- Advertisement -
ಅಕ್ಷರದಾಂಜಲಿ
ಆಗಸದಂಚಿನ ನೇಸರನೆಲ್ಲಿ ಮರೆಯಾದನು
ಮಗುವಿನಂತಹ ಮನಸಿನ ಗಾನ ಗಂಧರ್ವನು
ಮರೆಯಾದ ಸುಕೋಮಲ ಸುಮವೊಂದು
ದೇವನೊಲುಮೆಯ ಚರಣಕಮಲಗಳಿಗೆ ಮುಡಿಪಾಯಿತೇ
ಗಡಿಗಳಾಚಿನ ಸ್ನೇಹ ಪ್ರೇಮ ಕರೆಯು ಕೇಳಿತು
ಗಾನಲಹರಿಯ ಸ್ವರ ಮಾಧುರ್ಯವ ಮನ ಬಯಸಿತು
ಆಕಾಶದೀಪವು ಮರೆಯಾಗಿ ಕತ್ತಲಾವರಿಸಿತು
ಭಾರತ ಮಾತೆಯ ಮಡಿಲಲಿ ಚಿರನಿದ್ರೆಗೈದಿತು
ಸ್ವರ ಸಾಮ್ರಾಟನ ಅಪಧಮನಿಗಳಲಿ
ಸಂಗೀತದ ಸ್ವರ ಲಾಲಿತ್ಯವು ತುಂಬಿರಲು
ಏರಿದೆತ್ತರದಲೂ ನಮ್ರತೆಯ ಸಾಕಾರವು
ಎಷ್ಟು ಜನರ ಮನವ ಕದ್ದ ಗಾರುಡಿಗನು
- Advertisement -
ನಾದದ ತಪಸ್ವಿಯಾಗಿ ಅರಳಿದಂತೆ
ಸಾಗರವೇ ತಾನಾದರೂ ಬಿಂದುವಿನಂತೆ
ತುಂಬಿದ ಕೊಡ ತುಳಕದೆಂದು
ಇರುವುದು ಕಲಿಯಲು ಪಾಠವು
ಸುಗುಣ ಸಂಸ್ಕಾರದಹಿರಿಮೆ ತಾ ಮೆರೆದು
ಕಿರಿಯ ರಿಗೆ ಹೆಜ್ಜೆಗುರುತು ಮೂಡಿಸಿ
ಮರೆಯಾದರೂ ಮನಭಾವ ಕದಡಿಸಿ
ಕಣ್ಣಬಿಂಬದಲ್ಲೊಂದು ಹನಿಯು ಮೂಡಲು
ಬಾಲ್ಯ ಹರೆಯದ ನೆನಪಿನಲ್ಲಿ ನಿನ್ನ ಗಾನ ತೋರಣ
ಎದೆಯು ಭಾರ ಗಾನ ಕೋಗಿಲೆಗೆ ನನ್ನ ಈ ಅಶ್ರುತರ್ಪಣ
- Advertisement -
ದೀಪಿಕಾ ಚಾಟೆ
ಬೆಳಗಾವಿ