spot_img
spot_img

ಕವನ ಹಣವೇ…ಏನು ನಿನ್ನ ಮಹಿಮೆ ???

Must Read

- Advertisement -

ಹಣವೇ…ಏನು ನಿನ್ನ ಮಹಿಮೆ ???

ತಿಪ್ಪೆಯಿಂದ ಉಪ್ಪರಿಗೆಗೆ ಕೂರಿಸುತ್ತೀ,
ಅರಮನೆಯಿಂದ ಗುಡಿಸಲಿಗೆ ನೂಕುಬಿಡುತ್ತೀ,
ಸ್ವಾಭಿಮಾನ ಬಿಟ್ಟು ಭಿಕ್ಷೆ ಬೇಡಿಸುತ್ತೀ,
ಕೊಲೆ-ಸುಲಿಗೆಗಳ ಮಾಡಿಸಿ ಸೆರೆಮನೆಗೆ ಕಳಿಸುತ್ತೀ,
ಓ ಹಣವೇ ! ಏನು ನಿನ್ನ ಮಹಿಮೆ ??

ನೀ ಇದ್ದಲ್ಲಿ , ವಿದ್ಯೆ-ವಿನಯ ಇರುವುದೆಲ್ಲಿ ?
ಅಹಂ-ಸ್ವಾರ್ಥ-ಗುಂಪುಗಾರಿಕೆಗೆ ಕಾರಣ ನೀನು !
ನಿಸ್ವಾರ್ಥವಾಗಿ ಬದುಕುವವನಿಗೆ ನೀ ಎಂದರೆ ಅಲರ್ಜಿ !!
ನಿನ್ನ ಹಿಂದೆಓಡುವವರು ನಿನಗಾಗಿ ಮಾಡುತ್ತಾರೆ ಎಲ್ಲರಿಗೆ ಅಲರ್ಜಿ….

ದೇಶ ಯಾವುದಾದರೇನು ? ಭಾಷೆ ಯಾವುದಾದರೇನು?
ಎಲ್ಲ ಕಾಲದಲೂ ನಿನ್ನ ಮಹಿಮೆ ಅಪಾರ ,
ಅಪ್ಪ-ಅಮ್ಮ, ಸಹೋದರ-ಸಹೋದರಿ,ಪತ್ನಿ-ಮಕ್ಕಳು
ಎಲ್ಲರೂ ನಿನ್ನ ಮುಂದೆ ಮಸುಕು…ಮಸುಕು…

- Advertisement -

ವೃತ್ತಿ ಯಾವುದಾದರೇನು ?
ವೇಷ ಯಾವುದಾದರೇನು ?
ನಿನ್ನ ಥಕ-ದಿಂ, ಥಕ-ದಿಂ..ನರ್ತನಕೆ
ಮನಸೋಲದವರು ಯಾರು ?
ಎಲ್ಲ ಮರೆತು ನಿನ್ನ ಹಿಂದೆ ಬೀಳದವರು ಯಾರು ??

ಒಂದೆಡೆ ಖಾಲಿಹೊಟ್ಟೆ,ಮುರುಕಲು ಗುಡಿಸಲು,
ಅನಾರೋಗ್ಯದ ಹಾವಳಿ,ಅನಾಗರೀಕ ಬದುಕು,
ಮತ್ತೊಂದೆಡೆ ತಿನ್ನಲಾಗದೇ ಚೆಲ್ಲುವ ಅವ್ಯವಸ್ಥೆ,
ನಾಗರೀಕ ಬದುಕು,ಇತರರ ಬಗ್ಗೆ ತಿರಸ್ಕಾರ,
ಓ ಹಣವೇ ! ಎಲ್ಲವೂ ನಿನ್ನ ಮಹಿಮೆ ????

ನಿನ್ನ ಹಿಂದೆ ಓಡಿ…ಓಡಿ..ಗಳಿಸಿ ಸುಸ್ತಾಗಿ,
ಜೀವನದಿ ನೆಮ್ಮದಿ ಕಳೆದುಕೊಂಡವನಿಗೆ,
ಅನಾರೋಗ್ಯದ ಕುಣಿತ,ನೆಮ್ಮದಿಯಿಲ್ಲದ ಬಾಳು,
ನಿನ್ನ ಕೃಪಾಕಟಾಕ್ಷವೇ ಸಿಗದವನಿಗೆ,
ಬಡತನ..ಇದ್ದುದನೇ ಹಾಸುಂಡು ಬದುಕುವ ಛಲ !

- Advertisement -

ಓ ಹಣವೇ ! ಇಡೀ ಜಗತ್ತೇ ನಿನ್ನ ಹಿಂದೆ..
ನಿನ್ನ ಮಹಿಮೆ ಅಪಾರ….


ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು,ಪತ್ರಕರ್ತರು
ಮೊ:94496 80583,
63631 72368

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group