Homeಸುದ್ದಿಗಳುಕೇಂದ್ರದಿಂದ 108 ಕೋ.ರೂ. ನೇರ ರೈತರ ಖಾತೆಗೆ - ಕಡಾಡಿ ಶ್ಲಾಘನೆ

ಕೇಂದ್ರದಿಂದ 108 ಕೋ.ರೂ. ನೇರ ರೈತರ ಖಾತೆಗೆ – ಕಡಾಡಿ ಶ್ಲಾಘನೆ

ಮೂಡಲಗಿ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5 ಲಕ್ಷ 40 ಸಾವಿರ ರೈತರ ಬ್ಯಾಂಕ ಖಾತೆಗಳಿಗೆ 108.14 ಕೋಟಿ ರೂ. ಡಿಬಿಟಿ ಮೂಲಕ  ರೈತರ ಖಾತೆಗೆ ವರ್ಗಾಯಿಸಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ರೈತ ಮೋರ್ಚಾ ಅಧ್ಯಕ್ಷರಾದ ಈರಣ್ಣ ಕಡಾಡಿ ಕೇಂದ್ರ ಸರ್ಕಾರದ ಕ್ರಮವನ್ನ ಶ್ಲಾಘಿಸಿದ್ದಾರೆ.

ಬುಧವಾರ ನ.15 ರಂದು ಪತ್ರಿಕಾ ಹೇಳಿಕೆ ನೀಡಿದ ಸಂಸದ ಈರಣ್ಣ ಕಡಾಡಿ ಅವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 15ನೇ ಕಂತಿನ ಭಾಗವಾಗಿ ದೇಶದ 8 ಕೋಟಿಗೂ ಅಧಿಕ ರೈತರಿಗೆ 18,000 ಕೋಟಿ ರೂ. ಸೇರಿದಂತೆ ರಾಜ್ಯದ 48.44 ಲಕ್ಷ ರೈತರ ಖಾತೆಗೆ 968.89 ಕೋಟಿ ರೂಪಾಯಿ ನೇರವಾಗಿ ಫಲಾನುಭವಿ ರೈತರ ಖಾತೆಗಳಿಗೆ ಬಿಡುಗಡೆ ಮಾಡಿದ್ದಾರೆ ಎಂದರು.

9 ವರ್ಷಗಳ ಅವಧಿಯಲ್ಲಿ ಮೋದಿ ಅವರು ರೈತರ ಪರವಾಗಿ ವಿಶೇಷವಾದಂತಹ ಕಳಕಳಿಯನ್ನು ಹೊಂದಿದ್ದು, ನೂರಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ ಎಂದರಲ್ಲದೇ ದೇಶದ ಬೆನ್ನೆಲುಬಾಗಿರುವ ರೈತರ ಪರವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಸದಾ ಕಾಲ ಇರಲಿದೆ ಎಂದು ಸಂಸದ ಈರಣ್ಣ ಕಡಾಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES

Most Popular

close
error: Content is protected !!
Join WhatsApp Group