- Advertisement -
ಕನ್ನಡವೇ ಧರ್ಮ
ಕನ್ನಡವೇ ಧರ್ಮ
ಕನ್ನಡದ ವರ್ಮ
ಕನ್ನಡದ ಕರ್ಮ
ಕಾಯಕದ ಮರ್ಮ
ಶರಣರ ವಚನಗಳು
ಜೈನರ ಚಂಪೂ
ಆಚಾರ್ಯರ ಬೋಧೆ
ಮುಕ್ತಿ ಮಣಿಯು
ದೇಸಿ ನಾಣ್ನುಡಿ
ಜಾನಪದದ ಮುನ್ನುಡಿ
ಹರಿವಿಕೊಂಡಿದೆ ನೋಡು
ತಿರುಳು ಕನ್ನಡವು
ಕನ್ನಡ ಕಾವ್ಯದ ಕಂಪು
ಗಿಳಿ ಕೋಗಿಲೆಯ ಇಂಪು
ಹುಲುಸಾಗಿ ಬೆಳೆಯಿತು
ಅಚ್ಚ ಹಸುರಿನ ಸಂಪು
ಏಳು ಕನ್ನಡ ಕಂದ
ನಾಡ ಹಬ್ಬದ ಚಂದ
ಭುವನೇಶ್ವರಿ ಬರುತಿಹಳು
ಸಜ್ಜಾಗು ಸಡಗರದಿ
ಕನ್ನಡವು ಉಳಿದರೆ
ಕನ್ನಡಿಗರು ಉಳಿದಾರು
- Advertisement -
ಡಾ. ವೀಣಾ ಯಲಿಗಾರ
ಕನ್ನಡ ಪ್ರಾಧ್ಯಾಪಕರು
ಮುಖ್ಯಸ್ಥರು ಕೆ ಎಲ್ ಈ
ಮೃತ್ಯುಂಜಯ ಕಲಾ ವಾಣಿಜ್ಯ ಮಹಾವಿದ್ಯಾಲಯ
ಧಾರವಾಡ