು ಎಂದು ಬಯಸುತ್ತಾರೆ. ಹಾಗಾಗಿ ಇಂದು ನಿಮ್ಮ ಮುಖವನ್ನು ಕೇವಲ ಒಂದೇ ವಾರದಲ್ಲಿ ಯಾವ ಮಾದರಿಯಲ್ಲಿ ಬೆಳಗ್ಗೆ ಮಾಡಬಹುದು ಎಂಬುದರ ಬಗ್ಗೆ ಸಂಕ್ಷಿಪ್ತವಾದ ವಿವರವನ್ನು ಇಂದು ನಿಮಗೆ ತಿಳಿಸುತ್ತೇವೆ. ಈ ಒಂದು ಮನೆ ಮದ್ದಿಗೆ ಬೇಕಾಗುವ ಪದಾರ್ಥಗಳು ಆಲೋವೆರ ಜೆಲ್, ಸಕ್ಕರೆ, ನಿಂಬೆ ಹಣ್ಣು ಮತ್ತು ಅಕ್ಕಿ ಹಿಟ್ಟು ಇದಿಷ್ಟು ಪದಾರ್ಥಗಳು ಇದ್ದರೆ ಸಾಕು ಅದ್ಭುತವಾದಂತಹ ಮನೆ ಮದ್ದನ್ನು ನೀವು ಮನೆಯಲ್ಲಿಯೇ ತಯಾರಿಸಿ ಕೊಳ್ಳಬಹುದಾಗಿದೆ. ಮೊದಲನೇದಾಗಿ ಒಂದು ಬಟ್ಟಲಿಗೆ ಒಂದು ಟೇಬಲ್ ಸ್ಪೂನ್ ಫ್ರೇಶ್ ಆಲೋವೆರ ಜೆಲ್ ಅನ್ನು ಹಾಕಿ.

ಒಂದು ವೇಳೆ ನಿಮಗೆ ಫ್ರೇಶ್ ಆಲೋವೆರ ಜೆಲ್ ದೊರೆಯಲಿಲ್ಲ ಅಂದರೆ ಮಾರುಕಟ್ಟೆಯಲ್ಲಿ ದೊರೆಯುವಂತಹ ರೆಡಿಮೇಡ್ ಅಲೋವೆರಾ ಜೆಲ್ ಅನ್ನು ಉಪಯೋಗ ಮಾಡಬಹುದು. ತದನಂತರ ಇದಕ್ಕೆ ಒಂದು ಟೇಬಲ್ ಸ್ಪೂನ್ ಸಕ್ಕರೆ ಹಾಗೂ ಅರ್ಧ ನಿಂಬೆಹಣ್ಣಿನ ರಸ ಒಂದು ಟೇಬಲ್ ಸ್ಪೂನ್ ಅಕ್ಕಿ ಹಿಟ್ಟನ್ನು ಹಾಕಿ ಇವೆಲ್ಲವನ್ನು ಕೂಡ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಮೊದಲಿಗೆ ನಿಮ್ಮ ಮುಖವನ್ನು ತಣ್ಣಗಿನ ನೀರಿನಲ್ಲಿ ತೊಳೆದುಕೊಳ್ಳಬೇಕು ಈಗ ತಯಾರಿಸಿರುವ ಮಿಶ್ರಣವನ್ನು ಮುಖಕ್ಕೆ ಅಪ್ಲೈಅಡಿ ಐದು ನಿಮಿಷಗಳ ಕಾಲ ಮಸಾಜ್ ಮಾಡಿ ತದನಂತರ ಹತ್ತು ನಿಮಿಷಗಳ ಕಾಲ ಹಾಗೆಯೇ ಬಿಡಬೇಕು. ನಂತರ ತಣ್ಣೀರಿನಿಂದ ಮುಖವನ್ನು ತೊಳೆದುಕೊಳ್ಳಿ ವಾರದಲ್ಲಿ ಎರಡು ಬಾರಿ ಹೀಗೆ ಮಾಡಿದರೆ ನಿಮ್ಮ ಮುಖ ಕಾಂತಿಯುತವಾಗಿ ಹೊಳೆಯುತ್ತದೆ.

Latest News

ಸಿಂದಗಿ : ಕ್ರೀಡಾಕೂಟದ ಸಿದ್ಧತೆ ಪರಿಶೀಲಿಸಿದ ಶಾಸಕ ಮನಗೂಳಿ

ಸಿಂದಗಿ; ನಶಿಸಿ ಹೋಗುತ್ತಿರುವ ದೇಶಿಯ ಕ್ರೀಡೆಗಳ ಉತ್ತೇಜನಕ್ಕಾಗಿ ಶಿಕ್ಷಣ ಇಲಾಖೆಗೆ ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಇದೇ ಅ. ೨೩,೨೪,೨೫ ರಂದು ಪದವಿಪೂರ್ವ ಕಾಲೇಜುಗಳ ರಾಜ್ಯಮಟ್ಟದ ಕುಸ್ತಿ...

More Articles Like This

error: Content is protected !!
Join WhatsApp Group