Monthly Archives: November, 2023

ಎಸ್.ಆರ್.ಇ.ಎಸ್. ಪದವಿ ಕಾಲೇಜಿನಲ್ಲಿ ಕನಕದಾಸ ಜಯಂತಿ ಆಚರಣೆ

ಕಲ್ಲೋಳಿ: ತನ್ನ ಕೀರ್ತನೆಗಳ ಮೂಲಕ ಸಮಾಜವನ್ನು ತಿದ್ದಿದ ದಾರ್ಶನಿಕ, ಶ್ರೇಷ್ಠ ಸಂತ, ತತ್ವಜ್ಞಾನಿ ಭಕ್ತ ಕನಕದಾಸ ಜಯಂತಿಯನ್ನು ಗುರುವಾರ ಕಲ್ಲೋಳಿ ಪಟ್ಟಣದ  ಎಸ್.ಆರ್.ಇ.ಎಸ್. ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ, ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಮಾತನಾಡಿ, ಬೆಳೆಯನ್ನು ಬೆಳೆಯಬೇಕಾದರೆ ತೋಟದಲ್ಲಿ ವ್ಯವಸಾಯ ನಿರಂತರವಾಗಿ ನಡೆಯುತ್ತಿರಬೇಕು. ಸತ್ವಪೂರ್ಣ...

ನಗರದ ಕೇಂದ್ರ ಗ್ರಂಥಾಲಯದಲ್ಲಿ ಕನಕದಾಸ ಜಯಂತಿ ಆಚರಣೆ

ಬೆಳಗಾವಿ: ದಾಸ ಶ್ರೇಷ್ಠ, ಮಹಾನ್ ಸಂತ, ದಾರ್ಶನಿಕ, ಕವಿ, ಭಕ್ತ ಕನಕದಾಸರ ಜಯಂತಿಯನ್ನು ನಗರದ ಕೇಂದ್ರ ಗ್ರಂಥಾಲಯದಲ್ಲಿ ಆಚರಿಸಲಾಯಿತು. ಉಪನಿರ್ದೇಶಕರಾದ ರಾಮಯ್ಶಾ ಅವರು ಪೂಜೆ ನೆರವೇರಿಸಿ ಮಾತನಾಡಿ, ಕನಕದಾಸರ ಜೀವನ ಮತ್ತು ಅವರ ತತ್ವ, ಕೀರ್ತನೆಗಳಲ್ಲಿ ಅವರು ತೋರಿದ ಮಾರ್ಗಗಳನ್ನು ನೆನೆದರು.  ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು...

ಲೂಸಿ ಸಾಲ್ಡಾನ ತ್ಯಾಗಮಯಿ – ಅಶೋಕಕುಮಾರ ಸಿಂದಗಿ

ಧಾರವಾಡ: ಲೂಸಿ ಸಾಲ್ಡಾನ ಬದುಕಿನುದ್ದಕ್ಕೂ ಅನೇಕ ಸಂಕಷ್ಟಗಳನ್ನು ಎದುರಿಸಿ ವೈಯಕ್ತಿಕ ಆಶೆಗಳನ್ನು ತ್ಯಜಿಸಿ ಸಾರ್ಥಕ ಜೀವನ ನಡೆಸುತ್ತಾ ಬಡ ಮಕ್ಕಳ ಶಿಕ್ಷಣಕ್ಕೆ ಜೀವನದ ಉದ್ದಕ್ಕೂ ಸಹಾಯ ಮಾಡಿದ ತ್ಯಾಗಮಯಿ ಎಂದು ಧಾರವಾಡ ನಗರ ಬಿಇಓ ಅಶೋಕಕುಮಾರ ಸಿಂದಗಿ ಹೇಳಿದರು. ಅವರು ಆಂಜನೆಯ ನಗರದಲ್ಲಿ ನಡೆದ ಲೂಸಿ ಸಾಲ್ಡಾನ ಅವರ ಜೀವನಾಧಾರಿತ ನಾನು ಲೂಸಿ ಟೆಲಿಫಿಲ್ಮ್ ಪೋಸ್ಟರ್ ಬಿಡುಗಡೆ...

ಕನಕದಾಸರ ನೆನೆಯುವ ಕವಿತೆಗಳು

(ಡಾ. ಮಹೇಂದ್ರ ಕುರ್ಡಿ, ವಿದ್ಯಾ ರೆಡ್ಡಿ, ಎಮ್ಮಾರ್ಕೆ, ಶುಭನುಡಿ, ಶೈಲಜಾ ಹಿರೇಮಠ ) ದಾಸ ಶ್ರೇಷ್ಠರು ದಾಸ ಶ್ರೇಷ್ಠರು ಇವರಯ್ಯ ಮಾನವ ಕುಲಕ್ಕೆ ಮಾದರಿಯಾಗಿ ಮಹಾನ್ ಸಂತ ಸಾರಥಿಯಾದ ದಾಸ ಶ್ರೇಷ್ಠರು ಇವರಯ್ಯ. ಹರಿ ಭಕ್ತ ಮಹಾಮಹಿಮರು ಕಾಗಿನೆಲೆಯ ಆದಿಕೇಶವ ನಾಮಾಂಕಿತರು ಮೌಢ್ಯವ ಅಳಿಸಲು ಮುಂದಾದ ದಾಸ ಶ್ರೇಷ್ಠರು ಇವರಯ್ಯ. ಸವಿನುಡಿಯ ದಾರಿ ದೀಪವಾಗಿ ಅಂಧಕಾರದ ಜ್ಞಾನ ಜ್ಯೋತಿಯಾಗಿ ಭಕ್ತಿಯ ಬೆಳಕು ಚೆಲ್ಲಿದ ದಾಸ ಶ್ರೇಷ್ಠರು ಇವರಯ್ಯ. ತಂಬೂರಿಯ ಸ್ವರ ನುಡಿಸಿ ಜನಮನಗಳ ಹೃದಯ ತಲ್ಲಣಿಸಿ ಭೋಗ...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಣೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಕನಕದಾಸ ಜಯಂತಿ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಕನಕದಾಸರ ಜೀವನ ಹಾಗೂ ಸಂದೇಶಗಳು ವಿದ್ಯಾರ್ಥಿಗಳಿಗೆ ಮಾದರಿಯಾಗಲಿ ಎಂದು  ಹೇಳಿದರು. ಕೀರ್ತನೆಗಳ ಮೂಲಕ ಸರಳವಾದ ಭಾಷೆಯಲ್ಲಿ ಬದುಕಿನ ಮೌಲ್ಯಗಳನ್ನು ತಿಳಿಸಿ ಸಾಮಾಜಿಕ ಸಮಸ್ಯೆಗಳ ವಿರುದ್ಧ ದನಿ ಎತ್ತಿದ ಕನಕದಾಸರು ಇಂದಿಗೂ ಪ್ರಸ್ತುತ ಎಂದು...

ಪಿಸ್ತೂಲ್ ಹಣೆಗೆ ಇಟ್ಟು ೩.೫೦ ಕೋ. ರೂ. ದರೋಡೆ : ಆರೋಪಿಗಳು ವಶಕ್ಕೆ

ಬೀದರ - ಗಾಳಿಯಲ್ಲಿ ಗುಂಡು ಹಾರಿಸಿ, ಹಣೆಗೆ ಪಿಸ್ತೂಲ್ ಇಟ್ಟು ಬೆದರಿಸಿ  ಕಾಂಗ್ರೆಸ್ ಮುಖಂಡನಿಂದ ೩.೫೦ ಕೋಟಿ ರೂ. ದರೋಡೆ ಮಾಡಿರುವ ಪ್ರಕರಣ ಬಸವಕಲ್ಯಾಣ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ೬೫ರ ಹಣಮಂತವಾಡಿ ಬಳಿ ನಡೆದಿದೆ. ಉಮಾ ಪತಿ ಎಂಬುವರಿಂದ ೩.೫ ಕೋಟೆ ರೂಪಾಯಿ ಸುಲಿಗೆ ನಡೆದಿದ್ದು ಅವರು ಆಂಧ್ರಪ್ರದೇಶದ ತಿರುಪತಿಯಿಂದ ಪಂಡರಾಪುರಕ್ಕೆ ಹೊರಟಿದ್ದರು. ತಮ್ಮಿಂದ ಹಾಲು ಖರೀದಿಸಿದ...

ಬೂದಿಹಾಳ ಸರಕಾರಿ ಪ್ರೌಢಶಾಲೆಯಲ್ಲಿ ಕ್ರೀಡಾ ಹಬ್ಬ ಆಯೋಜನೆ

ಬೈಲಹೊಂಗಲ: ತಾಲೂಕಿನ ಬೂದಿಹಾಳ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಸನ್ 2023-24 ನೆಯ ಸಾಲಿನ ಕ್ರೀಡಾ ಹಬ್ಬ ಹಮ್ಮಿಕೊಳ್ಳಲಾಗಿತ್ತು. ಕ್ರೀಡಾ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮುಖ್ಯಶಿಕ್ಷಕರಾದ ಎನ್.ಆರ್.ಠಕ್ಕಾಯಿ ಕ್ರೀಡೆಗಳು ಮಕ್ಕಳಲ್ಲಿ ಉತ್ತಮ ಬಾಂಧವ್ಯ ಹೆಚ್ಚಿಸಲು ಸಹಕಾರಿಯಾಗಿವೆ ಎಂದು ಅಭಿಪ್ರಾಯಪಟ್ಟರು. ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಸ್ವಾಸ್ಥ್ಯ ಕಾಪಾಡುವಲ್ಲಿ ಆಟಗಳು ಪ್ರಮುಖ ಪಾತ್ರ ವಹಿಸುತ್ತವೆ. ಗೆಲುವಿನ ಸಂಭ್ರಮ,...

ಆತಂಕರಹಿತ ಬದುಕಿಗೆ ನಮ್ಮೊಳಗೇ ಇದೆ ಪರಿಹಾರ

ಇಂದಿನ ದಾವಂತದ ಜೀವನದಲ್ಲಿ ಪ್ರತಿಯೊಂದರಲ್ಲೂ ಅವಸರ, ಗಡಿಬಿಡಿ ಆನುಭವಿಸುತ್ತಿದ್ದೇವೆ. ಆತಂಕ ಒತ್ತಡಗಳಂತೂ ಸಾಮಾನ್ಯ ಎನ್ನುವಂತಾಗಿದೆ. ಎಲ್ಲದರಲ್ಲೂ ಆತಂಕ ಹಿನ್ನಡೆಯನ್ನುಂಟು ಮಾಡುತ್ತಿರುವುದನ್ನು ಕಾಣುತ್ತಿದ್ದೇವೆ. ಆತಂಕವನ್ನು ಒಂದಿಲ್ಲೊಂದು ಸಂದರ್ಭದಲ್ಲಿ ಅನುಭವಿಸಿಯೇ ಇರುತ್ತೇವೆ. ಸರಳವಾಗಿ ಹೇಳಬೇಕೆಂದರೆ ಬದುಕು ಆತಂಕಗಳಿಗೆ ಮುಖಾಮುಖಿ ಆಗುವಂಥದ್ದು. ನಾವು ಅಂದುಕೊಂಡಂತೆ ಇರದು ನಿನ್ನೆಯಂತೆ ಇಂದು ಇಲ್ಲ. ಇಂದಿನಂತೆ ನಾಳೆ ಇಲ್ಲ. ನಿತ್ಯದ ಅನುಭವವೂ ನವನವೀನ....

ಸೇವೆಯೇ ಜೀವನದ ಪರಮೋಚ್ಚ ಧ್ಯೇಯ – ರವೀಂದ್ರ ಯಲಿಗಾರ

ಮುನವಳ್ಳಿ: "ಅಗತ್ಯವುಳ್ಳವರಿಗೆ ಸಕಾಲದಲ್ಲಿ ಮಾಡುವ ಉಪಕಾರವೇ ಶ್ರೇಷ್ಠ ಸೇವೆ ಎನಿಸುತ್ತದೆ. ಸೇವೆ ಮಾಡುವ ಸಾಮರ್ಥ್ಯ‌ವನ್ನು ನಮಗೆ ದೇವರು ನೀಡಿದ್ದಾರೆಂದ ಮೇಲೆ ಸೇವೆ ಮಾಡುವುದು ನಮ್ಮ ಕರ್ತವ್ಯ. ನಮ್ಮ ಬದುಕಿನ ಸಾರ್ಥಕ್ಯಕ್ಕೆ ಸೇವೆ ಕಾರಣವಾಗುತ್ತದೆ" ಎಂದು ಇತ್ತೀಚೆಗೆ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ.ರವೀಂದ್ರ ಯಲಿಗಾರ ತಿಳಿಸಿದರು. ಅವರು ಪಟ್ಟಣದಲ್ಲಿ ಮುನವಳ್ಳಿಯ ಸ್ನೇಹಜೀವಿ ಶಿಕ್ಷಕರ ವತಿಯಿಂದ ಸನ್ಮಾನ...

ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಉದ್ಘಾಟನಾ ಸಮಾರಂಭ

ಬೈಲಹೊಂಗಲ- ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಉದ್ಘಾಟನೆ, ಗ್ರಂಥ ಲೋಕಾರ್ಪಣೆ, ಮಕ್ಕಳ ಮಂದಾರ ಪ್ರಶಸ್ತಿ ವಿತರಣೆ ಕಾರ್ಯಕ್ರಮ ಪಟ್ಟಣದ ಶಾಸಕರ ಮತಕ್ಷೇತ್ರದ ಮಾದರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ನಂ.೪ ರಲ್ಲಿ ದಿ.೨೯ ರಂದು ಮಧ್ಯಾಹ್ನ ೨.೩೦ ಕ್ಕೆ ನಡೆಯಲಿದೆ. ಚಾರಿತ್ರಿಕ ಕಾದಂಬರಿಕಾರ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಜಿಲ್ಲಾಧ್ಯಕ್ಷ ಯ.ರು.ಪಾಟೀಲ...
- Advertisement -spot_img

Latest News

ಕನ್ನಡಕ್ಕಾಗಿ ಇನ್ನೂ ಹೋರಾಡಬೇಕಾಗಿರುವುದು ವಿಷಾದನೀಯ – ಚಂದ್ರಶೇಖರ ಅಕ್ಕಿ

ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಸಂದರ್ಶನ ಮೂಡಲಗಿ - ಬೆಳಗಾವಿ ಜಿಲ್ಲಾ ೧೬ ನೇ ಸಾಹಿತ್ಯ ಸಮ್ಮೇಳನವು ಇದೇ ದಿ. ೨೩ , ೨೪...
- Advertisement -spot_img
close
error: Content is protected !!
Join WhatsApp Group