ಯುನೆಸ್ಕೋದಿಂದ ಗುರುತಿಸಲ್ಪಟ್ಟಿರುವ ಮಧ್ಯಪ್ರದೇಶದ ಖ್ಯಾತ ಖಜುರಾಹೋ ಶಿಲ್ಪಕಲೆಗಳ ದೇವಸ್ಥಾನದಲ್ಲಿ ದಿ. ೨೧ ರಿಂದ ಡಾನ್ಸ್ ಹಬ್ಬ ಶುರುವಾಗಿದೆ.
ಮಧ್ಯಪ್ರದೇಶದ ಸಂಸ್ಕೃತಿ ಇಲಾಖೆಯಿಂದ ಆಯೋಜಿಸಲ್ಪಟ್ಟ ಈ ಹಬ್ಬ ಆರು ದಿನಗಳ ಕಾಲ ನಡೆಯಲಿದೆ.
ಸುಮಾರು ೪೪ ವರ್ಷಗಳ ನಂತರ ಖಜುರಾಹೋ ದೇವಸ್ಥಾನದಲ್ಲಿ ಡಾನ್ಸ್ ಹಬ್ಬ ನಡೆಯುತ್ತಲಿದ್ದು ಸಂಸ್ಕೃತಿ ಪ್ರಿಯರಿಗೆ ಸಂತಸ ಉಂಟುಮಾಡಿದೆ. ಹಿಂದೂ ಹಾಗೂ ಜೈನ ಸಂಸ್ಕೃತಿ ಗಳ...
ದಕ್ಷಿಣ ಭಾರತದ ಸಿನಿಪ್ರಿಯರಿಗೆ ನಟಿಯರ ಹೊಕ್ಕಳು ಮತ್ತು ಸೊಂಟದ ಬಗ್ಗೆ ವಿಶೇಷ ಆಸಕ್ತಿಯಿದೆ ಎಂಬ ಹೇಳಿಕೆಯಿಂದ ಖ್ಯಾತ ಬಾಲಿವುಡ್ ನಟಿ ಪೂಜಾ ಹೆಗಡೆ ದಕ್ಷಿಣ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಪೂಜಾ ಹೆಗಡೆಯ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಭಲೇ ಸೌಂಡ್ ಮಾಡಿದ್ದು ಅನೇಕ ರೀತಿಯ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.
ದಕ್ಷಿಣ ಭಾರತೀಯ ಸಿನಿ ಪ್ರಿಯರ ಮನಸ್ಥಿತಿಯ ಬಗ್ಗೆ ಮಾತನಾಡಿದಂತೆ...
ಯುವಕರಿಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ, ಮೋಸ ಮಾಡುತ್ತಿದ್ದ ನಕಲಿ ಜಾಬ್ ಕನ್ಸಲ್ಟನ್ಸಿ ಸೆಂಟರ್ ಮೇಲೆ ಬೆಳಗಾವಿ ನಗರ ಪೊಲೀಸರು ದಾಳಿ ನಡೆಸಿ, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಇಲ್ಲಿನ ಶಾಹುನಗರದ ನಿವಾಸಿ ಇಮ್ತಿಯಾಜ್ ಯರಗಟ್ಟಿ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಉಮರ್ ಫಾರೂಖ್ ಎಂಬಾತ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
ಇಬ್ಬರು ಆರೋಪಿಗಳು ಬೆಳಗಾವಿಯ ದರ್ಬಾರ್ ಗಲ್ಲಿಯ ಟ್ರಾವೆಲ್...
ಪ್ರವಾಸ ಮನಸ್ಸಿಗೆ ಮುದ ನೀಡುತ್ತದೆ.ಪ್ರವಾಸಿಗ ಯಾವತ್ತೂ ಉಲ್ಲಸಿತವಾಗಿರುತ್ತಾನೆ. ಶಿವರಾಮ ಕಾರಂತರ “ದೇಶ ಸುತ್ತು ಕೋಶ ಓದು” ಎಂಬ ಮಾತನ್ನು ಸದಾ ನೆನಪಿಟ್ಟುಕೊಂಡು ನಾಡಿನ ಹತ್ತಾರು ಸ್ಥಳಗಳನ್ನು ಸುತ್ತುವ ಜೊತೆಗೆ ಆ ಸ್ಥಳಗಳ ಪರಿಚಯವನ್ನು ದಾಖಲಿಸುತ್ತ ಹೋದಂತೆ ಅದೇ ಪ್ರವಾಸ ಕೃತಿಯಾಗುತ್ತದೆ. ನನ್ನ ಪಯಣದ ನೆನಪುಗಳನ್ನು ಆಗಾಗ ಮೆಲಕು ಹಾಕುವ ಮೂಲಕ ಆ ಸ್ಥಳಗಳ ಚರಿತ್ರೆಯನ್ನು...
ಸವದತ್ತಿ: ಯರಗಟ್ಟಿ ತಾಲೂಕು ಘೋಷಣೆಯಾದ ನಂತರ ಯರಗಟ್ಟಿಯಲ್ಲಿ ಪ್ರಥಮವಾಗಿ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸುತ್ತಿರುವುದು ಯರಗಟ್ಟಿ ಭಾಗದ ಜನರಿಗೆ ಹೆಮ್ಮೆಯ ವಿಷಯವಾಗಿದೆ ಎಂದು ಯರಗಟ್ಟಿ ಕಸಾಪ ಅಧ್ಯಕ್ಷ ರಾಜೇಂದ್ರ ವಾಲಿ ಹೇಳಿದರು.
ಸ್ಥಳೀಯ ಶಾಸಕರ ನಿವಾಸದಲ್ಲಿ ಯರಗಟ್ಟಿಯಲ್ಲಿ ನಡೆಯುತ್ತಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿಯವರನ್ನು ಸೇರಿದಂತೆ ಅವರ ಕುಟುಂಬವನ್ನು ಸಮ್ಮೇಳನಕ್ಕೆ...
ಮೂಡಲಗಿ -ಮೂಡಲಗಿ ತಾಲೂಕಿನಲ್ಲಿನ ಜಿಲ್ಲಾ ಪಂಚಾಯತ ಕ್ಷೇತ್ರಗಳನ್ನು ಮರುವಿಂಗಡಣೆ ಮಾಡಿದ್ದು ದುರುದ್ದೇಶಪೂರಿತ ಹಾಗೂ ಲೋಪದೋಷಗಳಿಂದ ಕೂಡಿದ್ದು ಇದನ್ನು ರದ್ದು ಮಾಡಬೇಕು ಎಂದು ಕಾಂಗ್ರೆಸ್ ಮುಖಂಡ ಲಕ್ಕಣ್ಣ ಸವಸುದ್ದಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಇದ್ದ ವಡೇರಹಟ್ಟಿ ಜಿ. ಪಂ ಕ್ಷೇತ್ರವನ್ನು ರದ್ದು ಮಾಡಿ ಅದನ್ನು ತುಕ್ಕಾನಟ್ಟಿ ಕ್ಷೇತ್ರದಲ್ಲಿ ಸೇರಿಸಲಾಗಿದೆ. ಮಸಗುಪ್ಪಿ, ಗುಜನಟ್ಟಿ ಧರ್ಮಟ್ಟಿ ಹಾಗೂ...
ವಿದೇಶಿಗರು ಭಾರತೀಯತೆಯನ್ನು ಒಪ್ಪಿಕೊಂಡು ಬಂದರೆ ಭಾರತೀಯರು ವಿದೇಶಿಗರನ್ನು ಗೌರವಿಸಿ,ಬೆಳೆಸಿ,ಪೂಜಿಸುವ ಮಟ್ಟಿಗೆ ಸಹಕರಿಸುತ್ತಾರೆ. ಅದೇ ನಮ್ಮವರಲ್ಲಿಯೇ ಅಡಗಿದ್ದ ಭಾರತೀಯತೆಯನ್ನು ಮಕ್ಕಳಲ್ಲಿ ತುಂಬಿ ಬೆಳೆಸಲು ಅಸಹಕಾರ ನೀಡುತ್ತಾರೆಂದರೆ ಇಲ್ಲಿ ಬೇಕಾಗಿರೋದು ವಿದೇಶಿಗರ ಹಣ ಎನ್ನಬಹುದಷ್ಟೆ. ನಾವೆಷ್ಟೇ ಮೇಲಿನಿಂದ ಭಾರತೀಯ ಸಂಸ್ಕೃತಿ ,ಸಂಪ್ರದಾಯ,ಆಚಾರ,ವಿಚಾರ, ವಸ್ತ್ರ, ಒಡವೆಗಳನ್ನು ಮೈಮೇಲೆ ಎಳೆದುಕೊಂಡರೂ ಅದನ್ನು ಕಳಚಿಟ್ಟು ತಮ್ಮ ಮೂಲವನ್ನು ಒಳಗಿನಿಂದ ಬೆಳೆಸಿ ಕೊಂಡು...
ಮುದ್ದುಗಿಣಿ ಹಾಡಿ ಕುಣಿ
(ಮಕ್ಕಳ ಕವಿತೆಗಳು)
"ಕನಸಿನರಮನೆಗೆ ಅಡಿಪಾಯ ಹಾಕಿದೆ
ಉಸಿರನು ನೀಡೋ ಮರಗಳ ಕಡಿದೆ
ಬರಗಾಲವ ನೀನೆ ಬರಮಾಡಿಕೊಂಡೆ
ಪ್ರಕೃತಿಯ ಹಳಿಯುತ ಕುಳಿತುಕೊಂಡೆ”
ಎನ್ನುವ ಕವಿತೆಯ ಸಾಲುಗಳು ಪ್ರಕೃತಿಯ ಮುನಿಸು ಬದುಕನ್ನು ದುಸ್ತರವನ್ನಾಗಿಸುವುದು ಎಂಬ ಸಂದೇಶವನ್ನು ಅಡಕಗೊಂಡಿರುವ ಕವನ “ಮುದ್ದುಗಿಣಿ ಹಾಡಿ ಕುಣಿ” ಮಕ್ಕಳ ಕವನ ಸಂಕಲನದಲ್ಲಿ ಕವಯತ್ರಿ ಬಸಮ್ಮಾ ಏಗನಗೌಡ್ರ ಮನದಾಳದಿಂದ ಮೂಡಿ ಬಂದಿದೆ. ಮೂಲತಃ ಸವದತ್ತಿ ತಾಲೂಕಿನ ಹಿರೇಉಳ್ಳಿಗೇರಿ...
ಚಾಲೇಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರದ ಪೋಸ್ಟರ್, ಟ್ರೇಲರ್ ಗಳು ಸಿಕ್ಕಾಪಟ್ಟೆ ಕ್ರೇಜ್ ಹೆಚ್ಚಿಸಿದ್ದು ಚಿತ್ರ ತೆರೆ ಕಾಣಲಿರುವ ಮಾರ್ಚ್ ೧೧ ನೇ ದಿನವನ್ನು ಅಭಿಮಾನಿಗಳು ಕುತೂಹಲದಿಂದ ಕಾಯುವಂತೆ ಮಾಡಿದೆ.
ಇತ್ತೀಚೆಗೆ ರಿಲೀಸ್ ಆದ ಟ್ರೇಲರ್ ಅಂತು ಅಭಿಮಾನಿಗಳಲ್ಲಿ ಸಂತಸ ತಂದಿದ್ದು, ಚಿತ್ರವನ್ನು ಕಣ್ತಂಬಿಕೊಳ್ಳಲು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ. ಚಿತ್ರದ ಡೈಲಾಗ್ಸ್ ಎಲ್ಲರ ಬಾಯಲ್ಲೂ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...