spot_img
spot_img

ಜೂನ್ 5 :ವಿಶ್ವ ಪರಿಸರ ದಿನ

Must Read

spot_img
- Advertisement -

World environment day

United Nation Environment Programme ಸಂಸ್ಥೆ 1973
ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲು ಕರೆ ನೀಡಿತು. ಸಾಮಾನ್ಯವಾಗಿ ನಾವೆಲ್ಲರು ಅಭಿವೃದ್ದಿ ನೆಪದಲ್ಲಿ ,ಅತಿಯಾದ ಜನಸಂಖ್ಯೆ ಹೆಚ್ಚಳ,ಕೈಗಾರಿಕೆಗಳ ಹೆಚ್ಚಳ, ಜಲ ಮಾಲಿನ್ಯ, ವಾಯು, ಧ್ವನಿ ಮಾಲಿನ್ಯ, ಕಾಡು ನಾಶ…ಹೀಗೆ ಹತ್ತು ಹಲವಾರು ಕಾರಣಗಳಿಂದ ಪರಿಸರ ಮಾಲಿನ್ಯ ಮುಂದುವರೆದಿದೆ

ಜಲಮಾಲಿನ್ಯ,ಭೂ ಮಾಲಿನ್ಯ ,ವಾಯುಮಾಲಿನ್ಯ, ಶಬ್ದಮಾಲಿನ್ಯಗಳಿಂದ ಪರಿಸರ ಹಾಳಾಗಿ ಪಕ್ಷಿಸಂಕುಲ , ಪ್ರಾಣಿ, ವನ್ಯಜೀವಿಗಳು, ಅತಿಯಾದ ಮಳೆ (flood) ಕಾಡ್ಗಿಚ್ಚು, ಇತ್ತೀಚಿಗೆ ಬಂದ ಮಿಡತೆ ಹಾವಳಿ ಹೀಗೆ ಒಂದಲ್ಲ, ಎರಡಲ್ಲ ಅನೇಕ ರೀತಿ ಪ್ರಕೃತಿ ಸಮತೋಲನ ವಿಫಲವಾಗುತ್ತ ಹೊರಟಿದೆ.

ಜೀವಿಗಳು ಜೀವಿಸಲು ಬೇಕಾದ ಪರಿಸರ ಭೂಮಿ ಮೇಲೆ ಮಾತ್ರ ವಿದೆ, ಇದ್ದ ಒಂದು ಪರಿಸರವನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿದೆ ..ಇದೇ ರೀತಿಯಾಗಿ ಪರಿಸರ ನಾಶ ಮಾಡುತ್ತ ಹೋದರೆ ಭೂಮಿ ಬರಡಾಗಿ ಬಿಡುತ್ತದೆ…

- Advertisement -

ಮುಖ್ಯವಾಗಿ ನಾವು ಭಾರತೀಯರು ಭೂಮಿಯನ್ನು ತಾಯಿ ಸಮಾನ ಪೂಜಿಸುತ್ತೇವೆ.

ಆದ್ದರಿಂದ ನಮ್ಮೆಲ್ಲರ ಆದ್ಯತೆ ಪರಿಸರ, ಅರಣ್ಯ, ನಿರ್ವಹಣೆಗೆ, ಸ್ವಚ್ಛತೆ, ನೆಲ ,ಆಹಾರ ,ವನ್ಯಮೃಗಗಳು, ಪಕ್ಷಿಸಂಕುಲ,
ಸಮುದ್ರಜೀವೀ ಅನೇಕ ರೀತಿಯ ಜೀವರಾಶಿ ಸಮತೋಲನ ಸಾಧ್ಯವಾದಷ್ಟು ನಾವು ಮುಂದಿನ ಪೀಳಿಗೆಗೆ ಕಾಯ್ದಕೊಳ್ಳಬೇಕು. ಪರಿಸರ ದಿನ ಕೇವಲ ಜೂನ್ ೫ ಅಥವಾ ಭಾಷಣಕ್ಕೆ ಮಾತ್ರ ಸೀಮಿತವಾಗದೆ ಅಥವಾ ಜೂನ್ ತಿಂಗಳು ಮಾತ್ರ ಸೀಮಿತವಾಗದೇ ಹೆಚ್ಚು ಕಾಳಜಿವಹಿಸಿ ಸ್ವಚ್ಛ ಪರಿಸರಕ್ಕಾಗಿ ನಾವೆಲ್ಲ ಒಂದಾಗೋಣ. ಪ್ರತಿನಿತ್ಯ ನಮ್ಮ ಪರಿಸರ ಸಂರಕ್ಷಿಸೋಣ.

ಇಂದಿನ ಕೊರೋನಾದಿಂದಾಗಿ ಸ್ವಲ್ಪ ಮಟ್ಟಿಗೆ ಪರಿಸರ ಸ್ವಷ್ಛವಾಗಿದೆ ಎಂದೇ ಹೇಳಬೇಕು. ಲಾಕ್ ಡೌನ್ ಘೋಷಿಸಿದ್ದರಿಂದ ಮನುಷ್ಯರ, ವಾಹನಗಳ ಓಡಾಟ ಕಡುಮೆಯಾಗಿ ದಿಲ್ಲಿ, ಮುಂಬೈ, ಚೆನ್ನೈ, ಕೊಲ್ಕತ್ತಾ, ಬೆಂಗಳೂರು ಮತ್ತಿತರ ಮಹಾನಗರಗಳ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದ್ದು ಗಮನೀಯ. ಪ್ರಮುಖ ನದಿಗಳಾದ ಗಂಗಾ ಯಮುನಾ ನದಿಗಳು ಸ್ಪಟಿಕದಂತೆ ಸ್ವಚ್ಛ ವಾಗಿದ್ದು ಜಲಚರಗಳು ನಿಟ್ಟುಸಿರು ಬಿಡುವಂತೆ ಆಗಿದೆ.

- Advertisement -

ಇದರಿಂದ ತಿಳಿಯುವುದೇನೆಂದರೆ ಮಾನವನೇ ಪರಿಸರ ಹಾಳಾಗಲು ಮೂಲ ಕಾರಣ ಎಂದು. ನಾವು ವಾಸಿಸುವ ಪರಿಸರ, ನಮಗೆ ಅಗತ್ಯವಾಗಿರುವ ಪರಿಸರ ಸ್ವಚ್ಛವಾಗಿದ್ದರೆ ಮಾತ್ರ ನಾವು, ನಮ್ಮ ಮುಂದಿನ ಪೀಳಿಗೆ ಆರೋಗ್ಯಯುತವಾಗಿ ಬದುಕಲು ಸಾಧ್ಯ. ಆದ್ದರಿಂದ ಪರಿಸರ ಉಳಿಸಲು ನಾವೆಲ್ಲ ಬದ್ಧರಾಗಬೇಕಾಗಿದೆ. ಅದಕ್ಕಾಗಿ ಕೆಲವು ನಿಯಮಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು…

* ಹೊಗೆ ಸೂಸುವ ವಾಹನಗಳ ನಿಷೇಧ ಮಾಡಬೇಕು.
* ಮಿತಿ ಮೀರಿ ನೀರಿನ ಬಳಕೆ ಅಥವಾ ಪೋಲು ಮಾಡಬಾರದು.
* ಕಸವನ್ನು ಎಲ್ಲೆಂದರಲ್ಲಿ ಬಿಸಾಕದೇ ಕೇವಲ ಬುಟ್ಟಿಯಲ್ಲಿ ಮಾತ್ರ ಬಿಸಾಕೋಣ
* ವಿನಾಕಾರಣ ಹಾರ್ನ್ ಹಾಕದೆ ಗಾಡಿ ಚಲಾಯಿಸೋಣ
* ಮುಖಕ್ಕೆ ಮಾಸ್ಕ್ ಹಾಕದೇ ಹೊರ ಹೋಗಬಾರದು
* ಗಟರುಗಳಲ್ಲಿ ಕಸ ಹಾಕಬಾರದು
* ನದಿಗಳು ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು
* ಮನೆಯ ಕಸವನ್ನು ಪಾಲಿಕೆಯ ಗಾಡಿಯವರಿಗೇ ಕೊಡೋಣ
* ಗಿಡಗಳನ್ನು ಕಡಿಯಬಾರದು
* ವರ್ಷಕ್ಕೊಂದು ಗಿಡ ನೆಡೋಣ ಅಥವಾ ಗಿಡ ನೆಡಲು ಪ್ರೋತ್ಸಾಹಿಸೋಣ

ಪರಿಸರ ರಕ್ಷಣೆ, ಎಲ್ಲರ ಹೊಣೆ

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group