Yearly Archives: 2020
ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ.1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು...
ಮಾಸ್ಕ್ ಧರಿಸುವ ಮೊದಲು ಈ ಆಂಶಗಳನ್ನು ತಿಳಿಯಿರಿ
ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಇವು ವೈರಾಣು ಒಬ್ಬರಿಗೆ ಹರಡದಂತೆ ಸಹಕಾರಿಯಾಗುತ್ತವೆ. ಆದರೆ ಎಲ್ಲ ಮಾಸ್ಕ್...
ಶ್ರೀ ಗುರುಭ್ಯೋ ನಮಃ…..ಕವನಗಳು
ಗುರುವಿಗೆ...
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು...
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು....
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು ಬರಹದಲಿ
ಬ್ರಹ್ಮಾಂಡವ ತೋರಿದೆ...
ಟಂಕಾಗಳು
೧
ಭುಗಿಲೆದ್ದಿದೆ
ಜಗವು ಭಯದಲಿ
ಮಹಾಮಾರಿಯೇ
ನೀ ತಂದ ಫಜೀತಿಗೆ
ಸಾವೂ ಹೆದರುತಿದೆ
೨
ಒಕ್ಕಲೆದ್ದಿದೆ
ನೆಲೆಯು ಸಿಗದಲೆ
ಮಾರಿ ಕೊರೋನಾ
ಹೆಚ್ಚುವ ಭೀತಿಯಲಿ
ಹುಚ್ಚು ಹಿಡಿಯುತಿದೆ
೩
ಭಯಗೊಂಡಿದೆ
ಜಗದ ಜನವಿಂದು
ಮಾರಿಗೌಷಧಿ
ಸಿಗದ ಕಾರಣಕೆ
ಸಾವಿಗೆ ಹೆದರಿದೆ
೪
ದಿಕ್ಕುಗಾಣದೆ
ಜನ ಕಂಗಾಲಾಗಿದೆ
ಸಾವು ನೋವಿನ
ಲೆಕ್ಕ ಸಿಗದುದರ
ಭಯಕೆ ಬೆದರಿದೆ
೫
ರೋಗ ಮುಕ್ತಿಗೆ
ಭವವು ಬಯಸಿದೆ
ಕೈ ಮುಗಿಯತ
ಮೊರೆಯನಿಡುತಿದೆ
ಧರೆಯ ದೇವರಲಿ.
ಡಾ.ಗಜಾನಂದ ಸೊಗಲನ್ನವರ
ಚಿಕ್ಕಬಾಗೇವಾಡಿ
ಮೂಗಿನಲ್ಲಿ ತುಪ್ಪ ಹಾಕಿಕೊಳ್ಳಿ ಅನೇಕ ಪ್ರಯೋಜನಗಳುಂಟು !!
ಮಾನವ ಶರೀರದ ದೋಷಗಳಾದ ವಾತ, ಪಿತ್ತ ದೋಷಗಳನ್ನು ಸಮತೋಲಿತವಾಗಿ ಇಡಲು ತುಪ್ಪ ಪ್ರಮುಖ ಪಾತ್ರ ವಹಿಸುತ್ತದೆಯೆಂದು ಆಯುರ್ವೇದ ಹೇಳುತ್ತದೆ. ತುಪ್ಪವನ್ನು ಮೂಗಿನಲ್ಲಿ ಹಾಕುವ ನಸ್ಯ ಥೆರಪಿ ಈ ದೋಷಗಳನ್ನು ಸಮತೋಲಿತವಾಗಿ ಕಾಪಾಡುತ್ತವೆ ಎನ್ನಲಾಗಿದೆ.ವಾತ...
ಗುರು ಪೂರ್ಣಿಮಾ ಕವನಗಳು
ಗುರುವಿಗೆ...
ಗುರುವೇ...ವರಗುರುವೇ...
ಮಹಾಗುರುವೇ...ಪರಮಗುರುವೇ...ಸದ್ಗುರುವೇ...
ನಿನಗೆ ಶರಣು,ಸಾವಿರದ ಶರಣು....
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು...
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು....
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು...
ಕವನಗಳು
💕💭💭 ಮತ್ತದೇ ಕನಸು 💭💭💕
ಹೊಡೆದರೂ ಸಿಡಿದೇಳುತಿದೆ ಆ ಕನಸು
ನಾನಾಗಬಾರದೇ "ಭಗವಂತ" ॥
ತಮದೊಳು ಸಿಲುಕಿಹ ಜೀವಿಗಳು
"ಬಾ" "ಬಾ" ಎಂದು ಕರೆಯುತಿರುವಾಗ,
ತನು~ಮನವೆಲ್ಲಾ ಕಣ್ಣಾಗಿಸಿ ಕಾಯುವೆ,
ಕತ್ತಿ ~ಬಾಂಬು~ಚೂರಿ, ಮಾರಕಾಸ್ತ್ರ ನಾಶಗೊಳಿಸಿ
ಪ್ರೀತಿ~ಪ್ರೇಮ~ಅಹಿಂಸೆ ಸಿಡಿಸಿ
ಆತ್ಮೀಯ ಕಿಡಿಹಚ್ಚಿದ ಕನಸು
ಕ್ಷಣವೂ ಏರಲು ಹವಣಿಸುತಿಹುದು...
ಭೇರ್ಯ ರಾಮಕುಮಾರ್ ಅವರ ಕವನಗಳು
ಒಂದು ಪ್ರೇಮಕಥೆ..
ಹಾರುವ ಹಕ್ಕಿಗೆ
ಈಜು ಕಲಿಸಿದವರು ಯಾರು?
ಚಿಟ್ಟೆಯ ರೆಕ್ಕೆಗೆ
ಸುಂದರ ಚಿತ್ರ ಬರೆದವರು ಯಾರು?
ಕೋಗಿಲೆಗೆ 'ಕುಹೂ,ಕುಹೂ'
ಹಾಡು ಕಲಿಸಿದವರು ಯಾರು ?
ಹರಯದ ಸುಂದರ ಹೃದಯಗಳಿಗೆ,
ಪ್ರೀತಿಯ' ಕಾಮನ ಬಿಲ್ಲು' ನೀಡಿದವರ್ಯಾರು???
ಬದುಕಲಿ ಬಂದುದು ಸುಂದರ ಹರಯ
ಬಿರುಗಾಳಿಯೂ ಸುಳಿಗಾಳಿ
ಮೋಡ-ಕೋಲ್ಮಿಂಚುಗಳೂ ತಂಪೆರೆವ 'ಓಯಸಿಸ್'
ಪ್ರಿಯತಮೆಯ...
ಕವನ-ಹನಿ-ಹಾಯ್ಕು
ಹನಿ ಹನಿ ಇಬ್ಬನಿ
ಸಂಸಾರ
ಸೂತ್ರಕ್ಕೆ ತಕ್ಕಂತೆ ಇದ್ದರೆ
ಎಲ್ಲಾ ಸಸಾರ
ಬಿಡಬೇಕು ಒಮ್ಮೊಮ್ಮೆ
ಇಬ್ಬರೂ ಹಟ
ಇಲ್ಲವಾದರೆ ಬಾಳು
ಸೂತ್ರ ಹರಿದ ಗಾಳಿಪಟ!!
ಸುಮಂಗಲೆ
ಮಂಗಳನ ಅಂಗಳವ
ತಲುಪಿದರೆ ಏನು?
ಮಂಗಳಸೂತ್ರದ ಬೆಲೆಯ
ಅರಿತಿಹಳು ಹೆಣ್ಣು
ಏಳು ಬೀಳುಗಳಲಿ
ಗಂಡನಿಗೆ ಸಮನಾಗಿ
ಮುದ್ದಾದ ಮಕ್ಕಳಿಗೆ
ಮೊದಲನೇ ಗುರುವಾಗಿ
ಸತಿಯಾಗಿ ಮತಿಯಾಗಿ
ಬಾಳಿದರೆ ಸಾಕಲ್ಲವೇ?
ನಮಗೇಕೆ ಬೇರೆ ಗೊಡವೆ?
ಸ(ವಿ)ರಸ
ಊಟದೊಳಗಿರಬೇಕು
ಉಪ್ಪಿನಕಾಯಿಯಂತೆ
ಉಪ್ಪಿನಕಾಯಿ ಊಟವಾದರೆ
ಪಿತ್ತ...
ಕವನ (ಜೂನ್ 21 ವಿಶ್ವ ಅಪ್ಪಂದಿರ ದಿನಾಚರಣೆ ಪ್ರಯುಕ್ತ ಈ ಕವನ)
*ಬಹುಮುಖ ವ್ಯಕ್ತಿತ್ವದ ಸ್ವಾಭಿಮಾನಿ*
ಸರಳ ವ್ಯಕ್ತಿತ್ವದ,ಸೇವಾ ತತ್ಪರ
ವ್ಯಕ್ತಿತ್ವದ ಮೇರು ಪುರುಷ ನಮ್ಮಪ್ಪ,
ಜಗತ್ತಿನಾದ್ಯಂತ ಪ್ಲೇಗ್ ರೋಗದ ರುದ್ರನರ್ತನ,
ಊರು ತೊರೆದು ತೋಟ ಸೇರಿದ ಕುಟುಂಬ,
ಸುಂದರ ಹಸಿರು ಪರಿಸರದಲ್ಲಿ
ಅಪ್ಪನ ಜನನ....
ಗದ್ದೆ ,ತೋಟ ಕಂಡರೆ ವಿಪರೀತ ಪ್ರೀತಿ,
ವೃತ್ತಿಯಲಿ ಶಿಕ್ಷಕ,ಪ್ರವೃತಿಯಲಿ ಕೃಷಿಕ,
ಹಸು...