spot_img
spot_img

ಕಿತ್ತೂರಿನ ಎದುರು ಕೆಳದಿ ನೆನಪಿಗೇ ಬರವಲ್ದೂ..!!

Must Read

spot_img
- Advertisement -

ಕಿತ್ತೂರಿನ ಚೆನ್ನಮ್ಮನಂತೆ, ಅದರಲ್ಲೂ ಚೆನ್ನಮ್ಮನಿಗಿಂತಲೂ ಒಂದು ಶತಮಾನದ ಹಿಂದೆಯೇ ತನ್ನ ದಕ್ಷತೆ, ಕ್ಷಾತ್ರದಿಂದ ಔರಂಗಜೇಬನನ್ನೇ ಮಂಡಿಯೂರುವಂತೆ ಮಾಡಿದ “ಕೆಳದಿಯ ಚೆನ್ನಮ್ಮ” ಯಾಕೋ ಕಾಣೆ ಕಿತ್ತೂರ ಚೆನ್ನಮ್ಮನೆದುರು ಮಂಕಾಗಿ ಬಿಡುತ್ತಾಳೆ.ಮತ್ತು ನೆನಪಿನಿಂದಲೂ..‌!!

ಇರಲಿ ಬನ್ನಿ..
ಹಾಗೇ ತಿರುಗಾಡಿ ಕೊಂಡು ಕೆಳದಿಯ ಕಡೆ ಕೊಂಚ ಇಣುಕಿ ಬರೋಣು.

ಮೊದಲಿಗೆ ಕೆಳದಿಯ ರಾಜರು ವಿಜಯನಗರದರಸರ ಅಧೀನದಲ್ಲಿದ್ದ ಸಾಮಂತರು.ವಿಜಯನಗರದ ಪತನಾನಂತರ ಸ್ವತಂತ್ರವಾಗಿ ರಾಜ್ಯ ವಿಸ್ತರಿಸುತ್ತಾ ಶಿವಪ್ಪನಾಯಕನ ಕಾಲಕ್ಕೆ ಉಚ್ಚ್ರಾಯ ತಲುಪಿತ್ತು..

- Advertisement -

(ಕೆಳದಿ ಸಂಸ್ಥಾನಕ್ಕೆ ಬಿದನೂರು ಮತ್ತು ಇಕ್ಕೇರಿ ಅನ್ನುವ ಹೆಸರೂ ಇದೆ)

ನಂತರದಲ್ಲಿ ಪಟ್ಟಕ್ಕೆ ಬಂದ ಸೋಮ ಶೇಖರನಾಯಕನ ಪತ್ನಿಯಾಗಿ ಬಂದವಳೇ ಸಾಗರದ ವರ್ತಕ ಸಿದ್ದಪ್ಪ ಶೆಟ್ಟರ ಮಗಳು ಎಳೆವಯಸಿನ ಸ್ಪುರದ್ರೂಪಿ ಚೆನ್ನಮ್ಮ..
ಬಂದವಳಿಗೆ ಸಂಸಾರದ ಸುಖ ಸಿಕ್ಕಿದ್ದು ಅಷ್ಟರಲ್ಲೇ ಇತ್ತು..ಗಂಡ ಪುಂಡ, ಮತಿ ವಿಕಲ್ಪ , ದುಶ್ಚಟಗಳ ದಾಸ…. ಅಂದಿನ ಎಲ್ಲಾ ಮರಿ ರಾಜರಂತೆ..

- Advertisement -

ಕೊನೆಗೆ 1671 ಆತ ಕೊಲೆಯಾದಾಗ ರಾಜ್ಯ ಅರಾಜಕತೆಗೆ ಬಿತ್ತು. ಆದರೆ ಚೆನ್ನಮ್ಮ ಧೃತಿಗೆಡಲಿಲ್ಲ. ಸಿಂಹಾಸನ ಕಬಳಿಸಲು ನಿಂತ ಸ್ವಪಕ್ಷೀಯರನ್ನು ಮೆಟ್ಟಿನಿಂತು ರಾಣಿಯಾಗಿ ಸುಮಾರು ಇಪ್ಪತ್ತೈದು ( 1672- 1697 ) ವರ್ಷಗಳ ಕಾಲ ತನ್ನ ದೂರದೃಷ್ಟಿ , ಸ್ಥಿರ ಸಂಕಲ್ಪ, ಕಲಿತನಗಳಿಂದ ಬಿಜಾಪುರದ ಸುಲ್ತಾನರು ಮತ್ತು ಮೈಸೂರು ಅರಸರ ರಾಜ್ಯ ವಿಸ್ತರಣೆಗೆ ಅಡ್ಡನಿಂತು ರಾಜ್ಯವಾಳಿದ ವೀರ ವನಿತೆ ಆಕೆ..

ಆದರೆ ಅಕೆಯ ವೀರತನವನ್ನು ಅತೀ ಎತ್ತರಕ್ಕೆ ನಿಲ್ಲಿಸಿದ್ದು..ಪತನ ಗೊಂಡ ಮರಾಠ ಸಾಮ್ರಾಜ್ಯದ ರಾಜ ಶಿವಾಜಿಯ ಮಗ. ತಲೆ ಮರೆಸಿಕೊಂಡು ಬಂದಿದ್ದ ರಾಜಾರಾಮನಿಗೆ ಆಶ್ರಯ ಕೊಟ್ಟು ಆಕ್ರಮಿಸಲು ಬಂದಿದ್ದ ಮೊಗಲ್ ದೊರೆ ಕ್ರೂರಿ ಔರಂಗಜೇಬನಿಗೆ ಸವಾಲು ಹಾಕಿ ನಿಂತದ್ದು..

ಮತ್ತು ದಂಡೆತ್ತಿಬಂದ ಮೊಗಲ್ ಸೈನ್ಯವನ್ನು ಮಲೆನಾಡಿನ ಕಾಡು ಮೇಡುಗಳಲ್ಲಿ ತನ್ನ ಗೆರಿಲ್ಲಾ ಯುದ್ದದಿಂದ ಹೈರಾಣು ಮಾಡಿ ಸೋಲಿಸಿ ಅಂತಾ ಮೊಗಲ್ ರಾಜನನ್ನೆ ಸಂಧಾನಕ್ಕೆ ಹಾತೊರೆಯುವಂತೆ ಮಾಡಿ ಅಂದಿನ ಅತಿ ದೊಡ್ಡ ಸಾಮ್ರಾಜ್ಯದ ಅಧಿಪತಿಯನ್ನೆ ಮಂಡಿಯೂರುವಂತೆ ಮಾಡಿದ್ದು ಒಂದು ಪುಟ್ಟ‌ರಾಜ್ಯದ ಸಾಮ್ರಾಜ್ಞಿಯ ಹೆಗ್ಗಳಿಕೆ.

ಈಕೆ ಒಬ್ಬಾಕೆಯೇ ಅಲ್ಲ ಕಿತ್ತೂರ ಚೆನ್ನಮ್ಮನ ಸಾಲಿನಲ್ಲಿ ನಿಲ್ಲುವವರು..ಆಕೆಗಿಂತಲೂ ಮೊದಲೆ ಬೆಳವಲದ ಮಲ್ಲಮ್ಮ ..ಉಳ್ಳಾಲದ ಅಬ್ಬಕ್ಕ ದೇವಿ‌..ಬಿಜಾಪುರದ ಚಾಂದ್ ಬೀವಿ ತಮ್ಮ ಕ್ಷಾತ್ರದ ನೆನಪುಗಳನ್ನು ನಮಲ್ಲಿರಿಸಿದ್ದಾರೆ.

ಮೊನ್ನೆಯ ಕಿತ್ತೂರು ಜಯಂತಿಯಂದು ಇವೆಲ್ಲ ನೆಪ್ಪಿಗೆ ಬಂತು.

ಇನ್ನಾದರೂ ಆಗಾಗ ಇವರನ್ನೂ ನೆನಪಿಸಿ ಕೊಳ್ಳೋಣ.

ಹೇಮಂತ್ ಚಿನ್ನು
ಕರ್ನಾಟಕ ಶಿಕ್ಷಕರ ಬಳಗ

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group