ದೀಪಾವಳಿ
ದೀಪದಿಂದ ದೀಪ ಹಚ್ಚಿ
ಬೆಳಕು ಪರಿಹರಿಸುವಂತೆ
ಮನುಷ್ಯರ ಮನದಿಂದ ಮನಕ್ಕೆ
ಪ್ರೀತಿ,ಸೌಹಾರ್ದತೆ,ಅನುಕಂಪ ಹಚ್ಚಿ
ನಾನು ನನ್ನದೆಂದು ತೊರೆದು
ಹೊಸ ಬೆಳಕು ಮೂಡಲಿ
ಸಹೋದರತೆ ಸಹಬಾಳ್ವೆ ಹೊಮ್ಮಲಿ
ಬಾಳು ಸೌಹಾರ್ದತೆಯ ಪ್ರತೀಕವಾಗಲಿ
ಅಂಧಕಾರವನ್ನು ತೊಡೆದು ಹಾಕಿ
ಜ್ಞಾನ ದೀವಿಗೆ ಹೊತ್ತಿಸಿ
ಅಂತರಂಗದ ಕಣ್ಣು ತೆರೆದು
ನಾವು ನಮ್ಮವರೆಂಬ ಭಾವ ಅರಳಿಸಿ
ಬೇದ ಭಾವ ಕಿತ್ತೆಸೆದು
ನಿಸ್ವಾರ್ಥದ ಬದುಕು ಸಾಗಿಸಿ
ಬಾಳು ನಂದನವನದಂತೆ
ದೀಪಗಳಾಗಿ ಜಗಮಗಿಸಿ ಬೆಳಕು ಚೆಲ್ಲಲಿ
ಚಿದಂಬರ ಬಡಿಗೇರ ಶಿಕ್ಷಕರು
ಹಣವಾಳ.