Monthly Archives: December, 2020
ಲೇಖನ
ಇಂದು ಭಾರತೀಯ ಸ್ವಾತಂತ್ರ್ಯ ಹೋರಾಟದ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರ ಜನ್ಮ ದಿನ
ಖುದಿರಾಮ್ ಬೋಸ್ (ಡಿಸೆಂಬರ್ ೩, ೧೮೮೯ – ಆಗಸ್ಟ್ ೧೧, ೧೯೦೮) ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು.
ಖುದಿರಾಮ್ ಬೋಸ್
ಜನನ
ಡಿಸೆಂಬರ್ ೩, ೧೮೮೯
ಹಬೀಬ್ ಪುರ್, ಮಿಡ್ನಾಪುರ್
೧೯೦೮ರ ದಿನದಂದು ಕೇವಲ ತನ್ನ ಹದಿನೆಂಟರ ಹರೆಯದಲ್ಲೇ ಯುವ ಕಿಡಿಯೊಂದು ದೇಶಕ್ಕಾಗಿ ತನ್ನ ತಲೆಯನ್ನು ನೇಣುಗಂಬಕ್ಕೆ ಒಡ್ಡಿಕೊಂಡಿತು. ಆ ಮಹಾನ್ ಚೇತನವೇ ಖುದಿರಾಮ್ ಬೋಸ್.
ಜೀವನ
೧೮೮೯ನೇಯ ಡಿಸೆಂಬರಿನಲ್ಲಿ ಜನ್ಮತಾಳಿದ ಖುದಿರಾಮ್...
ಲೇಖನ
ಗಡಿಯಲ್ಲಿ ನುಡಿ ಕಟ್ಟಿ ಕನ್ನಡದ ತೇರು ಎಳೆದ ಕನಾ೯ಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಘಟಕ ನಿಪ್ಪಾಣಿ (ಕೆಎಸ್ ಆರ್ ಟಿ ಸಿ)
ಭಾರತದ ಒಂದು ಭಾಗ ಕನಾ೯ಟಕ. ಸುತ್ತಲಿನ ತೆಲುಗು ತಮಿಳು ಮಲಯಾಳ,ಮರಾಠಿ ಪ್ರಭಾವವನ್ನು ದೂರದ ಆದಿಲ್ ಶಾಹಿ ಮತ್ತು ಬ್ರಿಟಿಷರ ದಾಳಿಯನ್ನು ಜೀಣಿ೯ಸಿಕೊಂಡು ಕನ್ನಡವನ್ನು ಎತ್ತಿ ಹಿಡಿದವರು ಇಲ್ಲಿಯ ಜನ.ಇಂತಹ ಪ್ರದೇಶದ ಗಡಿನಾಡು ನಿಪ್ಪಾಣಿಯಲ್ಲಿ ಕನ್ನಡದ ಹಿತಕಾಯ್ದು ಕನ್ನಡ ಕಟ್ಟಿದ ಸಂಸ್ಥೆಗಳಲ್ಲಿ ಕೆಎಸ್ಸಾರ್ಟಿಸಿ ಪ್ರಮುಖ ಪಾತ್ರ ವಹಿಸುತ್ತದೆ.ಸದಾ ಕನ್ನಡವನ್ನೇ ಉಸಿರಾಗಿ ಕಾಯಕ ಮಾಡಿದ ನಿಗಮ.
ನಿಪ್ಪಾಣಿಯ ಕನ್ನಡದ...
ಲೇಖನ
ದೀನ ನಾನು ಸಮಸ್ತ ಲೋಕಕೆ ದಾನಿ ನೀನು….ಎಂದ ಕನಕದಾಸರು
ಶ್ರೀ ಕನಕದಾಸರು (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ...
ಲೇಖನ
“ನಾನು” ಹೋದರೆ ಹೋದೇನು ಎಂದ ಕನಕ
ಅಂತಃಕರಣದ ರಾಯಭಾರಿ
ಹದಿನಾರನೆಯ ಶತಮಾನದ ಕನಕದಾಸರು ಮತ್ತು ಪುರಂದರದಾಸರು ದಾಸ ಪರಂಪರೆಯ ಅಶ್ವಿನಿ ದೇವತೆಗಳೆಂದೇ ಪ್ರಖ್ಯಾತಿ.
ಇಬ್ಬರೂ ವ್ಯಾಸರಾಯರ ಪರಮಶಿಷ್ಯರು…ಸುಜ್ಞಾನಿಗಳು... ಸಾಹಿತ್ಯಕವಾಗಿಯೂ ಅಮರರೇ...
ಒಂದು ದಿನ ವ್ಯಾಸರಾಯ ಗುರುಗಳು ತಮ್ಮ ಶಿಷ್ಯರ ಬಗ್ಗೆ ತುಂಬು ಅಭಿಮಾನದಿಂದ ಹೇಳುತ್ತಾ, ಕನಕದಾಸರನ್ನು ಪ್ರಶ್ನಿಸಿದರು…
“ಕನಕ…ಇವರೆಲ್ಲಾ ಮಹಾಜ್ಞಾನಿಗಳು, ಅನುಭಾವಿಗಳು, ವೇದಪಾರಂಗತರು …ಇವರಲ್ಲಿ ಯಾರು ಮೋಕ್ಷ ಸಂಪಾದನೆ ಮಾಡಿ ಸ್ವರ್ಗಕ್ಕೆ ಹೋಗುವರೆಂಬುದನ್ನು ಹೇಳವೆಯಾ? “ ಎಂದರು.
ಕನಕದಾಸರು...
ಕವನ
ಕವನ: ಮೇರು ಕನಕ
ಮೇರು_ಕನಕ
ವ್ಯಾಸರು ಮೆಚ್ಚಿದ
ದಾಸರ ಪಂಕ್ತಿಯ
ಮೋಸವನರಿಯದ ಮುಗ್ಧರಿಗೆ
ತೋಷದಿ ಪರೀಕ್ಷೆ
ದಾಸರುವಿಟ್ಟರು
ಬೇಸರ ತೋರಿದ ಶಿಷ್ಯರಿಗೆ||
ಬಾಳೆಯ ಫಲವನು
ಕಾಳಗೆ ಕಾಣದೆ
ಕಾಳಜಿಯಿಂದಲಿ ಸವಿರೆಲ್ಲ
ಕಾಳನುವಿಲ್ಲದ್
ಸ್ಥಳವದುವಿಲ್ಲವು
ಹೇಳಿದ ಸುಂದರ ಜಗಮಲ್ಲ||
ಬಚ್ಚಮ ತನಯನು
ಕೆಚ್ಚೆದೆ ಶೂರನು
ಹೆಚ್ಚಿತು ಕೀರ್ತಿಯು ಮನೆತನದು
ರೊಚ್ಚಿಗೆ ಬರುವನು
ಚುಚ್ಚುತ ವೈರಿಯ
ಕೊಚ್ಚುತ ಚಣದಲಿ ಮಧಿಸುವನು||
ತಿಮ್ಮಪ್ಪ ವರನಿವ
ತಿಮ್ಮಪ್ಪ ನಾಯಕ
ಬಿಮ್ಮಿನ ಬೀರಪ್ಪ ಸುಪುತ್ರನು
ಸುಮ್ಮನೆ ಕೆಣಕುವ
ಹಮ್ಮಿನ ಹಗೆಗಿವ
ಗುಮ್ಮನ ತರದಲಿ ಕಾಡುವನು ||
ರಾಮನ ಧಾನ್ಯದ
ನೇಮವ ಪೊಗಳಿದ
ಧಮಯಂತಿ ನಳರ ಕೃತಿರಚಿಸಿ
ರಾಮನ ಭಕ್ತನು
ತಾಮಸ ಗುಣದವ
ನಾಮದಿ ಕನಕವ ನೀ ಗಳಿಸಿ||
ಶ್ರೀ ಈರಪ್ಪ...
ಸುದ್ದಿಗಳು
ನಮಗೆ ಯಾರ ಬಗ್ಗೆ ಹೊಟ್ಟೆಕಿಚ್ಚಿಲ್ಲ – ಠಾಕ್ರೆ
ನ್ಯಾಯವಾದ ವ್ಯವಹಾರವಿದ್ದರೆ ಯಾರ ಏಳ್ಗೆಯ ಬಗ್ಗೆಯೂ ನಾವು ' ಹೊಟ್ಟೆಕಿಚ್ಚು ' ಪಡುವುದಿಲ್ಲ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ.
ಆರ್ಥಿಕ ರಾಜಧಾನಿ ಮುಂಬೈಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭೇಟಿಕೊಡಲಿರುವ ಹಿನ್ನೆಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರಿಗೂ ನಾವು ಒತ್ತಾಯದಿಂದ ನಮ್ಮ ವ್ಯವಹಾರಗಳ ಭಾರ ಹಾಕುವುದಿಲ್ಲ.
ನಮಗೆ ಯಾರ ಏಳ್ಗೆಯ ಬಗ್ಗೆಯೂ ಹೊಟ್ಟೆಕಿಚ್ಚು...
ಕವನ
ಕವನ: ವೃದ್ಧೆಯ ಮನಸ್ಸು
ಒಂದು ದಿನ ಮುಂಜಾನೆ
ಹಗಲಿನಲ್ಲಿ ನನ್ನಪ್ಪನಿಗೆ
ಉಪಾಹಾರ ತೆರುತ್ತಿರುವಾಗ
ನನಗೊಬ್ಬ ವೃದ್ಧೆ ಕಾಣೆಸಿದಳು
ಎಪ್ಪಾ ಬಾರೋ ನನಪ್ಪಾ
ನನ್ನನ್ನು ಇಲ್ಲಿಂದ ಅಲ್ಲಿಗೆ
ಕರೆದೊಯ್ದು ಕೂರಿಸು
ಎಂದು ಮೇಲು ಧ್ವನಿಯಲ್ಲಿ
ಕೆಳುತ್ತಾ ಕೆಮ್ಮುತ್ತಾ ಕೊರಗುತ್ತಿದ್ದಳು
ಅದನ್ನು ನೋಡಿದ ಆ ವೃದ್ಧೆಯ
ಸೋಸೆ ನಡಿಯಪ್ಪಾ ಈ ಹಣ್ಣಾದ ಮುದುಕಿಯ ಗೋಳು
ಇಷ್ಟೇ ಎಂದು ಸನ್ನೆ ಮಾಡಿ ಹೇಳಿದಳು
ಮನೆಯೊರಗಿನ ಕಟ್ಟೆಯ ಮೇಲೆ
ಕುಳಿತಿರುವ ವೃದ್ಧೆಯ ಜೀವ
ಅಳುಮುಖದಿ
ಕರೆದು ಕರೆದು ಕೆಳುತ್ತಿರುವುದು
ನನಗಾದ ನೋವು ಅಗಾಧ
ನನಗಾಗ ಅನಿಸಿದ್ದು ಇಷ್ಟೇ
ಈ ಕಾಲದ...
ಕವನ
ಸಂಧ್ಯಾ ಸಮಯ
ಸುಂದರ ಸಂಜೆಯ ಪಡುವಣ ದಿಕ್ಕಿಗೆ
ಮೂಡಿದೆ ಬೆರಗಿನ ಹೊಂಬಿಸಿಲು
ಸಂಧ್ಯಾ ಕಾಲದಿ ಭೂರಮೆ ಅನುಪಮ
ರೂಪವ ಧರಿಸುತ ಮೆರೆದಿಹಳು||
ಮೆಲ್ಲನೆ ನೇಸರ ನಿದಿರೆಗೆ ಜಾರಲು
ಅಂಬರ ಹೊದ್ದಿದೆ ಹೊಂಬಿಸಿಲು
ಪ್ರೇಯಸಿ ಬಯಸಿದ ಪ್ರೇಮಿಯ ಹೃದಯವು
ತಳಮಳಗೊಳ್ಳಲು ಮನಮುಗಿಲು||
ದಿನಕರ ಮುಳುಗಲು ಧರೆಯಲಿ ಕವಿಯಿತು
ಕಂಡಿಹ ಕನಸಿನ ಸವಿಗತ್ತಲು
ಪ್ರಿಯಕರ ಪ್ರೇಮಿಯ ಹೃದಯವ ತಣಿಸಲು
ಸುತ್ತಲು ಮೌನವು ಆವರಿಸಿತು||
*ಶ್ರೀ_ಈರಪ್ಪ_ಬಿಜಲಿ*
Latest News
ರಾಜ್ಯದ ರಸ್ತೆ ಕಾಮಗಾರಿಗಳು ಸೆ.2024 ರೊಳಗೆ ಪೂರ್ಣ ; ಮೇಲ್ಮನೆಗೆ ಗಡಕರಿ ಉತ್ತರ
ಮೂಡಲಗಿ: ಕೇಂದ್ರ ರಸ್ತೆ ಮತ್ತು ಮೂಲಸೌಕರ್ಯ ನಿಧಿ ಯೋಜನೆಯಡಿ ಕರ್ನಾಟಕ ರಾಜ್ಯದಲ್ಲಿ 663 ಕೋಟಿ ರೂ.ಗಳ ವೆಚ್ಚದಲ್ಲಿ ಸುಮಾರು 241 ಕಿ.ಮೀ ಉದ್ದದ 36 ರಾಜ್ಯ...