Homeಆರೋಗ್ಯಮೂಗಿನಲ್ಲಿ ತುಪ್ಪ ಹಾಕಿಕೊಳ್ಳಿ ಅನೇಕ ಪ್ರಯೋಜನಗಳುಂಟು !!

ಮೂಗಿನಲ್ಲಿ ತುಪ್ಪ ಹಾಕಿಕೊಳ್ಳಿ ಅನೇಕ ಪ್ರಯೋಜನಗಳುಂಟು !!

ಮಾನವ ಶರೀರದ ದೋಷಗಳಾದ ವಾತ, ಪಿತ್ತ ದೋಷಗಳನ್ನು ಸಮತೋಲಿತವಾಗಿ ಇಡಲು ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಆಯುರ್ವೇದ ಹೇಳುತ್ತದೆ. ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಈ ದೋಷಗಳನ್ನು ಸಮತೋಲಿತವಾಗಿ ಕಾಪಾಡುತ್ತವೆ ಎನ್ನಲಾಗಿದೆ.

ವಾತ ಹಾಗೂ ಪಿತ್ತ ದೋಷದ ಸಂಕೇತಗಳಾದ ಮೈಗ್ರೇನ್, ಮಾನಸಿಕ ಗೊಂದಲ, ಉದ್ವೇಗ, ಖಿನ್ನತೆ, ಫೋಬಿಯಾ, ನಿದ್ರಾಹೀನತೆ ಇವುಗಳಲ್ಲಿ ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಪರಿಣಾಮಕಾರಿಯಾಗಿದೆ. ಆಕಳ ತುಪ್ಪವು ಹೆಚ್ಚು ಪರಿಣಾಮಕಾರಿ.

ನೀವು ತುಪ್ಪದ ಬಗ್ಗೆ ಏನಾದರೂ ಕೆಟ್ಟದ್ದನ್ನು ಕೇಳಿದ್ದರೆ ಈಗ ಅದನ್ನು ಮರೆಯಿರಿ. ಪವಿತ್ರ, ಶಕ್ತಿಶಾಲಿ ಹಾಗೂ ಶರೀರದ ಆರೋಗ್ಯ ಕಾಪಾಡುವ ತುಪ್ಪ ಎಂಬ ಅದ್ಭುತದ ಬಗ್ಗೆ ನೀವು ತಿಳಿಯಲೇಬೇಕು. ಕೆಲವು ಆಹಾರ ನಿಮಗೆ ಅಲರ್ಜಿಯಾಗಿದ್ದರೆ ತುಪ್ಪವೂ ಅಲರ್ಜಿಯಾಗಿರಬೇಕೆಂದೇನೂ ಇಲ್ಲ. ತುಪ್ಪವನ್ನು ಚರ್ಮ, ಮೂಗಿನ ಮೂಲಕ ಔಷಧಿಯಾಗಿ ಬಳಸಬಹುದು.

ತುಪ್ಪವನ್ನು ಆದಷ್ಟೂ ಮಧ್ಯಾಹ್ನ ಹಾಗೂ ರಾತ್ರಿ ಊಟದಲ್ಲಿ ಬಳಸಬೇಕು. ಬೇಸಿಗೆ ಮತ್ತು ಮಳೆಗಾಲದಲ್ಲಿ ಪಿತ್ತದೋಷ ಹೆಚ್ಚು ಕಾಣಿಸಿಕೊಳ್ಳುವುದರಿಂದ ಈ ಕಾಲಗಳಲ್ಲಿ ಮಧ್ಯಾಹ್ನ ಹಾಗೂ ರಾತ್ರಿ ತುಪ್ಪ ಸೇವಿಸಬೇಕು.ವಾತ ದೋಷಗಳಾದ ನಿದ್ರಾಹೀನತೆ, ಉದ್ವೇಗ ನಿವಾರಣೆಗೂ ತುಪ್ಪ ಪ್ರಯೋಜನಕಾರಿ.

ಡಯಾಬಿಟೀಸ್ ರೋಗಿಗಳಿಗೆ ತುಪ್ಪ ಸಕ್ಕರೆಯ ಅಂಶವನ್ನು ಸಮತೋಲಿತವಾಗಿ ಇಡಲು ಸಹಕಾರಿ. ದಿನಾಲು 10-15 ಎಮ್ಎಲ್ ತುಪ್ಪ ಸೇವಿಸುವುದರಿಂದ ಕಾರ್ಬೊಹೈಡ್ರೇಟ್ ಸೇವನೆ ಕಡಿತವಾಗಿ ಶುಗರ್ ನಾರ್ಮಲ್ ಉಳಿಯುತ್ತದೆ. ತುಪ್ಪವು ಪಚನಕ್ರಿಯೆ ಹೆಚ್ಚಿಸುತ್ತದೆ. ಪಿತ್ತವನ್ನು ಸಮತೋಲನದಲ್ಲಿ ಇಡುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ.

ತೂಕ ಹೆಚ್ಚಳಕ್ಕೆ ಹಾಗೂ ಲೈಂಗಿಕ ಶಕ್ತಿ ಹೆಚ್ಚಳಕ್ಕೂ ತುಪ್ಪ ಸಹಕಾರಿ. ಪ್ರತಿದಿನ ರಾತ್ರಿ ಮಲಗುವಾಗ ಅರ್ಧ ಗ್ಲಾಸು ಹಾಲಿನಲ್ಲಿ ಹಸುವಿನ ತುಪ್ಪ ಅರ್ಧ ಚಮಚ ಹಾಕಿ ಮಲಗುವ ಮುಂಚೆ ಸೇವಿಸಿದರೆ ಚೆನ್ನಾಗಿ ನಿದ್ರೆ ಬರುತ್ತದೆ. ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದೂ ಹೇಳಲಾಗಿದೆ.

ಹಸುವಿನ ತುಪ್ಪ ದಿಂದ ಇನ್ನೂ ಅನೇಕ ಪ್ರಯೋಜನಗಳಿದ್ದು, ಅದರ ಸೇವನೆ ಹಾಗೂ ನಸ್ಯ ಥೆರಪಿ ಅಂದರೆ ಮೂಗಿನಲ್ಲಿ ಹಾಕುವ ವಿಧಾನಗಳ ಬಗ್ಗೆ ನಾಳೆಯ ಸಂಚಿಕೆಯಲ್ಲಿ ನೋಡೋಣ…

RELATED ARTICLES

Most Popular

error: Content is protected !!
Join WhatsApp Group