ಬೈಲಹೊಂಗಲ: ಭಾರತೀಯ ಜನತಾ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ಮಾಜಿ ಮುಖ್ಯಮತ್ರಿಗಳು, ದಣಿವರಿಯದ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಜನ್ಮದಿನದ ನಿಮಿತ್ತವಾಗಿ ಭಾರತೀಯ ಜನತಾ ಪಾರ್ಟಿ ಬೈಲಹೊಂಗಲ ಮಂಡಲ ವತಿಯಿಂದ ಹಾಗೂ ಜನಸೇವಕ ಜಗದೀಶ ಮೆಟಗುಡ್ಡ ಅವರ ನೇತೃತ್ವದಲ್ಲಿ ಸಸಿ ನೆಡುವ ಹಾಗೂ ಬೈಲಹೊಂಗಲ ತಾಲೂಕು ಆಸ್ಪತ್ರೆಯಲ್ಲಿ ಹಣ್ಣು ಹಂಪಲವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ...
ಮೂಡಲಗಿ - ತಾಲೂಕಿನಲ್ಲಿ ಬರುವಂತಹ ೫ ಗ್ರಾಮಗಳಲ್ಲಿ ತಲಾ ರೂ.೫ ಲಕ್ಷ ಅನುದಾನದಡಿಯಂತೆ ಒಟ್ಟು ೨೫ ಲಕ್ಷ ರೂ. ಮೊತ್ತದ ಬೆಳಗಾವಿ ಲೋಕಸಭಾ ಸದಸ್ಯರ ಪ್ರದೇಶಾಭಿವೃದ್ದಿ ಯೋಜನೆಯ ಕಾಮಗಾರಿಗಳಿಗೆ ಬೆಳಗಾವಿ ಲೋಕಸಭಾ ಸದಸ್ಯರು ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಅವರು ಚಾಲನೆ ನೀಡಿದರು.
ತಾಲೂಕಿನಲ್ಲಿಯ ಹೊನಕುಪ್ಪಿಯ ಶ್ರೀ ಉದ್ದಮ್ಮ ದೇವಿ ದೇವಸ್ಥಾನ, ಬಳೋಬಾಳದ ಶ್ರೀ...
ಸಾವು ಯಾರನ್ನೂ ಬಿಡುವುದಿಲ್ಲ. ಸಾವಿಗೆ ಬೇಧಭಾವವಿಲ್ಲ. ಸಾವು ಎಲ್ಲರ ಬಂಧು. ಬದುಕೆಂಬ ಬಾಳ ನೌಕೆಯನು ನೀನೆಷ್ಟೇ ಸರಿದೂಗಿಸಿಕೊಂಡು ಹೋದರೂ ಸಾವೆಂಬ ಯಮದೂತ ಬಂದು ಯಾವಾಗ ಯಾರ ಹೆಗಲೇರಿ ಹೇಗೆ ಕರೆಯೋಲೆ ಕಳುಹಿಸುತ್ತಾನೋ ಗೊತ್ತಿಲ್ಲ, ಅದು ಬಂದಾಗ ಹೋಗಲೇಬೇಕು. ಬದುಕಿನ ಜೋಳಿಗೆಯಲ್ಲಿ ಪಾಪ, ಪುಣ್ಯವೆಂಬ ಗಂಟು ತುಂಬಿದ ಮೇಲೆ ಇದ್ದವರು, ಇಲ್ಲದವರು, ಇದ್ದಬದ್ದವರೆಲ್ಲರೂ ಹೋಗಲೇಬೇಕು. ಆಸ್ತಿ,...
ಸಿಂದಗಿ: ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಖಬ್ರಸ್ಥಾನದ ಜಾಗ ಎಂದು ದಾಖಲೆಯಲ್ಲಿ ಇದ್ದರೆ ಅದು ಸ್ಮಶಾನಕ್ಕೆ ಮಾತ್ರ ಬಳಕೆಯಾಗಬೇಕು. ಅಲ್ಲಿ ಸಮಾಧಿ ಇರಲಿ ಬಿಡಲಿ, ಬೇರೆ ಯಾವುದೇ ಚಟುವಟಿಕೆ ನಡೆಸಬಾರದು. ಹೀಗಿರುವಾಗ ಇಲ್ಲಿ ೩೮೦ ಅಂಗಡಿಗಳನ್ನು ನಿರ್ಮಿಸಲು ನೀಲಿನಕ್ಷೆಯನ್ನು ಸಿದ್ಧಪಡಿಸಿ, ಸಮಾಜವನ್ನು ತಪ್ಪು ದಾರಿಗೆ ಎಳೆಯುತ್ತಿದ್ದಾರೆ ಎಂದು ವಕ್ಫ್ ಆಸ್ತಿ ಸಂರಕ್ಷಣಾ ಸಮಿತಿ ಅಧ್ಯಕ್ಷ...
ಗೋಕಾಕ- ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಪರಸ್ಪರ ಸಹಕಾರ ಮನೋಭಾವನೆಯಿಂದ ಕೈ ಜೋಡಿಸಿದರೆ ಮಾತ್ರ ಸಂಘ- ಸಂಸ್ಥೆಗಳು ಬೆಳೆಯಲು ಸಾಧ್ಯವಾಗುತ್ತವೆ. ಜೊತೆಗೆ ಗ್ರಾಹಕರ ಹಿತಕ್ಕೆ ಅನುಗುಣವಾಗಿ ಕೆಲಸವನ್ನು ನಿರ್ವಹಿಸಿದರೆ ಸಂಘಗಳು ಬೆಳವಣಿಗೆ ಹೊಂದುತ್ತವೆ. ಇದಕ್ಕೆ ದುರದುಂಡೀಶ್ವರ ಸಹಕಾರಿ ಸಂಘವೇ ನೈಜ ಉದಾಹರಣೆಯಾಗಿದೆ ಎಂದು ಅರಭಾವಿ ಶಾಸಕರೂ ಆಗಿರುವ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು...
ಸಿಂದಗಿ: ಸಾಹಿತ್ಯ, ರಂಗಭೂಮಿ ಸೇರಿದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿಕೊಂಡು ಬರುತ್ತಿರುವ ಮಾಧ್ಯಮರಂಗ ಫೌಂಡೇಶನ್ ನ 2ನೇ ವರ್ಷಾಚರಣೆ ಪ್ರಯುಕ್ತ ಇದೇ ಮೊದಲ ಬಾರಿಗೆ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಿದೆ.
ಪಟ್ಟಣದ ಬಸವ ಮಂಟಪದಲ್ಲಿ ಫೆಬ್ರವರಿ 28, ಶುಕ್ರವಾರ ಮುಂಜಾನೆ 10 ಗಂಟೆಯಿಂದ ಸಂಜೆ 4 ಗಂಟೆಯ ತನಕ ತಪಾಸಣೆ ನಡೆಯಲಿದೆ. ಬಿಪಿ, ಶುಗರ್, ಹೃದಯ ಸಮಸ್ಯೆ,...
ಮೈಸೂರಿನ ಗ್ರಾಮಾಂತರ ಬುದ್ಧಿಜೀವಿಗಳ ಬಳಗವು ಮೈಸೂರಿನಲ್ಲಿ ನಡೆಸಿದ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದಲ್ಲಿ ಸಾಹಿತ್ಯ ಹಾಗೂ ಸಮಾಜ ಸೇವೆ ಕ್ಷೇತ್ರದ ಸಾಧನೆಗಾಗಿ ಹಾವೇರಿ ಜಿಲ್ಲೆಯ ಬ್ಯಾಡಗಿಯ ಸಾಹಿತಿ ಶ್ರೀಮತಿ ಸಂಧ್ಯಾರಾಣಿ ದೇಶಪಾಂಡೆ ಹಾಗೂ ಗೋಪಾಲ ದೇಶಪಾಂಡೆ ದಂಪತಿಗಳಿಗೆ ಸುವರ್ಣ ಕರ್ನಾಟಕ ಅಪೂರ್ವ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಮಹಾಕವಿ ಡಾ.ಲತಾ ರಾಜ ಶೇಖರ್, ಸಾಹಿತಿ ಡಾ.ಭೇರ್ಯ ರಾಮಕುಮಾರ್...
ಸಂಭ್ರಮ
_________________
ನೀಲಾಕಾಶವ ಮುತ್ತಿಕುವ
ಭರದಲ್ಲಿ ಹಾರುವ ಗಾಳಿಪಟ.
ಎಷ್ಟು ನಯನಮನೋಹರ..
ಬಾಲ್ಯದ ಸವಿ ನೆನಪುಗಳ
ಸಂಭ್ರಮ ಹಸಿರಾಗಿಸಿ..
ಹಗಲಲ್ಲಿ ಬಾನನ್ನು ಚುಕ್ಕಿಯಂತೆ
ಎಲ್ಲ ಬಣ್ಣಗಳಿಂದ ಅಲಂಕರಿಸಿ.
ನೇಸರನ,ತವರೂರಿನವನಾ?..
ಆತನಿಗೂ ನಿನಗೂ ನೆಂಟಸ್ತಿಕೆ ಏನೋ..
ಅದೆಷ್ಟು ರಭಸದೀ ಬಾನೆತ್ತರಕ್ಕೆ
ಜಿಗಿದಂತೆ ನೀನಾಗುವೆ ವಿನಯ..
ಇಂಥ ಸಾರವನರಿಯುವಲ್ಲೀ
ಮನುಜನೇಕೆ ಸೋತ ಕಾಣೆ
ಕಾಮನಬಿಲ್ಲಿನೊಂದಿಗೆ,ಅದೃಶ್ಯ
ಚುಕ್ಕಿಗಳೊಂದಿಗೆ ನಿನ್ನ ಪಯಣ
ಚಿಣ್ಣರ ಮುಗುಳು ನಗೆ..
ನೀಲ ನಭದಿ ನಿನ್ನ ಸೊಗಸಿನ ತಾಣ
ಗಾಳಿಪಟದ ಹಾರಾಟದಂತೆ
ಈ ಬದುಕಿನ ಆಟ.
ಆಡಿಸುವಾತನ ಕೈ ಸೋಲುವವರೆಗೂ
ನಮ್ಮ ಹೋರಾಟ..
ಬಾನಲ್ಲಿ ರೆಕ್ಕೆ ಬಿಚ್ಚಿ ಹಾರುವಾಗ,
ಕನಸ್ಸು...
ನಿತ್ಯ ಶಿವರಾತ್ರಿ
_________________
ಊರೂರು ಅಲೆದು
ಕೂಳಿಲ್ಲದೆ ಚಿಂದಿ ಎತ್ತಿ
ಹಸಿವಿನಿಂದ ಅದೆಷ್ಟೋ ರಾತ್ರಿ
ಉಪವಾಸ ಮಲಗಿದ
ನನ್ನವರು ಜಾಗರಣೆ
ನಿತ್ಯ ಶಿವರಾತ್ರಿ ಮಾಡುತ್ತಾರೆ.
ಖಾಸಗಿ ಬ್ಯಾಂಕ್ ನಲ್ಲಿ
ದುಡ್ಡು ಠೇವಣಿ ಇಟ್ಟು
ದುಷ್ಟ ರಾಜಕಾರಣಿಗಳ
ಮೋಸಕ್ಕೆ ಬಲಿಯಾಗಿ
ಮಲಗದೆ ಇದ್ದ ರಾತ್ರಿಯಿಡಿ
ಚಿಂತಿಸುವರು ಶಿವರಾತ್ರಿ ಮಾಡುವರು
ಕಾಡಿನ ಬುಡಕಟ್ಟು ಜನರ
ಒಕ್ಕಲೆಬ್ಬಿಸಿ ಬದುಕು ಅನಿಶ್ಚಿತ
ಮಾಡಿದ ಕ್ರೂರ ಅಧಿಕಾರಿ ವಿರುದ್ಧ
ಹಗಲಿರುಳು ಹೋರಾಟ
ಮಲಗಿಲ್ಲ ಸೂರು ಹುಡುಕುವ
ಮುಗ್ಧ ಸೋಲಿಗರ ನಿತ್ಯ ಉಪವಾಸ
ಮಳೆ ಬಿಸಿಲು ಮರೆತು
ಹೊಲದಿ ದುಡಿದು
ಬೆಂಬಲ ಸಿಗದೇ ಆತ್ಮಹತ್ಯೆ
ಮಾಡಿಕೊಳ್ಳುವ
ಚಿಂತಿಸುವ...
ಬೀದರ - ಮಹಾ ಕುಂಭಮೇಳಕ್ಕೆ ಹೋಗಿದ್ದಾ ಭೀಕರ ರಸ್ತೆ ಅಪಘಾತಕ್ಕೆ ತುತ್ತಾಗಿ ಆರು ಜನ ದುರ್ಮರಣ ಹೊಂದಿದ್ದು ಗಾಯಾಳುಗಳಾಗಿ ಆಸ್ಪತ್ರೆ ಸೇರಿದವರನ್ನು ಸಚಿವ ಈಶ್ವರ ಖಂಡ್ರೆ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಬ್ರಿಮ್ಸ್ ಆಸ್ಪತ್ರೆಯಲ್ಲಿ ಅಪಘಾತದಲ್ಲಿ ಬದುಕುಳಿದ ಏಳು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯಾಳುಗಳನ್ನು ಭೇಟಿಯಾದ ಸಚಿವ ಖಂಡ್ರೆ ಅಪಘಾತ ನಡೆದ ವಿವರಗಳನ್ನು ಪಡೆದುಕೊಂಡರು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ...