ಮಸಣ ಮೌನ
ಮಸಣ ಮೌನ ಈ ಜಗವು
ಮಾಹಾಮಾರಿಯಿಂದ
ಮಸಣವಪ್ಪಿದರು ಆ ಮನೆಯ ಮುಂದಲೆಯಲ್ಲಿ ಯಾರು ಇಲ್ಲ
ಕಾರಣವೆನೆಂದಾಲಿಸಿದರೆ
ಮಾಹಾಮಾರಿ ಅಬ್ಬಿಹುದು ಆದರೆ ಮನೆಯ ಮನ ಮನದೊಳಗೆ
ದಹನವಾಗಿಹುದು ಆ ದೇಹ
ಹೇಳ ಕೇಳುವವರಾರು ಇಲ್ಲ
ಅತ್ತು ಕರೆದಾಡಲು ಯಾವ ಸಂಬಂಧಗಳು ಜೊತೆಗೂಡಲಿಲ್ಲ
ಈ ಜಗವು ಮಸಣ ಮೌನ ಪರದೇಶಿಗಳು ಮಾಡಿದ ಪಾಪ ಕ್ರೌರ್ಯಕ್ಕೆ
ದಿನಕ್ಕೆ ಅಷ್ಟೋ ಇಷ್ಟೋ ಎಷ್ಟೆಷ್ಟೋ ಮರಣಗಳು ಈ ಜಗದೊಳಗೆ ಮಾಹಾಮಾರಿಯ ಕ್ರೌರ್ಯ ನರ್ತನಕ್ಕೆ
ಮುಖವಾಡ ಧರಿಸದಿರುವ ಜನಕ್ಕೆ ಮುಖವಾಡ ಹಾಕಿ ನಿಜರೂಪ ಕಳೆಯಿತು
ಈ ಮಾಹಾಮಾರಿಯು
ಗಿಡ ಮರಗಳಿಂದ ಬೀಸುವ ಆಮ್ಲಜನಕ ದುಬಾರಿ ಎಂದು ಗುರುತು ನೀಡಿರುವುದು ಈ ಜನಕೆ ಈ ಜಗಕೆ
ಮಸಣ ಮೌನವು ಈ ಜಗವು ನಿರಂತರ….. ನಿರಂತರ….
ಅನಾಥಪ್ರಜ್ಞೆ
ಕರುಳಬಳ್ಳಿ ಗೆ ಕಾಡಿಹುದು ಮಾತೃವಾತ್ಸಲ್ಯದ ಅನಾಥ ಪ್ರಜ್ಞೆ
ಕಣ್ಣು ಅರಳಿಸಿ ಕಿಲಕಿಲ ನಗುವ ಮೊಗದಲ್ಲಿ ಕಂಬನಿಯ ರಹದಾರಿ
ಚಂದಮಾಮನ ತೋರಿಸಿ ಬಾಯಿಯಲ್ಲಿ ತುತ್ತ ನಿರಿಸಿ ಸಂತೋಷ ಬಾಷ್ಪ ತರಿಸುವ ಅಮ್ಮನಿಲ್ಲದ ಮಗುಗೆ ಕಾಡಿದೆ ಅನಾಥ ಪ್ರಜ್ಞೆ
ತನ್ನೊಲುಮೆ ಕಂಠಸಿರಿಯಲ್ಲಿ ಲಾಲಿ ಹಾಡು ಹಾಡಿ ಜೋಗುಳ ತೂಗಿ ಮಲಗಿಸುವ ಕಂದನಿಗೆ ಕಾಡಿದೆ ಅನಾಥಪ್ರಜ್ಞೆ
ಅರಮನೆಯಂಗಳದಿ ಅಮ್ಮನ ಸೆರಗು ಹಿಡಿದು ಓಡಾಡುವ ಕಂದನಿಗೆ ತುತ್ತಿಡುವ ಕೈಗಳಿಲ್ಲದೆ ಕಾಡುತ್ತಿದೆ ಅನಾಥಪ್ರಜ್ಞೆ
ಅಮ್ಮನು ಇದ್ದರೆ ಅದೆಷ್ಟು ಅಂದ ಅವಳಿದ್ದರೆ ನಾನಿರುವೆ ಚಂದ ಹೊಟ್ಟೆಗೆ ಊಟ ಇಲ್ಲದೆ ಎಲ್ಲೆಂದರಲ್ಲಿ ಅನಾಥವಾಗಿ ಬೇಡುತ್ತಿದೆ ಕಂದ
ಅಂದ ಚಂದ ಐಶ್ವರ್ಯ ಸಂಪತ್ತಿನಿಂದ ತಾಯಿಯ ಮಾತೃವಾತ್ಸಲ್ಯ ಮರಳಿ ಬಾರದು ಎಂದ ತಾಯಿಯ ಕಳೆದುಕೊಂಡ ಮಗುವು ತಾಯಿಯ ನೆನಪಿನಿಂದ ಅಳುತ್ತಿದೆ ಕಂದ
ರಾಹುಲ್ ಸುಭಾಷ್
ಸರೋದೆ
ಗಂಗಾವತಿ 583227
ಮೊ 7204636991