Monthly Archives: February, 2025
ಸುದ್ದಿಗಳು
ಗುಬ್ಬೆವಾಡ ಚೌಡೇಶ್ವರಿ ದೇವಸ್ಥಾನಲ್ಲಿ ನರೇಗಾ ದಿನಾಚರಣೆ
ಸಿಂದಗಿ; ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಅಧಿನಿಯಮ ೨೦೦೫ ರಲ್ಲಿ ಜಾರಿಗೆ ಬಂದಿತು ಹಾಗೂ ಇದು ಕೇವಲ ಒಂದು ಯೋಜನೆ ಆಗದೆ ಕಾಯ್ದೆಯಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ಹೇಳಿದರು.ತಾಲೂಕಿನ ಗುಬ್ಬೆವಾಡ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೋರಗಿ ಗ್ರಾಮದ ಚೌಡೇಶ್ವರಿ ದೇವಸ್ಥಾನಲ್ಲಿ ಹಮ್ಮಿಕೊಂಡ ನರೇಗಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ...
ಸುದ್ದಿಗಳು
ಹಡಪದ ಅಪ್ಪಣ್ಣ ಸಹಕಾರ ಸಂಘಕ್ಕೆ ಹೊಸ ಪ್ಯಾನಲ್ ಆಯ್ಕೆ
ಸಿಂದಗಿ: ಪಟ್ಟಣದ ಶ್ರೀ ಹಡಪದ ಅಪ್ಪಣ್ಣ ವಿವಿಧೋದ್ದೇಶಗಳ ಸಹಕಾರ ಸಂಘ ನಿಯಮಿತ ಸಿಂದಗಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆಯಲ್ಲಿ ಹಳೇ ಸದಸ್ಯರಿಗೆ ಸೋಲಿನ ರುಚಿ ತೋರಿಸಿ ಎಲ್ಲ ಹೊಸ ಸದಸ್ಯರು ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ,ವ ಉಪ ನಿಬಂಧಕರ ಕಛೇರಿ ಸಹಕಾರ ಅಭಿವೃದ್ದಿ ಅಧಿಕಾರಿ ಎಂ.ಎಸ್.ರಾಠೋಡ ಇವರು ಘೋಷಣೆ ಮಾಡಿದರು.ಸಾಮಾನ್ಯ ಕ್ಷೇತ್ರದಿಂದ ಸ್ಪರ್ಧಿಸಿ...
ಸುದ್ದಿಗಳು
ಭಕ್ತಿ ಎಂಬುದು ಪರಮ ಪವಿತ್ರ ಪ್ರೇಮ – ಬಸವಾನಂದ ಸ್ವಾಮೀಜಿ
ಸಿಂದಗಿ: ಎಲ್ಲಕ್ಕಿಂತ ದೊಡ್ಡ ಸಂಪತ್ತು ಭಕ್ತಿಯಲ್ಲಿ ಸಿಗುತ್ತದೆ. ಭಕ್ತಿ ಎಂಬುದು ಪರಮ ಪವಿತ್ರವಾದ ಪ್ರೇಮ ವಾಗಿದೆ. ಕಾರಣ ಎಲ್ಲರೂ ಗುರುವಿನಲ್ಲಿ ಶ್ರದ್ಧಾ ಭಕ್ತಿ ಇಟ್ಟರೆ ಜೀವನ ಪ್ರಾಪ್ತಿಯಾಗುತ್ತದೆ ಅಂತೆಯೇ ಮನದ ಮೈಲಿಗೆಯನ್ನು ತೊಳೆಯುವಂಥ ಕಾರ್ಯ ಶ್ರೀಮಠ ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ದಾರವಾಡ ಬಸವಾನಂದ ಸ್ವಾಮಿಗಳು ಹೇಳಿದರು.ತಾಲೂಕಿನ ಆಸಂಗಿಹಾಳ ಗ್ರಾಮದ ಶ್ರೀ ಶ್ರೀ ಶ್ರೀ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಒಳ್ಳೆಯವನಾಗೆಂದು ಒಳಿತನ್ನೆ ಮಾಡೆಂದು
ನೀನೆಂದು ಮಾಡದಿರು ಕೆಟ್ಟದೆಂದು
ಸಾರುತಿವೆ ಸರ್ವ ಮತಧರ್ಮಗಳ ಗ್ರಂಥಗಳು
ಧರ್ಮಗಳ ತಿರುಳೊಂದೆ - ಎಮ್ಮೆತಮ್ಮ ಶಬ್ಧಾರ್ಥ
ತಿರುಳು = ಸಾರತಾತ್ಪರ್ಯ
ಧರ್ಮದ ಹತ್ತು ಲಕ್ಷಣಗಳನ್ನು ಮನುಸ್ಮೃತಿ ಹೀಗೆ ಹೇಳುತ್ತದೆ.
"ಧೃತಿ ಕ್ಷಮಾ ದಮಃ ಅಸ್ತೇಯಂ ಶೌಚಮಿಂದ್ರಿಯನಿಗೃಹಃ
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮ ಲಕ್ಷಣಂ”
ಧೃತಿ ಅಂದರೆ ತಾಳ್ಮೆಯಿಂದಿರುವುದು. ಕ್ಷಮೆಯೆಂದರೆ
ಕ್ಷಮಿಸುವುದು.ದಮ ಎಂದರೆ ದಮನ ಒಳಹೊರಗಿನ ಶತ್ರುಗಳನ್ನು ನಿಗ್ರಹಿಸುವುದು. ಅಸ್ತೇಯ ಎಂದರೆ ಕದಿಯದೆ
ಇರುವುದು. ಶೌಚ ಎಂದರೆ...
ಸುದ್ದಿಗಳು
ಅವಿರತ ಕಲಾಸೇವೆ ಮುಂದೊಮ್ಮೆ ಗುರುತಿಸಲ್ಪಡುತ್ತದೆ – ಪತ್ರಕರ್ತ ಪತ್ತಾರ
ಮೂಡಲಗಿ :ಕಲೆ ಎಂಬುದು ಯಾರ ಸ್ವತ್ತಲ್ಲ, ಸ್ವಾರ್ಥವಿಲ್ಲದ ಅವಿರತ ಕಲಾ ಸೇವೆ ಮುಂದೊಂದು ದಿನ ಗುರುತಿಸಲ್ಪಟ್ಟು, ಪದವಿ ಸನ್ಮಾನಗಳು ತಾನಾಗಿಯೇ ಅರಸಿ ಬರುತ್ತವೆ ಎಂದು ಪತ್ರಕರ್ತ ಚಂದ್ರಶೇಖರ್ ಪತ್ತಾರ್ ಹೇಳಿದರು.ಬುಧವಾರದಂದು ಪಟ್ಟಣದ ಪತ್ರಿಕಾ ಕಚೇರಿಯಲ್ಲಿ ಮೂಡಲಗಿ ತಾಲೂಕಾ ಪ್ರಾದೇಶಿಕ ಪತ್ರಕರ್ತರ ಸಂಘದ ವತಿಯಿಂದ ವಿವಿಧ ಕಲಾ ಕ್ಷೇತ್ರಗಳಲ್ಲಿ ಪಿ.ಎಚ್.ಡಿ ಪದವಿ ಪಡೆದ ಕಲಾವಿದರಿಗೆ ಗೌರವ...
ಕವನ
ಕವನ : ದ್ರೌಪದಿಯ ಸ್ವಗತ
ದ್ರೌಪದಿಯ ಸ್ವಗತನಾನು ಅರಸುಮನೆತನದ ಹೆಣ್ಣು,
ಅರ್ಧಜಗದ ಮಣೆ ಹಿಡಿದ ಹೆಣ್ಣು.
ಆದರೂ ನನ್ನ ಬದುಕು ಒಂದು ಕತ್ತಲು ಗವಿಯಂತೆ,
ನೂರು ಚೂಪಿನ ಕತ್ತಿಗಳ ಮಧ್ಯೆ
ಹೆಜ್ಜೆ ಹಾಕಿದಂತಿತ್ತು.ನಾನು ಕದನದ ಕಿಡಿಯಾದೆ
ಅವಮಾನಗಳ ನೆರಳಲ್ಲಿ ಹೊತ್ತಿಕೊಂಡ ಬೆಂಕಿ.
ಆದರೂ ನಾನು ಸೋಲಲಿಲ್ಲ;
ಬಾಳಿನ ಹೊಗೆಯಿಂದ ಕರಗಿ ಹೋಗದೇ,
ಹೆಮ್ಮೆಯಿಂದ ಉರಿಯುತ್ತಲೇ ಇದ್ದೆ.ನಾನು ಪರಿತಾಪದ ನೆರಳು,
ನನ್ನ ಜೀವನವೇ ನೋವಿನ ದೀಪಮಾಲಿಕೆ.
ನಾನೊಬ್ಬ ಪ್ರಯೋಗದ ಹೆಣ್ಣು,
ಅಪಮಾನಗಳ ಪಥವನ್ನೇ ನಿರಂತರವಾಗಿ ಹಾದುಹೋಗಿದ ಕವಚಧಾರಿ.
ನನ್ನ...
ಸುದ್ದಿಗಳು
ಸ್ಕೌಟ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ಕಲ್ಲೋಳಿ ರಾಮಲಿಂಗೇಶ್ವರ ಪ್ರೌಢ ಶಾಲೆಯ ೯ ಜನ ವಿದ್ಯಾರ್ಥಿಗಳು ತೇರ್ಗಡೆ
ಮೂಡಲಗಿ : ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಪುರಸ್ಕಾರ ಪರೀಕ್ಷೆಯಲ್ಲಿ ತಾಲೂಕಿನ ಕಲ್ಲೋಳಿ ಪಟ್ಟಣದ ಶ್ರೀ ರಾಮಲಿಂಗೇಶ್ವರ ಪ್ರೌಢ ಶಾಲೆಯ ವಿದ್ಯಾರ್ಥಿಗಳಾದ ಹನಮಂತ ರಮೇಶ ಮೆಳವಂಕಿ, ಬಸವರಾಜ ಭೀಮಶಿ ಶಿವಾಪೂರ, ಸನತ ರಾಮಪ್ಪ ಬೆಳಕೂಡ, ಆಕಾಶ ಮಲ್ಲಿಕಾರ್ಜುನ ಕಂಬಾರ, ಪ್ರವೀನ ಹನಮಂತ ಶಿಗಿಹಳ್ಳಿ, ವಿಠ್ಠಲ ಸತ್ತೇಪ್ಪಾ ನಿಪ್ಪಾಣಿ, ಲೋಕೇಶ್ ಸಿದ್ದಪ್ಪಾ ತಿಗಡಿ, ಸಿದ್ದು ಬಾಬು...
ಸುದ್ದಿಗಳು
ಫೆ.6ರಂದು ದೇವುಡು ಕಥಾಲೋಕ ಗ್ರಂಥ ಲೋಕಾರ್ಪಣೆ ಡಾ. ಕೆ ಜಿ ಲಕ್ಷ್ಮಿ ನಾರಾಯಣಪ್ಪ ಅಭಿನಂದನೆ
ಸ್ವಪ್ನ ಬುಕ್ ಹೌಸ್ ಪ್ರಕಟಪಡಿಸಿರುವ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಸಂಪಾದಿಸಿರುವ ದೇವುಡು ಕಥಾಲೋಕ ಗ್ರಂಥ ಲೋಕಾರ್ಪಣೆ ಮತ್ತು ಅಮೆರಿಕೆಯ ಗೋಲ್ಡನ್ ಗೇಟ್ ವಿಶ್ವವಿದ್ಯಾಲಯದಿಂದ ಪಿ ಎಚ್ ಡಿ ಪಡೆದ ಡಾ ಕೆ.ಜಿ ಲಕ್ಷ್ಮಿನಾರಾಯಣಪ್ಪ ರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ಫೆ 6, 2025 ಗುರುವಾರ...
Uncategorized
ಎಮ್ಮೆತಮ್ಮನ ಕಗ್ಗದ ತಾತ್ಪರ್ಯ
ಕೋಲಾಗು ಕುರುಡರಿಗೆ ಕುಂಟರಿಗೆ ಮುದುಕರಿಗೆ
ಹಾಲಾಗು ಶಿಶುಗಳಿಗೆ ರೋಗಿಗಳಿಗೆ
ಹುಲ್ಲಾಗು ಕಾಳಾಗು ಪಶುಪಕ್ಷಿ ಸಂಕುಲಕೆ
ಜೇನಾಗು ಸಕಲರಿಗೆ - ಎಮ್ಮೆತಮ್ಮಶಬ್ಧಾರ್ಥ
ಸಂಕುಲ = ಗುಂಪುತಾತ್ಪರ್ಯ
ಮನುಷ್ಯನಾಗಿ ಹುಟ್ಟಿಬಂದ ಮೇಲೆ ಜೀವನವನ್ನು ಸಾರ್ಥಕ
ಮಾಡಿಕೊಳ್ಳಬೇಕಾದರೆ ಪರರ ಸೇವೆಯನ್ನು ಮಾಡಬೇಕು.
ನದಿ ಪರರ ಸೇವೆಗಾಗಿ ಹರಿಯುತ್ತದೆ. ಗಿಡ ಪರರ ಸೇವೆಗಾಗಿ
ಹಣ್ಣು ಬಿಡುತ್ತದೆ. ಹಸು ಪರರ ಸೇವೆಗಾಗಿ ಹಾಲು ಕೊಡುತ್ತದೆ.
ಹಾಗೆ ಪರರ ಸೇವೆಗಾಗಿಯೆ ಈ ದೇಹ ಧರಿಸಿ ಬಂದಿದೆ....
ಸುದ್ದಿಗಳು
ಗುರುವಾರದಿಂದ ಕಲ್ಲೋಳಿ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯಲ್ಲಿ “ಮಹಾ ಚೈತ್ರ” ಕಾರ್ಯಕ್ರಮ
ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ಪ್ರತಿಷ್ಠಿತ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಆಂಗ್ಲ ಮಾಧ್ಯಮ ಪ್ರಾಥಮಿಕ ಶಾಲೆ, ಶಿವಗೌಡ ಬಸಗೌಡ ಪಾಟೀಲ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢ ಶಾಲೆಯ 2024-25ನೇ ಶೈಕ್ಷಣಿಕ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮನರಂಜನಾ ಕಾರ್ಯಕ್ರಮ "ಮಹಾ ಚೈತ್ರ" ಇದೇ ತಿಂಗಳ 6 ರಿಂದ 7ರವರೆಗೆ ಸಾಯಂಕಾಲ...
Latest News
ಶ್ರೀಕೃಷ್ಣನ ಪಾತ್ರದಾರಿ ಎ.ಹೆಚ್.ಗಣೇಶ ಅಂಕಪುರ
ನಿವೃತ್ತ ಪ್ರಾಂಶುಪಾಲರು ಎ.ಹೆಚ್.ಗಣೇಶ್ ಮೂಲತಃ ಅಂಕಪುರ ಗ್ರಾಮದವರು. ಹಾಲಿ ಹಾಸನದ ವಾಸಿ. ಹಾಸನ ತಾಲ್ಲೂಕು ಕಟ್ಟಾಯ ಹೋಬಳಿ ಅಂಕಪುರ ಗ್ರಾಮದಲ್ಲಿತಂದೆ ಹನುಮಂತೇಗೌಡ ತಾಯಿ ಹೊಂಬಾಳಮ್ಮ ದಂಪತಿಗಳ...