spot_img
spot_img

ದಿನಕ್ಕೊಂದು ಕಥೆ

Must Read

spot_img
- Advertisement -

ಕಟಕ್ ನಿಂದ ಕಲಕತ್ತಾಗೆ ಹೋಗುವ ರೈಲು ಇನ್ನೇನು ಬಿಡುತ್ತಿದೆ ಎನ್ನುವಷ್ಟರಲ್ಲಿ, ಸೂಟು ಬೂಟು ಧರಿಸಿದ್ದ, ಸುಮಾರು 14 ವಯಸ್ಸಿನ, ಶ್ರೀಮಂತ ಕುಟುಂಬದವನೆನ್ನಬಹುದಾದ ಯುವಕನೊಬ್ಬ ಓಡುತ್ತ ಬಂದು, ರೈಲು ಹತ್ತಿದ.

ಇದೀಗ ರೈಲು ಹತ್ತಿ ಇನ್ನೂ ಬಾಗಿಲ ಬಳಿಯೇ ಇದ್ದ, ಸಾದಾ ಖಾದಿ ಬಟ್ಟೆ ಧರಿಸಿದ್ದ ಹಿರಿಯರೊಬ್ಬರು, ಓಡೋಡಿ ಬರುತ್ತಿದ್ದ ಆ ಹುಡುಗನಿಗೆ ಕೈ ಕೊಟ್ಟು ಮೇಲೆ ಏರಲು ಸಹಾಯ ಮಾಡಿದರು.

ರೈಲಿನಲ್ಲಿ ಆ ಹುಡುಗ ಮತ್ತು ಆ ಹಿರಿಯರು ಒಂದೇ ಸೀಟಿನಲ್ಲಿ ಕುಳಿತರು. ಆಗ ಹುಡುಗ ಉಶ್ ಎನ್ನುತ್ತ, “ರೈಲು ಹಿಡಿಯಬಾಕಾದರೆ ಸಾಕುಸಾಕಾಗಿ ಹೋಯಿತು” ಎಂದು ಎದುಸಿರು ಬಿಡುತ್ತ ತನ್ನ ಕರ್ಚೀಫ್ ತೆಗೆದು, ಮುಖ ಒರೆಸಿಕೊಂಡ
ಆ ಹಿರಿಯರು ಆ ಹುಡುಗನ್ನು ಕುರಿತು, “ಮಗು ಇಷ್ಟು ಗಡಿಬಿಡಿಯಿಂದ ಎಲ್ಲಿಗೆ ಹೋಗುತ್ತಿರುವಿ ? ಏನು ಕೆಲಸ ?” ಎಂದರು. ಆಗ ಆ ಹುಡುಗ, “ಇವತ್ತು ಸಾಯಂಕಾಲ ಕಲಕತ್ತಾ ನಗರದಲ್ಲಿ, ಈಶ್ವರಚಂದ್ರ ವಿದ್ಯಾಸಾಗರ ಅವರ ಭಾರತ ಸ್ವಾತಂತ್ರ್ಯದ ಕುರಿತು ಬೃಹತ್ ಭಾಷಣದ ಕಾರ್ಯಕ್ರಮವಿದೆ ; ಅದನ್ನು ಕೇಳಲು ಹೋಗುತ್ತಿದ್ದೇನೆ.

- Advertisement -

ನಮ್ಮ ತಂದೆಯವರ ಪ್ರಭಾವದಿಂದ ನನಗೆ ಆ ಕಾರ್ಯಕ್ರಮದಲ್ಲಿ, ಗಣ್ಯರು ಕುಳಿತುಕೊಳ್ಳುವ ಮುಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಗೌರವ ಪಾಸ್ ದೊರೆತಿದೆ, ಆ ಕಾರಣದಿಂದಾಗಿ, ನಾನು ವಿದ್ಯಾಸಾಗರರನ್ನು ಅತ್ಯಂತ ಸಮೀಪದಿಂದ ನೋಡಬಹುದು” ಎಂದು ತನ್ನ ಶ್ರೀಮಂತ ತಂದೆಯ ಬಗ್ಗೆ ಹೆಮ್ಮೆಯಿಂದ ಕೊಚ್ಚಿಕೊಂಡ.

ಹಿರಿಯರು : ಈ ವಿದ್ಯಾಸಾಗರರೆಂದರೆ ಯಾರು ? ಅವರನ್ನು ನೋಡಲು ನೀನೇಕೆ ಇಷ್ಟು ಆತುರನಾಗಿದ್ದೀಯಾ ? ಈ ಹಿಂದೆ ನೀನು ಯಾವಾಗಲೂ ಅವರನ್ನು ನೋಡಿಯೇ ಇಲ್ಲವೆ ?

ಹುಡುಗ : ಏನು ? ಈಶ್ವರಚಂದ್ರ ವಿದ್ಯಾಸಾಗರರ ಹೆಸರನ್ನು ನೀವು ಕೇಳಿಯೇ ಇಲ್ಲವೇ ? ನನಂತೆ ನೀವೂ ಅವರನ್ನು ನೋಡಿರಲಿಕ್ಕಿಲ್ಲ, ಆದರೆ ಅವರ ಹೆಸರನ್ನೇ ಕೇಳಿಲ್ಲವೆಂದರೆ, ನೀವು ತುಂಬಾ ಅಪ್ರಭುದ್ಧರು, ಅವರಂತಹ ಮಹಾನ್ ದೇಶಭಕ್ತ, ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ, ಮೇಧಾವಿಯ ಹೆಸರನ್ನೇ ನೀವು ಕೇಳಿಲ್ಲವೆಂದರೆ, ನಿಮ್ಮ ಜೀವನವೇ ವ್ಯರ್ಥ”
” ಹೇಗಿದ್ದರೂ ನೀವೂ ಕಲಕತ್ತೆಗೇ ಬರುತ್ತಿದ್ದೀರಿ, ಇವತ್ತು ಸಾಯಂಕಾಲ ಆ ಕಾರ್ಯಕ್ರಮಕ್ಕೆ ಬನ್ನಿ, ವಿದ್ಯಾಸಾಗರರ ಮಾತುಗಳನ್ನು ಕೇಳಿದ ಮೇಲಾದರೂ, ನಿಮಗೆ ಅವರ ವ್ಯಕ್ತಿತ್ವದ ಪರಿಚಯವಾಗುತ್ತದೆ”

- Advertisement -

ಕಲಕತ್ತಾ ಸ್ಟೇಶನ್ನಿನಲ್ಲಿ ಇಳಿದ ಆ ಹುಡುಗ “ಕೂಲಿ ಕೂಲಿ” ಎಂದು ಕೂಗುತ್ತಿದ್ದ, ಅವನ ಹಿಂದೆಯೇ ಬಂದ ಆ ಹಿರಿಯರು, “ಮಗು ನಿನ್ನ ಕೈಯಲ್ಲಿರುವುದು ಅತೀ ಸಣ್ಣದಾದ ಒಂದೇ ಸೂಟಕೇಸು, ಇದಕ್ಕೆ ಕೂಲಿಯವನೇಕೆ ಬೇಕು” ಎಂದರು

“ಸ್ಟೇಶನ್ನಿನ ಹೊರಗಡೆ ಇರುವ ಟ್ಯಾಕ್ಷಿಯತನಕ ಇದನ್ನು ನಾನೇ ಹಿಡಿದುಕೊಂಡು ಹೋಗಬೇಕೆ ? ಶ್ರೀಮಂತರಾದ ನನ್ನ ತಂದೆಯವರು ಇದಕ್ಕೆಲ್ಲಾ ಸಾಕಷ್ಟು ದುಡ್ಡು ಕೊಟ್ಟಿದ್ದಾರೆ” ಎಂದ ಆ ಹುಡುಗ.

3, 4 ನಿಮಿಷಗಳತನಕ ಯಾವ ಕೂಲಿಗಳೂ ಅತ್ತ ಬರದಿದ್ದುದರಿಂದ, ಆ ಹಿರಿಯರೇ, “ನನಗೆ ನಾಳೆ ಮುಂದಿನ ಊರಿಗೆ ಹೋಗಲು ಸ್ವಲ್ಪ ಹಣದ ಅಡಚಣೆ ಇದೆ, ನಾನೇ ಟ್ಯಾಕ್ಸಿಯವರೆಗೂ ನಿನ್ನ ಲಗೇಜ್ ಹಿಡಿದುಕೊಂಡು ಬರುತ್ತೇನೆ” ಎಂದು ಸೂಟಕೇಸ್ ಹಿಡಿದುಕೊಂಡು ಹೊರಟರು.

ಟ್ಯಾಕ್ಸಿ ಹತ್ತಿದ ಆ ಯುವಕ ಆ ಹಿರಿಯನಿಗೆ ದುಡ್ಡು ಕೊಟ್ಟು, ಸಾಯಂಕಾಲದ ಕಾರ್ಯಕ್ರಮಕ್ಕೆ ಮರೆಯದೇ ಬರಲು ಮತ್ತೊಮ್ಮೆ ನೆನಪಿಸಿದ.

ಆ ಯುವಕ ಕಲಕತ್ತೆಯಲ್ಲಿದ್ದ ತನ್ನ ನೆಂಟರ ಮನೆಯಲ್ಲಿ ವಿಶ್ರಾಂತಿ ಪಡೆದು, ಸಾಯಂಕಾಲ ನಡೆಯುವ ಕಾರ್ಯಕ್ರಮಕ್ಕೆ ಸ್ವಲ್ಪ ಮುಂಚಿತವಾಗಿಯೇ ಬಂದರೂ, ಸಹಸ್ರಾರು ಜನರು ಸೇರಿ, ಇವನಿಗೆ ಒಳಗೆ ಹೋಗಲು ಸಾಧ್ಯವಾಗಲೇ ಇಲ್ಲ ; ಜನರ ಮಧ್ಯದಿಂದಲೇ ಇಣುಕಿ ಇಣುಕಿ ನೋಡುತ್ತ, ವಿದ್ಯಾಸಾಗರರು ವೇದಿಕೆಗೆ ಬರುವುದನ್ನು ಕಾತುರದಿಂದ ಕಾಯುತ್ತಿದ್ದ.

ಕಾರ್ಯಕ್ರಮದ ಸಂಘಟಕರು ವಿದ್ಯಾಸಾಗರರು ವೇದಿಕೆಗೆ ಬರುವುದನ್ನು ಘೋಷಿಸುತ್ತಿದ್ದಂತೆ, ವಿದ್ಯಾಸಾಗರರು ವೇದಿಕೆಗೆ ಬರುತ್ತಿದ್ದಂತೆ, ಈ ಯುವಕನಿಗೆ ಬರಸಿಡಿಲು ಬಡಿದಂತಾಯ್ತು ! ತನ್ನ ಸೂಟಕೇಸನ್ನು ಹೊತ್ತೊಯ್ದ ಆ ಹಿರಿಯರೇ ವಿದ್ಯಾಸಾಗರರಾಗಿದ್ದರು !

ತನ್ನ ಎರಡೂ ಕೈಗಳಿಂದ ರಪರಪನೇ ತನ್ನ ಕೆನ್ನೆಯನ್ನು ಬಡಿದುಕೊಳ್ಳುತ್ತಾ, ತಾನು ಎಂತಹ ದುಷ್ಕೃತ್ಯವನ್ನೆಸಗಿದೆ. ಮಹಾನ್ ಮೇಧಾವಿಗಳಾದ ಈಶ್ವರಚಂದ್ರರನ್ನೇ ನನ್ನ ಕೂಲಿಯಾಳನ್ನಾಗಿ ಮಾಡಿಕೊಂಡೆನಲ್ಲಾ ಎಂದು ಪಶ್ಚಾತ್ತಾಪದಿಂದ ಅಳಲು ಶುರುಮಾಡಿದ.

ವಿದ್ಯಾಸಾಗರರ ಭಾಷಣವು ಮುಗಿಯುವತನಕವೂ ಅಳುತ್ತಿದ್ದ ಆ ಯುವಕನು, ಕಾರ್ಯಕ್ರಮವು ಮುಗಿಯುತ್ತಿದ್ದಂತೇ, ವಿದ್ಯಾಸಾಗರರ ಕಾಲಿಗೆ ಬಿದ್ದು ಕ್ಷಮೆ ಕೇಳಬೇಕೆಂದು, ಜನರ ನೂಕು ನುಗ್ಗಲನ್ನು ಭೇಧಿಸಿ ಒಳನುಗ್ಗಿದ, ಸಮೀಪಕ್ಕೆ ಹೋದಂತೆ, ರಕ್ಷಣಾ ಸಿಬ್ಬಂದಿಯವರು ತಡೆದು ನಿಲ್ಲಿಸಿದಾಗ, ಅಲ್ಲಿ ದೊಡ್ಡ ಗಲಾಟೆಯೇ ನಡೆಯಿತು.

ನಂತರ ಇದು ವಿದ್ಯಾಸಾಗರರ ಗಮನಕ್ಕೆ ಬಂದಾಗ, ಅವರೇ ಅವನನ್ನು ತಮ್ಮ ಬಳಿ ಬಿಡಲು ತಿಳಿಸಿದರು. ಆ ಯುವಕ ವಿದ್ಯಾಸಾಗರರ ಕಾಲ ಮೇಲು ಬಿದ್ದು, ತಪ್ಪಾಯಿತೆಂದು ಹೊರಳಾಡಿದ. ಕೊನೆಗೆ ವಿದ್ಯಾಸಾಗರರೇ ಅವನನ್ನು ತಬ್ಬಿಕೊಂಡು ಸಮಾಧಾನ ಮಾಡಿದರು.

ಸ್ವಾತಂತ್ರ ಹೋರಾಟಗಾರರೆಂದರೆ, ಅವರ ಸರಳ ಜೀವನ, ವಿನಮ್ರಪೂರ್ವಕವಾದ ನಡವಳಿಕೆ, ಹಾಗೂ ಕಠಿಣ ಜೀವನ ಪಯಣ ಎಂಥದ್ದೆಂದು ಆ ಯುವಕನಿಗೆ ತಿಳಿದದ್ದು ಆಗಲೇ.
ಅಂದ ಹಾಗೆ ವಿದ್ಯಾಸಾಗರರೊಂದಿಗೆ ಆ ರೀತಿ ನಡೆದುಕೊಂಡ ಆ ಯುವಕ ಯಾರು ಗೊತ್ತೆ ?

ಮುಂದೊಂದು ದಿನ ಸ್ವಾತಂತ್ರ ಹೋರಾಟದ ಅಗ್ರಗಣ್ಯ ನಾಯಕನಾಗಿ, ಸ್ವಾತಂತ್ರ್ಯಕ್ಕಾಗಿ ಇಡೀ ತನ್ನ ಜೀವವನ್ನೇ ಪಣವಾಗಿಟ್ಟು, ನಮಗೆ ಸ್ವಾತಂತ್ರ್ಯ ತಂದುಕೊಟ್ಟ ವೀರಾಗ್ರಣಿ ನೇತಾಜಿ ಸುಭಾಸ್ ಚಂದ್ರ ಭೋಸ್ ! ! !

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group