spot_img
spot_img

ಕೃತಿ ಪರಿಚಯ

Must Read

- Advertisement -

ಪ್ರತಿ ಹಳ್ಳಿಯೂ ನೂರಾರು ವರ್ಷಗಳ ಇತಿಹಾಸವನ್ನು ತನ್ನ ಒಡಲಿನಲ್ಲಿ ಇರಿಸಿಕೊಂಡಿರುತ್ತದೆ.ನೀವು ನಗರವಾಸಿಗಳಾಗಿದ್ದಲ್ಲಿ,ಅನ್ಯ ಕಾರಣಗಳಿಂದ ನಿಮ್ಮ ಹಿರಿಯರು ಹಳ್ಳಿಯನ್ನು ತೊರೆದವರಾಗಿದ್ದಲ್ಲಿ ಬೇಸರವಾದಾಗ ನಿಮ್ಮ ಹಳ್ಳಿಗೆ ಹೋಗಿ ಒಂದೆರಡು ದಿನ ಮುಕ್ತವಾಗಿ ಹಳ್ಳಿಯಲ್ಲೇ ಇದ್ದರೆ ಅದರದೇ ಆದ ಜಾನಪದದ ಸೊಗಡಿಗೆ, ಗ್ರಾಮ್ಯಭಾಷೆಗೆ,ಅಲ್ಲಿನ ಜನರ ಬಾವಣಿಕೆಗೆ, ಆಚಾರ, ಆಹಾರ ಪದ್ಧತಿಗೆ ಮಾರು ಹೋಗುವಿರಿ. ನಿಮ್ಮ ಮಕ್ಕಳಿಗೆ ಹಳ್ಳಿಯ ಬದುಕೆ ಸೊಗಸಾಗಿ ಕಾಣುವುದು. ಅವು ಹಳ್ಳಿಯಲ್ಲಿ ಇನ್ನೆರಡು ದಿನ ಇರಬೇಕೆಂಬ ಆಸೆ ಪಡುತ್ತವೆ.

ಸಮಾಜಶಾಸ್ತ್ರ‌ಜ್ಞರು ನಗರಗಳನ್ನು ನಾಗರಿಕತೆಯ ತೊಟ್ಟಿಲು ಎನ್ನುವುದಾದರೆ, ಹಳ್ಳಿಗಳನ್ನು ಸಂಸ್ಕೃತಿಯ ಬಟ್ಟಲು ಎಂದು ಹೇಳದೆ ಇರುವರೇ? ಅನಾದಿ ಕಾಲದಿಂದಲೂ ಹರಿದು ಬಂದಿರುವ ಅಲ್ಲಿನ ಸಂಪ್ರದಾಯಗಳು,‌ಜಾತಿ ವ್ಯವಸ್ಥೆ ತುಂಬಿದ್ದರೂ ಸಹ,ಜಾತಿ ಜಾತಿಗಳ ನಡುವೆ ಸಾಮರಸ್ಯಕ್ಕೆ ಬಾಧಕವಾಗದು. ಕನಾ೯ಟಕದಲ್ಲಿ ಮೂವತ್ತು ಸಾವಿರಕ್ಕಿಂತಲೂ ಹೆಚ್ಚು ಹಳ್ಳಿಗಳಿದ್ದರೂ ಅಶಾಂತ ವಾತಾವರಣ ಎಲ್ಲಿಯೂ ಇಲ್ಲವೆಂದು ನೆನೆದರೆ ಸೋಜಿಗವೆನಿಸುತ್ತದೆ.

ಇದನ್ನೇ ‘ಸವ೯ಜನಾಂಗದ ಶಾಂತಿಯ ತೋಟ’ ವೆಂದು ಕುವೆಂಪು ಹೇಳಿರುತ್ತಾರೆ. ನನ್ನ ಇಷ್ಟೆಲ್ಲಾ ಪೀಠಿಕೆಗೆ ಕಾರಣ ಇರಲೇಬೇಕಲ್ಲ! ಅಚ೯ಕ ಬಿ. ರಂಗಸ್ವಾಮಿರವರಿಂದ ಬರೆದು ಪ್ರಕಟಿಸಿದ “ಹುಟ್ಟಿದ ಹಳ್ಳಿ”(1933) ಪುಸ್ತಕವು 1971ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದದಿಂದ ಮರು ಮುದ್ರಣಗೊಂಡಿದೆ.

- Advertisement -

ಅದನ್ನು ಇತ್ತೀಚೆಗೆ ಓದಿ ಮುಗಿಸಿದೆ. ಇದೊಂದು ಜಾನಪದ ಅಧ್ಯಯನಕ್ಕಾಗಿ, ಸಮಾಜಶಾಸ್ತ್ರಜ್ಞರಿಗೆ ಆಕರ ಗ್ರಂಥ ಆಗಬಲ್ಲದು. ಮೇಲ್ನೋಟಕ್ಕೆ ಒಂದು ಹಳ್ಳಿಯ( ಹೇಮಾವತಿ ನದಿ ತೀರದ ಬಂಡಿಹೊಳೆ ಎಂಬ ಗ್ರಾಮ) ಬದುಕನ್ನು ಸೆರೆ ಹಿಡಿದಿರುವ ಕನ್ನಡಿಯಂತಿದ್ದರೂ, ಬಯಲು ಸೀಮೆಯ ಹಳ್ಳಿಗಳ ಚಿತ್ರಣವನ್ನು ಬಿಂಬಿಸುವುದು. ಒಟ್ಟಾರೆ ಈ ಕೃತಿಯು ಗ್ರಾಮೀಣ ಜಗತ್ತನ್ನು ಯಥಾವತ್ತಾಗಿ ಸೆರೆಹಿಡಿದು ತೋರಿಸುವುದು.

ಈ ಕೃತಿಯಲ್ಲಿ ಹಳ್ಳಿಯ ಸಮಸ್ತ ಜೀವನಕ್ರಮ, ಅದರ ಭಾಗವಾದ ಸಾಮಾನ್ಯರ ಬದುಕನ್ನು,ಮತ್ತವರಲ್ಲಿನ ತುಂಬಿದ ಜೀವಂತಿಕೆಯನ್ನು ಓದುಗರು ಆಸ್ವಾದಿಸಬಲ್ಲರು. ಈ ಕೃತಿಯಲ್ಲಿ 600ಕ್ಕೂ ಮಿಕ್ಕ ಗಾದೆಗಳು ಸಂಗ್ರಹಿತವಾಗಿವೆ.ಇದಲ್ಲದೆ ಕೋಲಾಟದ ಪದಗಳು,ಸೋಬಾನೆ ಪದಗಳು,ದೇವರ ಸ್ತುತಿಗಳು,ಸುಗ್ಗಿ ಪದಗಳು,ಲಾವಣಿಗಳಿಂದ ಕೂಡಿವೆ..

“ಪಾಮರ ಸಾಹಿತ್ಯವನ್ನು ಉದಾಸೀನ ಮಾಡಬೇಡಿ” ಎಂದು ಆಗಿನ ಕಾಲದ ಪತ್ರಿಕೆಯಾದ ‘ವಿಶ್ವ ಕನಾ೯ಟಕ’ದಲ್ಲಿ ಬರೆದಿದ್ದು,ಈ ಕೃತಿಯು ‘ಹುಟ್ಟಿದ ಹಳ್ಳಿ’ಯಾಗಿ ಪರಿಣಮಿಸಿತು ಎಂದು ಕೃತಿಕಾರರಾದ ರಂಗಸ್ವಾಮಿಯವರು ವಿನಯದಿಂದ ಹೇಳಿರುವರು.

- Advertisement -

“ಪಾಮರ”ಎಂಬ ಪದದ ಅರ್ಥವೂ ಒಕ್ಕಲ ಮಕ್ಕಳು(ಒಕ್ಕಲಿಗರು), ರೈತರನ್ನು ಕುರಿತಂತೆ ಇದೆ. ಈ ಕೃತಿಯ ಅಂತಿಮ ಭಾಗದಲ್ಲಿ ಹಳ್ಳಿಯವರ ಮಾತಿನ ರೀತಿಯ ಸಂಭಾಷಣೆಗಳನ್ನು ಓದುತ್ತಿದ್ದರೆ ನೆಲದ ದನಿಯೂ ಎಷ್ಟೊಂದು ವೈವಿಧ್ಯಮಯವೂ, ಅವಣ೯ನೀಯವೂ ಆಗಿರುವುದರ ಬಗ್ಗೆ ಹೆಮ್ಮೆಪಡಬೇಕು.ಇದೇ ಮಾದರಿಯಲ್ಲಿ “ಹಳ್ಳಿ ಹಾಡುಗಳು” ಎಂಬ ಕೃತಿಯನ್ನು ಗೊರೂರು ರಾಮಸ್ವಾಮಿ ಅಯ್ಯಂಗಾರ್ ರವರಿಂದ ಬರೆಯಲಾಗಿದೆ.

ಹುಟ್ಟಿದ ಹಳ್ಳಿ ಪುಸ್ತಕವೂ ಓದಲು ಬೇಕೆಂದರೂ ಸಿಗುವುದು ದುಲ೯ಭ.ಈ ಕೊರತೆಯನ್ನು ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಕ್ರಮಕ್ಕೆ ತಂದರೆ ಸುಲಭದ ದರದಲ್ಲಿ ಓದುಗರಿಗೆ ಸಿಗುವುದು .ಪ್ರತಿಯೊಬ್ಬ ಒಕ್ಕಲು ಮಕ್ಕಳು ಕೃತಿಯನ್ನು ಓದಿದ್ದಾದರೆ ‘ನಮ್ಮೂರೇ ನಮಗೆ ಮೇಲು’ಎಂದು ಅವರ ಹಳ್ಳಿಯ ಮೇಲಿನ ಪ್ರೀತಿ ನೂಮ೯ಡಿಯಾಗುವುದರಲ್ಲಿ ಎರಡು ಮಾತಿಲ್ಲ.

ಸದರಿ ಕೃತಿಯನ್ನು ಕುರಿತು ಸಾಹಿತ್ಯ ಲೋಕದಹಿರಿಯ ದಿಗ್ಗಜರುಗಳಾದ ತೀನಂಶ್ರೀ,ತಿ ತಾ ಶಮ೯, ಗೋರೂರು, ಜಿಶಂಪ,ರವರು ಒಳ್ಳೆಯ ಅಭಿಪ್ರಾಯ ನೀಡಿರುವುದು ಕೃತಿಯ ಮೆರುಗನ್ನು ಹೆಚ್ಚಿಸಿದೆ.

-ಕೆ. ಎನ್. ಶಿವ ಶಂಕರ್, ಬೆಂಗಳೂರು

- Advertisement -
- Advertisement -

Latest News

ಮೈಸೂರು ರೋಟರಿ ಐವರಿ ಸಿಟಿ ವತಿಯಿಂದ ಮಾರ್ಗದರ್ಶಕ ಪ್ರಶಸ್ತಿ

ಮೈಸೂರು -ಮೈಸೂರು ನಗರದ ರೋಟರಿ ಐವರಿ ಸಿಟಿ ಅಫ್ ಮೈಸೂರು ವತಿಯಿಂದ ಜಯಲಕ್ಷ್ಮಿ ಪುರಂನ ಸತ್ಯ ಸಾಯಿಬಾಬಾ ಶಿಕ್ಷಣ ಸಂಸ್ಥೆಯ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಕೆ.ಬಿ.ಪ್ರಭು...
- Advertisement -

More Articles Like This

- Advertisement -
close
error: Content is protected !!
Join WhatsApp Group