ನ್ಯಾಯಾಲಯದಲ್ಲಿ ನ್ಯಾಯಾಧೀಶರು ಅನ್ಯಾಯವನ್ನು ಹಣದಿಂದ ಗೆಲ್ಲಿಸಿದರೆ ಅನ್ಯಾಯಧೀಶರೆನ್ನುವುದಿಲ್ಲ ಯಾಕೆ?
ಅಧ್ಯಾತ್ಮದ ಪ್ರಕಾರ ,ನಿಷ್ಪಕ್ಷಪಾತ,ನಿರ್ದಾಕ್ಷಿಣ್ಯ, ನಿಸ್ವಾರ್ಥದಿಂದ ನೀಡುವ ನಿಜವಾದ ನ್ಯಾಯಾಧೀಶ ಭೂಮಿಯಲ್ಲಿ ಧರ್ಮ ಸ್ಥಾಪನೆ ಮಾಡುತ್ತಾನೆ ಎಂದರು.
ಇದು ಹಿಂದಿನ ರಾಜರ ಆಡಳಿತದಲ್ಲಿ ಕಟ್ಟುನಿಟ್ಟಾಗಿ ನಡೆದಿತ್ತು. ಯಾವಾಗ ಅಧರ್ಮದ ರಾಜಕೀಯ ಹೆಚ್ಚು ಬೆಳೆಯಿತೋ ಅನ್ಯಾಯಾಧೀಶರೂ ಬೆಳೆಯುತ್ತಾ ಹಣ ಇದ್ದವರಿಗೊಂದು ನ್ಯಾಯ ಇಲ್ಲದವರಿಗೊಂದು ನ್ಯಾಯ.
ಒಂದಂತೂ ಸತ್ಯ ಮೇಲಿರುವ ನ್ಯಾಯಾಲಯದಲ್ಲಿ ಇದಕ್ಕೆ ತಕ್ಕಂತೆ ಪ್ರತಿಫಲವಿದೆ. ಅಲ್ಲಿ ಹಣಕ್ಕೆ ಬೆಲೆಯಿಲ್ಲದ ಕಾರಣ ಋಣವನ್ನು ತೀರಿಸಲು ನ್ಯಾಯಾನ್ಯಾಯದ ತೀರ್ಪಿನ ಲೆಕ್ಕಚಾರವಿರುತ್ತದೆ. ಇದಕ್ಕಾಗಿಯೇ ಹಿಂದಿನ ಮಹಾತ್ಮರುಗಳು ಸತ್ಯ,ಧರ್ಮ, ನ್ಯಾಯ,ನೀತಿಯನ್ನರಿತು ಭೂಮಿಯ ಮೇಲಿದ್ದು ಋಣ ತೀರಿಸಲು ಕಷ್ಟಪಟ್ಟು ಮುಂದೆ ನಡೆದರು.
ಇಂದಿನ ನ್ಯಾಯಾಲಯದಲ್ಲಿ ನ್ಯಾಯದೇವತೆಯ ಕಣ್ಣಿಗೆ ಬಟ್ಟೆ ಕಟ್ಟಿರುವ ಹಿಂದಿನ ಉದ್ದೇಶವಿಷ್ಟೆ. ಹೊರಗಣ್ಣಿಗೆ ಕಾಣದ ಸತ್ಯ ಒಳಗಣ್ಣಿಗೆ ಕಾಣುತ್ತದೆ ಎಂದು. ಸತ್ಯವೆ ದೇವರು. ದೇವರು ಇರುವುದೆ ಒಳಗಣ್ಣಿನಲ್ಲಿ.
ಅಂತಹ ಆತ್ಮಸಾಕ್ಷಿಗೆ ತಕ್ಕಂತೆ ತೀರ್ಪು ನೀಡಬೇಕಾದರೆ ಹೊರಗಣ್ಣು ಮುಚ್ಚಿ ಒಳಗಣ್ಣನ್ನು ತೆರೆದು ನೋಡಬೇಕಲ್ಲವೆ ಕಾಲಬದಲಾದಂತೆ ವಿಜ್ಞಾನ ಜಗತ್ತು ಭೌತಿಕ ಸತ್ಯವನ್ನು ನಂಬಿ ಮಾಡಬಾರದ, ಹೇಳಬಾರದ,ನೋಡಬಾರದ ಕೆಲಸದಲ್ಲಿ ಆಸಕ್ತಿ ಹೆಚ್ಚಾದ ಕಾರಣ ತಪ್ಪು ಹೆಚ್ಚಾಯಿತು. ಅದಕ್ಕೆ ತಕ್ಕಂತೆ ಶಿಕ್ಷೆ ನೀಡುವ ನ್ಯಾಯಾಲಯಗಳು ಬೆಳೆದಂತೆ ಅದರಿಂದ ಬಿಡಿಸಿಕೊಳ್ಳಲು ಅಸತ್ಯ,ಅನ್ಯಾಯಗಳನ್ನು ಹಣದಿಂದ ಅಳೆದು ಬಿಡಿಸುವವರ ಸಂಖ್ಯೆಯೂ ಬೆಳೆಯಿತು.
ಇದಕ್ಕೆ ಕಲಿಗಾಲವೆನ್ನುವುದು. ಆದರೆ, ಯಾವ ಕಾಲವಾದರೂ ಒಳಗಿರುವ ಆತ್ಮನಿಗೆ ಯಾರೂ ಮೋಸ ಮಾಡಲಾಗದು. ಇದನ್ನು ಅನುಭವಿಸಿಯೇ ತೀರಬೇಕುು.
ಎನ್ನುವ ಅಧ್ಯಾತ್ಮದ ಸತ್ಯವನ್ನು ವಿರೋಧಿಸಲಾಗದ ಮೇಲೆ ನ್ಯಾಯ ನ್ಯಾಯವೆ.ಅನ್ಯಾಯ ಅನ್ಯಾಯವೆ.
ನ್ಯಾಯಕ್ಕೆ ತಲೆಬಾಗಿದರೆ ನ್ಯಾಯದೇವತೆ ರಕ್ಷಣೆ ನೀಡಿ
ಸಲಹುತ್ತಾಳೆ. ಅವಳ ಕಣ್ಣಿಗೆ ಬಟ್ಟೆ ಕಟ್ಟಿ ಕಾಣೋದಿಲ್ಲ
ಎನ್ನುವ ಅಜ್ಞಾನಿಗಳಿಗೆ ಶಿಕ್ಷೆ ನೀಡಲು ಮೇಲಿನ ನ್ಯಾಯಾಲಯವಿದೆಯಲ್ಲ. ಅಲ್ಲಿರುವ ನ್ಯಾಯಾಧೀಶರಿಗೆ
ಹಣಬೇಡ,ಜ್ಞಾನಬೇಕು ಗುಣವಿರಬೇಕು. ಸತ್ಕರ್ಮದಿಂದ
ನ್ಯಾಯದಿಂದ,ಧರ್ಮದಲ್ಲಿ ನಡೆದಾಗ ಯಾವ ನ್ಯಾಯಾಧೀಶರ ಅಗತ್ಯವಿರೋದಿಲ್ಲ. ನೇರವಾಗಿ ಭಗವಂತನ ನ್ಯಾಯಕ್ಕೆ ತಲೆಬಾಗುವುದೆ ಶರಣರ,ದಾಸರ ತತ್ವದೊಳಗಿದ್ದ ಸತ್ಯಜ್ಞಾನ.
*ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು*