ಜೀವನ ಸ್ವಾತಂತ್ರ್ಯ
ಬ್ರಿಟಿಷರ ಆಳ್ವಿಕೆಯು
ಕೊನೆಗೊಂಡ ದಿನಗಳು
ದೊರಕಿಸಿದವು ನಮಗೆ ಸ್ವಾತಂತ್ರ್ಯ
ದೇಶವನಾಳುವ ಪ್ರಜೆಗಳ ಪ್ರಭುತ್ವ
ದೊರಕಿಸಿದ ಸ್ವಾತಂತ್ರ್ಯ
ದೇಶ ಕಂಡ ಹೆಮ್ಮೆ
ತನ್ನ ಹಕ್ಕುಗಳೊಡನೆ
ಬದುಕಲು ದೊರಕಿತು
ಜೀವನ ಸ್ವಾತಂತ್ರ್ಯ
ಜೀವ ಜೀವಗಳೊಂದಾದ
ಕ್ಷಣವದು ನಮಗೂ ಸ್ವಾತಂತ್ರ್ಯ
ಬದುಕಿನ ಸ್ವಚ್ಚಂದದೊಳು ವಿಹರಿಸಲು
ನಲ್ಲೆ ನಮ್ಮೀ ಪ್ರೀತಿಗೆ
ಹಿರಿಯರೊಪ್ಪಿಗೆ ಸಿಗುವ
ಮೊದಲು ಕದ್ದುಮುಚ್ಚಿ
ಸೇರುವ ಬಗೆ ನೆನೆಯಲು
ನಮಗೆ ಹಿರಿಯರು ಮದುವೆಗೆ
ಕೊಟ್ಟ ಒಪ್ಪಿಗೆ ಸ್ವಾತಂತ್ರ್ಯವಲ್ಲವೇ.?
ಎದೆಯ ಗುಟ್ಟಾದ ಮಾತು
ಸ್ವಚ್ಚಂದದೊಳು ಹೊರಗೆಡಹಲು
ತಲೆ ಎತ್ತಿ ಓಡಾಡಲು
ಯಾವ ಕಟ್ಟುಪಾಡುಗಳಿಲ್ಲದೇ
ದೊರಕಿಹ ದಿನ ನಮಗದು ಸ್ವಾತಂತ್ರ್ಯ
ಈ ದಿನ...
ಮೂಡಲಗಿ - ತಾಲೂಕಿನ ಶಿವಾಪುರ (ಹ) ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಮೂಡಲಗಿ ತಾಪಂ ಹಾಗೂ ಶಿವಾಪುರ ಗ್ರಾಪಂ ಸಹಯೋಗದಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ಅಡಿಯಲ್ಲಿ ನಮ್ಮ ನೆಲ ನಮ್ಮ ದೇಶ, ಮನರೇಗಾ-ಮಹಿಳೆಯರು ಹಾಗೂ ಪಂಚ ಪ್ರಜಾ ಆಸ್ತಿ ಅಭಿಯಾನದ ಕಾರ್ಯಕ್ರಮವನ್ನು ಮಂಗಳವಾರ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ...
ಬೆಳಗಾವಿ: ಇವತ್ತಿನ ದಿನಗಳಲ್ಲಿ ಯುವ ಜನಾಂಗ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿದ್ದು ನಮ್ಮ ದೇಶದ ಸಂಸ್ಕೃತಿ ಅಭಿಮಾನ ಮರೆಯುತ್ತಿರುವುದು ಕಳವಳಕಾರಿಯಾಗಿದೆ. ದೇಶದ ಭದ್ರ ಬುನಾದಿಯಾಗಿರುವ ಯುವ ಜನಾಂಗ ನಮ್ಮ ದೇಶ-ನಮ್ಮ ಹೆಮ್ಮೆ ಎಂಬುದನ್ನು ಅರಿತು ದೇಶಾಭಿಮಾನ ಬೆಳೆಸಿಕೊಂಡಾಗ ಮಾತ್ರ ದೇಶದ ಸರ್ವೊತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರವಿ ಕೊಟಬಾಗಿ ಅಭಿಪ್ರಾಯಪಟ್ಟರು.
ಮುತಗಾ ಗ್ರಾಮದ...
ಮೂಡಲಗಿ: ಮೂಡಲಗಿಯ ಪ್ರಗತಿ ಗ್ರಾಮೀಣಾಭಿವೃದ್ಧಿ ಸಂಘದ ಕಚೇರಿಯಲ್ಲಿ ದೇಶದ ೭೬ ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.
ಮಹಾತ್ಮಾ ಗಾಂಧಿ ಹಾಗೂ ಡಾ. ಅಂಬೇಡಕರ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಸಂಘದ ಅಧ್ಯಕ್ಷ ಡಾ. ಬಿ ಎಮ್ ಪಾಲಭಾಂವಿಯವರು ಧ್ವಜಾರೋಹಣ ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಉಮೇಶ ಬೆಳಕೂಡ, ಸದಸ್ಯರಾದ ಈರಪ್ಪ ಕಂಬಾರ, ವಿಠ್ಠಲ ತುಪ್ಪದ, ಬಸಪ್ಪ ಬೆಳಗಲಿ, ಸಂಜು...
ಮೂಡಲಗಿ: ಸ್ವಾತಂತ್ರ್ಯೋತ್ಸವ ಆಚರಣೆಯ ಅಂಗವಾಗಿ ಮೂಡಲಗಿಯ ಲಯನ್ಸ್ ಕ್ಲಬ್ ಪರಿವಾರವು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಸೋಮವಾರ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಲಯನ್ಸ್ ಕ್ಲಬ್ ಅಧ್ಯಕ್ಷ ಶ್ರೀಶೈಲ ಲೋಕನ್ನವರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ‘ಲಯನ್ಸ್ ಕ್ಲಬ್‍ದಿಂದ ಪುರಸಭೆಯ ಸಹಕಾರದೊಂದಿಗೆ 2023-24ನೇ ಸಾಲಿನಲ್ಲಿ ಪಟ್ಟಣದ ವಿವಿಧ ವಾರ್ಡ್‍ಗಳ ಸ್ವಚ್ಛತೆಯ ಅಭಿಯಾನವನ್ನು ಪ್ರಾರಂಭಿಸಿರುವೆವು. ಸ್ವಚ್ಛತೆ ಮೂಲಕ ಪಟ್ಟಣದ...
ಗೋಕಾಕ: ಈ ಭಾಗದ ರೈತರ ಜೀವನಾಡಿಯಾಗಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಶ್ರೇಯೋಭಿವೃದ್ಧಿಗೆ ರೈತರ ಸಹಕಾರದೊಂದಿಗೆ ಶ್ರಮಿಸಿ ಕಾರ್ಖಾನೆಯನ್ನು ಮಾದರಿಯನ್ನಾಗಿ ಪರಿವರ್ತಿಸುವುದಾಗಿ ಕಾರ್ಖಾನೆಯ ಮಾರ್ಗದರ್ಶಕ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.
ಸೋಮವಾರದಂದು ಇಲ್ಲಿಗೆ ಸಮೀಪದ ಪ್ರಭಾ ಶುಗರ್ಸದಲ್ಲಿ ಜರುಗಿದ ಕಾರ್ಖಾನೆಯ ನೂತನ ಆಡಳಿತ ಮಂಡಳಿ ಸದಸ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು,...
ಬೀದರ: ಔರಾದ್ ಶಾಸಕ ಪ್ರಭು ಚವ್ಹಾಣ ಅವರು ನನ್ನ ವಿರುದ್ಧ ಕೊಲೆ ಸಂಚು ಸೇರಿದಂತೆ ಮಾಡಿರುವ ಎಲ್ಲಾ ಆರೋಪಗಳನ್ನು ಶ್ರೀ ಅಮರೇಶ್ವರನ ಉಡಿಗೆ ಹಾಕಿ ಹೋಗಲು ಬಂದಿದ್ದೇನೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಸ್ವ ಪಕ್ಷೀಯರೇ ಆದ ಶಾಸಕ ಪ್ರಭು ಚವ್ಹಾಣ ಅವರ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಔರಾದನ ಸುಕ್ಷೇತ್ರ ಅಮರೇಶ್ವರ...
ಮೂಡಲಗಿ : ಆಗಷ್ಟ,13 ರಂದು ಪಂಜಾಬಿನಲ್ಲಿ ನಡೆದ ನ್ಯಾಶನಲ್ ಪ್ಯಾರಾ ಓಪನ್ ಚಾಂಪಿಯನ್ ಶಿಪ್ ನಲ್ಲಿ ಮೂಡಲಗಿಯ ಲಕ್ಷ್ಮೀ ರಡೇರಟ್ಟಿ ಬೆಳ್ಳಿ ಪದಕ ಪಡೆದಿದ್ದಾರೆ.
ಅಲ್ಲದೆ ಮಹಾರಾಷ್ಟ್ರದ ನಾಶಿಕನಲ್ಲಿ ಮುಂದಿನ ತಿಂಗಳು ಸಪ್ಟೆಂಬರ್ 7 ಮತ್ತು 8 ರಂದು ನಡೆಯುವ ಏಶಿಯನ್ ಪ್ಯಾರಾ ಓಪನ್ ಚಾಂಪಿಯನ್ ಶಿಪ್ ಗೆ ಹಾಗೂ ಅದೆ ತಿಂಗಳು 22 ಸಪ್ಟೆಂಬರ್...
ಬೀದರ: ಬರುವ ಲೋಕಸಭಾ ಚುನಾವಣೆಯಲ್ಲಿ ಮರಾಠ ಸಮಾಜದ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಹೈ ಕಮಾಂಡಿಗೆ ಒತ್ತಾಯ ಮಾಡಿದ ಬಸವಕಲ್ಯಾಣ ಶಾಸಕ ಶರಣು ಸಲಗಾರ ಈ ಮೂಲಕ ಹಾಲಿ ಸಂಸದರಾದ ತಮ್ಮದೇ ಪಕ್ಷದ ಭಗವಂತ ಖೂಬಾ ಅವರಿಗೆ ಟಾಂಗ್ ನೀಡಿದ್ದಾರೆ
ಇದಲ್ಲದೆ ಕ್ಷೇತ್ರದಲ್ಲಿ ಲಿಂಗಾಯತ ಮತ್ತು ಮರಾಠ ಸಮಾಜದ ನಡುವೆ ಅಸಮಾಧಾನ ಕಿಚ್ಚು ಹಚ್ಚಿದ್ದಾರೆ ಬಸವಕಲ್ಯಾಣ ಶಾಸಕ...