- Advertisement -
ಗೋವಾದಂಥ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ಕೊಟ್ಟಾಗ ಅಲ್ಲಿನ ಸಮುದ್ರದಲ್ಲಿ ವಿಹಾರ ಮಾಡುವುದು ಅತ್ಯಂತ ಹೆಚ್ಚಿನ ಬೇಡಿಕೆಯಾಗಿರುತ್ತದೆ.
ಹಾಗೆಯೇ ಗೋವಾದಲ್ಲಿ ನಡೆದಿದೆಯೆಂದು ಹೇಳಲಾದ ಬೋಟ್ ಪಯಣ ಅದರ ಮಾಲಿಕನ ದುರಾಸೆಯಿಂದ ಅತಿ ಹೆಚ್ಚು ಜನರಿಂದ ತುಂಬಿಕೊಂಡು ಸಮುದ್ರದಲ್ಲಿ ಮಗುಚಿದ ಪರಿಣಾಮ ಅಂದಾಜು ೮೦ ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ.
ವಾಟ್ಸಪ್ ನಲ್ಲಿ ಬೋಟ್ ಮುಳುಗುತ್ತಿರುವ ದೃಶ್ಯ ವೈರಲ್ ಆಗಿದ್ದು ಎಂಥವರ ಎದೆಯನ್ನು ಕರಗಿಸುವಂತಿದೆ.
- Advertisement -
ಸಮುದ್ರದಲ್ಲಿ ವಿಹಾರ ಮಾಡಬಯಸುವ ಪ್ರಯಾಣಿಕರಿಗಾಗಿ ಬೋಟ್ ಗಳಿರುತ್ತವೆ ಅದರಲ್ಲಿ ಇಂತಿಷ್ಟೇ ಪ್ರಯಾಣಿಕರನ್ನು ಹಾಕಬೇಕೆಂಬ ನಿಯಮ ಇರುತ್ತದೆ ಆದರೆ ಬೋಟ್ ಮಾಲಿಕರ ದುರಾಸೆಯಿಂದ ಕೆಲವೊಮ್ಮೆ ಅದರ ಕೆಪ್ಯಾಸಿಟಿಗಿಂತಲೂ ಹೆಚ್ಚು ಜನರನ್ನು ತುಂಬಿಸಿ ಕರೆದೊಯ್ಯುತ್ತಾರೆ. ಹಾಗೆ ಕರೆದೊಯ್ಯುವಾಗಲೇ ಈ ಅನಾಹುತ ಸಂಭವಿಸಿದ್ದು ಇದರಲ್ಲಿ ಸುಮಾರು ೪೦ ಜನರನ್ನು ರಕ್ಷಿಸಲಾಗಿದೆಯೆನ್ನಲಾಗಿದೆ.