ನಮ್ಮ ದಿನದಿತ್ಯದ ಭರಾಟೆಯಲ್ಲಿ ನಿರ್ಲಕ್ಷ್ಯ ಕ್ಕೊಳಗಾಗುವ ಅಂಗವೆಂದರೆ ಕಣ್ಣು. ಅದರಲ್ಲೂ ಮೊದಲು ಕಂಪ್ಯೂಟರ್ ಆದ ನಂತರ ಈಗ ಮೊಬೈಲ್ ಉಪಯೋಗದಿಂದಾಗಿ ಕಣ್ಣುಗಳ ಮೇಲೆ ಭಾರೀ ಒತ್ತಡ ಬೀಳುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ ಕಣ್ಣುಗಳು ಹಾನಿಯಾಗುವುದು ಗೊತ್ರಿದ್ದರೂ ಮೊಬೈಲ್ ಅನಿವಾರ್ಯ ಅನ್ನಿಸಿರುವುದರಿಂದ ಯಾರೂ ಕಣ್ಣುಗಳ ಆರೋಗ್ಯದ ಕಡೆಗೆ ಗಮನ ಕೊಡುತ್ತಿಲ್ಲ.
ದೇಹ ಅತ್ಯಂತ ಪ್ರಮುಖ ಅಂಗವೆಂದರೆ ಕಣ್ಣುಗಳು. ಅವುಗಳ ಆರೋಗ್ಯ ನಮ್ಮ ಕರ್ತವ್ಯ. ಕಣ್ಣುಗಳೇ ಇಲ್ಲದಿದ್ದರೆ ಜೀವನದಲ್ಲಿ ಯಾವ ಸಾರ್ಥಕತೆ ಇರುವುದಿಲ್ಲ ಆದ್ದರಿಂದ ಕಣ್ಣಿನ ರಕ್ಷಣೆಗೆ ಕೆಲವು ಆಹಾರ ಪದಾರ್ಥ ಸೇವಿಸಬೇಕು. ಅಂಥ ಯಾವ ಪದಾರ್ಥ ಎಂಬುದನ್ನು ನೋಡೋಣ ಬನ್ನಿ.
ಗಜ್ಜರಿ ತಿನ್ನಿ
ಕಣ್ಣಿನ ದೃಷ್ಟಿ ಹೆಚ್ಚಿಸುವಲ್ಲಿ ಗಜ್ಜರಿ ಪ್ರಮುಖವಾಗಿದೆ. ಇದರಲ್ಲಿ B12 ದಂಥ ವಿಟಮಿನ್ ಹೇರಳವಾಗಿದೆ. ಗಜ್ಜರಿ ಅಲ್ಲದೆ ನಿಂಬೆ, ಆರೇಂಜ್ ಹಾಗು ಸಿಟ್ರಸ್ ಹಣ್ಣುಗಳನ್ನೂ ಹೆಚ್ಚು ಸೇವಿಸಿ ಕಣ್ಣುಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ಸಿಹಿ ಬಟಾಟೆ
ಬೀಟಾ ಕೆರೋಟಿನ್ ಹೆಚ್ಚಾಗಿರುವ ಸಿಹಿ ಬಟಾಟೆ ಕಣ್ಣಿಗೆ ಒಳ್ಳೆಯದು. ಇದನ್ನು ಕುದಿಸಿ ಸೇವಿಸಬಹದು ಅಥವಾ ಆಲಿವ್ ಆಯಿಲ್ ನಲ್ಲಿ ಹುರಿದು ಸೇವಿಸಬಹುದು.
ಮೀನು ಸೇವನೆ
ತಾಜಾ ಸಾಲ್ಮನ್ ಮೀನು ಸೇವನೆಯಿಂದ ಕಣ್ಣಿನ ದೃಷ್ಟಿಗೆ ತುಂಬ ಅನುಕೂಲ.ಇದರಲ್ಲಿರುವ ಓಮೇಗಾ ೩ ಕೊಬ್ಬು ದೇಹದ ಆರೋಗ್ಯದ ಜೊತೆಗೆ ಕಣ್ಣಿನ ಆರೋಗ್ಯವನ್ನೂ ಹೆಚ್ಚಿಸುತ್ತದೆ. ವಾರದಲ್ಲಿ ಎರಡು ದಿನ ಮೀನು ಸೇವನೆ ಮಾಡಬಹುದು.
ಒಣ ಹಣ್ಣುಗಳು
ಒಣ ಹಣ್ಣುಗಳಲ್ಲಿ ವಿಟಾಮಿನ್ ಎ ಇರುತ್ತದೆ. ಇವುಗಳ ಸೇವನೆಯಿಂದ ಕಣ್ಣಿನ ಆರೋಗ್ಯ ಹೆಚ್ಚಿಸಿಕೊಳ್ಳಬಹುದು. ಒಣದ್ರಾಕ್ಷಿ, ಬಾದಾಮಿ ಬೀಜ, ಅಕ್ರೋಡ, ಗೋಡಂಬಿ ಹಾಗೂ ಪಿಸ್ತಾಗಳಂಥ ಒಣ ಹಣ್ಣುಗಳ ಸೇವನೆಯಿಂದಲೂ ಕಣ್ಣಿನ ದೃಷ್ಟಿ ಹೆಚ್ಚಿಸಿ ಕೊಳ್ಳಬಹುದು