Monthly Archives: December, 2023

ಸಿ.ಎಂ. ಬೂದಿಹಾಳ ಅವರಿಗೆ ಸೇವಾರತ್ನ ಪ್ರಶಸ್ತಿ

ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಕ್ಕಾಗಿ ನಿವೃತ್ತ ಪ್ರೌಢ ಶಾಲಾ ಶಿಕ್ಷಕರಾದ  ಸಿ.ಎಂ. ಬೂದಿಹಾಳ ಅವರು ಬೆಳಗಾವಿ ನಾಗನೂರ ರುದ್ರಾಕ್ಷಿ ಮಠದಿಂದ ಕೊಡಮಾಡುವ 'ಸೇವಾರತ್ನ' ಪ್ರಶಸ್ತಿಗೆ ಭಾಜನರಾಗಿದ್ದಾರೆ. ಜಾಗತಿಕ ಲಿಂಗಾಯತ ಮಹಾಸಭಾದ ಮಹಾನಗರದ ಪ್ರಧಾನ ಕಾರ್ಯದರ್ಶಿ ಆಗಿರುವ ಶ್ರೀಯುತರಿಗೆ ದಿನಾಂಕ 8- 12 - 2023ರಂದು ಜರುಗುವ ಪೂಜ್ಯ ಶ್ರೀ ಡಾ. ಶಿವಬಸವ...

ಅಭಿವೃದ್ಧಿ ಹಾಗೂ ಸಮರ್ಥ ನಾಯಕತ್ವಕ್ಕೆ ಮಣೆ – ಈರಣ್ಣ ಕಡಾಡಿ

ಮೂಡಲಗಿ: ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಘಡ ಚುನಾವಣೆಯಲ್ಲಿ ಮತದಾರರು ಅಭಿವೃದ್ಧಿ ಹಾಗೂ ಸಮರ್ಥ ನಾಯಕತ್ವಕ್ಕೆ ಮಣೆ ಹಾಕಿ ಗೆಲುವಿನ ಮಾಲೆಯನ್ನು ಬಿಜೆಪಿ ಕೊರಳಿಗೆ ಹಾಕಿದ್ದಾರೆ ಎಂದು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದ್ದಾರೆ. ದೇಶದ ಜನರು ಸುಳ್ಳು ಗ್ಯಾರಂಟಿಗಳು ಹಾಗೂ ದೇಶ ವಿರೋಧಿ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಎಂಬುದರ ಸ್ಪಷ್ಟ ನಿದರ್ಶನ ಈ ಚುನಾವಣೆಯಿಂದ ಸ್ಪಷ್ಟವಾಗಿದೆ. ಬಿಜೆಪಿ...

ನೀಲಗಂಗಾ ದೇವಿ ಜಾತ್ರಾ ಮಹೋತ್ಸವ

ಸಿಂದಗಿ - ಸಿಂದಗಿ ಪಟ್ಟಣದ ಆರಾಧ್ಯ ದೈವ  ತಾಯಿ ನೀಲಗಂಗಾ ದೇವಿ ಜಾತ್ರೆಯು ರವಿವಾರ ಅತ್ಯಂತ ಅರ್ಥಪೂರ್ಣ ಮತ್ತು ಅದ್ದೂರಿಯಾಗಿ ಜರುಗಿತು. ಸ್ಥಳೀಯ ಸಾರಂಗಮಠದ ಪರಮ ಪೂಜ್ಯಶ್ರೀ ಡಾ. ಪ್ರಭು ಸಾರಂಗದೇವ ಶಿವಾಚಾರ್ಯರು ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ತಾಯಿ ನೀಲಂಗಾದೇವಿಯ ಪಲ್ಲಕ್ಕಿಯು ದೇವಸ್ಥಾನದಿಂದ ಹೊರ ಬರುತ್ತಿದ್ದಂತೆ ಸಾವಿರಾರು ಭಕ್ತರು ದಿಂಡರಕಿ ಗೈದರು. ಪಲ್ಲಕ್ಕಿ ಮಹೋತ್ಸವ ದೇವಸ್ಥಾನದಿಂದ...

ನಾನು ಒಬ್ಬ ಪಕ್ಷಾತೀತ ಶಾಸಕ – ಅಶೋಕ ಮನಗೂಳಿ

ಸಿಂದಗಿ - ಸಿಂದಗಿ ಮತಕ್ಷೇತ್ರ ಹಂತ ಹಂತವಾಗಿ ಅಭಿವೃದ್ಧಿ ಕಡೆ ಸಾಗುತ್ತಿದೆ. ನಾನು ಒಬ್ಬ ಪಕ್ಷಾತೀತ ಶಾಸಕ ಚುನಾವಣೆಯಲ್ಲಿ ಮಾತ್ರ ರಾಜಕಾರಣ. ಕ್ಷೇತ್ರದ ಅಭಿವೃದ್ಧಿ, ನೀರಾವರಿ ವಿಚಾರ ಸೇರಿದಂತೆ ಅಭಿವೃದ್ಧಿ ಪರವಾಗಿರುವ  ವಿವಿಧ ವಿಚಾರಗಳಲ್ಲಿ ನಾನು ಯಾವತ್ತೂ ರಾಜಕಾರಣ ಮಾಡುವುದಿಲ್ಲ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು. ಅವರು ತಾಲೂಕಿನ ಸಾಸಾಬಾಳ ಗ್ರಾಮದಲ್ಲಿ ರವಿವಾರ ಗ್ರಾಮೀಣ...

ಮೇಘನಾ ರಿಗೆ ಡಾಕ್ಟರೇಟ್

ಹಂಪಿ- ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದಲ್ಲಿ ಪ್ರೊ. ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ “ಗಾಣಿಗ ಸಮುದಾಯದ ಸಮಾಜೋ-ಆರ್ಥಿಕ ಸ್ಥಿತಿಗತಿ”ಎಂಬ ಶೀರ್ಷಿಕೆಯಡಿ ಅಧ್ಯಯನ ನಡೆಸಿ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮೇಘನಾ ಅವರ ಸಂಶೋಧನಾ ಪ್ರಬಂಧ ಕ್ಕೆ  ಪಿ ಎಚ್ ಡಿ ಸಮಿತಿ ಸಭೆಯಲ್ಲಿ ಮಂಡಿಸಿ ಸಮರ್ಥಿಸಿಕೊಂಡ ಹಿನ್ನೆಲೆಯಲ್ಲಿ ಮೇಘನ ಜಿ...

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ ಅದಕ್ಕೆ ಶರಣರ ಸಂತರ ಸತ್ಪುರುಷರ ದಾರ್ಶನಿಕರ ಮಹಾತ್ಮರ ಚರಿತ್ರೆ ಆಲಿಸುವದರಿಂದ ಜೀವನ ಪಾವನವಾಗುವುದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದರು. ತಾಲೂಕಿನ ಮೋರಟಗಿ ಗ್ರಾಮದಲ್ಲಿ ಸಿದ್ದರಾಮೇಶ್ವರ...

ಉತ್ತಮ ಆರೋಗ್ಯಕ್ಕಾಗಿ ಉತ್ತಮ ಪರಿಸರ ಕಾಯಬೇಕು

ಮೂಡಲಗಿ: ‘ಸರಳ ಆಹಾರ ಪದ್ಧತಿ, ನಿತ್ಯ ವಾಯು ವಿಹಾರ ಮತ್ತು ಸಕಾರಾತ್ಮಕವಾದ ಚಿಂತನೆಗಳು ಇದ್ದರೆ ಮಧುಮೇಹ ಬಾಧಿಸಲಾರದು’ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಜೋಸ್ ಪ್ರಾನ್ಸಿಸ್ಕೋ ಅರ್ಲೆ ಬ್ರಿಟೋ ಹೇಳಿದರು. ಲಯನ್ಸ್ ಕ್ಲಬ್ ಮೂಡಲಗಿ ಪರಿವಾರ ಹಾಗು ಗಿರಡ್ಡಿ ಮಲ್ಟಿಸ್ಪೇಶಾಲಿಟಿ ಹಾಸ್ಪಿಟಲ್ ಇವರ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಉಚಿತ ಮಧುಮೇಹ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ...

ಎಸ್ ಡಿ ಎಮ್ ಸಿ ಅದ್ಯಕ್ಷರಾಗಿ ಚನ್ನಪ್ಪಗೌಡ ಎಸ್. ಬಿರಾದಾರ ಆಯ್ಕೆ

ಸಿಂದಗಿ; ತಾಲ್ಲೂಕಿನ ಹಂದಿಗನೂರ ಗ್ರಾಮದ ಸರಕಾರಿ ಕನ್ನಡ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್,ಡಿ,ಎಮ್,ಸಿ, ರಚನೆಯನ್ನು  ಮಾಡಿ. 18, ಸದಸ್ಯರುಗಳನ್ನು ಆಯ್ಕೆಮಾಡಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಎಲ್ಲಾ ಸದಸ್ಯರುಗಳು ಸಮಕ್ಷಮ ಪ್ರತ್ಯಕ್ಷ ಪರೋಕ್ಷವಾಗಿ ಎಲ್ಲರ ಒಪ್ಪಿಗೆಯ ಮೇರೆಗೆ ಅವಿರೋಧವಾಗಿ ಅಧ್ಯಕ್ಷರನ್ನಾಗಿ ಚನ್ನಪ್ಪಗೌಡ ಎಸ್. ಬಿರಾದಾರ, ಉಪಾಧ್ಯಕ್ಷರಾಗಿ ಶ್ರೀಮತಿ  ಕಸ್ತೂರಿಬಾಯಿ ಮ. ಗುಬ್ಬೆವಾಡ,...

ಕರ್ನಾಟಕ ಸುವರ್ಣ ಸಂಭ್ರಮದಡಿಯಲ್ಲಿ ಕನ್ನಡ ಮಾಸಾಚರಣೆ

ಸಿಂದಗಿ; ತಾಲೂಕಿನ ಗೋಲಗೇರಿಯ ಸರಕಾರಿ ಕನ್ನಡ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 4 ರಿಂದ 28 ರವರೆಗೆ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್ ಬಿರಾದಾರ, ಕ್ಷೇತ್ರ ಸಮನ್ವಯಾಧಿಕಾರಿ ಐ.ಎಸ್.ಟಕ್ಕೆ ಹಾಗೂ ಗೋಲಗೇರಿ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ಆರ್.ಎಸ್.ಬಿರಾದಾರ ಅವರ ಮಹತ್ವಾಕಾಂಕ್ಷೆಯ ಕ್ರಿಯಾಯೋಜನೆ ಅಡಿಯಲ್ಲಿ ಕನ್ನಡ ಮಾಸಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಕನ್ನಡ...

ಕನ್ನಡಿಗರು ಜಾಗೃತರಾಗದಿದ್ದರೆ ನಾಡು ನುಡಿಗೆ ಧಕ್ಕೆ – ಡಾ. ಭೇರ್ಯ ರಾಮಕುಮಾರ್

ಕನ್ನಡಿಗರು ಜಾಗೃತರಾಗದಿದ್ದರೆ ಬೆಂಗಳೂರು ನಗರ ಹಾಗೂ ಬೆಳಗಾವಿಯ ಗಡಿ ಪ್ರದೇಶಗಳಲ್ಲಿ ಕನ್ನಡ ನಾಡು ನುಡಿಗಳ ಸಾರ್ವಭೌಮಾತೆಗೆ ಧಕ್ಕೆ ಉಂಟಾಗುವುದು ಖಚಿತ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಭೇರ್ಯ  ರಾಮಕುಮಾರ್ ಆತಂಕ ವ್ಯಕ್ತಪಡಿಸಿದರು. ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ...
- Advertisement -spot_img

Latest News

ಬೆಳಗಾವಿ ಜಿಪಂ ಸಿಇಒ ರಾಹುಲ್ ಶಿಂಧೆಯವರ ಗ್ರಾಮ ಪಂಚಾಯತ ಭೇಟಿ

ಬೆಳಗಾವಿ -_ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ರವರು ಶನಿವಾರ ರಾಯಬಾಗ ತಾಲೂಕಿನ ಕೋಳಿಗುಡ್ಡ ಹಾಗೂ ಕಪ್ಪಲಗುದ್ದಿ ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ...
- Advertisement -spot_img
close
error: Content is protected !!
Join WhatsApp Group