ರೋವನ್ ಅಟ್ಕಿನ್ಸನ್ ಆತ್ಮಹತ್ಯೆ ಅಥವಾ ಕಾರು ಅಪಘಾತದಿಂದ ಮೃತಪಟ್ಟಿರುವುದು ಫೇಸ್ ಬುಕ್ ನಲ್ಲಿ ಆಗಾಗ್ಗೆ ಮರುಕಳಿಸುವ ಸೆಲೆಬ್ರಿಟಿಗಳ ಸಾವಿನ ವಂಚನೆಯಾಗಿದೆ.
ವಂಚನೆಯಾಗಿದ್ದರೂ ಮತ್ತು ಪ್ರಮುಖ ಮಾಧ್ಯಮಗಳು ವರದಿ ಮಾಡದಿದ್ದರೂ, ಇದು ಸಾಮಾಜಿಕ ಮಾಧ್ಯಮದಲ್ಲಿ ಅನೇಕ ಜನರಿಗೆ ಮನವರಿಕೆಯಾಗಿದೆ. ಆದರೂ ಅಟ್ಕಿನ್ಸನ್ ಮಿಸ್ಟರ್ ಬೀನ್ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ, ಅವರು ಜೀವಂತವಾಗಿದ್ದಾರೆ ಮತ್ತು ಚೆನ್ನಾಗಿರುತ್ತಾರೆ. ಸೆಲೆಬ್ರಿಟಿಗಳ ಸಾವಿನ ವಂಚನೆಯಲ್ಲಿ...
ಬೆಳಗಾವಿ - ಅಖಿಲಭಾರತ ವೀರಶೈವ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದಿಂದ ಗುರುವಾರ ಸಂಜೆ 5 ಗಂಟೆಗೆ ಶಿವಬಸವ ನಗರದ ಲಿಂಗಾಯತ ಭವನದಲ್ಲಿ ಅಮಾವಾಸ್ಯೆ ಸತ್ಸಂಗ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರಂಜಿಮಠದ ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ದಿವ್ಯ ಸಾನ್ನಿಧ್ಯ ವಹಿಸುವರು. ಬೈಲಹೊಂಗಲದ ಶರಣೆ ಪ್ರೇಮಕ್ಕ ಅಂಗಡಿಯವರು ಉಪನ್ಯಾಸ ನೀಡುವರು.
ಶರಣೆ ರತ್ನಪ್ರಭಾ ಬೆಲ್ಲದ ಅಧ್ಯಕ್ಷತೆ ವಹಿಸುವರು.ಶರಣ ವೀರಭದ್ರ ಅಂಗಡಿಯವರು...
ಸವದತ್ತಿ: ಕೇಂದ್ರ ಸರಕಾರ ಮತ್ತು ರಾಜ್ಯ ಸರಕಾರಗಳು ರೈತ ವಿರೋಧಿ ಕಾನೂನನ್ನು ಜಾರಿ ತಂದು ರೈತ ವಿರೋಧಿ ಕೆಲಸ ಮಾಡುತ್ತಿದೆ. ನಮ್ಮ ತಾಲೂಕಿನಲ್ಲಿ ಬಹಳಷ್ಟು ಜನ ರೈತರು ಕಡಲೆಯನ್ನು ಬೆಳೆದಿರುತ್ತಾರೆ ಇದುವರೆಗೂ ಕಡಲೆ ಖರೀದಿ ಕೇಂದ್ರಗಳನ್ನು ಎಲ್ಲಿಯೂ ತೆರೆದಿಲ್ಲ ಇದರಿಂದ ಬೇಕಾಬಿಟ್ಟಿ ಮಾರಾಟ ಮಾಡುತ್ತಿದ್ದಾರೆ ರೈತರು ಬೆಳೆದ ಮಾಲನ್ನು ಎಲ್ಲಿ ಮಾರಾಟ ಮಾಡಬೇಕು ಎಂಬುವುದು...
ಸವದತ್ತಿ - ತಾಲೂಕಿನ ಗೋರಾಬಾಳ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರನ್ನು ಶಾಸಕ ಹಾಗೂ ವಿಧಾನಸಭಾ ಉಪ ಸಭಾದ್ಯಕ್ಷ ಆನಂದ ಮಾಮನಿಯವರು ಮಾಮನಿ ಕಲ್ಯಾಣ ಮಂಟಪದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬಾಳ ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಸದಸ್ಯರು ಹಿರಿಯರು ಆನಂದ ಮಾಮನಿಯವರನ್ನು ಸನ್ಮಾನಿಸಿದರು.ಭಾರತೀಯ ಜನತಾ ಪಕ್ಷದ ಮುಖಂಡ ಜಗದೀಶ ಕೌಜಗೇರಿ ಹಾಗೂ ಗೊರಾಬಾಳ...
ಅಜ್ಜಿ ತಿಳಿಸುವ ವಿಧಾನ ಅನುಸರಿಸಿ ಸಾಕು
ಸಾಮಾನ್ಯವಾಗಿ ಎಲ್ಲ ಹೆಣ್ಣು ಮಕ್ಕಳ ಸಮಸ್ಯೆ ಎಂದರೆ ಡೆಲಿವರಿ ಆದ ನಂತರ ಉಳಿಯುವ ಬೊಜ್ಜು. ಮೊದಲು ತೆಳ್ಳಗೆ ಇದ್ದವರು ಒಂದು ಮಗುವಾದನಂತರ ಮೈ ಕೈ ಊದಿಕೊಂಡು ಗುಂಡಗೆ ಆಗಿಬಿಡುತ್ತಾರೆ.
ಡೆಲಿವರಿ ಆದ ನಂತರ ಉಳಿಯುವ ಹೊಟ್ಟೆ ಕರಗಿಸಲು ಸಿಂಪಲ್ ಮನೆ ಮದ್ದನ್ನು ಎಲ್ಲರೂ ಮಾಡಿಕೊಳ್ಳಬಹುದು.
ಸಾಮಾನ್ಯವಾಗಿ ಹೊಟ್ಟೆಯ ಕೆಳಗೆ ಇರುವಂತಹ ಬೊಜ್ಜು...
ಬೀದರ - ಈ ದೇಶಕ್ಕೆ, ಎಲ್ಲ ಸಮಾಜಗಳಿಗೆ ಧರ್ಮ ಸಂಸ್ಕೃತಿ ಯನ್ನು ಧಾರೆಯೆರೆದ ಧಣಿ ನಿಜವಾದ ಬೇಡ ಜಂಗಮನು ಎಂದು ಅಖಿಲ ಕರ್ನಾಟಕ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ ಡಿ ಹಿರೇಮಠ ಹೇಳಿದರು.
ಅವರು ಬೀದರ ಜಿಲ್ಲೆಯ ಬಸವಣ್ಣನವರ ಕರ್ಮಭೂಮಿ ಬಸವಕಲ್ಯಾಣದ ಥೇರ್ ಮೈದಾನದಲ್ಲಿ ಭಾನುವಾರ ನಡೆದ ರಾಜ್ಯ ಮಟ್ಟದ ಜಂಗಮ ಸಮಾವೇಶ ಉದ್ಘಾಟಿಸಿ...
ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಭಾರಿ ಹಿಮ ಸುನಾಮಿ ಸಂಭವಿಸಿದ್ದು ಉಂಟಾದ ಪ್ರವಾಹದಲ್ಲಿ ಎಂಟು ಜನ ಪ್ರಾಣ ಕಳೆದುಕೊಂಡಿದ್ದು ಇನ್ನೂ ಸುಮಾರು ಇನ್ನೂರಕ್ಕೂ ಹೆಚ್ಚು ಜನ ಕಾಣೆಯಾಗಿದ್ದಾರೆ.
ಉತ್ತರಾಖಂಡದ ಧೌಲಿ ನದಿ ಏಕಾಏಕಿ ಉಕ್ಕಿ ಹರಿದ ಪರಿಣಾಮ ಸಮೀಪದ ವಿದ್ಯುತ್ ಘಟಕ ಕೊಚ್ಚಿಕೊಂಡು ಹೋಗಿದೆ. ಅಲ್ಲಿ ಕೆಲಸ ಮಾಡುತ್ತಿದ್ದ ೧೫೦ ಕ್ಕೂ ಹೆಚ್ಚು ಜನರು ಸುರಂಗವೊಂದರಲ್ಲಿ ಸಿಲುಕಿಕೊಂಡು...
ಎಲ್ಲವನ್ನೂ ಗೆಲ್ಲಬಹುದು.ಸಮಯವನ್ನು ಗೆಲ್ಲಲಾಗುವುದಿಲ್ಲ. ಎಲ್ಲವನ್ನೂ ಕೊಳ್ಳುವ ಶಕ್ತಿ ಇರುವ ಸಿರಿವಂತನೂ ಬಡವ ಸಮಯದ ಮುಂದೆ ಒಂದೇ. ಎಲ್ಲರೂ ನಿದ್ರಿಸುವಾಗಲೂ ಇದು ಜಾಗೃತವಾಗಿಯೇ ಇರುತ್ತದೆ. ಸಮಯವನ್ನು ಗೆಲ್ಲಲಾಗುವುದಿಲ್ಲ ಆದರೆ ಸರಿಯಾದ ಸಮಯ ನಿರ್ವಹಣೆ ಮಾಡಿ ಗೆಲ್ಲಬಹುದು. ಕನಸುಗಳನ್ನು ನನಸಾಗಿಸಬಹುದು.
ಅಂಥವರನ್ನು ಯಶಸ್ವಿಗಳು ಎಂದು ಗುರುತಿಸಿ ಗೌರವಿಸುತ್ತಾರೆ. ಇವೆಲ್ಲ ಸಮಯದ ಕುರಿತಾದ ಸಾಮಾನ್ಯ ಮಾತುಗಳು. ‘ನೆನಪಿಡಿ, ಸಮಯ ಹಣವಿದ್ದಂತೆ.’...
“ಕೇವಲ ಪುಸ್ತಕದ ಹುಳುವಾಗಿ ಹಣವನ್ನು ಗಳಿಸುವ ಯಂತ್ರದಂತೆ ಸ್ವಾರ್ಥಿಯಾಗಿ ಬದುಕುವುದಕ್ಕಿಂತ ಸಮಾಜಮುಖಿಯಾಗಿ ಬಾಳುವುದು ಅತಿಮುಖ್ಯ” ಎಂದು ಸಂಸ್ಕೃತಿ ಚಿಂತಕ ಡಾ|| ಗುರುರಾಜ ಪೋಶೆಟ್ಟಿಹಳ್ಳಿ ತಮ್ಮ ಅಭಿಮತ ವ್ಯಕ್ತಪಡಿಸಿದರು.
ಮಕ್ಕಳಿಗೆ ಕಲಿಕೆ ಪ್ರಾರಂಭವಾಗುವುದು ಮನೆಯಿಂದ, ಅದರಲ್ಲೂ ತಾಯಿಯೇ ಮೊದಲನೆಯ ಗುರು. ನಂತರ ಶಾಲೆ, ಸಮುದಾಯಗಳು ಅವುಗಳ ಮೇಲೆ ಅಪಾರ ಪ್ರಭಾವ ಬೀರುತ್ತವೆ. ``ಮಕ್ಕಳ ಇಸ್ಕೂಲ್ ಮನೇಲಲ್ವೆ’’- ಕೈಲಾಸಂ...
ಪಶ್ಚಿಮ ಬಂಗಾಳದಲ್ಲಿ ೨೯೪ ಸ್ಥಾನಗಳಿಗಾಗಿ ಇಷ್ಟರಲ್ಲಿಯೇ ವಿಧಾನಸಭಾ ಚುನಾವಣೆ ನಡೆಯಲಿದ್ದು ಕನಿಷ್ಠ ೨೦೦ ಸ್ಥಾನ ಗೆಲ್ಲುವ ಹುಮ್ಮಸ್ಸಿನೊಂದಿಗೆ ಭಾರತೀಯ ಜನತಾಪಕ್ಷ ಚುನಾವಣಾ ಅಖಾಡಕ್ಕೆ ಇಳಿದಂತಾಗಿದೆ.
ಸದ್ಯ ಚುನಾವಣಾ ಪೂರ್ವ ಬೃಹತ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡಾ ಬಂಗಾಲದಲ್ಲಿ ಈ ಸಲ ಕಮಲ ಅರಳುತ್ತದೆ ಎಂದಿದ್ದಾರೆ.
ಬಂಗಾಲದಲ್ಲಿ ರೈತರನ್ನು ಶೋಷಿಸಲಾಗುತ್ತಿದೆ, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ....ಇದೆಲ್ಲವನ್ನೂ...
ಹನಿಗವನಗಳು
1) ಸುಳ್ಳುಗಾರರು
ಹತ್ತು ನಾಲಿಗೆಯ
ರಾವಣ ಹೇಳಲಿಲ್ಲ
ಒಂದು ಸುಳ್ಳು
ಒಂದೇ ನಾಲಿಗೆಯ
ರಾಜಕಾರಣಿ ಹೇಳುತ್ತಾನೆ
ದಿನಕ್ಕತ್ತು ಸುಳ್ಳು!
2) ಶೀಲಾ
ನೆರೆಮನೆ ಶೀಲಾ
ಪರ ಪುರುಷರೊಡನೆ
ಸೇರಿ
ಹೆಸರು ಕೆಡಿಸಿಕೊಂಡಳು
3) ಟಿವಿ ಹಾವಳಿ
ಮನೆಯಲ್ಲಿ
ಟಿವಿ ಮುಂದೆ
ಸದಾ ಇರುವ
ವಿದ್ಯಾ ರ್ಥಿಗಳು
ಶಾಲೆಯಲ್ಲಿ
ಹಿಂದೆ ಬೀಳುವರು.
4) ವಾಸ್ತವ
ಕಟ್ಟುವವು...